ನವದೆಹಲಿ(ಸೆ.27): ಪ್ರಧಾನ ಮಂತ್ರಿ ನರೇಂದ್ರ ಮೋದಿ ರೇಡಿಯೋ ಕಾರ್ಯಕ್ರಮ ಮನ್‌ ಕೀ ಬಾತ್‌ನ 69ನೇ ಸಂಚಿಕೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಬಾರಿಯ ಕಾರ್ಯಕ್ರಮದಲ್ಲಿ ಆತ್ಮನಿರ್ಭರ ಭಾರತಕ್ಕೆ ಕೃಷಿ ಕ್ಷೇತ್ರ, ರೈತ, ನಮ್ಮ ಹಳ್ಳಿಯೇ ಆತ್ಮನಿರ್ಭರ ಭಾರತ ಎಂಬ ಕನಸು ಸಾಕಾರಗೊಳಿಸಲು ಆಧಾರವೆಂದು ತಿಳಿಸಿದ್ದಾರೆ. ಅಲ್ಲದೇ ಕೊರೋನಾ ಕಾಲದ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದನ್ನು ಮರೆಯದಂತೆ ಮನವಿ ಮಾಡಿಕೊಂಡಿದ್ದಾರೆ.

ಹೌದು ದೇಶವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ ಕೊರೋನಾ ಸಂಕಟದ ನಡುವೆ ಕತೆ ಹೇಳುವ ಕಲೆ ಎಷ್ಟು ಮಹತ್ವ ಪಡದಿದೆ ಎಂದು ತಿಳಿಸಿದ್ದಾರೆ. ಇದರಿಂದ ಮಕ್ಕಳನ್ನು ಖುಷಿ ಪಡಿಸುವುದರೊಂದಿಗೆ ಅವರ ಜ್ಞಾನಾಭಿವೃದ್ಧಿ ಮಾಡಬಹುದೆಂದೂ ಹೇಳಿದ್ದಾರೆ. ಇದೇ ವೇಳೆ ಬೆಂಗಳೂರು ಸ್ಟೋರಿ ಟೆಲ್ಲಿಂಗ್ ಸೊಸೈಟಿಯ ಅಪರ್ಣಾ ಅಥರೆಯವರನ್ನೂ ಮಾತನಾಡಿಸಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ಆಘಿದ್ದ ಅಪರ್ಣಾರವರು ಕತೆ ಹೇಳುವ ಕಲೆ ಹೇಗೆ ರೂಢಿಸಿಕೊಂಡು ಎಂಬುವುದೂ ಈ ಕಾರ್ಯಕ್ರಮದಲ್ಲಿ ಬಹಿರಂಗವಾಗಿದೆ. 

