Asianet Suvarna News Asianet Suvarna News

ಹೆಚ್ಚಾಗಲಿದೆ ಕೊರೋನಾ ಕಂಟಕ, ಗುಡ್ ನ್ಯೂಸ್ ಕೊಟ್ರಾ ದೀಪಿಕಾ; ಮೇ.8ರ ಟಾಪ್ 10 ಸುದ್ದಿ!

ಜುಲೈ ಅಂತ್ಯಕ್ಕೆ ಕೊರೋನಾ ಸೋಂಕಿತರ ಸಂಖ್ಯೆ 10 ಲಕ್ಷಕ್ಕೆ ಏರಿಕೆಯಾಗಲಿದೆ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಭಾರತದ ಬಹದೊಡ್ಡ ಏರ್‌ಲಿಫ್ಟ್ ಮೂಲಕ ಮೊದಲ ಹಂತದಲ್ಲಿ 354 ಮಂದಿ ವಿದೇಶದಿಂದ ಭಾರತಕ್ಕೆ ಆಗಮಿಸಿದ್ದಾರೆ. ಇತ್ತ ಲಾಕ್‌ಡೌನ್ ಕಾರಣ ಸೇತುವೆ ಕೆಳಗೆ ಕಾರ್ಮಿಕರು ವಾಸ ಮಾಡಿದ ಘಟನೆ ನಡೆದಿದೆ. ದೀಪಿಕಾ ಪಡುಕೋಣೆ ಗುಡ್ ನ್ಯೂಸ್ ಸೂಚನೆ ನೀಡಿದ್ರಾ? ಜಿಯೋದಲ್ಲಿ ಅಮೆರಿಕದ ಮತ್ತೊಂದು ಕಂಪನಿ ಹೂಡಿಕೆ, ಧೋನಿ ಮೇಲಿತ್ತಾ ಒತ್ತಡ ಸೇರಿದಂತೆ ಮೇ.08ರ ಟಾಪ್ 10 ಸುದ್ದಿ ಇಲ್ಲಿವೆ.

Coronavirus report to Deepika padukone top 10 news of may 8
Author
Bengaluru, First Published May 8, 2020, 5:00 PM IST

ಜೂನ್, ಜುಲೈ ವೇಳೆಗೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ?...

Coronavirus report to Deepika padukone top 10 news of may 8

ಕೊರೊನಾ ಮಹಾಮಾರಿ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಜುಲೈ ವೇಳೆಗೆ ಸೋಂಕಿತರ ಸಂಖ್ಯೆ 10 ಲಕ್ಷಕ್ಕೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು ಇದು ಗಾಬರಿ ಮೂಡಿಸಿದೆ. ಕೊರೊನಾದಿಂದ ದೇಶಕ್ಕೆ ಕಂಟಕ ಕಾದಿದೆ ಎಂದು ದೆಹಲಿ ಏಮ್ಸ್‌ನ ನಿರ್ದೇಶಕ ಡಾ. ರಣದೀಪ್ ಎಚ್ಚರಿಕೆ ಕೊಟ್ಟಿದ್ದಾರೆ. 

ಲಾಕ್‌ಡೌನ್‌ ಎಫೆಕ್ಟ್‌: ಬ್ರಿಡ್ಜ್‌ ಕೆಳಗೆ ವಾಸ, ಊಟ ಸಿಗದೆ ಕಂಗಾಲಾದ ಬಡ ಕಾರ್ಮಿಕರು..!.

Coronavirus report to Deepika padukone top 10 news of may 8

ಮಹಾರಾಷ್ಟ್ರದಲ್ಲಿ ಕ್ವಾರೆಂಟೈನ್ ಮುಗಿಸಿ ಹೊರಟ ರಾಜ್ಯದ ಕಾರ್ಮಿಕರು ಅತಂತ್ರವಾದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ತಕಾಲಿ ಗ್ರಾಮದ ಬಳಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ 10 ಮಂದಿ ಕಾರ್ಮಿಕರು ಸೇರಿ 14 ಮಂದಿ ಕಾರ್ಮಿಕರು ಮೊದಲ ಹಂತದ ಲಾಕ್‌ಡೌನ್‌ ಆಗಿದ್ದರಿಂದ ಇವರು ಕಾಲ್ನಡಿಯಲ್ಲಿ ಕರ್ನಾಟಕದತ್ತ ಹೊರಟಿದ್ದರು. ಹೀಗಾಗಿ ಇವರನ್ನ ಮಹಾರಾಷ್ಟ್ರ ಗಡಿ ಭಾಗದಲ್ಲಿ ಅಧಿಕಾರಿಗಳು ತಡೆದು 34 ದಿನ ಕ್ವಾರೆಂಟೈನ್‌ನಲ್ಲಿ ಇಟ್ಟಿದ್ದರು.

ಅಮೆರಿಕ ವೈಟ್‌ ಹೌಸ್‌ನಲ್ಲಿ ಮೊಳಗಿದ  ವೇದಘೋಷ.

Coronavirus report to Deepika padukone top 10 news of may 8

ಅಮೆರಿಕದ ವೈಊಟ್ ಹೌಸ್  ನಲ್ಲಿ ಹಿಂದೂ ಅರ್ಚಕರಿಂಧ ಪ್ರಾರ್ಥನೆ. ಹೌದು ಇಂಥದ್ದೊಂದು ಸುದ್ದಿಗೂ ಸಾಕ್ಷಿಯಾಗಬೇಕಿದೆ.  ವೈಟ್ ಹೌಸ್ ನಲ್ಲಿ ಶಾಂತಿ ಮಂತ್ರ ಪಠಣವಾಗಿದೆ. ಆರೋಗ್ಯ, ಸಂಪತ್ತು ವೃದ್ಧಿ, ಸುರಕ್ಷತೆ ದಯಪಾಲಿಸಲು ಮಂತ್ರ ಪಠಣ ಮಾಡಲಾಗಿದೆ.

Coronavirus report to Deepika padukone top 10 news of may 8

 

ನಾನು ಕೂಡಾ ಎಲ್ಲರಂತೆ ಮೊದಲ 5-10 ಎಸೆತಗಳನ್ನು ಎದುರಿಸುವಾಗ ಒತ್ತಡವನ್ನು ಅನುಭವಿಸುತ್ತೇನೆ ಎಂದು ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ

ಪ್ರಿಯಾಂಕ ಚೋಪ್ರಾ ನಿಕ್‌ ಜೊನಸ್‌ ಕ್ಯಾಲಿಫೋರ್ನಿಯಾದ ಮನೆ ಲುಕ್‌ ನೋಡಿ.

Coronavirus report to Deepika padukone top 10 news of may 8

ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾ ಮತ್ತು ಅಮೆರಿಕದ ಪಾಪ್‌ ಗಾಯಕ ನಿಕ್ ಜೊನಸ್‌ ಪೇಜ್‌ 3ಯ ಮೋಸ್ಟ್‌ ಹ್ಯಾಪನಿಂಗ್‌ ಕಪಲ್. ತನಗಿಂತ 10 ವರ್ಷ ಚಿಕ್ಕ ಫಾರಿನ್‌ ಹುಡುಗನನ್ನು ಮದುವೆಯಾದಾಗ ಸಖತ್‌ ಟ್ರೋಲ್‌ಗೆ ಗುರಿಯಾಗಿದ್ದರು ಈ ನಟಿ. ಸೋಶಿಯಲ್‌ ಮೀಡಿಯಾದಲ್ಲಿ ಆ್ಯಕ್ಟಿವ್‌ ಇರುವ ಜೋಡಿ ತಮ್ಮ ಫ್ಯಾನ್‌ಗಳಿಗೆ ತಮ್ಮ ಪೋಸ್ಟ್‌ಗಳ ಮೂಲಕ ಅಪ್‌ಡೇಟ್‌ ಮಾಡುತ್ತಿರುತ್ತಾರೆ. 37 ವರ್ಷದ ನಟಿ ಪಿಗ್ಗಿ ಹಾಗೂ 27ವರ್ಷದ ನಿಕ್‌ರ ಕಾಲಿಫೋರ್ನಿಯಾದ ಮನೆಯ ಫೋಟೋಗಳು ವೈರಲ್‌ ಆಗಿವೆ. 

ದೀಪಿಕಾ ಪಡುಕೊಣೆ ಪ್ರೆಂಗ್ನೆಟಾ?: ಫ್ಯಾನ್ಸ್‌ಗೇಕೆ ಈ ಡೌಟ್?

Coronavirus report to Deepika padukone top 10 news of may 8

ಬಾಲಿವುಡ್‌ನ ದಿವಾ ದೀಪಿಕಾ ಪಡುಕೊಣೆ  ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆ್ಯಕ್ಟಿವ್‌ ಇದ್ದಾರೆ ಈ ಚೆಲುವೆ. ಇತ್ತೀಚಿಗೆ ಇನ್ಸ್ಟಾಗ್ರಾಮ್‌ನಲ್ಲಿ ಮಾವಿನಕಾಯಿ ಫೋಟೋ ಅಪ್‌ಲೋಡ್‌ ಮಾಡಿ ಅಭಿಮಾನಿಗಳಲ್ಲಿ ಕೂತೂಹಲ ಹೆಚ್ಚಸಿದ್ದಾರೆ. ಪ್ರೆಂಗ್ನೆಟಾ? ಗುಡ್‌ ನ್ಯೂಸಾ? ಎಂದು  ಫ್ಯಾನ್ಸ್‌ ಕೇಳ್ತಾ ಇದ್ದಾರೆ.

