ಮಾಜಿ ಸಿಎಂ ಫಡ್ನವೀಸ್, ರಾವುತ್ ಭೇಟಿ: ರಾಜಕೀಯದಲ್ಲಿ ಸಂಚಲನ!
ಬಿಜೆಪಿಯ ಕಟು ಟೀಕಾಕಾರರಾದ ಶಿವಸೇನೆ ಸಂಸದ ಸಂಜಯ್ ರಾವುತ್ ಮಾಜಿ ಸಿಎಂ ಫಡ್ನವೀಸ್, ಪರಸ್ಪರ ಭೇಟಿ| ಭಾರೀ ಸಂಚಲನ ಮೂಡಿಸಿದೆ ನಾಯಕರ ಭೇಟಿ

ಮುಂಬೈ(ಸೆ.27): ಎನ್‌ಡಿಎ ಮೈತ್ರಿಯಿಂದ ಹೊರಬಂದ ಬಳಿಕ ಬಿಜೆಪಿಯ ಕಟು ಟೀಕಾಕಾರರಾದ ಶಿವಸೇನೆ ಸಂಸದ ಸಂಜಯ್ ರಾವುತ್ ಹಾಗೂ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಶನಿವಾರ ಪರಸ್ಪರ ಭೇಟಿಯಾಗಿದ್ದಾರೆ. ಈ ವಿಚಾರವು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.
ಆದರೆ, ಶಿವಸೇನೆ ಮುಖವಾಣಿ ಸಾಮ್ನಾ ಸಂಪಾದಕರೂ ಆಗಿರುವ ರಾವುತ್ ಅವರು ಪಢ್ನವೀಸ್ ಅವರ ಸಂದರ್ಶನ ಬಯಸಿದ್ದರು. ಈ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆಯಷ್ಟೇ. ಇದು ರಾಜಕೀಯ ದೃಷ್ಟಿಯಿಂದ ನಡೆದ ಭೇಟಿಯಲ್ಲ ಎಂದು ಬಿಜೆಪಿಯ ರಾಜ್ಯ ವಕ್ತಾರ ಕೇಶವ್ ಉಪಾಧ್ಯೆ ಸ್ಪಷ್ಟಪಡಿಸಿದ್ದಾರೆ.
ಬಿಹಾರ ಚುನಾವಣೆ ಬಳಿಕ ಈ ಸಂದರ್ಶನದಲ್ಲಿ ಭಾಗಿಯಾಗುವುದಾಗಿ ಫಡ್ನವೀಸ್ ತಿಳಿಸಿದ್ದಾರೆ ಎನ್ನಲಾಗಿದೆ.