ಅಮರಾವತಿ(ಮೇ.08): ಒಂದೆಡೆ ಕೊರೋನಾ ವೈರಸ್ ಆರ್ಭಟ, ಮತ್ತೊಂದೆಡೆ ಲಾಕ್‌ಡೌನ್, ಕೈಯಲ್ಲಿ ದುಡ್ಡಿಲ್ಲ, ಕೆಲಸವಿಲ್ಲದೇ ಜನರು ಬದುಕು ದುಸ್ತರವಾಗಿದೆ. ಹೀಗಾಗಿ ತಡರಾತ್ರಿಯಾದರೂ ನಿದ್ದೆ ಬರದೇ ಮಲಗುವವರ ಸಂಖ್ಯೆ ಹೆಚ್ಚು. ಹೀಗೆ ಹೊರಳಾಡಿ ಕೊನೆಗೆ ನಿದ್ರಾದೇವಿಯನ್ನು ಆಲಂಗಿಸಿದ ಸಮಯ. ಗಡದ್ ನಿದ್ದೆಗೆ ಜಾರಿದ ಸಮಯದಲ್ಲೇ  ವಿಶಾಖಪಟ್ಟಣದ ಎಲ್‌ಜಿ ಪಾಲಿಮರ್ಸ್ ರಾಸಾಯನಿಕ ಕಾರ್ಖಾನೆಯಿಂದ ಸೋರಿಕೆಯಾದ ವಿಷಾನಿಲ ಇಡೀ ಪ್ರದೇಶವನ್ನೇ ಆವರಿಸತೊಡಗಿತು. ಈ ವೇಳೆ ಪೊಲೀಸರ ಸಮಯ ಪ್ರಜ್ಞೆ ಹಾಗೂ ಮಿಂಚಿನ ಕಾರ್ಯಚರಣೆ ಬಹುತೇಕ ಜೀವ ಉಳಿಸಿತು.

ವಿಶಾಖಪಟ್ಟಣ ಅನಿಲ ದುರಂತ: ಮೃತರ ಕುಟುಂಬಕ್ಕೆ ತಲಾ 1 ಕೋಟಿ ರೂ. ಘೋಷಿಸಿದ ಜಗನ್!..

ಮುಂಜಾನೆ- ಸಮಯ= 3.25 :  ವಿಎಸ್‌ಕೆಪಿ ಸಿಟಿ ಪೊಲೀಸ್ ಕಂಟ್ರೋಲ್ ರೂಂಗೆ ಅರುಣ್ ಕುಮಾರ್ ಎಂಬಾತ ಕರೆ ಮಾಡಿ ವಿಷಾನಿಲ ಸೋರಿಕೆಯಾಗಿರುವ ಕುರಿತು ಮಾಹಿತಿ ನೀಡಿದ್ದಾನೆ.  ತಕ್ಷಣವೇ ಕಂಟ್ರೋಲ್ ಸಿಬ್ಬಂದಿ ಗೋಪಾಲಪಟ್ಟಣಂ ಪೊಲೀಸ್ ಠಾಣಗೆ ಮಾಹಿತಿ ನೀಡಿದ್ದಾರೆ.

