MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ಸೌದಿ ಅರೇಬಿಯಾದ ತೈಲ ಸಂಸ್ಕರಣ ಘಟಕದ ಮೇಲೆ ಇರಾನ್ ಡ್ರೋನ್ ದಾಳಿ: ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 80 ಡಾಲರ್‌ಗೆ ಏರಿಕೆ

ಸೌದಿ ಅರೇಬಿಯಾದ ತೈಲ ಸಂಸ್ಕರಣ ಘಟಕದ ಮೇಲೆ ಇರಾನ್ ಡ್ರೋನ್ ದಾಳಿ: ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 80 ಡಾಲರ್‌ಗೆ ಏರಿಕೆ

ತನ್ನ ನಾಯಕನ ಹತ್ಯೆಯ ನಂತರ ಇರಾನ್, ಸೌದಿ ಅರೇಬಿಯಾದ ರಾಸ್ ತನುರಾ ತೈಲ ಘಟಕ ಸೇರಿದಂತೆ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿದೆ. ಈ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿ ಬಂದ್ ಆಗಿದ್ದು, ಕಚ್ಚಾ ತೈಲದ ಬೆಲೆ ಗಗನಕ್ಕೇರಿದೆ ಇದರಿಂದ ಜಾಗತಿಕವಾಗಿ ಆರ್ಥಿಕ ಸಂಕಷ್ಟದ ಭೀತಿ ಎದುರಾಗಿದೆ.

2 Min read
Author : Anusha Kb
| Updated : Mar 02 2026, 04:17 PM IST
Share this Photo Gallery
  • FB
  • TW
  • Linkdin
  • Whatsapp
16
 ಇರಾನ್ ದಾಳಿಯಿಂದ ಅರಬ್ ರಾಷ್ಟ್ರಗಳಲ್ಲಿ ಆತಂಕ
Image Credit : Social Media

ಇರಾನ್ ದಾಳಿಯಿಂದ ಅರಬ್ ರಾಷ್ಟ್ರಗಳಲ್ಲಿ ಆತಂಕ

ತನ್ನ ನಾಯಕನ ಸಾವಿನಿಂದ ಧೃತಿಗೆಟ್ಟಿರುವ ಇರಾನ್ ಸಿಕ್ಕ ಸಿಕ್ಕ ದೇಶಗಳ ಮೇಲೆ ದಾಳಿ ಮಾಡುತ್ತಿದೆ. ಇಸ್ರೇಲ್ ಹಾಗೂ ಅಮೆರಿಕಾ ಜಂಟಿ ದಾಳಿಯಲ್ಲಿ ತನ್ನ ನಾಯಕ ಅಯತೊಲ್ಲಾ ಖಮೇನಿ ಹತ್ಯೆಯಾದ ನಂತರ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ಶುರು ಮಾಡಿರುವ ಇರಾನ್ ಈಗಾಗಲೇ ಗಲ್ಫ್‌ ದೇಶಗಳ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿದ್ದು, ಇರಾನ್ ಕ್ಷಿಪಣಿ ಹಾಗೂ ಡ್ರೋನ್ ದಾಳಿಯಿಂದಾಗಿ ದುಬೈ, ದೋಹಾ ಕುವೈತ್, ಬಹ್ರೈನ್ ಸೇರಿದಂತೆ ಹಲವು ಕಡೆಗಳಲ್ಲಿ ಸಾವು ನೋವು ಸಂಭವಿಸಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.

26
ಸೌದಿ ಅರೇಬಿಯಾದ ತೈಲ ಸಂಸ್ಕರಣಾ ಘಟಕದ ಮೇಲೆ ಇರಾನ್ ದಾಳಿ
Image Credit : X@Digvija73188705

