ಮಾಜಿ ಸಿಎಂ ಫಡ್ನವೀಸ್‌, ರಾವುತ್‌ ಭೇಟಿ: ರಾಜಕೀಯದಲ್ಲಿ ಸಂಚಲನ!

ಎನ್‌ಡಿಎ ಮೈತ್ರಿಯಿಂದ ಹೊರಬಂದ ಬಳಿಕ ಬಿಜೆಪಿಯ ಕಟು ಟೀಕಾಕಾರರಾದ ಶಿವಸೇನೆ ಸಂಸದ ಸಂಜಯ್‌ ರಾವುತ್‌ ಹಾಗೂ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಶನಿವಾರ ಪರಸ್ಪರ ಭೇಟಿಯಾಗಿದ್ದಾರೆ. ಈ ವಿಚಾರವು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ರೈತರೇ ಆತ್ಮನಿರ್ಭರ ಭಾರತದ ಆಧಾರ: ಮನ್‌ ಕೀ ಬಾತ್‌ನಲ್ಲಿ ಮೋದಿ ಮಾತು!...

ಪಿಎಂ ಮೋದಿ ಮನ್‌ ಕೀ ಬಾತ್‌ 69ನೇ ಸಂಚಿಕೆ| ದೇಶವನ್ನುದ್ದೇಶಿಸಿ ಮಾತನಾಡಿದ ಪಿಎಂ, ಕೊರೋನಾತಂಕದ ವೇಳೆ ಎಚ್ಚರವಾಗಿರುವಂತೆ ಮನವಿ| ಕೊರೋನಾ ಸಂಕಟದ ವೇಳೆ ಕತೆ ಹೇಳುವ ಕಲೆ ಬಗ್ಗೆ ಉಲ್ಲೇಖಿಸಿದ ಪಿಎಂ| ಬೆಂಗಳೂರಿನ ಸ್ಟೋರಿ ಟೆಲ್ಲರ್ ಅಪರ್ಣಾ ಶೈನಿಂಗ್| ಆತ್ಮ ನಿರ್ಭರ ಕನಸು ಸಾಕಾರಗೊಳಿಸಲು ರೈತರು, ನಮ್ಮ ಹಳ್ಳಿಗಳೇ ಆಧಾರ ಎಂದ ಮೋದಿ.

ಸಿ. ಟಿ. ರವಿ ರಾಜೀನಾಮೆ ಸಂಭವ ಮತ್ತೆ ಸಂಪುಟ ಕಸರತ್ತು ಶುರು!...

ವಿಧಾನಮಂಡಲದ ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿಯಲ್ಲಿ ಸಚಿವ ಸಂಪುಟ ಕಸರತ್ತಿನ ಬಗ್ಗೆ ಚರ್ಚೆ ಆರಂಭವಾಗಿದ್ದು, ಸಂಪುಟ ವಿಸ್ತರಣೆ ಬದಲು ಪುನಾರಚನೆ ಕೈಗೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ.

ಬಿಜೆಪಿಗೆ ಮತ್ತೊಂದು ಆಘಾತ: ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಇನ್ನಿಲ್ಲ!...

ಬಿಜೆಪಿ ನಾಯಕ ಹಾಗೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಮಾಜಿ ಯೋಧ ಜಸ್ವಂತ್ ಸಿಂಗ್ ಭಾನುವಾರ ನಿಧನರಾಗಿದ್ದಾರೆ.

ಭಾರತ ಮೇಲೆ ಚೀನಾ ಪರೋಕ್ಷ ಯುದ್ಧ, ಭಾರತ ಹೈ ಅಲರ್ಟ್‌!...

ಪೂರ್ವ ಲಡಾಖ್‌ ಗಡಿಯಲ್ಲಿ ತೆಗೆವ ಎಲ್ಲ ತಂಟೆಗೆ ಭಾರತೀಯ ಯೋಧರು ನೀಡುತ್ತಿರುವ ತಕ್ಕ ತಿರುಗೇಟಿನಿಂದ ಬೆದರಿದಂತಿರುವ ಚೀನಾ ಇದೀಗ ಭಾರತದ ಮೇಲೆ ಪರೋಕ್ಷ ಯುದ್ಧ ಸಾರಿರುವಂತಿದೆ. 

ಸೆ.28 ಕರ್ನಾಟಕ ಬಂದ್‌ : ಹಲವು ಸೇವೆ ವ್ಯತ್ಯಯ. ಎಚ್ಚರ...

