Asianet Suvarna News Asianet Suvarna News

ನಾನು, ನನ್ನ ಡ್ರಮ್ಸ್‌; ಡ್ರಮ್ಮರ್ ಮಂಜುನಾಥ್‌ ಬದುಕಿನ ಕಥನ

'ಮಂಜು ಡ್ರಮ್ಸ್ ಕಲೆಕ್ಟಿವ್' ಮೂಲಕ ಸಂಗೀತ ಜಗತ್ತಿನಲ್ಲಿ ಜನಪ್ರಿಯರಾಗುತ್ತಿರುವ ಬೆಂಗಳೂರಿನ ಈ ಡ್ರಮ್ಮರ್ ಅನೇಕ ಸಂಗೀತ ದಿಗ್ಗಜರಿಂದ ಶಹಭಾಸ್ ಅನಿಸಿಕೊಂಡು ಇದೀಗ ಜಗತ್ತಿನ ಗಮನ ಸೆಳೆಯುತ್ತಿದ್ದಾರೆ. ಅವರ ಮಾತಿನಲ್ಲಿಯೇ ಅವರ ಸಂಗೀತ ಪಯಣದ ಮೆಲಕು.

Me My Drums; Life story of drummer Manjunath Vin
Author
First Published Nov 26, 2023, 1:12 PM IST

ಮನೆಯ ಗೋಡೆಗೆ ಕಿವಿ ಆನಿಸಿ ನಿಲ್ಲುತ್ತಿದ್ದೆ, ಲಯಬದ್ಧವಾದ ಡ್ರಮ್ಸ್ ಬೀಟ್ಸ್ ನನ್ನನ್ನು ನಿಂತಲ್ಲಿಂದ ಕದಲಲು ಬಿಡುತ್ತಿರಲಿಲ್ಲ. ನನ್ನ ಈ ಹೊಸ ಅಭ್ಯಾಸ ನೋಡಿ ಅಮ್ಮನಿಗೆ ಏನನಿಸಿತೋ, 'ಆದ್ಯಾಕೆ ಅಲ್ಲಿ ನಿಂತು ಕೇಳೀಯಾ, ಬಾ ಇಲ್ಲಿ' ಎಂದು ಆ ಡ್ರಮ್ ಧ್ವನಿ ಬರುತ್ತಿದ್ದ ಪಕ್ಕದ ಮನೆಗೆ ಕರೆದೊಯ್ದರು. ಡ್ರಮ್ಸ್ ಗುರು ಬಿ ಎಸ್ ಕುಮಾ‌ರ್ ಅವರನ್ನು ನಾನು ಮೊದಲ ಬಾರಿ ಭೇಟಿಯಾಗಿದ್ದು ಹೀಗೆ. ಆಗ ನನಗೆ ಹನ್ನೊಂದು ವರ್ಷ, 'ಕ್ಲಾಸಿಗೆ ಸೇರ್ಕೊಳ್ತಿಯೇನೋ?' ಅಂದರು. ತಲೆಯಾಡಿಸಿದೆ. ಔಪಚಾರಿಕ ಕಲಿಕೆ ಹೀಗೆ ಶುರುವಾಯ್ತು.

* ಇದಕ್ಕೂ ಮೊದಲು ನಾನು ಓದುತ್ತಿದ್ದ ಸ್ಕೂಲಲ್ಲಿ ಮಾರ್ಚ್‌ ಫಾಸ್ಟ್ ವೇಳೆ ಸೈಡ್ ಡ್ರಮ್ಸ್ ನುಡಿಸುತ್ತಿದ್ದೆ. ಅದನ್ನು ಶಿಕ್ಷಕರು ಹೊಗಳುತ್ತಿದ್ದರು. ರಿದಂ ಜೊತೆಗೆ ಡ್ರಮ್ ಸ್ಟಿಕ್‌ನಲ್ಲಿ ಕೈ ಚಳಕ ತೋರಿಸುತ್ತಿದ್ದದ್ದು ಮಕ್ಕಳಿಗೆ ಖುಷಿ ಕೊಡುತ್ತಿತ್ತು.

ನೈಟ್‌ ಕ್ಲಬ್‌ಗಳಲ್ಲಿ ಶೋ ನೀಡುತ್ತಿದ್ದ ಗಾಯನ ಲೋಕದ ಕ್ವೀನ್‌, ಈಕೆಯ ಧ್ವನಿ ಮ್ಯಾಚ್‌ ಮಾಡೋರೇ ಇಲ್ಲ!

