ಬೆಂಗಳೂರಿನಲ್ಲಿ 'ಬುಕ್‌ ಮೈ ಶೋ'ನಲ್ಲಿ ಗಂಟೆಗೆ 25 ಸಾವಿರಕ್ಕೂ ಅಧಿಕ ಟಿಕೆಟ್‌ ಸೇಲ್‌ ಆಗಿದೆ ಎನ್ನಲಾಗಿದೆ. ಚೆನ್ನೈ, ಹೈದರಾಬಾದ್‌, ಕೊಚ್ಚಿಯಲ್ಲಿ ಇನ್ನೂ ಬುಕಿಂಗ್‌ ಆರಂಭವಾಗಿಲ್ಲ. ಆದರೆ, ಎಲ್ಲಾ ಕಡೆಯೂ ಟಾಕ್ಸಿಕ್ ಸಿನಿಮಾದ ಟಿಕೆಟ್‌ ಬೇಡಿಕೆ ಹೇಗಿದೆ? ಈ ಸ್ಟೋರಿ ನೋಡಿ..

Toxic Movie Adavance Booking: ಅಡ್ವಾನ್ಸ್ ಬುಕಿಂಗ್ ಓಪನ್ ಬೆನ್ನಲ್ಲೇ 'ಟಾಕ್ಸಿಕ್' ಟಿಕೆಟ್ ಸೋಲ್ಡ್ ಔಟ್; ಯಶ್ ಕ್ರೇಜ್‌ಗೆ ಸಾಕ್ಷಿಯಾದ ಘಟನೆ!

ಕನ್ನಡದ ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ಯಶ್ (Yash) ಟಾಕ್ಸಿಕ್ ಸಿನಿಮಾ 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿರುವುದು ಗೊತ್ತೇ ಇದೆ. ಈ ಚಿತ್ರವು ಈಗಾಗಲೇ ದೇಶ, ವಿದೇಶಗಳಲ್ಲಿ ಸಖತ್ ಸೌಂಡ್ ಮಾಡುತ್ತಿರುವುದು ಗೊತ್ತೇ ಇದೆ. ಆಗಸ್ಟ್ 26 ರಂದು ಬಿಡುಗಡೆಯಾಗಲಿರುವ ಈ ಸಿನಿಮಾವನ್ನು ಮಲಯಾಳಂ ಚಿತ್ರಗಳ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದು, ಯಶ್ ನಾಯಕರಾಗಿದ್ದಾರೆ. ನಟನೆ ಮಾತ್ರವಲ್ಲ ನಿರ್ಮಾಣದಲ್ಲೂ ಯಶ್ ಕೈಜೋಡಿಸಿದ್ದಾರೆ. ಇಂದು, ಅಂದರೆ 21 ಆಗಸ್ಟ್ 2026ರ ವರಮಹಾಲಕ್ಷ್ಮೀ ಹಬ್ಬದ ದಿನ ಕರ್ನಾಟಕದಲ್ಲಿ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಆದರೆ, ಈಗಾಗಲೇ ಬಹುತೇಕ ಟಿಕೆಟ್ ಸೋಲ್ಡ್‌ಔಟ್ ಆಗಿದೆ.

