ನವದೆಹಲಿ (ಆ.30): ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯಲ್ಲೂ ಕೇಂದ್ರ ಸರ್ಕಾರ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಯನ್ನು ಮುಂದುವರಿಸಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿಲೀನವಾಗುವ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ವಿವರಗಳನ್ನು ಬಹಿರಂಗಪಡಿಸಿದರು.

ನಾಲ್ಕು ಹಂತಗಳಲ್ಲಿ 10 ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ನಡೆಯಲಿದ್ದು, ಕರ್ನಾಟಕದಲ್ಲಿ ಹುಟ್ಟಿದ 3 ರಾಷ್ಟ್ರೀಕೃತ ಬ್ಯಾಂಕ್‌ಗಳು ಇದರಲ್ಲಿ ಸೇರಿವೆ.

ಇದನ್ನೂ ಓದಿ | ಬ್ಯಾಂಕ್ ವಿಲೀನದ ಇತರೆ ಸುದ್ದಿಗಳು 

  1. ಪಂಜಾಬ್ ನ್ಯಾಶನಲ್ ಬ್ಯಾಂಕ್+ ಓರಿಯಂಟಲ್ ಬ್ಯಾಂಕ್+ ಯುನೈಟೆಡ್ ಬ್ಯಾಂಕ್
  2. ಯೂನಿಯನ್ ಬ್ಯಾಂಕ್+ ಆಂಧ್ರ ಬ್ಯಾಂಕ್ +ಕಾರ್ಪೊರೇಶನ್ ಬ್ಯಾಂಕ್
  3. ಕೆನರಾ ಬ್ಯಾಂಕ್ +ಸಿಂಡಿಕೇಟ್ ಬ್ಯಾಂಕ್
  4. ಇಂಡಿಯನ್ ಬ್ಯಾಂಕ್ +ಅಲಹಾಬಾದ್ ಬ್ಯಾಂಕ್  

ಈ ಹಿಂದೆ ನವಂಬರ್ 2018ರಲ್ಲಿ ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನಗೊಳಿಸಲಾಗಿತ್ತು.