ಖ್ಯಾತ ನಟ, ನಿರ್ದೇಶಕ, ಸಾಹಿತಿ ಟಿ.ಎನ್.ಸೀತಾರಾಮ್ ಬರೆದ 'ನೆನಪಿನ ಪುಟಗಳು' ಕೃತಿ ಲೋಕಾರ್ಪಣೆಗೊಳ್ಳುತ್ತಿದೆ. ಕಿರುತೆರೆ, ಸಿನಿಮಾ, ರಂಗಭೂಮಿ, ರಾಜಕೀಯ, ಪತ್ರಿಕೋದ್ಯಮ, ಸಾಹಿತ್ಯ, ವಕೀಲಿಕೆ ಹೀಗೆ ವಿವಿಧ ರಂಗಗಳಲ್ಲಿ ಕೆಲಸ ಮಾಡಿದ ಕನ್ನಡದ ಸಾಕ್ಷಿಪ್ರಜ್ಞೆ ಎಂಬಂತಿರುವ ಟಿಎನ್ನೆಸ್ ಅವರ ಬದುಕಿನ ಪುಟಗಳು ಅನಾವರಣಗೊಂಡಿರುವ ಪುಸ್ತಕ ಇದು. ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಆ ಕೃತಿಯ ಒಂದು ಅಧ್ಯಾಯ ಇಲ್ಲಿದೆ.