ಸೌದಿ ಅರೇಬಿಯಾದ ತೈಲ ಸಂಸ್ಕರಣಾ ಘಟಕದ ಮೇಲೆ ಇರಾನ್ ದಾಳಿ

ಕೆಲ ಸಮಯದ ಹಿಂದೆ ಅಬುಧಾಬಿಯ ನೌಕಾನೆಲೆ ಮೇಲೆ ದಾಳಿ ನಡೆಸಿದ್ದ ಇರಾನ್ ಈಗ ಸೌದಿ ಅರೇಬಿಯಾದ ತೈಲ ಸಂಸ್ಕರಣಾ ಘಟಕದ ಮೇಲೆ ದಾಳಿ ನಡೆಸಿದೆ. ಇರಾನಿನ ಡ್ರೋನ್‌ಗಳು ಸೌದಿ ಅರೇಬಿಯಾದ ತೈಲ ಸಂಸ್ಕರಣಾ ಘಟಕ ರಾಸ್ ತನುರಾ ಮೇಲೆ ದಾಳಿ ಮಾಡಿದ ನಂತರ ಸೌದಿ ಅರೇಬಿಯಾದ ತೈಲ ಕಂಪೆನಿ ಸೌದಿ ಅರಾಮ್ಕೊ ತನ್ನ ರಾಸ್ ತನುರಾ ಸಂಸ್ಕರಣಾಗಾರವನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಸೌದಿ ಅರೇಬಿಯಾದ ಪ್ರಮುಖ ಸಂಸ್ಕರಣಾ ಕೇಂದ್ರಗಳಲ್ಲಿ ಒಂದಾದ ರಾಸ್ ತನುರಾ ಮೇಲಿನ ಈ ದಾಳಿಯಿಂದಾಗಿ ಈ ಪ್ರದೇಶದ ಇಂಧನ ಮೂಲಸೌಕರ್ಯದಲ್ಲಿ ವ್ಯಾಪಕ ಅಡ್ಡಿ ಉಂಟಾಗುವ ಭೀತಿ ಎದುರಾಗಿದೆ.

🇸🇦🇮🇷 L’Arabie saoudite a fermé sa gigantesque raffinerie de Ras Tanura (550 000 barils/jour, une des plus grandes au monde) après une frappe de drone iranien. 

Profitez-en pour faire le plein aujourd’hui ! Dans les prochains jours, le prix de l’essence risque de devenir… pic.twitter.com/DaCFY6CSY2

— DIMÉ (@MakhtarDime) March 2, 2026

Related Articles

Related image1
ಅಬುಧಾಬಿಯಲ್ಲಿ ಫ್ರಾನ್ಸ್‌ನ ನೌಕಾನೆಲೆ ಮೇಲೆ ಇರಾನ್ ಡ್ರೋನ್ ದಾಳಿ: ಇರಾನ್ ಆಕ್ರಮಣದ ವಿರುದ್ಧ ಒಟ್ಟಾದ ಗಲ್ಫ್‌ ರಾಷ್ಟ್ರಗಳು
Related image2
ಅಮೆರಿಕಾದ ಎಫ್‌-15 ಫೈಟರ್ ಜೆಟ್ ಹೊಡೆದುರುಳಿಸಿದಾಗಿ ಹೇಳಿದ ಇರಾನ್: ಪೈಲಟ್ ಹೊರಗೆ ಹಾರಿದ ದೃಶ್ಯ ವೀಡಿಯೋದಲ್ಲಿ ಸೆರೆ
36
ತೈಲ ಸಂಸ್ಕರಣಾಗಾರಕ್ಕೆ ಇರಾನ್‌ನ ಡ್ರೋನ್‌ಗಳು ದಾಳಿ
Image Credit : Google

