Asianet Suvarna News Asianet Suvarna News

ISRO ಬೆನ್ನಿಗೆ ನಿಂತ ಭಾರತ, ಶಾರೂಕ್ ಮಗಳಿಗೆ ಟ್ರೋಲ್ ಕಾಟ; ಇಲ್ಲಿವೆ ಸೆ.07ರ ಟಾಪ್ 10 ಸುದ್ದಿ!

ಚಂದ್ರಯಾನ 2 ಅಂತಿಮ ಕ್ಷಣದಲ್ಲಿ ಸಂಪರ್ಕ ಕಡಿತಗೊಂಡ ಕಾರಣ ISRO ಮಹತ್ವಾಕಾಂಕ್ಷೆಯ ಯೋಜನೆಗೆ ಸಣ್ಣ ತೊಡಕಾಗಿದೆ. ಆದರೆ ಇಸ್ರೋ ವಿಜ್ಞಾನಿಗಳ ಪರಿಶ್ರಮ ಹಾಗೂ ಪ್ರಯತ್ನವನ್ನು ಪ್ರಧಾನಿ ಮೋದಿ ಸೇರಿದಂತೆ ಇಡೀ ಭಾರತವೇ ಕೊಂಡಾಡಿದೆ. ಇಸ್ರೋ ವಿಜ್ಞಾನಿಗಳಿಗೆ ಧರ್ಯ ತುಂಬಿದ ಮೋದಿಯನ್ನು ತಬ್ಬಿ ಹಿಡಿದ ಇಸ್ರೋ ಅಧ್ಯಕ್ಷ ಕೆ ಶಿವನ್ ಬಿಕ್ಕಿ ಬಿಕ್ಕಿ ಅತ್ತರು. ದೇಶವೆ ಚಂದ್ರಯಾನ2 ಸಾಧನೆಯ ಗುಂಗಿನಲ್ಲಿದ್ದರೆ, ಇತ್ತ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರಿ ಸುಹಾನ್ ಖಾನ್‌ಗೆ ಟ್ರೋಲಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಹೊಸ ಟ್ರಾಫಿಕ್ ನಿಯಮ ಜಾರಿಯಾಗಿ 7 ದಿನಗಳಾದರೂ ದಂಡದ ಅಬ್ಬರ ಮತ್ತೆ ಸದ್ದು ಮಾಡುತ್ತಿದೆ.  ಸೆ.07 ರಂದು ಸಂಚಲನ ಮೂಡಿಸಿದ ಹಲವು ಸುದ್ದಿಗಳಲ್ಲಿ ಟಾಪ್ 10 ಸುದ್ದಿ ಇಲ್ಲಿವೆ. 
 

Isro chandrayaan2 to shuahana khan troll top 10 news of September 07
Author
Bengaluru, First Published Sep 7, 2019, 4:36 PM IST

1 ಇಡೀ ದೇಶದ ಭಾವನೆ ಹಿಡಿದಿಟ್ಟ ಕನ್ನಡಿಗ ಬರೆದ ಕಾರ್ಟೂನ್ ಎಲ್ಲೆಡೆ ವೈರಲ್!

Isro chandrayaan2 to shuahana khan troll top 10 news of September 07

ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ 2 ನೌಕೆಯ ಸಂಪರ್ಕ ಕೊನೆಯ ಕ್ಷಣದಲ್ಲಿ ಕಡಿತಗೊಂಡಿದೆ. ಹೀಗಾಗಿ ಚಂದ್ರನಲ್ಲಿ ಅಡಗಿರುವ ರಹಸ್ಯ ಭೇದಿಸುವ ಕನಸು ಹೊತ್ತಿದ್ದ ಇಸ್ರೋಗೆ ಕೊಂಚ ಹಿನ್ನಡೆಯಾಗಿದೆ. ಅಂತಿಮ ಕ್ಷಣದಲ್ಲಿ ವಿಕ್ರಮ್ ಲ್ಯಾಂಡರ್ ಜೊತೆಗಿನ ಸಿಗ್ನಲ್ ಕಡಿತಗೊಂಡಿದ್ದರೂ ಚಂದ್ರಯಾನ 2 ಶೇ. 95ರಷ್ಟು ಯಶಸ್ವಿಯಾಗಿದೆ. ಮೊದಲ ಪ್ರಯತ್ನದಲ್ಲೇ ಈ ಮಟ್ಟದ ಸಾಧನೆ ಮಾಡಿದ ಇಸ್ರೋ ವಿಜ್ಞಾನಿಗಳಿಗೆ ಇಡೀ ದೇಶವೇ ಭೇಷ್ ಎಂದಿದೆ. ಸದ್ಯ ಪ್ರತಿಯೊಬ್ಬ ಭಾರತೀಯನ ಭಾವನೆಯನ್ನು ಹಿಡಿದಿಟ್ಟಿರುವ ಕನ್ನಡಿಗನ ಕೈಯ್ಯಲ್ಲರಳಿದ ಕಾರ್ಟೂನ್ ಒಂದು ವೈರಲ್ ಆಗುತ್ತಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ.

