Asianet Suvarna News Asianet Suvarna News

ಬೆಳಗಾವಿ: ಸರ್ಕಾರ ಬದಲಾದರೂ ಇಲ್ಲಿ ಮಾತ್ರ ಈಗಲೂ ಎಚ್‌ಡಿಕೆ ಸಿಎಂ..!

ಸಿಎಂ ಬದಲಾದ್ರೂ ಬೆಳಗಾವಿಯ ಹುಕ್ಕೇರಿ ತಾಲೂಕು ಆಡಳಿತ ಮಾತ್ರ ಕುಮಾರಸ್ವಾಮಿಯೇ ನಮ್ಮ ಸಿಎಂ ಅಂತ ಪಟ್ಟು ಹಿಡಿದು ಕುಳಿತಿರೋ ಹಾಗಿದೆ. ರಾಜ್ಯಕ್ಕೆ ಸರ್ಕಾರ ಬದಲಾದ್ರು ಹುಕ್ಕೇರಿ ತಾಲೂಕು ಆಡಳಿತಕ್ಕೆ ಮಾತ್ರ ಕುಮಾರಸ್ವಾಮಿ ಅವ್ರನ್ನೇ ಸಿಎಂ ಅಂತಿದೆ. ಜನರಿಗೆ ಅಪ್‌ಡೇಟ್‌ ಕೊಡೋದಿರಲಿ ಇಲ್ಲಿನ ಅಧಿಕಾರಿಗಳೇ ಅಪ್‌ಡೇಟ್ ಆಗಿಲ್ಲ.

Hukkeri taluk officials mentions kumaraswami as cm
Author
Bangalore, First Published Aug 30, 2019, 1:00 PM IST

ಬೆಳಗಾವಿ(ಆ.30): ಹುಕ್ಕೇರಿ ತಾಲೂಕು ಆಡಳಿತಕ್ಕೆ ಎಚ್‌.ಡಿ.ಕುಮಾರಸ್ವಾಮಿ ಅವರೇ ರಾಜ್ಯದ ಸಿಎಂ. ಅದೇ ರೀತಿ ಡಾ.ಜಿ. ಪರಮೇಶ್ವರ್‌ ಅವರೇ ಉಪಮುಖ್ಯಮಂತ್ರಿ. ನಿಜವಾಗಿ ಹೇಳಬೇಕೆಂದರೆ ರಾಜ್ಯದಲ್ಲಿ ಇನ್ನೂ ಸರ್ಕಾರವೇ ಬದಲಾಗಿಲ್ಲ.

ಜನರಿಗೆ ಕ್ಷಣ ಕ್ಷಣದ ಅಪ್‌ಡೇಟ್‌ ಕೊಡುವುದು ಇರಲಿ, ತಪ್ಪು ಸಂದೇಶ ರವಾನೆಯಾಗಬಾರದು ಎಂಬ ಕನಿಷ್ಠ ವಿವೇಚನೆಯನ್ನೂ ತಾಲೂಕು ಆಡಳಿತ ಹೊಂದಿಲ್ಲ. ಇದಕ್ಕೆ ಇಲ್ಲಿನ ಮಿನಿವಿಧಾನ ಸೌಧದ ಮುಂಭಾಗ ರಾರಾಜಿಸುತ್ತಿರುವ ಜಾಹೀರಾತು ಫಲಕವೇ ಸಾಕ್ಷಿಯಾಗಿದೆ. ಅದು ಕೂಡ ಯಾವುದೋ ಖಾಸಗಿ ಕಾರ್ಯಕ್ರಮ ಅಥವಾ ಶಂಕುಸ್ಥಾಪನೆ ಕಾರ್ಯಕ್ರಮದ ಜಾಹೀರಾತು ಫಲಕವಲ್ಲ. ಆರೋಗ್ಯ ಇಲಾಖೆಯಿಂದ ಜನರಿಗೆ ಸರ್ಕಾರ ಒದಗಿಸುತ್ತಿರುವ ಸೌಲಭ್ಯಗಳ ಕುರಿತ ಮಾಹಿತಿ ನೀಡುವ ಫಲಕ.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾಂಗ್ರೆಸ್‌-ಜೆಡಿಎಸ್‌ ದೋಸ್ತಿ ಸರ್ಕಾರ ಆಡಳಿತದಲ್ಲಿದ್ದಾಗ ಅಳವಡಿಸಿದ್ದ ಬೃಹತ್‌ ಜಾಹೀರಾತು ಫಲಕವನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ತಿಂಗಳಾದರೂ ತೆರವುಗೊಳಿಸಿಲ್ಲ. ಇದರಿಂದ ಮುಗ್ಧ ಹಳ್ಳಿ ಜನರಿಗೆ ತಪ್ಪು ಮಾಹಿತಿ ರವಾನೆಯಾಗುತ್ತದೆ ಎಂಬ ಕಾಳಜಿಯನ್ನೂ ಆಡಳಿತ ತೋರಿಸುತ್ತಿಲ್ಲ.

ಈ ಮಿನಿವಿಧಾನ ಸೌಧದಲ್ಲಿ ತಹಸೀಲ್ದಾರ್‌, ಉಪನೋಂದಣಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಉಪಖಜಾನೆ, ಚುನಾವಣಾ ವಿಭಾಗ, ಆಧಾರ್‌ ನೋಂದಣಿ ಕೇಂದ್ರ, ಭೂ ದಾಖಲೆಗಳ ಕಚೇರಿ, ಭೂಮಿ ಶಾಖೆ, ಅಟಲ್‌ಜೀ ಜನಸ್ನೇಹಿ ಕೇಂದ್ರ ಸೇರಿದಂತೆ ಇತರೇ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ.

