ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತದ ಮೇಲೆ ಪ್ರತೀಕಾರಕ್ಕೆ ಪಾಕಿಸ್ತಾನ ಬಳಸಿದ ಚೀನಾ ಶಸ್ತ್ರಾಸ್ತ್ರಗಳು ವಿಫಲಗೊಂಡ ಬಗ್ಗೆ ಸಾಕಷ್ಟು ಸುದ್ದಿಯಾಗಿದ್ದವು. ಈಗ ಇರಾನ್‌ ಕೂಡ ಚೀನಾದ ಶಸ್ತ್ರಾಸ್ತ್ರ ನಂಬಿ ಇಸ್ರೇಲ್ ಅಮೆರಿಕ ವಿರುದ್ಧದ ಯುದ್ಧದಲ್ಲಿ ಹಾನಿ ಮಾಡಿಕೊಂಡಿದೆ ಎಂದು ವರದಿಯಾಗಿದೆ.

ಚೀನಾ ಶಸ್ತ್ರಾಸ್ತ್ರ ನಂಬಿ ಕೆಟ್ಟಿತಾ ಇರಾನ್

ಪಹಲ್ಗಾಮ್ ದಾಳಿ ನಂತರ ನಡೆದ ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತದ ಮೇಲೆ ಪ್ರತೀಕಾರಕ್ಕೆ ಪಾಕಿಸ್ತಾನ ಬಳಸಿದ ಚೀನಾ ಶಸ್ತ್ರಾಸ್ತ್ರಗಳು ವಿಫಲಗೊಂಡ ಬಗ್ಗೆ ಸಾಕಷ್ಟು ಸುದ್ದಿಯಾಗಿದ್ದವು. ನಂತರ ವೆನಿಜುವೆಲಾವೂ ಈ ಶಸ್ತ್ರಾಸ್ತ್ರಗಳ ನಂಬಿ ಕೆಟ್ಟಿತ್ತು ಎಂದು ವರದಿಯಾಗಿತ್ತು. ಇದಾದ ಬಳಿಕ ಈಗ ಇರಾನ್‌ ಕೂಡ ಚೀನಾದ ಶಸ್ತ್ರಾಸ್ತ್ರ ನಂಬಿ ತನ್ನ ಇಸ್ರೇಲ್ ಅಮೆರಿಕ ವಿರುದ್ಧದ ಯುದ್ಧದಲ್ಲಿ ಹಾನಿ ಮಾಡಿಕೊಂಡಿದೆ ಎಂದು ವರದಿಯಾಗಿದೆ.

ಮೊದಲೇ ಚೀನಾ ಉತ್ಪನ್ನಗಳು ಎಂದರೆ ನೋ ಗ್ಯಾರಂಟಿ ನೋ ವಾರಂಟಿ ಎಂಬ ಮಾತುಗಳು ಸಾಕಷ್ಟು ಚಾಲ್ತಿಯಲ್ಲಿವೆ. ಹೀಗಿರುವಾಗ ಅದರ ಶಸ್ತ್ರಾಸ್ತ್ರಗಳು ಜಾಗತಿಕ ಮಟ್ಟದಲ್ಲಿ ಈಗ ಹಲವು ದೇಶಗಳಿಗೆ ಮುಖಭಂಗ ಉಂಟಾಗುವಂತೆ ಮಾಡಿದೆ. ಪಾಶ್ಚಿಮಾತ್ಯ ಶಸ್ತ್ರಾಸ್ತ್ರಗಳಿಗೆ ಹೋಲಿಸಿದರೆ ಕಡಿಮೆ ಬೆಲೆಯ ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳಷ್ಟೇ ಪ್ರಭಾವ ಹಾಗೂ ಶಕ್ತಿಶಾಲಿಯಾಗಿದ್ದು, ಅವುಗಳಿಗೆ ಪರ್ಯಾಯ ಎಂದು ದೀರ್ಘಕಾಲದಿಂದ ಹೇಳಲಾಗುತ್ತಿದ್ದ ಚೀನೀ ನಿರ್ಮಿತ ಶಸ್ತ್ರಾಸ್ತ್ರಗಳು ಇತ್ತೀಚಿನ ಸಂಘರ್ಷಗಳಲ್ಲಿ ವಿಫಲವಾಗಿದ್ದು, ಚೀನಾ ಶಸ್ತ್ರಾಸ್ತ್ರ ಉದ್ಯಮದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತವು ಚೀನಿ ಶಸ್ತ್ರಾಸ್ತ್ರವನ್ನು ನಂಬಿದ್ದ ಪಾಕಿಸ್ತಾನದ ವಿಶ್ವಾಸವನ್ನು ತಲೆಕೆಳಗೆ ಮಾಡಿತ್ತು. ಹಾಗೆಯೇ ನಂತರ ವೆನಿಜುವೆಲಾದ ಮೇಲೆ ದಾಳಿ ನಡೆಸಿ ಅಲ್ಲಿನ ಅಧ್ಯಕ್ಷ ಮಡುರೊ ಅವರನ್ನು ಅಮೆರಿಕಾ ಬಂಧಿಸುವುದರ ಹಿಂದೆ ಈ ಚೀನಾ ಶಸ್ತ್ರಾಸ್ತ್ರಗಳ ವೈಫಲ್ಯವಿದೆ. ಇರಾನ್‌ನ ಗುರಾಣಿಗಳನ್ನು ಪುಡಿಪುಡಿ ಮಾಡಿದ ಅಮೆರಿಕ ಇಸ್ರೇಲಿ ದಾಳಿಗಳಿಂದಾಗಿ, ಈಗ ಮತ್ತೊಮ್ಮೆ ಚೀನಾದ ಈ ಶಸ್ತ್ರಾಸ್ತ್ರಗಳು ಫೈಲ್ ಆಗಿವೆ ಎಂಬುದು ಸಾಬೀತಾಗಿದೆ. ಯುದ್ಧ ಪರೀಕ್ಷಿತ ಆವಿಷ್ಕಾರ (battle-tested innovation) ಎಂದು ಪ್ರಚಾರ ಮಾಡಲ್ಪಟ್ಟಿದ್ದ ಚೀನಾ ಶಸ್ತ್ರಾಸ್ತ್ರಗಳು ಈಗ ಕಳಪೆ ಎಂಜಿನಿಯರಿಂಗ್, ದುರ್ಬಲ ಸಾಫ್ಟ್‌ವೇರ್ ಮತ್ತು ಯಾವುದೇ ವಾಸ್ತವ ಯುದ್ಧದಲ್ಲಿ ಪ್ರಯೋಗ ಮಾಡದೇ ನಿರ್ಮಿಸಲ್ಪಟ್ಟ ಆಟಿಕೆ ಸಾಮಗ್ರಿಯಂತೆ ಆಗಿದೆ.

ಇದನ್ನೂ ಓದಿ: ಇಸ್ರೇಲ್ ನಾಯಕ ಖಮೇನಿ ಹತ್ಯೆಗೆ ರಷ್ಯಾ, ಚೀನಾ, ಉತ್ತರ ಕೊರಿಯಾದ ಪ್ರತಿಕ್ರಿಯೆ ಏನು?

ಪಾಕಿಸ್ತಾನದಲ್ಲಿ ಭಾರತದ ವಾಯುಸೇನೆ ಬ್ರಹೋಸ್ ಕ್ಷಿಪಣಿಗಳು YLC-BE ಆಂಟಿ-ಸ್ಟೈಲ್ಸ್ ರಾಡಾರ್‌ಗಳು ಮತ್ತು HQ-9 ಬ್ಯಾಟರಿಗಳನ್ನು ಚೂರುಚೂರು ಮಾಡುವುದನ್ನು ಚೀನಾವನ್ನು ಅವಲಂಬಿಸಿದ ಪಾಕ್ ಸೇನೆ ಅಸಹಾಯಕತೆಯಿಂದ ನೋಡಿತ್ತು. ಹಾಗೆಯೇ ಅಮೆರಿಕಾದ ಡೆಲ್ಟಾ ಫೋರ್ಸ್ ಸಮರಕ್ಕಿಳಿದಾಗ ವೆನೆಜುವೆಲಾದಲ್ಲಿ JY-27A ರಾಡಾರ್‌ಗಳು ಮತ್ತು HO-9 ಗಳು ಕುರುಡಾಗಿದ್ದವು. ಹಾಗೆಯೇ ಇರಾನ್‌ನಲ್ಲಿ ಚೀನಾ ಸರಬರಾಜು ಮಾಡಿದ HQ-9B ರಕ್ಷಣಾ ವ್ಯವಸ್ಥೆ ಹಾಗೂ F-35 ಸೈಲ್ ಬ್ಯಾರೇಜ್‌ಗಳು ಅಮೆರಿಕಾದ ದಾಳಿಗೆ ಪುಡಿಪುಡಿಯಾಗಿವೆ. ಚೀನಾದ ಶಸ್ತ್ರಾಸ್ತ್ರಗಳ ಈ ಪುನರಾವರ್ತಿತ ವೈಫಲ್ಯಗಳು ಇವು ಕೇವಲ ದೋಷಗಳಲ್ಲ ಬದಲಾಗಿ ವ್ಯವಸ್ಥಿತ ಹಾನಿಯ ಸಂಕೇತವಾಗಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರ್ ಅನ್ನು ನಡೆಸಿತ್ತು. ಭಾರತೀಯ ವಾಯುಪಡೆಯ (ಐಎಎಫ್) ಬ್ರಹ್ಮೋಸ್‌ ಸೂಪರ್‌ ಸಾನಿಕ್ ಕ್ರೂಸ್ ಕ್ಷಿಪಣಿಗಳು ಮತ್ತು ವಾಯು ಉಡಾವಣಾ ಯುದ್ಧಸಾಮಗ್ರಿಗಳನ್ನು ಬಳಸಿಕೊಂಡು ಎಲ್‌ಒಸಿ ದಾಟದೇ, ಪಾಕಿಸ್ತಾನದ ಒಂಬತ್ತು ಸೇನಾ ನೆಲೆಗಳನ್ನು ಧ್ವಂಸ ಮಾಡಿತ್ತು.