ಜಿಯೋದಲ್ಲಿ ಅಮರಿಕದ ಮತ್ತೊಂದು ಕಂಪನಿಯಿಂದ 11367 ಕೋಟಿ ಹೂಡಿಕೆ..!

Coronavirus report to Deepika padukone top 10 news of may 8

ಡಿಜಿಟಲ್ ಇಂಡಿಯಾವನ್ನು ಸಕ್ರಿಯಗೊಳಿಸುವ ಜಿಯೋ ಉದ್ದೇಶದಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ನೊಡನೆ ಪ್ರಮುಖ ತಂತ್ರಾಂಶ ಮತ್ತು ತಂತ್ರಜ್ಞಾನ ಹೂಡಿಕೆದಾರ ಸಂಸ್ಥೆ ವಿಸ್ಟಾ ಇಕ್ವಿಟ್ಟಿ ಪಾರ್ಟ್‌ನರ್ಸ್‌ ಕೂಡ ಕೈಜೋಡಿಸಿದೆ. 


ವಿಶಾಖಪಟ್ಟಣಂ ಗ್ಯಾಸ್ ಲೀಕ್; 100ಕ್ಕೂ ಹೆಚ್ಚು ಜೀವ ಉಳಿಸಿದ ಪೊಲೀಸ್ ಸಾಹಸವೇ ರೋಚಕ!...

Coronavirus report to Deepika padukone top 10 news of may 8

ವಿಶಾಖಪಟ್ಟಣಂನಲ್ಲಿ ವಿಷಾನಿಲ ಸೋರಿಕೆಯಿಂದ ಒಟ್ಟು 11 ಮಂದಿ ಮೃತಪಟ್ಟಿದ್ದು, ಹಲವರು ಅಸ್ವಸ್ಥರಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ಹಲವರ ಪ್ರಾಣ ಉಳಿದಿದೆ. ಒಂದು ಕರೆಯಿಂದ ತಕ್ಷಣವೇ ಅಲರ್ಟ್ ಆದ ಪೊಲೀಸರು ಹಲವರ ಜೀವ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ದೇವ್ರೆ! ಹಿಂಗೆಲ್ಲಾ ಡೇಟಿಂಗ್ ಮಾಡುತ್ತಾರಾ? ಈ ದೇಶಗಳ ಕಥೆ ನೋಡಿ.

Coronavirus report to Deepika padukone top 10 news of may 8

ಡೇಟಿಂಗ್ ಮಾಡಿ ಲವ್ ಮಾಡುವುದು ಭಾರತದಲ್ಲಿ ಹೊಸ ಟ್ರೆಂಡ್‌ ಆಗಿದೆ ಆದರೆ ಅದೇ ಟ್ರೆಂಡ್‌ ಬೇರೆ ದೇಶಗಳಲ್ಲಿ ಹೇಗಿತ್ತು ಅನ್ನೋದು ಬಯಲಾಗಿದೆ. 


 ಏರ್‌ಲಿಫ್ಟ್: ತವರಿಗೆ ವಾಪಾಸಾಗಿದ್ದಾರೆ 354 ಭಾರತೀಯರು..!...

Coronavirus report to Deepika padukone top 10 news of may 8

ಕೊಲ್ಲಿ ರಾಷ್ಟ್ರಗಳಿಂದ ಕೇರಳಕ್ಕೆ 354 ಜನ ಬಂದಿಳಿದಿದ್ದಾರೆ. ಅಬುದಾಯಿ ಹಾಗೂ ದುಬೈನಿಂದ ಹೊರಟ ವಿಮಾನಗಳು ನಿನ್ನೆ ರಾತ್ರಿ ಭಾರತಕ್ಕೆ ಬಂದಿಳಿದಿವೆ. ನಿನ್ನ ಭಾರತಕ್ಕೆ ಬಂದಿಳಿದವರ ಪೈಕಿ ಬಹುತೇಕರು ಗರ್ಬಿಣಿಯರು ಆಗಿದ್ದಾರೆ.
 

Follow Us:
Download App:
  • android
  • ios