ಟಿಕೆಟ್​ ವಿಚಾರದಲ್ಲಿ  ದೇವೇಗೌಡರ ಕುಟುಂಬದೊಳಗೆ  ಮುಸುಕಿನ ಗುದ್ದಾಟ ಶುರುವಾಗಿದೆ.  ಟಿಕೆಟ್​ ವಿಚಾರವಾಗಿ ಎಚ್​ಡಿ ದೇವೇಗೌಡ ಮತ್ತು ಎಚ್​ಡಿ ಕುಮಾರಸ್ವಾಮಿ ನಡುವೆ ವೈಮನಸ್ಸು ಉಂಟಾಗಿದೆ .

ಬೆಂಗಳೂರು (ಡಿ.22): ಟಿಕೆಟ್​ ವಿಚಾರದಲ್ಲಿ  ದೇವೇಗೌಡರ ಕುಟುಂಬದೊಳಗೆ  ಮುಸುಕಿನ ಗುದ್ದಾಟ ಶುರುವಾಗಿದೆ.  ಟಿಕೆಟ್​ ವಿಚಾರವಾಗಿ ಎಚ್​ಡಿ ದೇವೇಗೌಡ ಮತ್ತು ಎಚ್​ಡಿ ಕುಮಾರಸ್ವಾಮಿ ನಡುವೆ ವೈಮನಸ್ಸು   ಉಂಟಾಗಿದೆ .  ಯಾವುದೇ ಕಾರಣಕ್ಕೂ ಕುಟುಂಬದಲ್ಲಿ ಇಬ್ಬರೇ ಸ್ಪರ್ಧೆ ಮಾಡಲಿ ಎಂದು  ಕುಮಾರಸ್ವಾಮಿ ಹೇಳುತ್ತಿದ್ದರೆ,  ಅರ್ಹತೆ ಇದ್ದರೆ ಮತ್ತಿಬ್ಬರಿಗೆ ಟಿಕೆಟ್​ ಕೊಟ್ಟರೆ ತಪ್ಪೇನು ಎನ್ನುತ್ತಿದ್ದಾರಂತೆ  ದೇವೇಗೌಡರು.

ಅನಿತಾ ಕುಮಾರಸ್ವಾಮಿ, ಪ್ರಜ್ವಲ್​ ರೇವಣ್ಣ ಅವರಿಗೆ ಟಿಕೆಟ್​ ಬೇಡ ಎಂದು ಕುಮಾರಸ್ವಾಮಿ  ಹೇಳುತ್ತಿದ್ದಾರಂತೆ,  ಕುಟುಂಬದಿಂದ ನಾಲ್ವರು ಸ್ಪರ್ಧಿಸಿದರೆ ಕುಟುಂಬ ರಾಜಕಾರಣ ಆರೋಪಕ್ಕೆ ಗುರಿಯಾಗಬೇಕಾಗತ್ತದೆ . ಕಾಂಗ್ರೆಸ್​, ಬಿಜೆಪಿಗೆ ಇದು ದೊಡ್ಡ ಅಸ್ತ್ರವಾಗತ್ತೆ ಎಂದು  ಕುಮಾರಸ್ವಾಮಿ  ಹೇಳುತ್ತಿದ್ದಾರಂತೆ.

ಪ್ರಜ್ವಲ್​ಗೆ  ಪಕ್ಷದಲ್ಲಿ ಜವಾಬ್ದಾರಿ ವಹಿಸಲಾಗಿದೆ, ಅನಿತಾ ರಾಮನಗರ ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳಬೇಕು. ಪ್ರಜ್ವಲ್​, ಅನಿತಾ ಇಬ್ಬರೂ ಪಕ್ಷಕ್ಕಾಗಿ ದುಡಿದಿದ್ದಾರೆ.  ಟಿಕೆಟ್​ ಕೊಟ್ಟರೆ ತಪ್ಪೇನು ಅನ್ನೋದು ದೇವೇಗೌಡರ ವಾದ. ಇದೇ ಕಾರಣಕ್ಕೆ ಕುಮಾರಸ್ವಾಮಿ, ದೇವೇಗೌಡ ನಡುವೆ ಸಣ್ಣ ವೈಮನಸ್ಸು ಶುರುವಾಗಿದೆ.  ಇದೇ ಕಾರಣಕ್ಕೆ ಪ್ರಥಮ ಪಟ್ಟಿ ಬಿಡುಗಡೆಯೂ ವಿಳಂಬವಾಗುತ್ತಿದೆಯಂತೆ.