ಮಿನಿ ಯುದ್ಧದ ಮಹಾತೀರ್ಪು ಬಂದಾಯ್ತು; ಯಾರಿಗೆ ನಷ್ಟ, ಯಾರಿಗೆ ಲಾಭ?

ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿಯಲ್ಲಿ ನಡೆದ ಚುನಾವಣೆಗಳಲ್ಲಿ ಪ್ರತಿಷ್ಠೆಯ ಕದನವೇ ನಡೆದಿದೆ. ಈ ಮೂರು ಕ್ಷೇತ್ರಗಳಲ್ಲಿ ಯಾರ ಗೆಲುವು ಯಾರಿಗೆ ಲಾಭ ತರುತ್ತದೆ ಮತ್ತು ಯಾರಿಗೆ ನಷ್ಟ ತರುತ್ತದೆ ಎಂಬುದನ್ನು ವಿಶ್ಲೇಷಿಸಲಾಗಿದೆ.

First Published Nov 23, 2024, 6:08 PM IST | Last Updated Nov 23, 2024, 6:08 PM IST

ಮಿನಿಯುದ್ಧದ ಮಹಾ ತೀರ್ಪಿಗೆ ಶುರು ಕೌಂಟ್ ಡೌನ್.. ಚದುರಂಗ ಚತುರರ ಚನ್ನಪಟ್ಟಣ, ಸಮರವೀರರ ಸಮರಭೂಮಿ ಸಂಡೂರು, ರಣಕಲಿಗಳ ಸಮರಾಂಗಣ ಶಿಗ್ಗಾಂವಿ.. ಮೂರು ಅಖಾಡ, ನೂರು ಕುತೂಹಲ.. ದ್ವೇಷ, ದುಷ್ಮನಿ, ಸೇಡಿನ ಯುದ್ಧದಲ್ಲಿ ಪ್ರತಿಷ್ಠೆಯನ್ನೇ ಪಣಕ್ಕೊಡ್ಡಿದ ಅತಿರಥ-ಮಹಾರಥಿಗಳು.. ಆಟಗಾರರೇ ಬೇರೆ, ತೆರೆಯ ಹಿಂದೆ ಆಟವಾಡಿಸಿದ ಸೂತ್ರಧಾರರೇ ಬೇರೆ.  ಎಲ್ಲಿ ಯಾರು ಗೆದ್ದರೆ ಯಾರಿಗೆ ಲಾಭ, ಯಾರಿಗೆ ನಷ್ಟ..? ಉರುಳಿದ ದಾಳಕ್ಕೆ ಉರುಳುತ್ತಾ ಸಿಂಹಾಸನ..? ಕೆರಳುತ್ತಾ ರಾಜಕಾರಣ..? ಇದೇ ಇವತ್ತಿನ ಸುವರ್ಣ ಸ್ಪೆಷಲ್. 

ಇದು ಚನ್ನಪಟ್ಟಣ ಚದುರಂಗದ ಕಥೆ.. ಉಳಿದೆರಡು ಅಖಾಡಗಳ ಕಥೆಯೂ ಅಷ್ಟೇ ರೋಚಕ.. ಸಂಡೂರಲ್ಲಿ ಸಿದ್ದು-ರೆಡ್ಡಿ ಪ್ರತಾಪ, ಶಿಗ್ಗಾಂವಿಯಲ್ಲಿ ಬೊಮ್ಮಾಯಿ-ಜಮೀರ್ ರಣರಂಗ. ಚನ್ನಪಟ್ಟಣ ಫಲಿತಾಂಶದಲ್ಲಿ ಅತಿರಥ-ಮಹಾರಥಿಗಳ ಪ್ರತಿಷ್ಠೆ ಅಡಗಿದ್ರೆ, ಅತ್ತ ಸಂಡೂರು ಶಿಗ್ಗಾಂವಿಯದ್ದೂ ಅದೇ ಕಥೆ. ಅಲ್ಲಿ ಅಭ್ಯರ್ಥಿಗಳೇನಿದ್ರೂ ದಾಳಗಳು.. ಪಗಡೆಯಾಟ ಆಡಿರೋರೇ ಬೇರೆ.. ತೆರೆಯ ಹಿಂದೆ ನಿಂತು ದಾಳ ಉರುಳಿಸಿದವರು ಯಾರು..? ಗುರಿ ಮುಟ್ಟೋದು ಯಾರ ದಾಳ..? ಗೆಲ್ಲೋದು ಯಾರ ಪ್ರತಿಷ್ಠೆ..? ತೋರಿಸ್ತೀವಿ ನೋಡಿ.

ಚನ್ನಪಟ್ಟಣ ಮತ್ತು ಸಂಡೂರಿನ ಕಥೆ ಹೀಗಾದ್ರೆ, ಅತ್ತ ಶಿಗ್ಗಾಂವಿಯದ್ದು ಮತ್ತೊಂದು ಕಥೆ.. ಅಲ್ಲಿ ಅಡಗಿರೋದು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಷ್ಠೆ. ಆ ಪ್ರತಿಷ್ಠೆಯ ಹಿಂದಿರೋ ಅಸಲಿಯತ್ತನ್ನು ಇಲ್ಲಿದೆ ನೋಡಿ. ಚನ್ನಪಟ್ಟಣದಲ್ಲಿ ಡಿಕೆ Vs ಎಚ್ಡಿಕೆ ಪ್ರತಿಷ್ಠೆ, ಸಂಡೂರಲ್ಲಿ ಸಿದ್ದರಾಮಯ್ಯ Vs ರೆಡ್ಡಿ ಪ್ರತಿಷ್ಠೆ. ಶಿಗ್ಗಾಂವಿಯಲ್ಲಿ ಬೊಮ್ಮಾಯಿ Vs ಜಮೀರ್ ಪ್ರತಿಷ್ಠೆ.. ಬೊಮ್ಮಾಯಿ ಭದ್ರಕೋಟೆಯಲ್ಲಿ ಜಮೀರ್ ಪ್ರತಿಷ್ಠೆ ಅಡಗಿರೋದು.ಪಗಡೆಯಾಟದಲ್ಲಿ ದಾಳ ಉರುಳಿಸಿದವರು ಒಬ್ರು, ದಾಳವಾದವರು ಮತ್ತೊಬ್ರು.. ಆಟಗಾರ ಒಬ್ರು, ತೆರೆಯ ಹಿಂದೆ ಆಟವಾಡಿದ ಸೂತ್ರಧಾರ ಇನ್ನೊಬ್ರು.. ಉರುಳಿದ ದಾಳಕ್ಕೆ ಉರುಳುತ್ತಾ ಸಿಂಹಾಸನ..? ಕೆರಳುತ್ತಾ ರಾಜಕಾರಣ..? ಕಾದು ನೋಡೋಣ.