ಬೆಂಗಳೂರಿನಲ್ಲಿ ಬಹುತೇಕ ಕಡೆ ಟಿಕೆಟ್‌ ಸೋಲ್ಡ್‌ ಔಟ್‌

ಟಾಕ್ಸಿಕ್ ಸಿನಿಮಾಗೆ ಅಡ್ವಾನ್ಸ್ ಬುಕಿಂಗ್ ಶುರುವಾದ ಬೆನ್ನಲ್ಲೇ, ಬೆಂಗಳೂರಿನಲ್ಲಿ ಬಹುತೇಕ ಕಡೆ ಟಿಕೆಟ್‌ ಸೋಲ್ಡ್‌ ಔಟ್‌ ಆಗಿದೆ ಎಂಬ ಮಾಹಿತಿ ಬಂದಿದೆ. ಬೆಂಗಳೂರಿನಲ್ಲಿರುವ ಮಲ್ಟಿಪ್ಲೆಕ್ಸ್​ಥಿಯೇಟರ್‌ಗಳಲ್ಲಿ ಮೊದಲ ದಿನದ ಬಹುತೇಕ ಪ್ರದರ್ಶನಗಳ ಎಲ್ಲಾ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಖಾಲಿಯಾಗಿವೆ. ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಕೂಡ ಟಿಕೆಟ್‌ಗಳು ಆಲ್‌ಮೋಸ್ಟ್‌ ಸೋಲ್ಡ್‌ಔಟ್ ಆಗಿದ್ದು, ಕೆಲವೇ ಕೆಲವು ಟಿಕೆಟ್‌ಗಳು ಲಭ್ಯವಿರಬಹುದು ಎನ್ನಲಾಗುತ್ತಿದೆ. ಒಟ್ಟಿನಲ್ಲಿ, ಮೊದಲ ದಿನವೇ ಮೊದಲ ಶೋ ನೋಡಲು ಕನ್ನಡ ಸಿನಿಪ್ರೇಕ್ಷಕರು ಕೂಡ ಮುಗಿಬಿದ್ದಿರುವುದು ಈ ಮೂಲಕ ಸ್ಪಷ್ಟವಾಗಿದೆ.

'ಬುಕ್‌ ಮೈ ಶೋ'ನಲ್ಲಿ ಗಂಟೆಗೆ 25 ಸಾವಿರಕ್ಕೂ ಅಧಿಕ ಟಿಕೆಟ್‌ ಸೇಲ್‌

ಬೆಂಗಳೂರಿನಲ್ಲಿ 'ಬುಕ್‌ ಮೈ ಶೋ'ನಲ್ಲಿ ಗಂಟೆಗೆ 25 ಸಾವಿರಕ್ಕೂ ಅಧಿಕ ಟಿಕೆಟ್‌ ಸೇಲ್‌ ಆಗಿದೆ ಎನ್ನಲಾಗಿದೆ. ಚೆನ್ನೈ, ಹೈದರಾಬಾದ್‌, ಕೊಚ್ಚಿಯಲ್ಲಿ ಇನ್ನೂ ಬುಕಿಂಗ್‌ ಆರಂಭವಾಗಿಲ್ಲ. ಆದರೆ, ಎಲ್ಲಾ ಕಡೆಯೂ ಟಾಕ್ಸಿಕ್ ಸಿನಿಮಾದ ಟಿಕೆಟ್‌ಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಅಡ್ವಾನ್ಸ್‌ ಬುಕಿಂಗ್ ಶುರವಾದ ತಕ್ಷಣ ಟಿಕೆಟ್ ಸೋಲ್ಡ್‌ಔಟ್ ಆಗುವುದು ಖಂಡಿತ. 4 ವರ್ಷಗಳಿಗೂ ಹೆಚ್ಚು ಕಾಲ ತೆರೆಯ ಮೇಲೆ ಕಾಣಿಸಿಕೊಂಡಿರದ ನಟ ರಾಕಿಂಗ್ ಸ್ಟಾರ್ ಯಶ್ ಅವರನ್ನು ನೋಡಲು ಅವರ ಫ್ಯಾನ್ಸ್ ಹಾಗೂ ಸಿನಿರಸಿಕರು ಅಪಾರ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.

ಇನ್ನೇನು ಕೇವಲ 05 ದಿನ ಬಾಕಿ! ಯಶ್ ನಟನೆ-ನಿರ್ಮಾಣದ 'ಟಾಕ್ಸಿಕ್' ಸಿನಿಮಾ ಇಡೀ ಜಗತ್ತಿನ ಪರದೆ ಮೇಲೆ 26 ಆಗಸ್ಟ್‌ 2026ರಂದು ರಾರಾಜಿಸಲಿದೆ. ಮೊದಲ ದಿನ ಮೊದಲ ಶೋ ನೋಡಿ ಪ್ರೇಕ್ಷಕರು ಏನಂತಾರೆ? ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಯಾವೆಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ! ಹಲವು ಪ್ರಶ್ನೆಗಳಿಗೆ ಉತ್ತರ ಆಗಷ್ಟ್‌ 26ರಂದೇ ಸಿಗಲಿದೆ!