ತೈಲ ಸಂಸ್ಕರಣಾಗಾರಕ್ಕೆ ಇರಾನ್‌ನ ಡ್ರೋನ್‌ಗಳು ದಾಳಿ

ಸೌದಿ ಅರೇಬಿಯಾದ ಅರಾಮ್ಕೊ ತೈಲ ಸಂಸ್ಕರಣಾಗಾರಕ್ಕೆ ಇರಾನ್‌ನ ಡ್ರೋನ್‌ಗಳು ದಾಳಿ ಮಾಡಿದ್ದು, .ಸೌದಿ ಅರೇಬಿಯಾದ ಪ್ರಮುಖ ಸಂಸ್ಕರಣಾ ಕೇಂದ್ರಗಳಲ್ಲಿ ಒಂದಾದ ರಾಸ್ ತನುರಾ ಮೇಲಿನ ದಾಳಿಯು, ಈ ಪ್ರದೇಶದ ಇಂಧನ ಮೂಲಸೌಕರ್ಯದಲ್ಲಿ ವ್ಯಾಪಕ ಅಡ್ಡಿ ಉಂಟಾಗುವ ಭೀತಿಯನ್ನು ಹೆಚ್ಚಿಸಿದೆ. ದಾಳಿಯ ಕುರಿತು ಅರಾಮ್ಕೊ ಮಾಧ್ಯಮ ಕಚೇರಿ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಸೌದಿ ಅರಾಮ್ಕೊದ ರಾಸ್ ತನುರಾವನ್ನು ಗುರಿಯಾಗಿಸಿಕೊಂಡು ಹಾರಿಸಲಾದ ಎರಡು ಡ್ರೋನ್‌ಗಳನ್ನು ತಡೆಹಿಡಿಯಲಾಗಿದೆ ಎಂದು ಸೌದಿಯ ರಕ್ಷಣಾ ಸಚಿವಾಲಯದ ವಕ್ತಾರರು, ಅಲ್ ಅರೇಬಿಯಾ ಟಿವಿಗೆ ತಿಳಿಸಿದ್ದಾರೆ.

46
ಜಾಗತಿಕ ತೈಲ ಮಾರುಕಟ್ಟೆಗೆ ತೀವ್ರ ಒತ್ತಡ
Image Credit : x

ಜಾಗತಿಕ ತೈಲ ಮಾರುಕಟ್ಟೆಗೆ ತೀವ್ರ ಒತ್ತಡ

ಇರಾನ್ ಮೇಲೆ ಇಸ್ರೇಲ್ ಅಮೆರಿಕಾ ನಡುವಣ ಯುದ್ಧದಿಂದಾಗಿ ಜಾಗತಿಕ ತೈಲ ಮಾರುಕಟ್ಟೆೆಯಲ್ಲಿ ತೀವ್ರ ಒತ್ತಡ ಏರ್ಪಟ್ಟಿರುವ ಸಮಯದಲ್ಲಿ ಇರಾನ್ ಈ ದಾಳಿ ನಡೆಸಿದೆ. ಇರಾನ್ ಸಂಘರ್ಷ ಹೆಚ್ಚುತ್ತಿರುವ ಕಾರಣ ಕಚ್ಚಾ ತೈಲ ಬೆಲೆಗಳು ನಾಲ್ಕು ವರ್ಷಗಳಲ್ಲೇ ಅತ್ಯಂತ ಹೆಚ್ಚಿನ ಏರಿಕೆ ಕಂಡಿವೆ. ಇತ್ತ ಇರಾನ್‌ನ ಹಾರ್ಮುಜ್ ಜಲಸಂಧಿಯು ವಿಶ್ವದ ದೈನಂದಿನ ತೈಲ ಹರಿವಿನ ಸುಮಾರು ಶೇಕಡಾ 20ರಷ್ಟು ತೈಲವನ್ನು ನಿರ್ವಹಿಸುವ ಕಿರಿದಾದ ಮಾರ್ಗವಾಗಿದೆ

56
 ಹಾರ್ಮುಜ್ ಜಲಸಂಧಿ ಬಂದ್
Image Credit : AI Image

ಹಾರ್ಮುಜ್ ಜಲಸಂಧಿ ಬಂದ್

ಇರಾನ್ ಈ ಇಸ್ರೇಲ್ ಅಮೆರಿಕಾದ ದಾಳಿಯ ಬಳಿಕ ಹಾರ್ಮುಜ್ ಜಲಸಂಧಿಯನ್ನು ಕೂಡ ಮುಚ್ಚಿರುವ ಹಿನ್ನೆಲೆ ಇದು ತೈಲ ಸಾಗಣೆಯನ್ನು ಪರಿಣಾಮಕಾರಿಯಾಗಿ ಸ್ಥಗಿತಗೊಳಿಸಿದೆ. ಹಲವಾರು ಹಡಗು ಮಾಲೀಕರು ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ಇಲ್ಲಿ ಸಾಗಣೆಯನ್ನು ಸ್ಥಗಿತಗೊಳಿಸಿದ್ದಾರೆ, ಇದು ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಕಾರಿಡಾರ್‌ಗಳಲ್ಲಿ ಒಂದಾಗಿದೆ.

