70 ದಶಕಗಳಲ್ಲಿ ಸರಿಸುಮಾರು 400 ಸಿನಿಮಾಗಳಲ್ಲಿ ನಟಿಸಿದ್ದ ಜಾನಕಿ ಅವರ ಕಲಾಸೇವೆಗೆ ಅವರಿಗೆ 'ಪದ್ಮಶ್ರೀ' ಸೇರಿದಂತೆ ಹಲವು ಪ್ರಶಸ್ತಿ ಲಭಿಸಿವೆ. ಇದೀಗ ಈ ಹಿರಿಯ ಜೀವ ನಮ್ಮನ್ನಗಲಿದ್ದು, ಸಿನಿರಂಗದ ಅನೇಕ ಗಣ್ಯರು ಸೋಷಿಯಲ್ ಮೀಡಿಯಾಗಳಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.

Legendary actress Sowcar Janaki no more: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಖ್ಯಾತ ನಟಿ ಸಾಹುಕಾರ್ ಜಾನಕಿ ಇನ್ನಿಲ್ಲ

ಖ್ಯಾತ ನಟಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಹುಕಾರ್ ಜಾನಕಿ ಇನ್ನಿಲ್ಲ ಎಂಬ ಸುದ್ದಿ ಸಿನಿರಂಗವನ್ನು ಇದೀಗ ಅಪ್ಪಳಿಸಿದೆ. ಹಿರಿಯ ನಟಿ ಸಾಹುಕಾರ್ ಜಾನಕಿ ನಿಧನರಾಗಿದ್ದು, ಅವರಿಗೆ 95 ವರ್ಷ ವಯಸ್ಸಾಗಿತ್ತು. ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ಈ ಹಿರಿಯ ನಟಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

'ವರಮಹಾಲಕ್ಷ್ಮೀ' ಹಬ್ಬದ ದಿನವೇ ನಟಿ ಸಾಹುಕಾರ್ ಜಾನಕಿ ನಿಧನ

ಇಂದು, ಅಂದರೆ 21 ಆಗಸ್ಟ್ 2026ರ 'ವರಮಹಾಲಕ್ಷ್ಮೀ' ಹಬ್ಬದ ದಿನವೇ ನಟಿ ಸಾಹುಕಾರ್ ಜಾನಕಿ ನಿಧನರಾಗಿದ್ದಾರೆ. ತಮ್ಮ 95ನೇ ವಯಸ್ಸಿನಲ್ಲಿ ಹಿರಿಯ ನಟಿ‌ ಸಾಹುಕಾರ್ ಜಾನಕಿ‌ ನಿಧನರಾಗಿದ್ದು, ವಯೋಸಹಜ ಖಾಯಿಲೆಯಿಂದ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ.

1950 ರಲ್ಲಿ ನಂದಮೂರಿ ತಾರಕ್ ರಾಮರಾವ್ ಜೊತೆ 'ಸಾಹುಕಾರ್' ಸಿನಿಮಾದಲ್ಲಿ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಿದ್ದ ಕಾರಣಕ್ಕೆ ಮುಂದೆ ಈ ನಟಿಗೆ 'ಸಾಹುಕಾರ್' ಜಾನಕಿ ಎಂದೇ ಹೆಸರಾಗಿದೆ. ತಮಿಳು, ತೆಲುಗು ಹಾಗೂ ಕನ್ನಡದ ಬಹಳಷ್ಟು ಸಿನಿಮಾಗಳಲ್ಲಿ ಸಾಹುಕಾರ್ ಜಾನಕಿ ನಟಿಸಿದ್ದಾರೆ. ಕನ್ನಡದಲ್ಲಿ ಶಬ್ದವೇದಿ, ಅಭಿ, ಒಂದೇ ಗುರಿ, ಗೀತಾ, ಕುಲಪುತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ‌ ನಟನೆ ಮಾಡಿದ್ದಾರೆ ಈ ನಟಿ.

70 ದಶಕಗಳಲ್ಲಿ ಸರಿಸುಮಾರು 400 ಸಿನಿಮಾಗಳಲ್ಲಿ ನಟನೆ

70 ದಶಕಗಳಲ್ಲಿ ಸರಿಸುಮಾರು 400 ಸಿನಿಮಾಗಳಲ್ಲಿ ನಟಿಸಿದ್ದ ನಟಿ ಜಾನಕಿಯವರು. ಅಂದಿನ ಹೆಚ್ಚುಕಡಿಮೆ ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ಸಾಹುಕಾರ್ ಜಾನಕಿಯವರು ನಟಿಸಿದ್ದಾರೆ. ಈ ಕಾರಣದಿಂದಲೇ ಅವರಿಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ. ಜಾನಕಿ ಅವರ ಕಲಾಸೇವೆಗೆ ಅವರಿಗೆ 'ಪದ್ಮಶ್ರೀ' ಸೇರಿದಂತೆ ಹಲವು ಪ್ರಶಸ್ತಿ ಲಭಿಸಿವೆ. ಇದೀಗ ಈ ಹಿರಿಯ ಜೀವ ನಮ್ಮನ್ನಗಲಿದ್ದು, ಸಿನಿರಂಗದ ಅನೇಕ ಗಣ್ಯರು ಸೋಷಿಯಲ್ ಮೀಡಿಯಾಗಳಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.