ಕೇಂದ್ರ ನೆರವು ಕೊಡದಿದ್ರೆ ಬೆಂಗ್ಳೂರಲ್ಲಿ ಭಿಕ್ಷೆ ಬೇಡಿ ಹಣ ತರ್ತೀನಿ: ಲಕ್ಷ್ಮೀ ಹೆಬ್ಬಾಳ್ಕರ್

ಇನ್ನು ಈ ಕಚೇರಿಗಳಿಗೆ ದಿನನಿತ್ಯ ಬಂದು ಹೋಗುವ ಈ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮಾಜಿ ಸಿಎಂ, ಡಿಸಿಎಂ ಅವರುಳ್ಳ ಭಾವಚಿತ್ರದ ಬದಲಾಗದ ಜಾಹೀರಾತು ಫಲಕ ಕಾಣುತ್ತಿಲ್ಲವೇ ಎನ್ನುವ ಪ್ರಶ್ನೆ ಎದುರಾಗಿದೆ.

ಅಷ್ಟೇ ಅಲ್ಲದೇ ತಾಲೂಕಿನ ವಿವಿಧ ಭಾಗಗಳಲ್ಲಿ ಹಾಗೂ ತಾಲೂಕು ಮಟ್ಟದ ಕಚೇರಿಗಳ ಬಳಿಯೂ ಕುಮಾರಸ್ವಾಮಿ ಹಾಗೂ ಪರಮೇಶ್ವರ ಅವರನ್ನೊಳಗೊಂಡ ಆಯಾ ಇಲಾಖೆಗಳ ಮಾಹಿತಿಯುಳ್ಳ ಬೃಹತ್‌ ಜಾಹೀರಾತು ಫಲಕಗಳಿವೆ. ಇದು ರಾಜ್ಯದಲ್ಲಿ ಹೊಸದಾಗಿ ಬಂದಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಅಧಿಕಾರಿಗಳಿಗೂ ಕಷ್ಟ:

ಈ ವಿಪರ್ಯಾಸಕ್ಕೆ ಕೇವಲ ಅಧಿಕಾರಿಗಳನ್ನು ದೂರಿ ಪ್ರಯೋಜನವಿಲ್ಲ. ಅಧಿಕಾರಿಗಳನ್ನು ನಿಂತಲ್ಲಿ ನಿಲ್ಲಲು ಬಿಡದಿದ್ದರೆ ಅವರು ಯಾವ ಕೆಲಸವೆಂದು ಮಾಡುತ್ತಾರೆ? 2018ರ ವಿಧಾನ ಸಭೆ ಹಾಗೂ 2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹುಕ್ಕೇರಿ ತಾಲೂಕು ಮೂವರು ತಹಸೀಲ್ದಾರರನ್ನು ಕಂಡಿದೆ. ಅವರಿಗೆ ಕಚೇರಿಯ ಒಳಹೊರಗನ್ನು ತಿಳಿಯುವಷ್ಟರಲ್ಲಿ ಬೇರೆಡೆ ವರ್ಗಾವಣೆ ಆದೇಶ ಬಂದಿರುತ್ತದೆ. ಇನ್ನು ತಾಲೂಕಿನಲ್ಲಿ ಹಾಗೂ ಕಚೇರಿ ಹೊರಭಾಗದಲ್ಲಿ ಏನೇನು ಅಪಹಾಸ್ಯಗಳಿವೆ ಎಂದು ಹೇಗೆ ತಿಳಿದುಕೊಳ್ಳಲು ಸಾಧ್ಯ ಎನ್ನುವ ವಾದವೂ ಇದೆ.

ಮತ್ತೆ ಲಕ್ಷ್ಮೀ ಹೆಬ್ಬಾಳ್ಕರ್, ಜಾರಕಿಹೊಳಿ ವಾಕ್ಸಮರ!

ಮಹಾರಾಷ್ಟ್ರದ ಗಡಿಗೆ ಹುಕ್ಕೇರಿ ತಾಲೂಕು ಹೊಂದಿಕೊಂಡಿದೆ. ಇಲ್ಲಿಗೆ ಬರುವ ಹೊರರಾಜ್ಯದವರಿಗೆ ಈ ಫಲಕ ನೋಡಿ ತಪ್ಪು ತಿಳಿಯುವ ಸಾಧ್ಯತೆ ಇದೆ. ಒಂದೊಮ್ಮೆ ಫಲಕದಲ್ಲಿರುವ ಮಾಹಿತಿ ತಪ್ಪು ಎಂದು ತಿಳಿಸಿದರೆ ಇಡೀ ರಾಜ್ಯದ ಮಾನ ಹರಾಜಾಗಿ ಹೋಗುತ್ತದೆ. ಈಗ ಇರುವ ಅಧಿಕಾರಿಗಳನ್ನು ಕನಿಷ್ಠ ಇಷ್ಟುಕಾಳಜಿಯನ್ನಾದರೂ ವಹಿಸಬೇಕು ಎಂಬುದು ಜನರ ಆಗ್ರಹ.

-ರವಿ ಕಾಂಬಳೆ ಹುಕ್ಕೇರಿ

Follow Us:
Download App:
  • android
  • ios