ಸ್ಫೂರ್ತಿದಾಯಕ ಭಾಷಣ ಮಾಡಿ ಇಸ್ರೋಗೆ ಬಲ ತುಂಬಿದ ಪ್ರಧಾನಿ: ಮೋದಿ ಭಾಷಣದ ಹೈಲೈಟ್ಸ್

* ಭಾರತ ತಲೆ ಎತ್ತಿ ನಡೆಯುವಂತಹ ಕೆಲಸ ಮಾಡಿದ್ದೀರಿ, ನಿಮ್ಮ ಇಡೀ ಜೀವನವನ್ನು ಇದಕ್ಕಾಗಿಯೇ ಮುಡಿಪಿಟ್ಟಿದ್ದೀರಿ

* ನಿಮ್ಮನ್ನು ಈ ದೇಶ ಎಂದಿಗೂ ನೆನಪಿನಲ್ಲಿ ಇಟ್ಟುಕೊಳ್ಳಲಿದೆ. ನಿನ್ನೆ ರಾತ್ರಿ ನಿಮ್ಮೊಂದಿಗೆ ಇದ್ದೆ, ನಿಮ್ಮ ಕಣ್ಣುಗಳ ನಿರೀಕ್ಷೆ ಅರ್ಥವಾಗಿದೆ. ನಿಮ್ಮ ಜೊತೆ ಮಾತಾಡಿ ಹೋಗಲೇಬೆಕೆಂದು ತೀರ್ಮಾನಿಸಿದೆ

* ನೀವು ಭಾರತ ಮಾತೆಯ ಜಯಕ್ಕೋಸ್ಕರ ಹೋರಾಡುವವರು, ನಿಮ್ಮ ದುಗುಡದ ಕ್ಷಣಗಳೊಂದಿಗೆ ನಾನು ನಿಮ್ಮೊಂದಿಗೆ ಇದ್ದೆ. ದುಗುಡದ ಜೊತೆಗೆ ಗೆದ್ದೇ ಗೆಲ್ಲುವ ನಿಮ್ಮ ಛಲವನ್ನು ಕಂಡೆ

* ಇವತ್ತು ಕೆಲ ಅಡ್ಡಿಗಳಾಗಿವೆ, ಅಡ್ಡಿ ಎಂದಿಗೂ ನಮ್ಮ ದೌರ್ಬಲ್ಯ ಅಲ್ಲ, ಈ ಅಡ್ಡಿಗೆ ಬೆದರಿ ನಾವು ನಮ್ಮ ಯಾನ ನಿಲ್ಲಿಸುವುದಿಲ್ಲ. ಸಾಹಿತಿಗಳು ಮತ್ತು ಕಲಾವಿದರು ಚಂದ್ರನ ಬಗ್ಗೆ ಕಲ್ಪನೆ ಕಟ್ಟಿಕೊಟ್ಟಿದ್ರು. 

"

ಇಸ್ರೋ ಚಂದ್ರಯಾನ ಲ್ಯಾಂಡರ್ ಸಂಪರ್ಕ ಕಡೇ ಕ್ಷಣದಲ್ಲಿ ಕಡಿತ!

* ಸಾಹಿತಿಗಳ ಕಲ್ಪನೆಯನ್ನು ನಿಜ ಮಾಡಲು ಹೊರಟವರು ನೀವು, ನಿಮ್ಮ ಕನಸಿನ ಹಾದಿಯಲ್ಲಿ ಕೆಲವು ಅಡೆತಡೆಗಳು ಬಂದಿವೆ. ರಾತ್ರಿಯಿಡೀ ನೀವು ನಿದ್ದೆ ಮಾಡಿಲ್ಲ ನನಗೆ ಗೊತ್ತಿದೆ.

