ಬಿಜೆಪಿ ನಾಯಕ ಹಾಗೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಮಾಜಿ ಯೋಧ ಜಸ್ವಂತ್ ಸಿಂಗ್ ಭಾನುವಾರ ನಿಧನರಾಗಿದ್ದಾರೆ.

ಮಾಜಿ ಸಚಿವರ ನಿಧನಕ್ಕೆ ಪಿಎಂ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಮಾಜಿ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕನ ಅಗಲುವಿಕೆ ತೀವ್ರ ನೋವುಂಟು ಮಾಡಿದೆ. ಅವರು ಅನೇಕ ಬಗೆಯಲ್ಲಿ ದೇಶಕ್ಕೆ ತಮ್ಮ ಸೇವೆ ಸಲ್ಲಿಸಿದ್ದಾರೆ. ಆರಂಭದಲ್ಲಿ ಓರ್ವ ಸೈನಿಕನಾಗಿ ಬಳಿಕ ರಾಜಕೀಯದ ಮೂಲಕ ದೇಶಕ್ಕಾಗಿ ದುಡಿದಿದ್ದಾರೆ. ಅಟಲ್‌ ಬಿಹಾರಿ ವಾಜಪೇಯಿ ಅಧಿಕಾರಾವಧಿಯಲ್ಲಿ ಕ್ಲಿಷ್ಟಕರವಾದ ಹಣಕಾಸು, ರಕ್ಷಣಾ ಖಾತೆ ಹಾಗೂ ವಿದೇಶಾಂಗ ಖಾತೆಗಳನ್ನು ನಿಭಾಯಿಸಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.

ಹಿರಿಯ ನಾಯಕನ ಅಗಲುವಿಕೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಅನೇಕ ಮಂದಿ ಸಂತಾಪ ಸೂಚಿಸಿದ್ದಾಋಎ.

ಈಗಾಗಲೇ ರಾಜ್ಯಸಭೆ ಸದಸ್ಯ ಗಸ್ತಿ, ಕೇಂದ್ರಸ ಸಚಿವ ಅಂಗಡಿಯವರನ್ನು ಕಳೆದುಕೊಂಡ ನೋವಿನಲ್ಲಿದ್ದ ಬಿಜೆಪಿಗೆ ಹಿರಿಯ ನಾಯಕನ ನಿಧನ ಮತ್ತಷ್ಟು ಆಘಾತ ಕೊಟ್ಟಿದೆ.