ಹೂ ಕೋಸು / ಕಾಲಿಫ್ಲವರ್ ತಿನ್ನುವ ಮೊದಲು ಈ ವಿಚಾರ ಗಮನದಲ್ಲಿರಲಿ
ಕಾಲಿಫ್ಲವರ್ ಆರೋಗ್ಯಕ್ಕೆ ಒಳ್ಳೆಯದು, ಆದರೆ ಕೆಲವರು ಇದನ್ನು ಹೆಚ್ಚಾಗಿ ತಿನ್ನಬಾರದು. ಯಾಕೆ ಅಂತ ಇಲ್ಲಿದೆ ನೋಡಿ ಮಾಹಿತಿ.
ಹೂ ಕೋಸು ಅಥವಾ ಕಾಲಿಫ್ಲವರ್‌ನಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಹೃದಯ ಸಂಬಂಧಿ ಕಾಯಿಲೆಗಳಿಂದ ಇವು ನಮ್ಮ ದೇಹಕ್ಕೆ ರಕ್ಷಣೆ ನೀಡುತ್ತದೆ.
ಕಾಲಿಫ್ಲವರ್‌ನಲ್ಲಿ ವಿಟಮಿನ್ ಸಿ, ಫೋಲೇಟ್, ವಿಟಮಿನ್-ಕೆ ಮತ್ತು ಇತರ ಖನಿಜಗಳಿವೆ. ಇದರಲ್ಲಿರುವ ನಾರಿನಂಶ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದರೆ ಕೆಲವರು ಕಾಲಿಫ್ಲವರ್ ಅನ್ನು ಹೆಚ್ಚಾಗಿ ತಿನ್ನಬಾರದು.
ಇದರಲ್ಲಿರುವ ಕೋಲಿನ್ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶ. ಕಾಲಿಫ್ಲವರ್‌ನಲ್ಲಿ ಕೋಲಿನ್ ಹೇರಳವಾಗಿದೆ. ಇದು ಡಿಎನ್‌ಎ ಉತ್ಪಾದನೆ ಮತ್ತು ಚಯಾಪಚಯ ಕ್ರಿಯೆಗೆ ಮುಖ್ಯವಾಗಿದೆ. .
ಆದರೆ ಕೆಲವು ಆರೋಗ್ಯ ಸಮಸ್ಯೆ ಇರುವವರು ಕಾಲಿಫ್ಲವರ್ ತಿನ್ನಲೇಬಾರದು. ಥೈರಾಯ್ಡ್ ಇರುವವರು ಕಾಲಿಫ್ಲವರ್ ತಿನ್ನುವುದರಿಂದ ಪಾರ್ಶ್ವ ಪರಿಣಾಮಗಳು ಉಂಟಾಗಬಹುದು. ಗ್ಯಾಸ್ಟ್ರಿಕ್, ಅಸಿಡಿಟಿ ಸಮಸ್ಯೆ ಇರುವವರು ಕಾಲಿಫ್ಲವರ್ ತಿನ್ನುವುದನ್ನು ತಪ್ಪಿಸಬೇಕು.
ಕಾಲಿಫ್ಲವರ್ ತಿನ್ನುವ ವಿಧಾನ
ಕಾಲಿಫ್ಲವರ್ ಅನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ದಿನಾಲೂ ತಿನ್ನಬಾರದು. ಥೈರಾಯ್ಡ್ ಸಮಸ್ಯೆ ಇರುವವರು ಹೆಚ್ಚು ತಿನ್ನುವುದನ್ನು ತಪ್ಪಿಸಬೇಕು.