ಮಸಾಜ್​ಗೆ ಹೋದ ಸಿದ್ದು ಹೆಚ್‌ಡಿಕೆ ಗೆ ಕೊಟ್ಟ ಮೆಸೇಜ್ ಏನು..?

ಸರ್ಕಾರ ಬೀಳಿಸ್ತಾರಾ ಸಿದ್ದು..? ಮೈತ್ರಿ ಸರ್ಕಾರಕ್ಕೆ  ‘ಟೈಂ’ ಬಾಂಬ್  ಫಿಕ್ಸ್..?ಶಾಂತಿವನದಿಂದಲೇ ಎಚ್​ಡಿಕೆಗೆ ಸಿದ್ದು ಅಶಾಂತಿ ಮಸಾಜ್​ಗೆ ಹೋದ ಸಿದ್ದು ಕೊಟ್ಟ ಮೆಸೇಜ್ ಏನು..?
 

Share this Video
  • FB
  • Linkdin
  • Whatsapp

ಧರ್ಮಸ್ಥಳ(ಜೂ.26): ದೋಸ್ತಿ ಸರ್ಕಾರ ಖತಂ ಆಗುತ್ತಾ..? ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿವನ್ನು ಉರುಳಿಸ್ತಾರಾ..? ಹೀಗೊಂದು ಪ್ರಶ್ನೆ ಎಲ್ಲೆಡೆ ಸದ್ದು ಮಾಡ್ತಿದೆ. ಯಾಕಂದ್ರೆ ಧರ್ಮಸ್ಥಳದ ಶಾಂತಿವನದಲ್ಲಿ ಕೂತ ಮಾಜಿ ಸಿಎಂ ಸಿದ್ದರಾಮಯ್ಯ ಇವತ್ತು ಮತ್ತೊಂದು ಬಾಂಬ್ ಸಿಡಿಸಿ ಮೈತ್ರಿ ಸರ್ಕಾರವನ್ನೇ ಅಲುಗಾಡಿಸುವಂತಹ ಹೇಳಿಕೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಷ್ಟೇ ಅಲ್ಲ ಸಿದ್ದರಾಮಯ್ಯ ಹಾಕಿದ ಹೊಸ ಬಾಂಬ್​ಗೆ ಕುಮಾರಸ್ವಾಮಿಗೆ ಮತ್ತಷ್ಟು ಟೆನ್ಶನ್ ಶುರುವಾಗಿದೆ. ಇದಾಗ್ತಿದ್ದಂತೆ ಕಾಂಗ್ರೆಸ್ ಮತ್ತು ಜೆಡಿಎಸ್​ ಎಂಬ ಜೇನುಗೂಡಿಗೆ ಕಲ್ಲು ಹೊಡೆದಂತಾಗಿದೆ. ಮೊದಲೇ ಸಿದ್ದು ಜೊತೆ ಮುನಿಸಿಕೊಂಡಿರೋ ಪರಮೇಶ್ವರ್ ಮತ್ತೊಮ್ಮೆ ಟಾಂಗ್ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷನಾಗಿ ಹೇಳ್ತಿದ್ದೇನೆ ಸರ್ಕಾರ 5 ವರ್ಷ ಬಾಳುತ್ತೆ ಎಂದಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Related Video