66
 ದೀರ್ಘಕಾಲದ ಅಸ್ಥಿರತೆಗೆ ಸಿದ್ಧವಾಗುತ್ತಿವೆ ಇಂಧನ ಮಾರುಕಟ್ಟೆಗಳು
Image Credit : Asianet News

ದೀರ್ಘಕಾಲದ ಅಸ್ಥಿರತೆಗೆ ಸಿದ್ಧವಾಗುತ್ತಿವೆ ಇಂಧನ ಮಾರುಕಟ್ಟೆಗಳು

ಈ ಯುದ್ಧದಿಂದಾಗಿ ಇಂಧನ ಮಾರುಕಟ್ಟೆಗಳು ಈಗ ದೀರ್ಘಕಾಲದ ಅಸ್ಥಿರತೆಗೆ ಸಿದ್ಧವಾಗುತ್ತಿವೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿ ಪರಿಣಾಮಕಾರಿಯಾಗಿ ಸ್ಥಗಿತಗೊಂಡಿರುವುದರಿಂದ ಜಾಗತಿಕ ಬೇಡಿಕೆ ಹೆಚ್ಚಾದಂತೆ ಪೂರೈಕೆ ಕಡಿಮೆಯಾಗಲಿದೆ. ಇದು ವಿಶ್ವಾದ್ಯಂತ ಹೊಸ ಹಣದುಬ್ಬರದ ಒತ್ತಡಗಳಿಗೆ ವೇದಿಕೆ ಸಿದ್ಧಪಡಿಸುತ್ತಿದೆ. ವ್ಯಾಪಾರಿಗಳು ಗಲ್ಫ್‌ನಲ್ಲಿ ಹೊಸ ಪೂರೈಕೆಯ ಅಪಾಯಗಳನ್ನು ಎದುರಿಸುತ್ತಿರುವುದರಿಂದ ಆರಂಭಿಕ ವ್ಯಾಪಾರದಲ್ಲಿ ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 80 ಡಾಲರ್ (7,323 ರೂ.) ಏರಿಕೆಯಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಇರಾನ್
ಕೊಲ್ಲಿ ಯುದ್ಧ
ಸೌದಿ ಅರೇಬಿಯಾ

Latest Videos
Recommended Stories
Recommended image1
ಅಣ್ವಸ್ತ್ರ ಸಮರದತ್ತ ಮಧ್ಯಪ್ರಾಚ್ಯ ಫೈಟ್‌, ಇರಾನ್‌ನ ನಟಾನ್ಜ್ ಪರಮಾಣು ಕೇಂದ್ರದ ಮೇಲೆ ಮಿಸೈಲ್‌ ದಾಳಿ?
Recommended image2
ತಮ್ಮದೇ ನಾಯಕನ ಸಾವಿಗೆ ಕಾರಣರಾದ ಟ್ರಂಪ್​ಗೆ ಹೃದಯಾಳದ ಧನ್ಯವಾದ: ಆಗಸದಲ್ಲಿ ಥ್ಯಾಂಕ್ಯೂ ಸಂದೇಶ!
Recommended image3
ಇರಾನ್-ಇಸ್ರೇಲ್ ಯುದ್ಧದ ಬಗ್ಗೆ ಕೊನೆಗೂ ಮೌನ ಮುರಿದ ಚೀನಾ; ಖಡಕ್ ಎಚ್ಚರಿಕೆ ಕೊಟ್ಟಿದ್ಯಾರಿಗೆ?
Related Stories
Recommended image1
ಅಬುಧಾಬಿಯಲ್ಲಿ ಫ್ರಾನ್ಸ್‌ನ ನೌಕಾನೆಲೆ ಮೇಲೆ ಇರಾನ್ ಡ್ರೋನ್ ದಾಳಿ: ಇರಾನ್ ಆಕ್ರಮಣದ ವಿರುದ್ಧ ಒಟ್ಟಾದ ಗಲ್ಫ್‌ ರಾಷ್ಟ್ರಗಳು
Recommended image2
ಅಮೆರಿಕಾದ ಎಫ್‌-15 ಫೈಟರ್ ಜೆಟ್ ಹೊಡೆದುರುಳಿಸಿದಾಗಿ ಹೇಳಿದ ಇರಾನ್: ಪೈಲಟ್ ಹೊರಗೆ ಹಾರಿದ ದೃಶ್ಯ ವೀಡಿಯೋದಲ್ಲಿ ಸೆರೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved