ಚಂದ್ರಯಾನ 2: ISRO ಬೆನ್ನಿಗೆ ನಿಂತ ಟೀಂ ಇಂಡಿಯಾ ಕ್ರಿಕೆಟರ್ಸ್!
ಮಹತ್ವಾಕಾಂಕ್ಷಿಯ ಚಂದ್ರಯಾನ 2ಗೆ ಅಂತ್ಯದಲ್ಲಿ ಅಲ್ಪ ಹಿನ್ನಡೆ ಅನುಭವಿಸಿದೆ. ಆದರೆ ಬಹುತೇಕ ಯಶಸ್ಸು ಸಾಧಿಸಿರುವ ISRO ವಿಜ್ಞಾನಿಗಳಿಗೆ ಟೀಂ ಇಂಡಿಯಾ ಕ್ರಿಕೆಟಿಗರು ಸಲ್ಯೂಟ್ ಹೊಡೆದಿದ್ದಾರೆ. ವಿಜ್ಞಾನದಲ್ಲಿ ಹಿನ್ನಡಯೇ ಇಲ್ಲ, ಎಲ್ಲವೂ ಪ್ರಯೋಗ ಎಂದು ಕ್ರಿಕೆಟಿಗರು ISROಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು(ಸೆ.07): ಚಂದ್ರನ ಅಂಗಳದಲ್ಲಿ ಇನ್ನೇನು ವಿಕ್ರಮ ಲ್ಯಾಂಡರ್ ಇಳಿಯಬೇಕು ಅನ್ನುವಷ್ಟರಲ್ಲಿ ಸಂಪರ್ಕ ಕಡಿತಗೊಂಡ ಕಾರಣ ISRO ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾ 2ಗೆ ಸಣ್ಣ ಹಿನ್ನಡೆಯಾಗಿದೆ. ಆದರೆ 95% ಯಶಸ್ಸು ಸಾಧಿಸಿರುವ ISRO ವಿಜ್ಞಾನಿಗಳ ಪ್ರಯತ್ನ ಹಾಗೂ ಪರಿಶ್ರಮವನ್ನು ಇಡೀ ದೇಶವೇ ಕೊಂಡಾಡಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲಾ ಗಣ್ಯರು ISRO ಸಾಧನೆಗೆ ಸಲಾಂ ಹೇಳಿದ್ದಾರೆ. ಇದರ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾದ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ISRO ಬೆನ್ನಿಗೆ ನಿಂತಿದ್ದಾರೆ.