Asianet Suvarna News Asianet Suvarna News

ಲಾಕ್‌ಡೌನ್‌ ಎಫೆಕ್ಟ್‌: ಬ್ರಿಡ್ಜ್‌ ಕೆಳಗೆ ವಾಸ, ಊಟ ಸಿಗದೆ ಕಂಗಾಲಾದ ಬಡ ಕಾರ್ಮಿಕರು..!

ಇಂಡಿ ತಾಲೂಕಿನಲ್ಲಿ ಕರ್ನಾಟಕ ರಾಜ್ಯಕ್ಕೆ ನೋ ಎಂಟ್ರಿ| ಮೇ 3 ರಿಂದ 14 ಕಾರ್ಮಿಕರು ಅತಂತ್ರ| ಭೀಮಾನದಿಯ ಸೇತುವೆಯ ಕೆಳಭಾಗದಲ್ಲಿ ಕಾರ್ಮಿಕರ ವಾಸ್ತವ್ಯ| ಸರಿಯಾಗಿ ಊಟ ಸಿಗದೆ ಪರದಾಡುತ್ತಿರುವ ಕಾರ್ಮಿಕರು|

Migrant workers Faces Problems in Indi In Vijayapura District due to LockDown
Author
Bengaluru, First Published May 8, 2020, 2:21 PM IST

ವಿಜಯಪುರ(ಮೇ.08): ಮಹಾರಾಷ್ಟ್ರದಲ್ಲಿ ಕ್ವಾರೆಂಟೈನ್ ಮುಗಿಸಿ ಹೊರಟ ರಾಜ್ಯದ ಕಾರ್ಮಿಕರು ಅತಂತ್ರವಾದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ತಕಾಲಿ ಗ್ರಾಮದ ಬಳಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ 10 ಮಂದಿ ಕಾರ್ಮಿಕರು ಸೇರಿ 14 ಮಂದಿ ಕಾರ್ಮಿಕರು ಮೊದಲ ಹಂತದ ಲಾಕ್‌ಡೌನ್‌ ಆಗಿದ್ದರಿಂದ ಇವರು ಕಾಲ್ನಡಿಯಲ್ಲಿ ಕರ್ನಾಟಕದತ್ತ ಹೊರಟಿದ್ದರು. ಹೀಗಾಗಿ ಇವರನ್ನ ಮಹಾರಾಷ್ಟ್ರ ಗಡಿ ಭಾಗದಲ್ಲಿ ಅಧಿಕಾರಿಗಳು ತಡೆದು 34 ದಿನ ಕ್ವಾರೆಂಟೈನ್‌ನಲ್ಲಿ ಇಟ್ಟಿದ್ದರು.

ಕ್ವಾರೆಂಟೈನ್ ಮುಗಿದ ನಂತ್ರ ಕರ್ನಾಟಕಕ್ಕೆ ಹೋಗುವಂತೆ ಮಹಾರಾಷ್ಟ್ರದ ಅಧಿಕಾರಿಗಳು ಹೇಳಿದ್ದರು. ಹೀಗಾಗಿ  ಚಿಕ್ಕಮಗಳೂರು ಜಿಲ್ಲೆಯಿಂದ 10 ಮಂದಿ, ಶಿವಮೊಗ್ಗ 2, ರಾಮನಗರ 1, ಉತ್ತರ ಕನ್ನಡ ಜಿಲ್ಲೆಯ ಸೇರಿದ ಒಬ್ಬರು ಕಾರ್ಮಿಕರು ಕರ್ನಾಟಕದತ್ತ ಮತ್ತೆ ಹೊರಟಿದ್ದರು. 

ವಿಜಯಪುರದಲ್ಲಿ ಮಹಾಮಾರಿ ಕೊರೋನಾ ವೈರಸ್‌ ಬಗ್ಗುಬಡಿದ ಹಸುಗೂಸು..!

ಹೀಗೆ ಹೊರಟ ಕಾರ್ಮಿಕರು ರಾಜ್ಯ ಗಡಿ ಭಾಗ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿಗೆ ಎಂಟ್ರಿಯಾಗುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳು ಇವರ ಪ್ರವೇಶಕ್ಕೆ ಅವಕಾಶ ನಿರಾಕರಿಸಿದ್ದಾರೆ. ಹೀಗಾಗಿ ಮೇ 3 ರಿಂದ 14  ಕಾರ್ಮಿಕರು. ಅತಂತ್ರವಾಗಿದ್ದಾರೆ. ಇಂಡಿ ತಾಲೂಕಿನ ತಕಾಲಿ ಬೀಮಾನದಿಯ ಸೇತುವೆಯ ಕೆಳಭಾಗದಲ್ಲಿ ವಾಸ್ತವ್ಯ ಹೂಡಿದ್ದಾರೆ. ಸರಿಯಾಗಿ ಊಟ ಸಿಗದೆ ಕಾರ್ಮಿಕರು ಪರದಾಡುತ್ತಿದ್ದಾರೆ. ನಮ್ಮನ್ನ ಸ್ವಗ್ರಾಮಗಳಿಗೆ ತಲುಪಿಸಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
 

Follow Us:
Download App:
  • android
  • ios