ಅದಾನಿಗೆ ಶಾಕ್ ಕೊಟ್ಟ ಸಿಎಂ ರೇವಂತ್ ರೆಡ್ಡಿ, 100 ಕೋಟಿ ರೂ ಒಪ್ಪಂದ ರದ್ದುಗೊಳಿಸಿದ ತೆಲಂಗಾಣ!

ಅಮೆರಿಕ ಸೌರ ವಿದ್ಯುತ್ ಹಗರಣ ಆರೋಪ ಅದಾನಿ ಮೇಲೆ ಕೇಳಿ ಬರುತ್ತಿದ್ದಂತೆ ಹಲವು ರಾಷ್ಟ್ರಗಳು ಅದಾನಿ ಗ್ರೂಪ್ ಜೊತೆಗಿನ ಒಪ್ಪಂದ ರದ್ದುಗೊಳಿಸಿದೆ. ಇದೀಗ ತೆಲಂಗಾಣ ಸರ್ಕಾರ ಇದೀಗ ಅದಾನಿ ಗ್ರೂಪ್ ಮಾಡಿದ್ದ 100 ಕೋಟಿ ರೂ ಹೂಡಿಕೆ ಒಪ್ಪಂದ ರದ್ದುಗೊಳಿಸಿದೆ.
 

Telangana Govt cancel adani group rs 100 crore funding deal after bribery allegation ckm

ಹೈದರಾಬಾದ್(ನ.25) ಸೌರ ವಿದ್ಯುತ್ ಒಪ್ಪಂದ ಪಡೆಯಲು ಅದಾನಿ ಗ್ರೂಪ್ ಬರೋಬ್ಬರಿ 2000 ಕೋಟಿ ರೂಪಾಯಿ ಲಂಚ ನೀಡಿದೆ ಅನ್ನೋ ಗಂಭೀರ ಆರೋಪವನ್ನು ಅಮೆರಿಕ ಮಾಡಿದ ಬೆನ್ನಲ್ಲೇ ಕೋಲಾಹಲ ಸೃಷ್ಟಿಯಾಗಿದೆ. ಅಮೆರಿಕ ಸರ್ಕಾರದ ಮಾಡಿದ ಗಂಭೀರ ಆರೋಪದಿಂದ ಅದಾನಿ ಗ್ರೂಪ್ ಜೊತೆಗಿನ ಹಲವು ಒಪ್ಪಂದಗಳು ಮುರಿದು ಬಿದ್ದಿದೆ. ಅದಾನಿ ಮೇಲೆ ಲಂಚದ ಆರೋಪ ಕೇಳಿ ಬಂದ ಬೆನ್ನಲ್ಲೇ ಕೀನ್ಯಾ ಸರ್ಕಾರ ಕೂಡ ಅದಾನಿ ಗ್ರೂಪ್ ಜೊತೆಗಿನ ಒಪ್ಪಂದ ರದ್ದುಗೊಳಿಸಿದೆ. ಇದರ ಬೆನ್ನಲ್ಲೇ ತೆಲಂಗಾಣ ಸರ್ಕಾರ ಮಹತ್ವದ ನಿರ್ಧಾರ ಘೋಷಿಸಿದೆ. ಅದಾನಿ ಗ್ರೂಪ್ ಜೊತೆ ಮಾಡಿಕೊಂಡಿದ್ದ 100 ಕೋಟಿ ರೂಪಾಯಿ ಹೂಡಿಕೆ ಒಪ್ಪಂದವನ್ನು ತೆಲಂಗಾಣ ಸರ್ಕಾರ ರದ್ದುಗೊಳಿಸಿದೆ.

ಅದಾನಿ ವಿರುದ್ಧ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡುತ್ತಿದೆ. ಇದೇ ವೇಳೆ ಕಾಂಗ್ರೆಸ್ ಆಡಳಿತವಿರುವ ಹಲವು ರಾಜ್ಯಗಳು ಅದಾನಿ ಜೊತೆ ಹೂಡಿಕೆ ಒಪ್ಪಂದ ಮಾಡಿಕೊಂಡಿದೆ. ಇದು ರಾಹುಲ್ ಗಾಂಧಿಯ ಹೋರಾಟಕ್ಕೆ ತೀವ್ರ ಹಿನ್ನಡೆಯಾಗುತ್ತಿದೆ. ಇದರ ಬೆನ್ನಲ್ಲೇ ತೆಲಂಗಾಣ ಸರ್ಕಾರ ಅದಾನಿ ಗ್ರೂಪ್ ಜೊತೆಗಿನ ಒಪ್ಪಂದ ರದ್ದು ಮಾಡಿದೆ.