ಆತ್ಮನಿರ್ಭರಕ್ಕೆ ರೈತನೇ ಆಧಾರ

ಆತ್ಮನಿರ್ಭರ ಭಾರತ ಕುರಿತು ಮಾತನಾಡಿದ ಪಿಎಂ ಮೋದಿ ಭೂಮಿ ತಾಯಿಗೆ ಯಾರು ಹತ್ತಿರವಿದ್ದಾರೋ ಅವರು ದೊಡ್ಡ ದೊಡ್ಡ ಸಂಕಟ ಬಂದರೂ ದೃಢವಾಗಿರುತ್ತಾರೆ ಎಂಬ ಮಾತಿದೆ. ಕೊರೋನಾ ಸಂಕಟ ಕಾಲದಲ್ಲಿ ನಮ್ಮ ಕೃಷಿ ಕ್ಷೇತ್ರ, ನಮ್ಮ ರೈತರು ಇದರ ಜೀವಂತ ಉದಾಹರಣೆಯಾಗಿದ್ದಾರೆ. ಸಂಕಟದ ಈ ಕಾಲದಲ್ಲಿ ನಮ್ಮ ದೇಶದ ಕೃಷಿ ಕ್ಷೇತ್ರ ಮತ್ತೊಮ್ಮೆ ತನ್ನ ಸಾಮರ್ಥ್ಯ ತೋರಿಸಿದೆ. ದೇಶದ ಕೃಷಿ ಕ್ಷೇತ್ರ, ನಮ್ಮ ರೈತ, ನಮ್ಮ ಹಳ್ಳಿ ಆತ್ಮ ನಿರ್ಭರ ಭಾರತದ ಆಧಾರವಾಗಿದೆ. ಇವರು ಬಲಶಾಲಿಯಾದರೆ ಆತ್ಮ ನಿರ್ಭರ ಭಾರತದ ಅಡಿಪಾಯ ಗಟ್ಟಿಯಾಗುತ್ತದೆ. ಕಳೆದ ಕೆಲ ಸಮಯದಲ್ಲಿ ಈ ಕ್ಷೇತ್ರಗಳು ಅನೇಕ ಬಂಧನಗಳಿಂದ ಮುಕ್ತಗೊಂಡಿವೆ. ಅನೇಕ ಮಂದಿ ಕೃಷಿಯಲ್ಲಿ ಹೊಸ ಆಯಾಮಗಳು ಸೇರ್ಪಡೆಯಾಗಿದೆ ಎಂದು ಹೇಳಿದ್ದಾರೆ. ಹೇಗೆ ಬದಲಾವಣೆಯಾಗತ್ತಿದೆ ಎಂದು ಹೇಳಿದ್ದಾರೆ.

ದೇ ಸಂದರ್ಭದಲ್ಲಿ ಹರ್ಯಾಣ ಹಾಗೂ ತಮಿಳುನಾಡಿನ ರೈತರನ್ನೂ ಮಾತನಾಡಿಸಿದ್ದಾರೆ. ಅವರ ಯಶಸ್ಸಿನ ಕತೆಯನ್ನು ಅನಾವರಣಗೊಳಿಸಿದ್ದಾರೆ.

ಬೆಂಗಳೂರು ಸ್ಟೋರಿ ಟೆಲ್ಲಿಂಗ್ ಸೊಸೈಟಿಯ ಅಪರ್ಣಾ ಅತ್ರೇಯ ಯಾರು?

ಎರಡು ಮಕ್ಕಳ ತಾಯಿ, ಭಾರತೀಯ ವಾಯುಸೇನಾ ಅಧಿಕಾರಿಯ ಹೆಂಡತಿ. ಇವರು ಕಳೆದ ಹದಿನೈದು ವರ್ಷಗಳಿಂದ ಕತೆ ಹೇಳುವ ಕಲೆಯನ್ನು ರೂಢಿಸಿಕೊಂಡಿದ್ದಾರೆ. ಸಾಫ್ಟ್‌ವೇರ್ ಇಂಡಸ್ಟ್ರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಸಿಎಸ್‌ಆರ್‌ ಪ್ರಾಜೆಕ್ಟ್‌ಗಳಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡುವಾಗ ಸಾವಿರಾರು ಮಕ್ಕಳಿಗೆ ಕತೆ ಮೂಲಕ ಶಿಕ್ಷಣ ನೀಡುವ ಅವಕಾಶ ಸಿಕ್ಕಿತ್ತು. ಅಂದು ಹೇಳಿದ್ದ ಕತೆ ನಾನು ನನ್ನ ಅಜ್ಜಿಯಿಂದ ಕೇಳಿಸಿಕೊಂಡಿದ್ದಾಗಿತ್ತು. ಆದರೆ ಕತೆ ಹೇಳುತ್ತಿದ್ದಾಗ, ಕೇಳಿಸಿಕೊಳ್ಳುತ್ತಿದ್ದ ಮಕ್ಕಳುಗಾದ ಖುಷಿ ಕಂಡು ನನಗೆ ಅಚ್ಚರಿಯಾಗಿತ್ತು. ಹೀಗಾಗಿ ಅದೇ ಕ್ಷಣ ನಾನು ಕತೆ ಹೇಳುವುದನ್ನು ನನ್ನ ಜೀವನದ ಗುರಿಯಾಗಿ ಆಯ್ಕೆ ಮಾಡಿಕೊಂಡೆ.