ಸಂವಿಧಾನದ ಪೀಠಿಕೆಯಲ್ಲಿ ಸಮಾಜವಾದಿ, ಜಾತ್ಯತೀತ ಪದ ತೆಗೆದು ಹಾಕಲು ನಿರಾಕರಿಸಿದ ಸುಪ್ರೀಂ ಕೋರ್ಟ್‌!

ಸಂವಿಧಾನದ ಪೀಠಿಕೆಯಿಂದ 'ಸಮಾಜವಾದಿ' ಮತ್ತು 'ಜಾತ್ಯತೀತ' ಪದಗಳನ್ನು ತೆಗೆದುಹಾಕುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಸಂಸತ್ತಿನ ತಿದ್ದುಪಡಿ ಅಧಿಕಾರವು ಸಂವಿಧಾನದ ಪೀಠಿಕೆಗೂ ವಿಸ್ತರಿಸುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

Supreme Court refused to remove words socialist secular from Constitution san

ನವದೆಹಲಿ (ನ.25): ದೇಶದ ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ಸೇರಿಸಲಾಗಿದ್ದ ಸೋಶಿಯಲಿಷ್ಟ್‌ (ಸಮಾಜವಾದಿ) ಹಾಗೂ ಸೆಕ್ಯುಲರ್‌ (ಜಾತ್ಯತೀತ) ಪದಗಳನ್ನು ತೆಗೆದುಹಾಕುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ತಿರಸ್ಕರಿಸಿದೆ. ಭಾರತೀಯ ಸಂವಿಧಾನದ ಪೀಠಿಕೆಯಿಂದ 'ಸಮಾಜವಾದಿ' ಮತ್ತು 'ಜಾತ್ಯತೀತ' ಪದಗಳನ್ನುಸೇರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಬ್ಯಾಚ್‌ಅನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಿ ವಜಾ ಮಾಡುವ ತೀರ್ಮಾನ ಮಾಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು ಸಂಸತ್ತಿನ ತಿದ್ದುಪಡಿ ಅಧಿಕಾರವು ಸಂವಿಧಾನದ ಪೀಠಿಕೆಗೂ ವಿಸ್ತರಿಸುತ್ತದೆ ಎಂದು ತಿಳಿಸಿದೆ. ಆ ಮೂಲಕ ಈ ಪದಗಳನ್ನು ತೆಗೆದು ಹಾಕುವ ಅಧಿಕಾರ ಕೋರ್ಟ್‌ಗೆ ಇಲ್ಲ ತಿಳಿಸಿದೆ. ಈ ತಿದ್ದುಪಡಿ ನಡೆದು ಸಾಕಷ್ಟು ವರ್ಷವಾಗಿದೆ. ಈಗ ಈ ಶಬ್ದಗಳು ಚರ್ಚೆಗೆ ಬಂದಿದ್ದು ಏಕೆ' ಎಂದು ಸಿಜೆಐ ಸಂಜೀವ್‌ ಖನ್ನಾ ಹೇಳಿದ್ದಾರೆ. ಬಲರಾಮ್ ಸಿಂಗ್, ಹಿರಿಯ ಬಿಜೆಪಿ ನಾಯಕ ಡಾ. ಸುಬ್ರಮಣಿಯನ್ ಸ್ವಾಮಿ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಈ ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದರು.

1976ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಇಂದಿರಾ  ಗಾಂಧಿ ಭಾರತದ ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದರು. 42ನೇ ಸಂವಿಧಾನ ತಿದ್ದುಪಡಿಯಲ್ಲಿ ಭಾರತದ ಸಂವಿಧಾನದ ಪೀಠಿಕೆಯಲ್ಲಿ ಸೋಶಿಯಲಿಸ್ಟ್‌ ಹಾಗೂ ಸೆಕ್ಯುಲರ್‌ ಪದವನ್ನು ಅವರು ಸೇರಿಸಿದ್ದರು. ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿವಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು 368 ನೇ ವಿಧಿಯ ಅಡಿಯಲ್ಲಿ ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಸತ್ತಿನ "ಅವಿವಾದಾತೀತ" ಅಧಿಕಾರವನ್ನು ಪುನರುಚ್ಚಾರ ಮಾಡಿದೆ.

ಪೀಠಿಕೆಯು 1949 ನವೆಂಬರ್ 26ರ ಮೂಲ ಸೇರ್ಪಡೆ ದಿನಾಂಕವನ್ನು ಉಳಿಸಿಕೊಂಡಿದೆ ಎಂಬ ಕಾರಣಕ್ಕಾಗಿ ಈ ಪದಗಳ ಸೇರ್ಪಡೆಯನ್ನು ಅಮಾನ್ಯಗೊಳಿಸಲಾಗುವುದಿಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿದೆ.

ಬೆವರು, ಮೂತ್ರ ಸಂಸ್ಕರಿಸಿದ ನೀರಿನಿಂದ ಮಾಡಿದ ಸೂಪ್‌ ಕುಡಿದು ದಿನ ಕಳೆಯುತ್ತಿರುವ ಸುನೀತಾ ವಿಲಿಯಮ್ಸ್‌!

“ಸಂವಿಧಾನವನ್ನು 1949 ನವೆಂಬರ್ 26ರಂದು ಭಾರತದ ಜನರು ಅಂಗೀಕರಿಸಿದ್ದಾರೆ ಮತ್ತು ಸಕ್ರಿಯವಾಗಿ ನೀಡಿದ್ದಾರೆ ಎಂಬ ಅಂಶವು ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ.  ಸ್ವೀಕಾರದ ದಿನಾಂಕವು ಸಂವಿಧಾನದ 368 ನೇ ವಿಧಿಯ ಅಡಿಯಲ್ಲಿ ಅಧಿಕಾರವನ್ನು ಮೊಟಕುಗೊಳಿಸುವುದಿಲ್ಲ ಅಥವಾ ನಿರ್ಬಂಧಿಸುವುದಿಲ್ಲ ”ಎಂದು ಸಿಜೆಐ ತೀರ್ಪಿನ ಆಪರೇಟಿವ್ ಭಾಗವನ್ನು ಓದುವಾಗ ಹೇಳಿದರು. ಪೂರ್ಣ ತೀರ್ಪು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಮುಸ್ಲಿಂ ಹುಡುಗರು ಬೇಡವೇ ಬೇಡ; ಡಿವೋರ್ಸ್ ಆದ್ಮೇಲೆ ಸಾನಿಯಾಗೆ ಬುದ್ಧಿ ಹೇಳಿದ ನೆಟ್ಟಿಗರು!

Latest Videos
Follow Us:
Download App:
  • android
  • ios