ಅರೆಸ್ಟ್ ವಾರೆಂಟ್ ಬೆನ್ನಲ್ಲೇ ಅದಾನಿಗೆ ಮತ್ತೊಂದು ಶಾಕ್, ಒಪ್ಪಂದ ರದ್ದುಗೊಳಿಸಿದ ಕೀನ್ಯಾ

ಕೈಗಾರಿಗಳ ಅಗತ್ಯಕ್ಕೆ ತಕ್ಕಂತೆ ಯುವ ಸಮೂಹಕ್ಕೆ ಪ್ರತಿಭೆ ಹಾಗೂ ಕೌಶಲ್ಯ ಅಭಿವೃದ್ಧಿಪಡಿಸಲು ಅದಾನಿ ಗ್ರೂಪ್ ಹೈದರಾಬಾದ್‌ನಲ್ಲಿ 100 ಕೋಟಿ ರೂಪಾಯಿ ಹೂಡಿಕೆ ಮೂಲಕ ವಿಶ್ವವಿದ್ಯಾಲಯ ಆರಂಭಿಸಲು ಒಪ್ಪಂದ ಮಾಡಿಕೊಂಡಿತ್ತು. ತೆಲಂಗಾಣ ಸರ್ಕಾರದ ಈ ವಿಶ್ವವಿದ್ಯಾಲಯ ಆರಂಭಿಸಲು ಅದಾನಿ ಹಾಗೂ ಇತರ ಪ್ರಮುಖ ಗ್ರೂಪ್‌ಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಇತ್ತೀಚೆಗೆ ಅದಾನಿ ಗ್ರೂಪ್ ತೆಲಂಗಾಣ ಸರ್ಕಾರ ಜೊತೆ ಮಾತುಕತೆ ನಡೆಸಿ ಒಪ್ಪಂದ ಅಂತಿಮಗೊಳಿಸಿತ್ತು.

ಆದರೆ ಅದಾನಿ ವಿರುದ್ಧ ಅಮೆರಿಕ ಸರ್ಕಾರ ಭ್ರಷ್ಟಾಚಾರ ಆರೋಪ ಮಾಡಿದ ಬೆನ್ನಲ್ಲೇ ತೆಲಂಗಾಣ ಸರ್ಕಾರ ಈ ಒಪ್ಪಂದದಿಂದ ಹಿಂದೆ ಸರಿದಿದೆ. ಕೌಶಲ್ಯ ಅಭಿವೃದ್ಧಿಗೆ ಆರಂಭಿಸಲು ಉದ್ದೇಶಿಸಿರುವ ಯೂನಿವರ್ಸಿಗೆ ಯಾರಿಂದಲೂ ಹೂಡಿಕೆ ಪಡೆಯುತ್ತಿಲ್ಲ ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಅದಾನಿ ಗ್ರೂಪ್ ಅಥವಾ ಯಾವುದೇ ಸಂಸ್ಥೆಯಿಂದ ತೆಲಂಗಾಣ ಸರ್ಕಾರ ಹಣ ಪಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  

ಅದಾನಿ ಗ್ರೂಪ್ ಸಂಸ್ಥೆಗಳ ಪೈಕಿ ಗ್ರೀನ್ ಎನರ್ಜಿ ಸಂಸ್ಥೆ ಹಲವು ರಾಜ್ಯ ಹಾಗೂ ಇತರ ರಾಷ್ಟ್ರಗಳಲ್ಲಿ ಸೌರ ವಿದ್ಯುತ್ ಉದ್ಯಮದಲ್ಲಿ ತೊಡಗಿಸಿಕೊಂಡಿದೆ. ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದ ಈ ಯೋಜನೆಗಳಲ್ಲಿ ಅದಾನಿ ಗ್ರೀನ್ ಎನರ್ಜಿ ತೊಡಗಿಸಿಕೊಂಡಿದೆ. ಆದರೆ ಹಲವು ರಾಜ್ಯಗಳಲ್ಲಿ ಸೌರ ವಿದ್ಯುತ್ ಡೀಲ್ ಪಡೆಯಲು ಅದಾನಿ ಗ್ರೂಪ್ ಅಧಿಕಾರಿಗಳಿಗೆ ಲಂಚ ಪಾವತಿಸುತ್ತಿದೆ. ಹೀಗಾಗಿ ಒಟ್ಟು 2,100 ಕೋಟಿ ರೂಪಾಯಿ ಮೊತ್ತವನ್ನು ಅದಾನಿ ಗ್ರೂಪ್ ಲಂಚದ ರೂಪದಲ್ಲಿ ಪಾವತಿಸಿದೆ ಎಂದು ಅಮೆರಿಕ ವರದಿ ನೀಡಿತ್ತು. ಇಷ್ಟೇ ಅಲ್ಲ ಈ ಕುರಿತು ತನಿಖೆಯನ್ನು ಆರಂಭಿಸಿತ್ತು. 

ಭಾರತದಲ್ಲಿ ಈ ಲಂಚ ವ್ಯವಹಾರ ನಡೆದಿದೆ. ಆದರೆ ಅದಾನಿ ಗ್ರೀನ್ ಎನರ್ಜಿ ಕಂಪನಿಗಳ ಮೇಲೆ ಅಮೆರಿಕದ ಕೆಲ ಕಂಪನಿಗಳು ಬಂಡವಾಳ ಹೂಡಿಕೆ ಮಾಡಿದೆ.ಹೀಗಾಗಿ ಅಮೆರಿಕ ಈ ಕುರಿತು ತನಿಖೆ ನಡೆಸುತ್ತಿದೆ ಎಂದಿದೆ. 
 

Latest Videos
Follow Us:
Download App:
  • android
  • ios