* ಯಾಕೆ ಹೀಗಾಯಿತು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ. ನಿಮಗಷ್ಟೇ ಅಲ್ಲ, ದೇಶದ ಜನರಿಗೂ ಅರ್ಥವಾಗುತ್ತದೆ. ಯಾವತ್ತೂ ಎದೆಗುಂದಬೇಡಿ. ಇಂದಲ್ಲ ಮುಂದೆಯೂ ಅಷ್ಟೇ

* ಈ ಚಂದ್ರಯಾನ ಕೇವಲ ಭಾರತಕ್ಕಷ್ಟೇ ಅಲ್ಲ, ಜಗತ್ತಿಗೆ ಅಗತ್ಯ. ನಮಗೆ ನಮ್ಮ ಬಾಹ್ಯಾಕಾಶ ವಿಜ್ಞಾನಿಗಳ ಮೇಲೆ ವಿಶ್ವಾಸವಿದೆ. ಹೊಸ ಹೊಸ ಸಂಶೋಧನೆಗಳಿಗೆ ಭಾರತ ತೆರೆದುಕೊಳ್ಳಲಿದೆ

* ಇಸ್ರೋ ವಿಜ್ಞಾನಿಗಳೇ.. ಭಾರತ ನಿಮ್ಮೊಂದಿಗೆ ಯಾವಾಗ್ಲೂ ಇದೆ. ಭಾರತ ನಿಮಗೆ ಹೆಮ್ಮೆಯಿಂದ ಇನ್ನಷ್ಟು ಅವಕಾಶಗಳನ್ನು ನೀಡಲಿದೆ. ಜಗತ್ತಿನ ಬೇರೆ ಯಾರೂ ಮಾಡದ ಸಾಧನೆಗೆ ನೀವು ಕೈ ಹಾಕಿದ್ದೀರಿ

* ಭಾರತ ನಿಮ್ಮ ಸೇವೆಯನ್ನೂ ಎಂದೆಂದೂ ನೆನಪಿನಲ್ಲಿ ಇಡಲಿದೆ. ಈ ಅಡ್ಡಿಗಳಿಗೆ ಎದೆಗುಂದೆ ನೀವು ಮುನ್ನುಗ್ಗಿ. ವಿಜ್ಞಾನಿಗಳ ಕುಟುಂಬ ಸದಸ್ಯರ ಸಹಕಾರವೂ ಈ ಯಾನದ ಯಶಸ್ಸಿಗೆ ಕಾರಣ

* ಇಷ್ಟೆಲ್ಲ ದಾಳಿಯಾದ್ರೂ ನಮ್ಮ ಉತ್ಸಾಹವನ್ನು ಕುಗ್ಗಿಸಲು ಆಗಿಲ್ಲ. ಸೋಲುಗಳಿಗೆ ಎದೆಗುಂದುವ ಜಾಯಮಾನ ಭಾರತದ್ದಲ್ಲ. ಈ ಯಾನ ನಮ್ಮನ್ನು ಇನ್ನಷ್ಟು ಉತ್ತಮ ಮತ್ತು ಶಕ್ತಿಯುತಗೊಳಿಸಲಿದೆ

* ಅತೀ ಶೀರ್ಘದಲ್ಲೇ ಗೆಲುವು ನಮ್ಮದಾಗಲಿದೆ. ನಿರಂತರ ಪ್ರಯತ್ನ ಮುಂದುವರೆಸಿ, ನಾವೆಲ್ಲರೂ ಗೆಲ್ಲೋಣ. ನಿಮ್ಮೆಲ್ಲರ ಶ್ರಮ ಹಾಗೂ ಪ್ರಯತ್ನಕ್ಕೆ ದೇಶ ಗರ್ವ ಪಡುತ್ತದೆ

* ನಿಮ್ಮ ಎಲ್ಲ ಪ್ರಯತ್ನಗಳ ಜೊತೆ ಸದಾ ನಾನು ಇರುತ್ತೇನೆ. ಪ್ರತೀ ಸೋಲು, ಸವಾಲು ಹೊಸ ಎತ್ತರಕ್ಕೆ ಕರೆದೊಯ್ಯುತ್ತದೆ. ಮುಂದಿನ ಗೆಲುವು ನಮ್ಮದೇ ಅನ್ನೋದು ಇದರೊಂದಿಗೆ ಗೊತ್ತಾಗುತ್ತೆ

