ಸಂಗಾತಿಗೆ ಮೋಸ ಮಾಡುವುದು ಅಪರಾಧವಲ್ಲ, ಹೊಸ ಕಾನೂನಿಗೆ ಗವರ್ನರ್ ಸಹಿ!

ಸಂಗಾತಿಗೆ ಮೋಸ ಮಾಡಿದರೆ ಶಿಕ್ಷಾರ್ಹ ಅಪರಾಧ ಅನ್ನೋ 107 ವರ್ಷಗಳ ಹಳೇ ಕಾನೂನುನ್ನು ತೆಗೆದು ಹಾಕಲಾಗಿದೆ. ಈ ಕುರಿತು ಹೊಸ ಮಸೂದೆಗೆ ಗವರ್ನರ್ ಅಂಕಿತ ಹಾಕಿದ್ದಾರೆ. ಹೊಸ ಕಾನೂನಿನಲ್ಲಿ ಸಂಗಾತಿಗೆ ಮೋಸ ಮಾಡುವುದು ಅಪರಾಧ ಎಂದು ಪರಿಗಣಿಸುವುದಿಲ್ಲ.
 

Cheating on your spouse not a crime in New york New bill signed by Governor ckm

ನ್ಯೂಯಾರ್ಕ್(ನ.25) ಸಂಗಾತಿಗೆ ಮೋಸ ಮಾಡುವುದು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಮೋಸದ ರೀತಿ, ಪ್ರಮಾಣ ಸೇರಿದಂತೆ ಆಯಾ ಪ್ರಕರಣಕ್ಕೆ ಸಂಬಂಧಿಸಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಈ ಕುರಿತು ಬರೋಬ್ಬರಿ 107 ವರ್ಷಗಳ ಹಳೇ ಕಾನೂನನ್ನು ತೆಗೆದು ಹಾಕಿ ಹೊಸ ಮಸೂದೆಗೆ ಗವರ್ನರ್ ಸಹಿ ಹಾಕಿದ್ದಾರೆ. ಹೊಸ ಕಾನೂನಿನಲ್ಲಿ ಸಂಗಾತಿಗೆ  ಯಾರೇ  ಮೋಸ ಮಾಡಿದರೆ ಅಪರಾಧ ಎಂದು ಪರಿಗಣಿಸುವುದಿಲ್ಲ.ಈ ಹೊಸ ಕಾನೂನು ಬರುತ್ತಿರುವುದು ಭಾರತದಲ್ಲಿ ಅಲ್ಲ, ನ್ಯೂಯಾರ್ಕ್‌ನಲ್ಲಿ. 

ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಈ ಮಸೂದೆಗೆ ಸಹಿ ಹಾಕಿದ್ದಾರೆ. ಈ ಹೊಸ ಕಾನೂನಿನಲ್ಲಿ ಸಂಗಾತಿ ಮೋಸ ಮಾಡಿ ಬೇರೆ ಸಂಬಂಧ ಬೆಳೆಸುವುದು ಸೇರಿದಂತೆ ಇತರ ವಂಚನೆಗಳನ್ನು ಅಪರಾಧ ಎಂದು ಪರಿಗಣಿಸುವುದಿಲ್ಲ. 107 ವರ್ಷಗಳ ಹಿಂದಿನ ವಿಶೇಷ ಕಾನೂನಿನಲ್ಲಿ ಸಂಗಾತಿಗೆ ಮೋಸ, ವ್ಯಭಿಚಾರ ಪ್ರಕರಣದಲ್ಲಿ ಮೂರು ತಿಂಗಳ ವರೆಗೆ ಜೈಲು ಶಿಕ್ಷೆಗೆ ನೀಡುವ ಅವಕಾಶವಿತ್ತು. ಆದರೆ ಹೊಸ ಕಾನೂನು ಇದ್ಯಾವುದಕ್ಕೂ ಅವಕಾಶ ನೀಡುವುದಿಲ್ಲ.  ಹೊಸ ಮಸೂದೆಗೆ ಸಹಿ ಹಾಕಿದ ಗವರ್ನರ್ ಕ್ಯಾಥಿ, ಕಳೆದ 40 ವರ್ಷಗಳಿಂದ ನನ್ನ ಪತಿ ಜೊತೆ ಪ್ರೀತಿಯ ವೈವಾಹಿಕ ಜೀವನ ನಡೆಸುತ್ತಿದ್ದೇನೆ. ಇದು ನನ್ನ ಅದೃಷ್ಟ. ಆದರೆ ಅತ್ಯಂತ ಹಳೆಯ ವ್ಯಭಿಚಾರವನ್ನು ಅಪರಾಧೀಕರಿಸುವ ಬಿಲ್ ಸಹಿ ಹಾಕುವುದು ವಿಪರ್ಯಾಸ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಸದ್ಯ ಜನರ ಸಂಬಂಧ ಸಂಕೀರ್ಣವಾಗಿದೆ. ಕೆಲ ವಿಚಾರಗಳನ್ನು ಸಂಬಂಧದಲ್ಲಿರುವವರು, ವ್ಯಕ್ತಿಗಳು ನಿರ್ವಹಿಸಬೇಕು. ಕೋರ್ಟ್, ಪೊಲೀಸರು ಅಲ್ಲ. ಹೀಗಾಗಿ ಹಳತಾದ ಶಾಸನ ತೆಗೆದುಹಾಕಿ ಹೊಸ ಮಸೂದೆ ಜಾರಿ ಮಾಡಲಾಗಿದೆ ಎಂದು ಕ್ಯಾಥಿ ಹೇಳಿದ್ದಾರೆ.

