ಬೆಂಗಳೂರು, (ಸೆ.7): 18 ರಿಂದ 23  ವಯಸ್ಸಿನ ಕರ್ನಾಟಕ ಯುವತಿಗೆ ಸುವರ್ಣಾವಕಾಶ. ಒಂದು ದಿನದ ಮಟ್ಟಿಗೆ ಭಾರತದ ಬ್ರಿಟಿಷ್ ಹೈ ಕಮಿಷನರ್ ಆಗಬಹುದು.

ಈ ಬಾರಿ ಕರ್ನಾಟಕದ ಮಹಿಳೆಯರಿಗೆ ಈ ಅವಕಾಶ ಸಿಕ್ಕಿದ್ದು, ರಾಜ್ಯದ ಯುವತಿಯರು ಒಂದು ದಿನದ ಮಟ್ಟಿಗೆ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಆಗಿ ಅನುಭವ ಪಡೆಯಬಹುದಾಹಗಿದೆ.

ISRO ಶ್ರಮ ಆಗಿಲ್ಲ ವ್ಯರ್ಥ, ನಿರೀಕ್ಷೆಗಳು ಇನ್ನೂ ಜೀವಂತ! ನಾವಿರೋಣ ಪ್ರಾರ್ಥಿಸುತ್ತಾ!

ಹೌದು...ಅಕ್ಟೋಬರ್ 11ರಂದು ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನ ಆಚರಿಸಲಾಗುತ್ತಿದೆ. ಈ ಕಾರಣಕ್ಕಾಗಿ ಬ್ರಿಟಿಷ್ ಹೈಕಮಿಷನ್ 18ರಿಂದ 23 ವರ್ಷ ವಯಸ್ಸಿನ ಯುವತಿಯರಿಗಾಗಿ ಸ್ಪರ್ಧೆಯೊಂದನ್ನು ಆಯೋಜಿಸಿದೆ.

ಬೆಂಗಳೂರಿನಲ್ಲಿರುವ ಬ್ರಿಟಿಷ್ ಡೆಪ್ಯೂಟಿ ಹೈ ಕಮಿಷನ್, ಡೆಪ್ಯುಟಿ ಬ್ರಿಟಿಷ್ ಹೈ ಕಮಿಷನರ್ ಫಾರ್ ಎ ಡೇ ಎಂಬ ಕಾರ್ಯಕ್ರಮ ಆಯೋಜಿಸಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಒಂದು ದಿನದ ಮಟ್ಟಿಗೆ ಬ್ರಿಟಿಷ್ ಹೈಕಮಿಷನರ್ ಆಗುವ ಸುವರ್ಣಾವಕಾಶ ಸಿಗಲಿದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವವರು, ಲಿಂಗ ಸಮಾನತೆ ಏಕೆ ಮುಖ್ಯ ಎಂಬ ವಿಷಯಗ ಬಗ್ಗೆ ಒಂದು ನಿಮಿಷದ ವಿಡಿಯೋ ಮಾಡ ಬೇಕು.ಮತ್ತು ಅವರ ದೊಡ್ಡ ಸ್ಫೂರ್ತಿ ಯಾರು ಎಂಬ ಬಗ್ಗೆಯೂ ವಿಡಿಯೋದಲ್ಲಿ ತಿಳಿಸಿ  @UKindia  ಮತ್ತು @UKinBenngaluru ವಿಳಾಸಕ್ಕೆ ಟ್ವಿಟ್ಟರ್ , ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂ ನಲ್ಲಿ #Dayofthegirl ಎಂದು ಟ್ಯಾಗ್ ಮಾಡಬೇಕು. 
ಸೆಪ್ಟಂಬರ್ 10 ವಿಡಿಯೋ ಅಪ್ ಲೋಡ್ ಮಾಡಲು ಕೊನೆಯ ದಿನಾಂಕವಾಗಿದೆ.

ಹಾಗಿದ್ದರೇ ಮತ್ತೇಕೆ ತಡ ಈಗಿನಿಂದಲೇ ಹೈಕಮಿಷನರ್ ಆಗಲು ಟ್ರೈ ಮಾಡಿ...ಒಂದ್ ದನ ಬ್ರಿಟಿಷ್ ಹೈ ಕಮಿಷನರ್ ಆಗಿ ಮೆರೆಯಿರಿ. ಆಲ್ ದಿ ಬೆಸ್ಟ್.......