MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • ಹಸಿರೊಡಲ ಭೂಮಿ, ಧುಮ್ಮಿಕ್ಕುವ ಜಲಪಾತ; 2024ರಲ್ಲಿ ನೋಡಲೇಬೇಕಾದ ಜಾಗಗಳಿವು

ಹಸಿರೊಡಲ ಭೂಮಿ, ಧುಮ್ಮಿಕ್ಕುವ ಜಲಪಾತ; 2024ರಲ್ಲಿ ನೋಡಲೇಬೇಕಾದ ಜಾಗಗಳಿವು

21ನೇ ಶತಮಾನದಲ್ಲಿ 23 ವರ್ಷಗಳನ್ನು ಮುಗಿಸಿ, ಇದೀಗ 24ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಹೊಸ ವರ್ಷದಲ್ಲಿ ಕ್ಯಾಲೆಂಡರ್‌ ಅಷ್ಟೇ ಅಲ್ಲದೇ ಜೀವನದ ಹಾದಿಯೂ ಬದಲಾಗುವಂತಾಗಲಿ. ಹೊಸ ವರ್ಷದಲ್ಲಿ ಕರ್ನಾಟಕದಲ್ಲಿ ನೋಡಲೇಬೇಕಾದ  ಕೆಲವು ಸ್ಥಳಗಳ ಮಾಹಿತಿ ಇಲ್ಲಿದೆ.

1 Min read
Vinutha Perla
Published : Jan 01 2024, 04:54 PM IST| Updated : Jan 01 2024, 04:57 PM IST
Share this Photo Gallery
  • FB
  • TW
  • Linkdin
  • Whatsapp
110

ಬಿಳಿಗಿರಿರಂಗನ ಬೆಟ್ಟ:
ಚಾಮರಾಜನಗರ ಜಿಲ್ಲೆಯಲ್ಲಿರುವ ಈ ಬೆಟ್ಟ ಪ್ರವಾಸಿಗರಿಗೆ ವಿಭಿನ್ನ ಅರಣ್ಯಗಳ ಪರಿಸರವನ್ನು ಒಂದೇ ಕಡೆ ನೋಡುವ ಅವಕಾಶವನ್ನು ಒದಗಿಸುತ್ತದೆ. ಬೆಟ್ಟದ ಮೇಲಿನ ವಿಹಂಗಮ ನೋಟ ಮತ್ತು ಕಾಡು ಪ್ರಾಣಿಗಳು ಸುಂದರ ಅನುಭವವನ್ನು ನೀಡುತ್ತವೆ.

210

ಅಂತರಗಂಗೆ:
ಕೋಲಾರ ಜಿಲ್ಲೆಯಲ್ಲಿರುವ ಈ ಬೆಟ್ಟದಲ್ಲಿ ವರ್ಷವಿಡೀ ಹರಿಯುವ ನೀರಿನಿಂದಾಗಿ ಇದು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಅಲ್ಲದೇ ಬೆಟ್ಟದ ಮೇಲೆ ಜ್ವಾಲಾಮುಖಿ ನಿರ್ಮಿತ ಬಂಡೆಗಳು ಮತ್ತು ಗುಹೆಗಳಿವೆ.

310

ಗೋಲಗುಮ್ಮಟ:
ಇಂಡೋ ಸಾರ್ಸೆನಿಕ್‌ ಶೈಲಿಯಲ್ಲಿ ರಚನೆಯಾಗಿರುವ ಈ ಕಟ್ಟಡ ಪುರಾತತ್ವ ವಾಸ್ತುಶಾಸ್ತ್ರ, ರೇಖಾಗಣಿತ ಮತ್ತು ಶಬ್ಧ ವಿಜ್ಞಾನಕ್ಕೆ ಉತ್ತಮ ಉದಾಹರಣೆ. ಇದು ಬಿಜಾಪುರ ಜಿಲ್ಲೆಯಲ್ಲಿದೆ.

410

ಹೆಬ್ಬೆ ಜಲಪಾತ:
ಚಿಕ್ಕಮಗಳೂರು ಜಿಲ್ಲೆಯ ಭದ್ರಾ ವನ್ಯಜೀವಿ ತಾಣದೊಳಗಿರುವ ಹೆಬ್ಬೆ ಜಲಪಾತದಲ್ಲಿ ನೀರು 550 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ದಟ್ಟ ಕಾಡಿನ ನಡುವಿನ ಜಲತಾಣ ನೋಡುಗಣ ಮನತಣಿಸುತ್ತದೆ.

