Jio Plan : ಜಿಯೋ ಗ್ರಾಹಕರಿಗೆ ಬಂಪರ್ ಆಫರ್ ಸಿಗ್ತಿದೆ. ಅತಿ ಕಡಿಮೆ ಬೆಲೆಯಲ್ಲಿ ಅನಿಯಮಿತ 5ಜಿ ಡೇಟಾವನ್ನು ಜಿಯೋ ನಿಮಗೆ ನೀಡ್ತಿದೆ. ಈ ಪ್ಲಾನ್ ಏನು, ಕಂಡಿಷನ್ ಏನು ಎಂಬ ಮಾಹಿತಿ ಇಲ್ಲಿದೆ.

ಜಿಯೋ ಗ್ರಾಹಕರಿಗಾಗಿ ಪ್ರತಿ ದಿನ ನಾನಾ ಪ್ಲಾನ್ ಗಳನ್ನು ಜಾರಿಗೆ ತರ್ತಿರುತ್ತದೆ. ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಸಾಕಷ್ಟು ಪ್ಲಾನ್ ಗಳಿವೆ. ನಾವಿಂದು ಜಿಯೋದ 51 ರೂಪಾಯಿ ಪ್ಲಾನ್ ಬಗ್ಗೆ ನಿಮಗೆ ಮಾಹಿತಿ ನೀಡ್ತಿದ್ದೇವೆ.

4ಜಿ ಗ್ರಾಹಕರಿಗೆ ಬಂಪರ್

ನೀವು ಪ್ರಸ್ತುತ 4G ರೀಚಾರ್ಜ್ ಪ್ಯಾಕ್ ಬಳಸುತ್ತಿದ್ದು ಜಿಯೋದ ಈ ಪ್ಲಾನ್ ನಿಮಗೆ ಅನುಕೂಲ. 4ಜಿ ಬಿಟ್ಟು ನೀವು 5G ಬಳಸಲು ಬಯಸಿದ್ರೆ ನೀವು ಜಿಯೋದ 51 ರೂಪಾಯಿ ರೀಚಾರ್ಜ್ ಪ್ಯಾಕ್ ಖರೀದಿ ಮಾಡ್ಬಹುದು. ಜಿಯೋದ 51 ರೂಪಾಯಿ ರೀಚಾರ್ಜ್ 5G ಅನ್ಲಿಮಿಟೆಡ್ ಅಪ್ಗ್ರೇಡ್ ನೀಡುತ್ತದೆ. ಇದು 5G ನೆಟ್ವರ್ಕ್ನಲ್ಲಿ ಅನಿಯಮಿತ ಇಂಟರ್ನೆಟ್ ಪ್ರವೇಶವನ್ನು ಆನಂದಿಸಲು ನಿಮಗೆ ಅವಕಾಶ ನೀಡ್ತಿದೆ.

ಜಿಯೋದ 51 ರೂಪಾಯಿ ರೀಚಾರ್ಜ್ನಲ್ಲಿ ಗ್ರಾಹಕರಿಗೆ ಅನಿಯಮಿತ ವೈಸ್ ಕಾಲ್ ಸೌಲಭ್ಯ ಸಿಗ್ತಿಲ್ಲ. ಅಲ್ದೆ ಪ್ರತಿ ದಿನ ಯಾವುದೇ ಉಚಿತ ಎಸ್ ಎಂಎಸ್ ನಿಮಗೆ ಲಭ್ಯವಿಲ್ಲ. ನೀವು ಜಿಯೋದ ಈ ಪ್ಲಾನ್ ರಿಚಾರ್ಜ್ ಮಾಡ್ತೀರಿ ಅಂದ್ರೆ ನೀವು ಮೊದಲೇ ಜಿಯೋದ ಯಾವುದಾದ್ರೂ ಪ್ಲಾನ್ ಆಕ್ಟಿವ್ ಮಾಡಿರ್ಬೇಕು. ಆಗ್ಲೇ ನಿಮಗೆ 5ಜಿ ಅಪ್ಗ್ರೇಡ್ ಸಿಗಲಿದೆ.

ನೀವು ಜಿಯೋದ ಈ 5ಜಿ ಪ್ಲಾನ್ ಗೆ ಮೂವ್ ಆಗ್ತಿದ್ದೀರಿ ಅಂದ್ರೆ ಮೊದಲು ನಿಮ್ಮ ಮೊಬೈಲ್ ಚೆಕ್ ಮಾಡ್ಕೊಳ್ಳಿ. ನಿಮ್ಮ ಮೊಬೈಲ್ 5ಜಿಯಲ್ಲಿ ಕೆಲ್ಸ ಮಾಡುತ್ತಾ ಎಂಬುದನ್ನು ಪರೀಕ್ಷೆ ಮಾಡಿ. ಒಂದ್ವೇಳೆ ಹೌದು ಎಂದಾದ್ರೆ ಮಾತ್ರ ನೀವು ಇದನ್ನು ರಿಚಾರ್ಜ್ ಮಾಡಿ. ನಿಮ್ಮ ಮೊಬೈಲ್ 5ಜಿಗೆ ಸಪೋರ್ಟ್ ಮಾಡ್ತಿಲ್ಲ ಎಂದಾದ್ರೆ ಈ ಪ್ಲಾನ್ ನಿಮ್ಮ ಮೊಬೈಲ್ ನಲ್ಲಿ ವರ್ಕ್ ಆಗೋದಿಲ್ಲ. ಈ ಪ್ಲಾನ್ 4ಜಿ ಮತ್ತು 5ಜಿ ಮಿಶ್ರಣವಾಗಿದೆ. 3ಜಿಬಿ ಹೈ ಸ್ಪೀಡ್ 4ಜಿ ಡೇಟಾ ನಿಮಗೆ ಈ ಪ್ಲಾನ್ ನಲ್ಲಿ ಸಿಗ್ತಿದೆ. ನಂತ್ರ ಸ್ಪೀಡ್ 64ಕೆಬಿಪಿಎಸ್ ಆಗಲಿದೆ. ಬೇಸ್ ಪ್ಲಾನ್ ಆಧಾರದ ಮೇಲೆ ಪ್ಲಾನ್ ಅವಧಿ ನಿರ್ಧಾರವಾಗುತ್ತದೆ.