 

2 ಇಸ್ರೋ ವಿಜ್ಞಾನಿಗಳೇ, ನಿಮ್ಮೊಂದಿಗಿದೆ ಭಾರತ: ಮೋದಿ ವಿಶ್ವಾಸದ ಮಾತಿಗೆ ವಿಜ್ಞಾನಿಗಳು ಭಾವುಕ!

Isro chandrayaan2 to shuahana khan troll top 10 news of September 07

ಇಸ್ರೋ ವಿಜ್ಞಾನಿಗಳೇ.. ಭಾರತ ನಿಮ್ಮೊಂದಿಗಿದೆ. ಈ ಜಗತ್ತಿನಲ್ಲಿ  ಬೇರೆ ಯಾರೂ ಮಾಡದ ಸಾಧನೆಗೆ ನೀವು ಕೈ ಹಾಕಿದ್ದೀರಿ. ಭಾರತ ನಿಮಗೆ ಹೆಮ್ಮೆಯಿಂದ ಇನ್ನಷ್ಟು ಅವಕಾಶಗಳನ್ನು ನೀಡಲಿದೆ. ಚಂದ್ರಯಾನ2 ಅಂತಿಮ ಕ್ಷಣದಲ್ಲಿ ಸಂಪರ್ಕ ಕಡಿತಗೊಂಡ ಬಳಿಕ ಮೋದಿಯ ವಿಶ್ವಾಸದ ಮಾತಿಗೆ ವಿಜ್ಞಾನಿಗಳು ಭಾವುಕರಾದರು.


3 ಮೋದಿ ತಬ್ಬಿ ಕಣ್ಣೀರು ಹಾಕಿದ ಇಸ್ರೋ ಅಧ್ಯಕ್ಷ, ಬೆನ್ನು ತಟ್ಟಿ ಧೈರ್ಯ ತುಂಬಿದ ಪಿಎಂ!

Isro chandrayaan2 to shuahana khan troll top 10 news of September 07

ಆರ್ಬಿಟರ್‌ನಿಂದ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಇಳಿಯುವ ವೇಳೆ ಸಂಪರ್ಕ ಕಡಿತಗೊಂಡಿದೆ.ಈ ಮೂಲಕ ಇಸ್ರೋಗೆ ಕೊಂಚ ಹಿನ್ನಡೆಯಾಗಿದೆ. ಇಸ್ರೋ ವಿಜ್ಞಾನಿಗಳಿಗೆ ಮೋದಿ ಧರ್ಯ ತುಂಬಿದರು ಈ ವೇಳೆ ಇಸ್ರೋ ಮುಖ್ಯಸ್ಥ ಡಾ. ಕೆ. ಶಿವನ್ ಭಾವುಕರಾಗಿದ್ದಾರೆ. ಪ್ರಧಾನಿ ಮೋದಿಯ್ನನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತರು.

4 ನೆಹರು, ಇಂದಿರಾ, ವಾಜಪೇಯಿಗಿಂತ ಮೋದಿ ಬೆಸ್ಟ್‌ ಪ್ರಧಾನಿ: ಎಬಿಪಿ ಸಮೀಕ್ಷೆ!

Isro chandrayaan2 to shuahana khan troll top 10 news of September 07

ಎರಡನೇ ಅವಧಿಯಲ್ಲಿ ಮೊದಲ 100 ದಿನಗಳನ್ನು ಶುಕ್ರವಾರವಷ್ಟೇ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ಈಗಲೂ ದೇಶದ ಜನಪ್ರಿಯ ನಾಯಕ. ಜವಾಹರಲಾಲ್‌ ನೆಹರು, ಇಂದಿರಾ ಗಾಂಧಿ, ವಾಜಪೇಯಿ ಅವರನ್ನು ಹಿಂದಿಕ್ಕಿ ಅತ್ಯುತ್ತಮ ಪ್ರಧಾನಿ ಎನಿಸಿಕೊಂಡಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

5 ’ಮೊದಲು ಸರಿಯಾಗಿ ಬಟ್ಟೆ ಹಾಕ್ಕೋಳಮ್ಮಾ’; ಶಾರೂಕ್ ಮಗಳಿಗೆ ಕ್ಲಾಸ್!

Isro chandrayaan2 to shuahana khan troll top 10 news of September 07

ಶಾರೂಕ್ ಖಾನ್ ಪುತ್ರಿ ಸುಹಾನಾ ಖಾನ್ ಇಂಟರ್ ನೆಟ್ ಫೇವರೆಟ್ ಸ್ಟಾರ್. ಆಕೆ ಸೋಷಿಯಲ್ ಅಕೌಂಟ್ ಮೇಲೆ ನೆಟ್ಟಿಗರು ಒಂದು ಕಣ್ಣಿಟ್ಟಿರುತ್ತಾರೆ. ಆಕೆಯ ಸೆಕ್ಸಿ ಫೋಟೋಗಳು ಟ್ರೋಲ್ ಆಗುತ್ತಿರುತ್ತವೆ. ಇದೀಗ ಸುಹಾನ ಖಾನ್ ಡ್ರೆಸ್ಸಿಂಗ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗಿದೆ. 

6 ಕನ್ನಡದ ಕೋಟ್ಯಧಿಪತಿ’ಯಲ್ಲಿ ಸಿಂಹ, ಸೂರ್ಯ ಜೊತೆ ನವರಸ ನಾಯಕ!

Isro chandrayaan2 to shuahana khan troll top 10 news of September 07
ಕಲರ್ಸ್‌ ಕನ್ನಡ ವಾಹಿನಿಯ ವಾರಾಂತ್ಯದ ಕಾರ್ಯಕ್ರಮ ಕನ್ನಡದ ಕೋಟ್ಯಧಿಪತಿಯಲ್ಲಿ ಈ ಬಾರಿ ಸಂಸದರಾದ ಪ್ರತಾಪ್‌ ಸಿಂಹ, ತೇಜಸ್ವಿ ಸೂರ್ಯ ಹಾಗೂ ನಟ ಜಗ್ಗೇಶ್‌ ಭಾಗವಹಿಸಿದ್ದಾರೆ. ಇದರಲ್ಲಿ ಗೆದ್ದ ಹಣವನ್ನು ಸಂಸದರು, ಪ್ರವಾಹ ಪೀಡಿತರಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ

7 ಕನ್ನಡ ಯುವತಿಯರೇ ಇಲ್ ಕೇಳಿ, ನೀವೂ ಆಗ್ಬಹುದು ಬ್ರಿಟಿಷ್ ಹೈ ಕಮಿಷನರ್!

Isro chandrayaan2 to shuahana khan troll top 10 news of September 07

18 ರಿಂದ 23  ವಯಸ್ಸಿನ ಕರ್ನಾಟಕ ಯುವತಿಗೆ ಸುವರ್ಣಾವಕಾಶ. ಒಂದು ದಿನದ ಮಟ್ಟಿಗೆ ಭಾರತದ ಬ್ರಿಟಿಷ್ ಹೈ ಕಮಿಷನರ್ ಆಗಬಹುದು.  ಈ ಬಾರಿ ಕರ್ನಾಟಕದ ಮಹಿಳೆಯರಿಗೆ ಈ ಅವಕಾಶ ಸಿಕ್ಕಿದ್ದು, ರಾಜ್ಯದ ಯುವತಿಯರು ಒಂದು ದಿನದ ಮಟ್ಟಿಗೆ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಆಗಿ ಅನುಭವ ಪಡೆಯ ಬಹುದಾಗಿದೆ.