510

ಗೋಕಾಕ್‌ ಜಲಪಾತ:
ವಿಶ್ವಪ್ರಸಿದ್ಧ ನಯಾಗರ ಜಲಪಾತದ ಪ್ರತಿರೂಪು ಎಂದೇ ಬಣ್ಣಿಸಲ್ಪಡುವ ಗೋಕಾಕ್‌ ಜಲಪಾತ ಬೆಳಗಾವಿ ಜಿಲ್ಲೆಯಲ್ಲಿದ್ದು, ಇಲ್ಲಿ 171 ಅಡಿ ಎತ್ತರದಿಂದ ನೀರು ಧುಮ್ಮಿಕ್ಕುತ್ತದೆ.

610

ಚೋರ್ಲಾ ಘಾಟ್‌:
ಇದು ಗೋವಾ, ಮಹಾರಾಷ್ಟ್ರ ಮತ್ತ ಕರ್ನಾಟಕದ ಗಡಿ ಪ್ರದೇಶದಲ್ಲಿದ್ದು, ದಟ್ಟವಾದ ಅರಣ್ಯ ಪ್ರದೇಶಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ದಟ್ಟ ಅಡವಿ ಪ್ರವಾಸಿಗರಿಗೆ ನೈಸರ್ಗಿಕ ಸೌಂದರ್ಯವನ್ನು ಉಣಬಡಿಸುತ್ತದೆ.

710

ಅಣ್ಣಿಗೇರಿ ಅಮೃತೇಶ್ವರ ದೇಗುಲ:
ಧಾರವಾಡ ಜಿಲ್ಲೆಯಲ್ಲಿನ ಅಣ್ಣಿಗೇರಿಯಲ್ಲಿರುವ ಈ ದೇಗುಲ ಕರ್ನಾಟದಲ್ಲಿ ಬಳಪದ ಕಲ್ಲಿನಿಂದ ಕಟ್ಟಿದ ಮೊದಲ ದೇಗುಲವಾಗಿದೆ. 1050ರಲ್ಲಿ ನಿರ್ಮಾಣವಾದ ಈ ದೇಗುಲ ರಾಜ್ಯದ ಪ್ರಸಿದ್ಧ ಜೈನ ದೇವಾಲಯವಾಗಿದೆ.

810

ಮರವಂತೆ ಬೀಚ್‌:
ಉಡುಪಿ ಜಿಲ್ಲೆಯ ಈ ಸಮುದ್ರ ತೀರ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಒಂದು ಭಾಗದಲ್ಲಿ ಸಮುದ್ರ ಮತ್ತೊಂದು ಭಾಗದಲ್ಲಿ ಸೌಪರ್ಣಿಕಾ ನದಿ ಇದೆ.

910

ಕವಿಶೈಲ ಕುಪ್ಪಳ್ಳಿ
ರಾಷ್ಟ್ರಕವಿ ಕುವೆಂಪು ಅವರ ಪೂರ್ವಜರ ಮನೆ ಇರುವ ಕುಪ್ಪಳ್ಳಿ ಶಿವಮೊಗ್ಗ ಜಿಲ್ಲೆಯಲ್ಲಿದೆ. ಇದನ್ನು ಇದೀಗ ನವೀಕರಣ ಮಾಡಲಾಗಿದ್ದು, ಇದೀಗ ಸ್ಮಾರಕವಾಗಿ ಪರಿವರ್ತಿಸಲಾಗಿದೆ

1010

ನರಸಿಂಹ ಝರನಿ
ಇದು ಬೀದರ್‌ ಜಿಲ್ಲೆಯಲ್ಲಿರುವ ಗುಹಾಂತರ ದೇವಾಲಯವಾಗಿದ್ದು, ಸೊಂಟದವರೆಗೆ ಮುಳುಗುವ ನೀರಿನಲ್ಲಿ ನಡೆಯುತ್ತಾ ಹೋಗಿ ಇಲ್ಲಿ ದೇವರ ದರ್ಶನ ಮಾಡಬೇಕು.

About the Author

VP
Vinutha Perla
ಪ್ರವಾಸ
ಪ್ರವಾಸೋದ್ಯಮ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved