ಒಮ್ಮೆ ಚಾರ್ಜ್ ಮಾಡಿದರೆ ನಾಲ್ಕು ದಿನ ಟೆನ್ಶನ್ ಇಲ್ಲ, ಇನ್ನು 50ಎಂಪಿ ಕ್ಯಾಮೆರಾ, 12 ಜಿಬಿ RAM ಸೇರಿದಂತೆ ಹಲವು ವಿಶೇಷತೆಗಳ ರೆಡ್‌ಮಿ ನೋಟ್ 17 ಪ್ರೋ ನಾಳೆ ಭಾರತದಲ್ಲಿ ಬಿಡುಗಡೆಯಾಗುತ್ತಿದೆ.
ಬೆಂಗಳೂರು (ಸೆ.14) ಭಾರತದ ಮಾರುಕಟ್ಟೆಗೆ ಇದೀಗ ರೆಡ್‌ಮಿ ನೋಟ್ 17 ಪ್ರೋ ಫೋನ್ ಲಾಂಚ್ ಆಗುತ್ತಿದೆ. ವಿಶೇಷ ಅಂದರೆ ಐಫೋನ್ ರೀತಿಯ ಫೀಚರ್, ಕ್ವಾಲಿಟಿ ಅತೀ ಕಡಿಮೆ ಬೆಲೆಯಲ್ಲಿ ರೆಡ್‌ಮಿ ನೋಟ್ ನೀಡುತ್ತಿದೆ. ಬರೋಬ್ಬರಿ 10,000mAh ಬ್ಯಾಟರಿ ನೀಡಲಾಗಿದೆ. ಒಂದು ದಿನ ಚಾರ್ಜ್ ಮಾಡಿದರೆ ಸಾಕು ನಾಲ್ಕು ದಿನ ಚಾರ್ಜಿಂಗ್ ನಿಲ್ಲಲಿದೆ. ಇನ್ನು ಅತ್ಯುತ್ತಮ ಕ್ವಾಲಿಟಿ ಫೋನ್ ಸೇರಿದಂತೆ ಹಲವು ವಿಶೇಷತೆಗಳ ರೆಡ್‌ಮಿ ನೋಟ್ 17 ಪ್ರೋ ನಾಳೆ (ಸೆ.15) ಭಾರತದಲ್ಲಿ ಲಾಂಚ್ ಆಗುತ್ತಿದೆ.
ರೆಡ್‌ಮಿ ನೋಟ್ 17 ಪ್ರೋ ಬೆಲೆ
ಹೊಸ ರೆಡ್‌ಮಿ ನೋಟ್ 17 ಪ್ರೋ ಅತ್ಯಂತ ಆಕರ್ಷಕ ವಿನ್ಯಾಸದಲ್ಲಿದೆ. ಡ್‌ಮಿ ನೋಟ್ 17 ಪ್ರೋ ಫೋನ್ ಬೆಲೆ 40,000 ರೂಪಾಯಿ. ಇನ್ನು ಡ್‌ಮಿ ನೋಟ್ 17 ಪ್ರೋ ಮ್ಯಾಕ್ಸ್ ಫೋನ್ ಬೆಲೆ 47,999 ರೂಪಾಯಿ. ಇತರ ಐಫೋನ್ ಸೇರಿದಂತೆ ಇತರ ಫೋನ್‌ಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಬೆಲೆಯ ಫೋನ್ ಆಗಿದೆ. ವಿಶೇಷ ಅಂದರೆ ಗರಿಷ್ಠ ಎಲ್ಲಾ ಫೀಚರ್ಸ್ ಈ ಫೋನ್‌ನಲ್ಲಿದೆ.
ರೆಡ್‌ಮಿ ನೋಟ್ 17 ಪ್ರೋ ಮ್ಯಾಕ್ಸ್ ಫೋನ್ ಕ್ವಾಲ್ಕಾಂ ಸ್ನಾಪ್‌ಡ್ರಾಗನ್ 6 ಜೆನರೇಶನ್ 5 ಪ್ರೊಸೆಸರ್ ಹೊಂದಿದೆ. ಇನ್ನು ಬರೋಬ್ಬರಿ 12ಜಿಬಿ LPDDR5X RAM ಹಾಗೂ 512 ಜಿಬಿ ಸ್ಟೋರೇಜ್ ಹೊಂದಿದೆ. ಹೀಗಾಗಿ ಫೋನ್ ಹ್ಯಾಂಗ್ ಸಮಸ್ಯೆ, ಸ್ಪೀಡ್ ಸಮಸ್ಯೆಗಳಿಲ್ಲ. ಸುಲಭವಾಗಿ ಹ್ಯಾಂಡಲ್ ಮಾಡಲು ಸಾಧ್ಯವಿದೆ. TUV SUD 5 ಸ್ಟಾರ್ ಟೈಟಾನ್ ಕ್ವಾಲಿಟಿ ಸರ್ಟಿಫಿಕೇಶನ್ ಸಪೋರ್ಟ್, 6.83 ಇಂಚಿನ 1.5ಕೆ AMOLED ಡಿಸ್‌ಪ್ಲೇ, 120Hz ರೀಫ್ರೆಶ್ ರೇಟ್, 3,500nits ಬ್ರೈಟ್‌ನೆಸ್ ಹಾಗೂ ಗೋರಿಲ್ಲಾ ಗ್ಲಾಸ್ ವಿಕ್ಟಸ್ 2 ಪ್ರೊಟೆಕ್ಷನ್ ಲಭ್ಯವಿದೆ.
ಕ್ವಾಲಿಟಿ ಕ್ಯಾಮೆರಾ
ಸೀಕ್ರೆಟ್ ಸನ್‌ರೈಸ್ ಕಲರ್ ಫೋನ್ ಶೋಕೇಸ್ ಮಾಡಲಾಗಿದೆ. ಇನ್ನು ಲ್ಯಾವೆಂಡರ್ ಸೇರಿದಂತೆ ಕೆಲ ಸ್ಟಾಂಡರ್ಡ್ ಕಲರ್ ಆಯ್ಕೆಗಳು ಇರಲಿದೆ. ಪ್ರೋ ಹಾಗೂ ಪ್ರೋ ಮ್ಯಾಕ್ಸ್ ಎರಡೂ ಫೋನ್‌ಗಳು ಸ್ಕ್ವಾರ್ ಶೇಪ್ ಕ್ಯಾಮೆರಾ ಇರಲಿದೆ. ಎರಡು ಸೆನ್ಸಾರ್ ಹಾಗೂ ಫ್ಲಾಶ್ ಇರಲಿದೆ. 50 ಎಂಪಿ ಕ್ಯಾಮೆರಾ ಅತ್ಯಂತ ಕ್ವಾಲಿಟಿ ಫೋಟೋ ಹಾಗೂ ವಿಡಿಯೋ ತೆಗೆಯಲು ನರೆವಾಗುತ್ತದೆ. ಜೊತೆಗೆ ಎಐ ನೆರವು ಇರಲಿದೆ