8 ಚಂದ್ರಯಾನ 2: ISRO ಬೆನ್ನಿಗೆ ನಿಂತ ಟೀಂ ಇಂಡಿಯಾ ಕ್ರಿಕೆಟರ್ಸ್!

Isro chandrayaan2 to shuahana khan troll top 10 news of September 07

ಮಹತ್ವಾಕಾಂಕ್ಷಿಯ ಚಂದ್ರಯಾನ 2ಗೆ ಅಂತ್ಯದಲ್ಲಿ ಅಲ್ಪ ಹಿನ್ನಡೆ ಅನುಭವಿಸಿದೆ. ಆದರೆ ಬಹುತೇಕ ಯಶಸ್ಸು ಸಾಧಿಸಿರುವ ISRO ವಿಜ್ಞಾನಿಗಳಿಗೆ ಟೀಂ ಇಂಡಿಯಾ ಕ್ರಿಕೆಟಿಗರು ಸಲ್ಯೂಟ್ ಹೊಡೆದಿದ್ದಾರೆ. ವಿಜ್ಞಾನದಲ್ಲಿ ಹಿನ್ನಡಯೇ ಇಲ್ಲ, ಎಲ್ಲವೂ ಪ್ರಯೋಗ ಎಂದು ಕ್ರಿಕೆಟಿಗರು ISROಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

9 ಸಂಚಾರ ನಿಯಮ ಉಲ್ಲಂಘನೆ: ಪೊಲೀಸಪ್ಪಗೇ 34000 ರೂ. ದಂಡ!

Isro chandrayaan2 to shuahana khan troll top 10 news of September 07

ರಸ್ತೆ ಅಪಘಾತಗಳನ್ನು ತಡೆಯುವ ಸಲುವಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ಪ್ರಮಾಣದ ದಂಡ ವಿಧಿಸುವ ನೂತನ ಕಾಯ್ದೆಯಡಿ ದಂಡದ ಬಿಸಿ ಕೇವಲ ಜನಸಾಮಾನ್ಯರಿಗಷ್ಟೇ ಅಲ್ಲದೆ, ಪೊಲೀಸರಿಗೂ ತಟ್ಟಿದೆ. ಈ ಅಧಿಸೂಚನೆ ಹೊರಬಿದ್ದ ಬೆನ್ನಲ್ಲೇ, ಜಾರ್ಖಂಡ್‌ ರಾಜಧಾನಿ ರಾಂಚಿಯಲ್ಲಿ ಹೆಲ್ಮೆಟ್‌ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಕಾನ್‌ಸ್ಟೇಬಲ್‌ವೊಬ್ಬರಿಗೆ ದುಬಾರಿ ದಂಡ ವಿಧಿಸಲಾಗಿದೆ. 

10 ನಾಲ್ಕನೇ ತರಗತಿ ಪುತ್ರನಿಂದ ಅಪ್ಪನ ಬ್ಯಾಂಕ್ ಖಾತೆಗೆ ಕನ್ನ!

Isro chandrayaan2 to shuahana khan troll top 10 news of September 07

ಚಾಕೋಲೇಟ್‌, ತಿಂಡಿ- ತಿನಿಸಿಗಾಗಿ ತಂದೆಯ ಜೇಬಿನಿಂದ ಮಕ್ಕಳು ಹಣ ಕದಿಯುವುದನ್ನು ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಬಾಲಕ ಆನ್‌ಲೈನ್‌ ವಿಡಿಯೋ ಗೇಮ್‌ಗಾಗಿ ತಂದೆಯ ಮೊಬೈಲ್‌ ಬಳಸಿ ಅಪ್ಪನಿಗೇ ತಿಳಿಯದಂತೆ ಅಕೌಂಟ್‌ನಿಂದ ಹಣ ಎಗರಿಸುತ್ತಿದ್ದ ಅಚ್ಚರಿಯ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ಬೆಳಕಿಗೆ ಬಂದಿದೆ.

Follow Us:
Download App:
  • android
  • ios