ಟಿ ನರಸೀಪುರದಲ್ಲಿ ಪ್ರಚೋದನೆ ಕೊಟ್ಟಿದ್ದು ಇನ್ಸ್‌ಪೆಕ್ಟರ್. ಆದರೆ ಕ್ರಮ ನನ್ನ ಮೇಲೆ ಕೈಗೊಳ್ಳಲಾಗಿದೆ. ಇದು ಗೃಹ ಸಚಿವರ ಒತ್ತಡಕ್ಕೆ ಮಣಿದು ನನ್ನ ಮೇಲೆ ಎಫ್ಐಆರ್ ದಾಖಲು ಮಾಡಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರು (ಸೆ.20) ಟಿ ನರಸೀಪುರ ಗಣಪತಿ ಮೆರಣಿಗೆ ಅಂತ್ಯಗೊಂಡರೂ ವಿವಾದ ತಣ್ಣಗಾಗಿಲ್ಲ. ಮಸೀದಿ ಮುಂದೆ ಗಣಪತಿ ಮೆರವಣಿ ನಿರ್ಬಂಧ ವಿಚಾರದಲ್ಲಿ ಆರಂಭಗೊಂಡ ವಿವಾದ ಕೊನೆಗೆ ರಾಜಕೀಯ ಕೋಲಾಹಲಕ್ಕೂ ಕಾರಣವಾಗಿದೆ. ಟಿ ನರಸೀಪುರ ಇನ್ಸ್‌ಪೆಕ್ಟರ್ ಮಾತಿನಿಂದ ಕೆರಳಿದ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ , ಅದ್ದೂರಿಯಾಗಿ ಗಣಪತಿ ಮೆರವಣಿ ಮಾಡಿದೆ. ಆದರೆ ಮೆರವಣಿಗೆ ಬೆನ್ನಲ್ಲೇ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ದ ಎಫ್ಐಆರ್ ದಾಖಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಪ್ರಚೋದನ ಕೊಟ್ಟಿದ್ದ ಟಿ ನರಸೀಪುರ ಇನ್ಸ್‌ಪೆಕ್ಟರ್, ಆದರೆ ನನ್ನ ವಿರುದ್ಧ ಪ್ರಚೋದನೆ ಎಂದು ದೂರು ದಾಖಲು ಮಾಡಿದ್ದಾರೆ ಎಂದಿದ್ದಾರೆ.
ಇನ್ಸ್‌ಪೆಕ್ಟರ್ ಮೇಲೆ ಎಫ್ಐಆರ್ ಆಗಬೇಕಿತ್ತು
ಗಣಪತಿ ಮೆರವಣಿಗೆ ಕುರಿತು ಧಮ್ಮಕಿ ಹಾಕಿ ಗಣಪತಿ ಭಕ್ತರು, ಹಿಂದೂ ಸಂಘಟನೆಗಳನ್ನು ಪ್ರಚೋದಿಸಿತ್ತು ಇನ್ಸ್‌ಪೆಕ್ಟರ್. ನಾನು ಪ್ರಚೋದನೆ ಕೊಟ್ಟಿಲ್ಲ. ಇನ್ಸ್‌ಪೆಕ್ಟರ್ ಮೇಲೆ ಕ್ರಮ ಕೈಗೊಳ್ಳಬೇಕಿತ್ತು. ವರ್ಗಾವಣೆ ಮಾಡಬೇಕಿತ್ತು. ಆದರೆ ಗೃಹ ಸಚಿವರ ಒತ್ತಡಕ್ಕೆ ಮಣಿದು ನನ್ನ ಮೇಲೆ ಕ್ರಮ ಕೈಗೊಂಡಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಐಜಿಪಿ, ಎಸ್ಪಿ, ಡಿವೈಎಸ್ಪಿ ನೀವು ಒತ್ತಡಕ್ಕೆ ಮಣಿದು ಎಫ್ಐಆರ್ ದಾಖಲು ಮಾಡಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಇನ್ಸ್‌ಪೆಕ್ಟರ್ ಕೊಟ್ಟ ಚಿತಾವಣೆಗೆ ನಾವು ಸ್ಪಂದಿಸಿದ್ದೇವೆ. ಮಸೀದಿ ಮುಂದೆ ಇನ್ಸ್‌ಪೆಕ್ಟರ್ ಆಡಿದ ಮಾತಗಳನ್ನು ಆಡಿದ್ದೇನೆ. ಈದ ನೋಡು ಬಾ ಎಂದು ಕರೆದಿದ್ದೇನೆ. ಪೊಲೀಸರ ಬಗ್ಗೆ ನನಗೆ ಗೌರವವಿದೆ. ಆದರೆ ತರ್ಲೆ ಇನ್ಸ್‌ಪೆಕ್ಟರ್‌ನಿಂದ ಇದೆಲ್ಲಾ ಆಗಿದೆ. ಆತನ ಮೇಲೆ ಎಫ್ಐಆರ್ ದಾಖಲು ಮಾಡಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ನಾನು ಯಾವುದೇ ಕಮಿಷನ್ ಹೊಡೆದಿಲ್ಲ, ಮುಡಾದಲ್ಲಿ ಅಕ್ರಮವಾಗಿ ಸೈಟ್ ಪಡೆದಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತೆ
ನಾನು ಕಳ್ಳದಾರಿ ಹಿಡಿದಿಲ್ಲ. ನಾನು ಅಪ್ಪನ ಹೆಸರು ಹೇಳಿಕೊಂಡು ಇಲ್ಲಿಗೆ ಬಂದಿಲ್ಲ. ನ್ಯಾಯಾಲಯದ ಮೊರೆ ಹೋಗುತ್ತೇನೆ. ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ರಾಜಕಾರಣಿ ರೀತಿ ನನ್ನನ್ನು ನೋಡಬೇಡಿ. ನಾನೊಬ್ಬ ಪತ್ರಕರ್ತ, ಪತ್ರಕರ್ತರು ಸಂವಿಧಾನವನ್ನು ತಿಳಿದುಕೊಂಡಿರುತ್ತಾರೆ. ಕಾನೂನು ಹೋರಾಟ ಮುಂದುವರಿಯಲಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