ಮುಂಜಾನೆ- ಸಮಯ= 3.26 :ಎಸ್ಐ ಸತ್ಯನಾರಯಣ ಸೇರಿದಂತೆ ನಾಲ್ವರು ಪೊಲೀಸರು ರಕ್ಷಕ್ ವಾಹನ ಏರಿ ವೆಂಕಟಪುರಂ ಗ್ರಾಮಕ್ಕೆ ತೆರಳಿದ್ದಾರೆ. 3.35ಕ್ಕೆ ಗ್ರಾಮ ತಲುಪಿದ ಪೊಲೀಸರಿಗೆ ಪರಿಸ್ಥಿತಿ ಗಂಭೀರತೆ ಅರ್ಥವಾಗಿತ್ತು. ತಕ್ಷಣವೇ ಮರಿಪಾಲೇಮ್‌ ಠಾಣೆಯ ಅಗ್ನಿಶಾಮಕದಳ ಹಾಗೂ ಆ್ಯಂಬುಲೆನ್ಸ್‌ಗೆ ಕರೆ ಮಾಡಿ ತಕ್ಷಣವೇ ಸ್ಥಳಕ್ಕೆ ಆಗಮಿಸಲು ಸೂಚಿಸಿದ್ದಾರೆ. ಈ ವೇಳೆ ರಾತ್ರಿ ಪಾಳೆಯಲಿದ್ದ ಮೂವರು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ಮುಂಜಾನೆ- ಸಮಯ= 3.40 : ಸುಮಾರು 4500 ಕುಟುಂಬಗಳು ವಾಸಿಸುತ್ತಿರುವ ಗ್ರಾಮದಿಂದ ಸ್ಥಳಾಂತರ ಸವಾಲಿನ ಪ್ರಶ್ನೆಯಾಗಿತ್ತು. ಹೀಗಾಗಿ ಪೊಲೀಸರು ಮನೆ ಮನೆಗೆ ತೆರಳಿ ಮಲಗಿದ್ದವರನ್ನು ಎಬ್ಬಿಸಿ ಸ್ಳಳಾಂತರಕ್ಕೆ ಮುಂದಾದರು. ಸಿಟಿ ಕಂಟ್ರೋಲ್ ರೂಂ ಸಿಬ್ಬಂದಿಗಳು ರಕ್ಷಕ್ ವಾಹನ , ಹೈವೇ ಪ್ಯಾಟ್ರೋಲಿಂಗ್ ವಾಹನ ಹಾಗೂ ಒಂದು ಪೊಲೀಸರ ತಂಡವನ್ನು ಸ್ಥಳಕ್ಕೆ ಕಳುಹಿಸಿತು.

ಮುಂಜಾನೆ- ಸಮಯ= 3.45 : ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ, ಪೊಲೀಸರ ಜೊತೆ ಕಾರ್ಯಚರಣೆ ಆರಂಭಿಸಿತು. ಇತ್ತ 12 ರಕ್ಷಕ್ ವಾಹನ, 6 ಆ್ಯಂಬುಲೆನ್ಸ್ ಹಾಗೂ 4 ಪ್ಯಾಟ್ರೋಲಿಂಗ್ ವಾಹನದಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಕಾರ್ಯಚರಣೆ ಆರಂಭಗೊಂಡಿತು. ಆರ್ ಆರ್ ವೆಂಕಟಪುರಂ ಹಾಗೂ ಆರ್ ವೆಂಕಟಾದ್ರಿನಗರದ ನಿವಾಸಿಗಳು ಸ್ಥಳಾಂತರ ಚುರುಕುಗೊಂಡಿತು.

ಮುಂಜಾನೆ- ಸಮಯ= 3.40 : ಡಿಸಿಪಿ ಝೋನ್ ಹಾಗೂ ವೈಜಾಘ್ ಸಿಪಿ ಕೂಡ ಸ್ಥಳಾಂತರ ಕಾರ್ಯಕ್ಕೆ ಧುಮುಕಿದರು. ಮನೆ ಮನೆಗೆ ತೆರಳಿ ನಿವಾಸಿಗಳ ಸ್ಥಳಾಂತರ ಕಾರ್ಯಕ್ಕೆ ವೇಗ ಹೆಚ್ಚಿಸಿದರು. ಈ ವೇಳೆ ಡಿಸಿಬಿ ಝೋನ್ ಇಬ್ಬರು ಪೊಲೀಸರು ವಿಷಾನಿಲದಿಂದ ಅಸ್ವಸ್ಥರಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಯಿತು. ಆರಂಭದಿಂದ ಕಾರ್ಯಚರಣೆಯಲ್ಲಿ ತೊಡಗಿದ್ದ ಎಸ್ ಐ ಸತ್ಯನಾರಾಯಣ, ಟಿ ಭಗವಾನ್, ರಾಮನಯ್ಯ ಸೇರಿದಂತೆ 20 ಪೊಲೀಸರು ವಿಷಾನಿಲದಿಂದ ಅಸ್ಪಸ್ಥರಾದರು. 

ಬೆಳಗ್ಗೆ- ಸಮಯ= 7.00 : NDRF ಹಾಗೂ SDRF ತಂಡ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ಆರಂಭಿಸಿತು.