IPL ಸೇರುತ್ತಿದೆ ಮತ್ತೆರಡು ಟೀಮ್, ವಿಶ್ವಕ್ಕೆ ಲಭ್ಯವಾಗುತ್ತಿದೆ ಕೋವಿನ್; ಜು.5ರ ಟಾಪ್ 10 ಸುದ್ದಿ!
ಶೀಘ್ರದಲ್ಲೇ CoWIN ಪ್ಲಾಟ್‌ಫಾರಂ ವಿಶ್ವಕ್ಕೇ ಲಭ್ಯವಾಗಲಿದೆ, ವಿಶ್ವಕ್ಕೆ ಮಾಹಿತಿ ಹಂಚಲು ಸಿದ್ದ ಎಂದು ಮೋದಿ ಹೇಳಿದ್ದಾರೆ. ವಿಪಕ್ಷ ನಾಯಕ ಸ್ಥಾನದಿಂದ ಅಧೀರ್‌ಗೆ ಕೊಕ್ ನೀಡುವ ಸಾಧ್ಯತೆ ಇದೆ. ಐಪಿಎಲ್ ಟೂರ್ನಿಗೆ ಮತ್ತೆರಡು ತಂಡಗಳು ಸೇರ್ಪಡೆಯಾಗುತ್ತಿದೆ. ಹೆಚ್‌ಡಿಕೆ, ಸುಮಲತಾ ಫೈಟ್, ಸಿಎಂ ಕೈಯಲ್ಲೇ ರಿಬ್ಬನ್ ಎಳೆದು ಉದ್ಘಾಟನೆ ಸೇರಿದಂತೆ ಜುಲೈ 5ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಶೀಘ್ರದಲ್ಲೇ CoWIN ಪ್ಲಾಟ್‌ಫಾರಂ ವಿಶ್ವಕ್ಕೇ ಲಭ್ಯ, ಮಾಹಿತಿ ಹಂಚಲು ನಾವು ಸಿದ್ಧ: ಮೋದಿ...
ಕೋವಿಡ್ ಲಸಿಕೆ ಅಭಿಯಾನಕ್ಕೆಂದು ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಮತ್ತು ಅಭಿಯಾನದ ಯಶಸ್ಸಿಗೂ ಕಾರಣವಾಗಿರುವ ಕೋ-ವಿನ್ ಆ್ಯಪ್ ಅಥವಾ ವೆಬ್‌ಸೈಟ್‌ನ ಯಶೋಗಾಥೆಯನ್ನು ಜಗತ್ತಿನೆದುರು ಪ್ರಧಾನಿ ನರೇಂದ್ರ ಮೋದಿ ತೆರೆದಿಟ್ಟಿದ್ದಾರೆ.
ವಿಪಕ್ಷ ನಾಯಕ ಸ್ಥಾನದಿಂದ ಅಧೀರ್‌ಗೆ ಕಾಂಗ್ರೆಸ್ ಕೊಕ್?...
ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನ ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಪದಚ್ಯುತವಾಗುವ ಸಾಧ್ಯತೆ ದಟ್ಟವಾಗಿ ಕಂಡುಬರುತ್ತಿದೆ. ಪಶ್ಚಿಮ ಬಂಗಾಳದಿಂದ ಲೋಕಸಭೆ ಸದಸ್ಯರಾಗಿರುವ ಹಾಗೂ ಆ ರಾಜ್ಯದ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಅಧೀರ್ ರಂಜನ್ ಬಗ್ಗೆ ಪಕ್ಷದೊಳಗೆ ಮೊದಲಿನಿಂದಲೂ ಅಸಮಾಧಾನ ಇತ್ತು. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಬಳಿಕ ಅದು ಇನ್ನಷ್ಟುತೀವ್ರವಾಗಿದೆ. ಹೀಗಾಗಿ ಅವರನ್ನು ಬದಲಿಸಲು ಕಾಂಗ್ರೆಸ್ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಐಪಿಎಲ್‌ಗೆ ಮತ್ತೆರಡು ತಂಡ ಸೇರ್ಪಡೆ; ನಾಲ್ವರು ಆಟಗಾರರ ರೀಟೈನ್‌ಗೆ ಅವಕಾಶ..!...
15ನೇ ಆವೃತ್ತಿಯ ಐಪಿಎಲ್ ಟೂರ್ನಿ ಆಯೋಜನೆಯ ಕುರಿತಂತೆ ಬಿಸಿಸಿಐ ಈಗಿನಿಂದಲೇ ನೀಲನಕ್ಷೆ ಸಿದ್ದಪಡಿಸುತ್ತಿದೆ. 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಈಗಿರುವ ಎಂಟು ತಂಡಗಳ ಜತೆ ಇನ್ನೆರಡು ಹೊಸ ತಂಡಗಳು ಸೇರ್ಪಡೆಯಾಗುವುದು ಬಹುತೇಕ ಖಚಿತ ಎನಿಸಿದೆ. ಹೀಗಾಗಿ ಆಟಗಾರರ ರೀಟೈನ್, ಮೆಗಾ ಹರಾಜು, ಮಾಧ್ಯಮಗಳ ಹಕ್ಕು ಮುಂತಾದವುಗಳ ಬಗ್ಗೆ ಬಿಸಿಸಿಐ ಮಹತ್ವದ ತೀರ್ಮಾನ ಕೈಗೊಂಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಒಲಿಂಪಿಯನ್ ಸಿಂಧುಗಿಂದು ಜನ್ಮದಿನದ ಸಂಭ್ರಮ; ಮಹಾರಾಷ್ಟ್ರದ ಕಿಚ್ಚನ ಫ್ಯಾನ್ಸ್ ಶುಭ ಹಾರೈಕೆ...
ಮುಂಬರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಬೇಟೆಯಾಡುವತ್ತ ಚಿತ್ತ ನೆಟ್ಟಿರುವ ಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಇಂದು ತಮ್ಮ 26ನೇ ವಸಂತಕ್ಕೆ ಕಾಲಿರಿಸಿದ್ದಾರೆ.
ಗುಜರಿ ಮಾರಿದ್ದರಿಂದಲೇ ರೈಲ್ವೆಗೆ ಭರ್ಜರಿ 4,575 ಕೋಟಿ ಆದಾಯ!...
ಕೊರೋನಾ ಕಾರಣದಿಂದಾಗಿ ಪ್ರಯಾಣಿಕರ ಪ್ರಯಾಣಕ್ಕೆ ನಿರ್ಬಂಧದ ಹಿನ್ನೆಲೆಯಲ್ಲಿ ಆದಾಯ ಕೊರತೆ ಎದುರಿಸುತ್ತಿದ್ದ ರೈಲ್ವೆ ಇಲಾಖೆಗೆ, ನಿರುಪಯುಕ್ತ ವಸ್ತುಗಳ ಮಾರಾಟದಿಂದಾಗಿ 2020-21ನೇ ಸಾಲಿನಲ್ಲಿ ಭರ್ಜರಿ 4575 ಕೋಟಿ ರು. ಆದಾಯ ಬಂದಿದೆ ಎಂಬ ವಿಚಾರ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಯಿಂದ ಬಯಲಾಗಿದೆ.
KRS ಬಾಗಿಲಿಗೆ ಸುಮಲತಾರನ್ನು ಅಡ್ಡಡ್ಡ ಮಲಗಿಸ್ಬೇಕು: ಏನಿದು ಎಚ್‌ಡಿಕೆ ಮಾತಿನ ಅರ್ಥ?...
ಕೆಆರ್‌ಎಸ್ ಬಿರುಕು ಬಿಟ್ಟಿದೆ ಎಂದು ಆರೋಪಿಸಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌ಡಿ ವಾಗ್ದಾಳಿ ನಡೆಸಿದ್ದಾರೆ.
ಕತ್ತರಿ ಕಾಣೆ: ತಾಳ್ಮೆ ಕಳೆದುಕೊಂಡ ಸಿಎಂ ಕೈಯಲ್ಲೇ ರಿಬ್ಬನ್ ಎಳೆದು ಉದ್ಘಾಟನೆ!...
ಉದ್ಘಾಟನೆಗೆ ವೇದಿಕೆ ರೆಡಿಯಾಗಿದೆ, ಕಾರ್ಯಕ್ರಮಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಆಗಮಿಸಿದ್ದಾರೆ. ಸುತ್ತಲು ಜನ ನಿಂತಿದ್ದಾರೆ. ರಿಬ್ಬನ್ ಕತ್ತರಿಸಿ ಉದ್ಘಾಟನೆ ಮಾಡಲು ಸಜ್ಜಾದ ಮುಖ್ಯಮಂತ್ರಿಗೆ ಕತ್ತರಿ ಇಲ್ಲ. ಆಯೋಜಕರು ಕತ್ತರಿಗಾಗಿ ತಡಬಡಿಸಿದ್ದಾರೆ. ಒಂದೆರಡು ನಿಮಿಷ ಕಾದರೂ ಕತ್ತರಿ ಬರಲಿಲ್ಲ. ತಾಳ್ಮೆ ಕಳೆದುಕೊಂಡ ರಾವ್, ಕೈಯಲ್ಲಿ ರಿಬ್ಬನ್ ಎಳೆದು ಉದ್ಘಾಟನೆ ಮಾಡಿದ್ದಾರೆ.
ಮತ್ತೆ ಸಿಡಿದೆದ್ದ ಜಯ ಮೃತ್ಯುಂಜಯ ಸ್ವಾಮೀಜಿ: ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಸಂದೇಶ...
ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ವಿಚಾರವಾಗಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮತ್ತೆ ಸಿಡಿದೆದ್ದಿದ್ದು, ಮುಂಚಿತವಾಗಿಯೇ ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಹೆದ್ದಾರಿಗಳಗುಂಟ 600 ಚಾರ್ಚಿಂಗ್ ಸ್ಟೇಷನ್ ಸ್ಥಾಪಿಸಲು ಪ್ಲ್ಯಾನ್...
ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಬಳಕೆ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ದೇಶಾದ್ಯಂತ ಅದಕ್ಕೆ ಸಂಬಂಧಿಸಿದ ಮೂಲಸೌಕರ್ಯ ಹೆಚ್ಚಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿಗಳಗುಂಟ 600 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಸಂಬಂಧ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನೆ ರೂಪಿಸಿಕೊಂಡಿದೆ.