ರಾಜ್ಯದಲ್ಲಿ ಜಾರಿಗೆ ತಂದ ಭೂ ಸುಧಾಕರಣ ಕಾಯ್ದೆ ತಿದ್ದು ಪಡಿ ಮಸೂದೆ ವಿರೋಧಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಅತ್ಯಂತ ಬಿಗಿಯಾದ ಹೋರಾಟ ನಡೆಯಲಿದೆ. 

ಮೊಹಮ್ಮದ್ ಅಜರುದ್ದೀನ್ - ದಿನೇಶ್ ಕಾರ್ತಿಕ್ : ಮರು ಮದುವೆಯಾದ ಕ್ರಿಕೆಟಿಗರು...

ದಿನೇಶ್ ಕಾರ್ತಿಕ್ ತನ್ನ ಮಾಜಿ ಪತ್ನಿಯಂದ ಮೋಸ ಹೋದರು . ಆಕೆ  ಭಾರತೀಯ ತಂಡದ ಆಟಗಾರ ಮುರಳಿ ವಿಜಯ್  ಅವರನ್ನು ಮದುವೆಯಾದರು.  ಮೊಹಮ್ಮದ್ ಅಜರುದ್ದೀನ್‌ರ  ವಿವಾದಗಳಿಗೇನು ಕಡಿಮೆ ಇಲ್ಲ,  ಬಾಲಿವುಡ್ ನಟಿಯನ್ನು ಮದುವೆಯಾಗಲು ತನ್ನ ಮೊದಲ ಹೆಂಡತಿಗೆ ಮೊದಲ ಹೆಂಡತಿಗೆ ವಿಚ್ಛೇದನ ನೀಡಿದರು.

ಗಂಡ ಅಳ್ತಿದ್ದಾನೆ, ಕೇಸ್ ವಾಪಾಸ್ ತಗೋತೀನಿ ಎಂದ ಪೂನಂ...

ಗಂಡ ತನಗೆ ಹೊಡೆದು ದೌರ್ಜನ್ಯ ಮಾಡಿದ ಬಗ್ಗೆ ಮತ್ತು ಪ್ಯಾಚ್ ಅಪ್ ಆಗಿರೋ ಬಗ್ಗೆ ಹಾಟ್ ನಟಿ ಪೂನಂ ಏನಂದಿದ್ದಾರೆ..? ಇಲ್ಲಿ ನೋಡಿ 

ಖತರ್ನಾಖ್ ಮಂಗಳಮುಖಿಯರು, ದೃಷ್ಟಿ ತೆಗೆಯಲು ಬಂದು ಎಲ್ಲ ದೋಚಿದರು!...

ದೇವರ ಪೊಟೋಗೆ ಅಕ್ಷತೆ ಹಾಕೋ ನೆಪದಲ್ಲಿ ಮಂಗಳಮುಖೀಯರು ಸುಲಿಗೆ ಮಾಡಿದ್ದಾರೆ. ಆಟೋದಲ್ಲಿ ಬಂದಿದ್ದ ನಾಲ್ವರು ಮಂಗಳಮುಖಿಯರಿಂದ ದುಷ್ಕೃತ್ಯ ಎಸಗಿದ್ದಾರೆ.

ಚಿನ್ನ ಮಾರಿ ವಕೀಲರ ಶುಲ್ಕ ಕಟ್ಟಿದ್ದೇನೆ: ಅನಿಲ್‌ ಅಂಬಾನಿ!...

ನನ್ನ ಬಳಿ ಬಿಡಿಗಾಸೂ ಇಲ್ಲ. ಹೆಂಡತಿ, ಕುಟುಂಬದ ದುಡ್ಡಿನಲ್ಲಿ ಜೀವನ ನಡೆಸುತ್ತಿದ್ದೇನೆ. ಮಗನಿಂದ ಸಾಲ ಪಡೆದಿದ್ದೇನೆ. ವೈಭೋಗದ ಜೀವನ ಮಾಡುತ್ತಿಲ್ಲ. ಶಿಸ್ತುಬದ್ಧವಾಗಿ ಬದುಕುತ್ತಿದ್ದೇನೆ’ ಎಂದು ಕೆಲವೇ ವರ್ಷಗಳ ಹಿಂದೆ ಸಹಸ್ರಾರು ಕೋಟಿ ರು. ಒಡೆಯರಾಗಿದ್ದ ಉದ್ಯಮಿ ಅನಿಲ್‌ ಅಂಬಾನಿ ಬ್ರಿಟನ್‌ ನ್ಯಾಯಾಲಯದ ಮುಂದೆ ಗೋಳು ತೋಡಿಕೊಂಡಿದ್ದಾರೆ.