* ವಿಜ್ಞಾನಕ್ಕೆ ಸೋಲು ಅನ್ನೋದೇ ಇಲ್ಲ, ಪ್ರಯತ್ನಗಳಷ್ಟೇ ಗೊತ್ತು. ಪ್ರತೀ ಪ್ರಯತ್ನವು ಹೊಸ ಜ್ಞಾನವನ್ನು ನೀಡುತ್ತದೆ. ಚಂದ್ರಯಾನ ನಿರೀಕ್ಷೆಯಲ್ಲಿ ಸ್ವಲ್ಪ ಎಡವಿದ್ರೂ ಸೋಲಾಗಿಲ್ಲ

* ಇಡೀ ದೇಶ ಆನಂದದಿಂದ ಇದೆ, ಜೊತೆಗೆ ಎಲ್ಲರೂ ಗರ್ವ ಪಟ್ಟಿದ್ದಾರೆ. ನಾನು ಎಲ್ಲೇ ಇದ್ದರೂ ಚಂದ್ರಯಾನದ ಮಾಹಿತಿ ಪಡೆದುಕೊಳ್ತಿದ್ದೆ. ವರ್ಷಗಟ್ಟಲೇ ನಿಮ್ಮ ಪ್ರಯತ್ನಗಳ ಅರಿವು ನನ್ನಲ್ಲಿದೆ 

* ಇಸ್ರೋ ಮೊದಲ ಯತ್ನದಲ್ಲೇ ಮಂಗಳ ಗ್ರಹದಲ್ಲಿ ತಿರಂಗಾ ಹಾರಿಸಿದೆ. ಚಂದ್ರನಲ್ಲಿ ನೀರಿದೆ ಎಂದು ಮೊದಲು ಜಗತ್ತಿಗೆ ತಿಳಿಸಿದ್ದು ಭಾರತ. ಈ ಚಂದ್ರಯಾನವು ಹೊಸದನ್ನು ಹೇಳಲು ಹೊರಟಿದೆ

* ನಮ್ಮ ಅಮೃತ ಸಂತಾನ, ಅಮೃತ ಸಂತಾನಕ್ಕೆ ಸೋಲು ಇಲ್ಲ, ನಿರಾಸೆಯೂ ಇಲ್ಲ. ಗುರಿ ತಲುಪುವ ತನಕ ನಿರಂತರವಾಗಿ ಮುನ್ನಡೆಯೋಣ. ನಮ್ಮ ಪ್ರತೀ ಯಾನದಲ್ಲೂ ದೇಶ ನಮ್ಮೋದಿಗೆ ಇರುತ್ತೆ, ತಡೆಯೋರು ಯಾರೂ ಇಲ್ಲ

ಆತಂಕ ಉಂಟು ಮಾಡಿದ ಚಂದ್ರಯಾನದ ಕೊನೆಯ 15 ನಿಮಿಷ: ಚಿತ್ರಪಯಣ

* ಮುಂದಿನ ಎಲ್ಲ ಯೋಜನೆಗಳಿಗೆ ಶುಭಾಶಯ ಸಲ್ಲಿಸಿದೆ. ವಿಜ್ಞಾನ ಪರಿಣಾಮಗಳ ಬಗ್ಗೆ ಯೋಚಿಸುವುದಿಲ್ಲ, ಪ್ರಯತ್ನಗಳ ಬಗ್ಗೆಯಷ್ಟೇ ಯೋಚನೆ. ನಿಮ್ಮಿಂದ ಪ್ರೇರಣೆ ಪಡೆಯಲೆಂದು ಬೆಳ್ಳಂಬೆಳಗ್ಗೆ ನಿಮ್ಮನ್ನು ನೋಡಲು ಬಂದೆ

* ಇಸ್ರೋ ವಿಜ್ಞಾನಿಗಳು ಪ್ರೇರಣೆಯ ಸಾಗರ, ಅವರೇ ನಮ್ಮ ಸ್ಫೂರ್ತಿ. ನಿರಾಸೆಯನ್ನೇ ಆಸೆಯಾಗಿ ಬದಲಿಸುವ ಶಕ್ತಿ ಇಸ್ರೋ ವಿಜ್ಞಾನಿಗಳದ್ದು, ಇಸ್ರೋದ ಎಲ್ಲ ವಿಜ್ಞಾನಿಗಳಿಗೂ ಶುಭಾಶಯ & ಧನ್ಯವಾದ