ನಿಮ್ಮ ಸಂಗಾತಿಗೆ ಎಂದಿಗೂ ಈ ಏಳು ಶಬ್ದಗಳು ಹೇಳಬೇಡಿ..! ಸುಖ ಸಂಸಾರಕ್ಕೆ ನಿಷಿದ್ಧ ಪದಗಳಿವು...

ವ್ಯಭಿಚಾರ ಕುರಿತು ಹಲವು ರಾಜ್ಯಗಳಲ್ಲಿ ಕಾನೂನಿದೆ.  ಈ ಕಾನೂನು ವಿಚ್ಚೇಧನ ಪಡೆಯಲು ಹಲವು ಅಡೆ ತಡೆಗಳನ್ನೂ ಒಡ್ಡಿದೆ. ನ್ಯೂಯಾರ್ಕ್ ಈ ನಿಟ್ಟಿನಲ್ಲಿ ಹೊಸ ಹಾಗೂ ಪ್ರಬಲ ಕಾನೂನು ಜಾರಿಗೊಳಿಸಿದೆ. ಇದೀಗ ಹಲವು ರಾಜ್ಯಗಳು ವ್ಯಭಿಚಾರ ಕುರಿತು ಇರುವ ಹಳೇ ಕಾನೂನು ರದ್ದುಗೊಳಿಸಿ, ಅಲ್ಲಿನ ಜನತೆ, ಭೌಗೋಳಿಕ ಹಿನ್ನಲೆಯಲ್ಲಿ ಹೊಸ ಕಾನೂನು ರೂಪಿಸಲು ಮುಂದಾಗಿದ್ದಾರೆ ಎಂದು ಕ್ಯಾಥಿ ಹೇಳಿದ್ದಾರೆ.

ಹಳೇ ಕಾನೂನುಗಳು ಪ್ರಸ್ತುಕ ಕಾಲಕ್ಕೆ ತಕ್ಕಂತ ಬದಲಾವಣೆಯಾಗಬೇಕು. ಶತಮಾನಗಳ ಹಿಂದೆ ಇದ್ದ ಪರಿಸ್ಥಿತಿ ಈಗಿಲ್ಲ. ಎಲ್ಲವೂ ಬದಲಾಗಿದೆ. ಹೀಗಾಗಿ ಸದ್ಯ ಜಾರಿಗೊಳಿಸಲು ಪ್ರಯಾಸವಿರುವ ಕಾನೂನುಗಳನ್ನು ಬದಲಿಸಬೇಕು. ಇದರ ಅವಶ್ಯಕತೆ ಇದೆ. ಇಂದಿನ ಕಾಲಕ್ಕೆ ತಕ್ಕಂತೆ ಕಾನೂನುಗಳನ್ನು ಬದಲಿಸಬೇಕಿದೆ. ಕಾನೂನುಗಳು ಜನರಿಗೆ ನ್ಯಾಯ ಒದಗಿಸುವಂತಿರಬೇಕು ಎಂದು ಕ್ಯಾಥಿ ಹೇಳಿದ್ದಾರೆ.
 

Latest Videos
Follow Us:
Download App:
  • android
  • ios