ಬೆಂಗಳೂರು[ಸೆ.07]: ಆರ್ಬಿಟರ್‌ನಿಂದ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಇಳಿಯುವ ವೇಳೆ ಸಂಪರ್ಕ ಕಡಿತಗೊಂಡಿದೆ.ಈ ಮೂಲಕ ಇಸ್ರೋಗೆ ಕೊಂಚ ಹಿನ್ನಡೆಯಾಗಿದೆ. ಆದರೆ ಇದು ಸಾಮಾನ್ಯ ಸಾಧನೆಯಲ್ಲ, ಇಸ್ರೋ ವಿಜ್ಞಾನಿಗಳ ಸಾಧನೆ ದೇಶವೇ ಹೆಮ್ಮೆ ಪಡುವಂತಹದ್ದು. ಆದರೆ ಚಂದ್ರನನ್ನು ಇನ್ನೇನು ಮುಟ್ಟಬೇಕು ಎನ್ನುವಷ್ಟರಲ್ಲಿ ಸಿಗ್ನಲ್ ಕಡಿತಗೊಂಡಿರುವುದು ಇಸ್ರೋ ವಿಜ್ಞಾನಿಗಳಿಗೆ ನಿರಾಸೆಯುಂಟು ಮಾಡಿದೆ. ಹೀಗಿರುವಾಗ ಪ್ರಧಾನಿ ಮೋದಿ ಇದು ಸೋಲಲ್ಲ ಒಂದು ಪ್ರಯೋಗ ನಿರಾಸೆಗೊಳ್ಳದಿರಿ,ಮತ್ತೆ ಪ್ರಯತ್ನಿಸೋಣ ದೇಶವೇ ನಿಮ್ಮೊಂದಿಗಿದೆ ಎಂಬ ಮಾತುಗಳಿಂದ ಧೈರ್ಯ ತುಂಬಿದ್ದಾರೆ.

ಇಸ್ರೋ ವಿಜ್ಞಾನಿಗಳೇ, ನಿಮ್ಮೊಂದಿಗಿದೆ ಭಾರತ: ಮೋದಿ ವಿಶ್ವಾಸದ ಮಾತಿಗೆ ವಿಜ್ಞಾನಿಗಳು ಭಾವುಕ!

"

ಪ್ರಧಾನಿ ಮೋದಿಯ ಈ ಮಾತುಗಳು ಇಸ್ರೋ ವಿಜ್ಞಾನಿಗಳನ್ನು ಭಾವುಕರನ್ನಾಗಿಸಿವೆ. ಮೋದಿ ಭಾಷಣ ಬಳಿಕ ಇಸ್ರೋ ವಿಜ್ಞಾನಿಗಳಿಗೆ ಶುಭ ಕೋರಿದ್ದು, ಈ ವೇಳೆ ಇಸ್ರೋ ಮುಖ್ಯಸ್ಥ ಡಾ. ಕೆ. ಶಿವನ್ ಭಾವುಕರಾಗಿದ್ದಾರೆ. ಪ್ರಧಾನಿ ಮೋದಿಯನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತಿದ್ದಿ, ಈ ವೇಳೆ ಮೋದಿ ಅವರ ಬೆನ್ನು ತಟ್ಟಿ ಕುಗ್ಗಬೇಡಿ ಎಂದು ಧೈರ್ಯ ತುಂಬಿದ್ದಾರೆ.

ಆತಂಕ ಉಂಟು ಮಾಡಿದ ಚಂದ್ರಯಾನದ ಕೊನೆಯ 15 ನಿಮಿಷ: ಚಿತ್ರಪಯಣ

ಇಸ್ರೋ ಚಂದ್ರಯಾನ ಲ್ಯಾಂಡರ್ ಸಂಪರ್ಕ ಕಡೇ ಕ್ಷಣದಲ್ಲಿ ಕಡಿತ!