* ಮೊದಲು ಡ್ರಮ್ಸ್ ಅನ್ನು ಆಸಕ್ತಿಯಿಂದ ನೋಡಿದ್ದು ಡಿಡಿ ಚಂದನದಲ್ಲಿ, ಆಗ ಎರಡನೇ ಕ್ಲಾಸಿನಲ್ಲಿದ್ದೆ. ಎ ಆರ್ ರೆಹಮಾನ್ ಅವರ ಕಾನ್ಸರ್ಟ್, ಅದರಲ್ಲಿ ವಿಚಿತ್ರ ವೇಷಭೂಷಣದ ವ್ಯಕ್ತಿಯೊಬ್ಬ ಲೀಲಾಜಾಲವಾಗಿ ಡ್ರಮ್ಸ್ ನುಡಿಸೋದನ್ನು ಬೆರಗಾಗಿ ನೋಡಿದ್ದೆ. ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಡ್ರಮ್ ಮಾಂತ್ರಿಕ ಶಿವಮಣಿ ಅಂತ ಆಮೇಲೆ ತಿಳಿಯಿತು. ನನ್ನ ಸಂಗೀತ ಕಲಿಕೆಯ ಒಂದು ಹಂತದಲ್ಲಿ ನನಗೆ ಎ ಆರ್‌ರೆಹಮಾನ್ ಸ್ಫೂರ್ತಿಯಾದರು. ಇಂದು ಈ ಮಟ್ಟಿಗೆ ಬೆಳೆದಿದ್ದೇನೆ ಅಂದರೆ ಅದಕ್ಕೆ ಅವರ ಪ್ರೇರಣೆಯೂ ಇದೆ. 2

* ಹದಿನಾಲ್ಕರ ಹರೆಯದಲ್ಲಿ ನಮ್ಮ ಡ್ರಮ್ಸ್ ಟೀಚರ್‌ಗೆ ಕಾರ್ಯಕ್ರಮಗಳಲ್ಲಿ ಸಾಥ್ ಕೊಟ್ಟಿದ್ದೆ. ಮುಂದೆ ಸಾಕಷ್ಟು ಮಂದಿ ಈ ಕ್ಷೇತ್ರದ ಸಾಧಕರಿಗೆ ಕಾರ್ಯಕ್ರಮಗಳಲ್ಲಿ ಅಸಿಸ್ಟ್ ಮಾಡಿದ್ದೆ.

* ಬಹಳ ಅವಿಸ್ಮರಣೀಯ ಅನಿಸುವ ಕ್ಷಣ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಕಾರ್ಯಕ್ರಮಕ್ಕೆ ಸ್ವತಂತ್ರವಾಗಿ ಡ್ರಮ್ಸ್ ನುಡಿಸಿದ್ದು, ಆಗ ನನಗೆ 23ರ ಹರೆಯ. ಎಸ್‌ಪಿಬಿ ಅವರ ಕಾರ್ಯಕ್ರಮಗಳ ಡ್ರಮ್ಮರ್ಸ್‌ಗಳಿಗೆಲ್ಲ ಆಸಿಸ್ಟೆಂಟ್ ಆಗಿದ್ದವನು ಹೀಗೆ ಸ್ವತಂತ್ರ್ಯವಾಗಿ ಅವರಿಗೆ ಡ್ರಮ್ಸ್ ನುಡಿಸುತ್ತೇನೆಂದು ಕನಸು ಮನಸ್ಸಲ್ಲೂ ಅಂದುಕೊಂಡಿರಲಿಲ್ಲ. ಕಾನ್ಸರ್ಟ್‌ ಗೂ ಮೊದಲಿನ ಮೂರು ದಿನ ಹಗಲಿರುಳೂ ಪ್ರಾಕ್ಟಿಸ್, ಮಾತನ್ನೇ ಮರೆತವನ ಹಾಗಿದ್ದೆ.

ಕೇರಳದ ಗಡಿನಾಡಿನ 'ಗೋಕುಲಂ' ಗೋಶಾಲೆಯಲ್ಲಿ ಸಂಗೀತಕ್ಕೆ ತಲೆದೂಗುವ ಗೋವುಗಳು

ಅಂದಿನ ಕಾರ್ಯಕ್ರಮದಲ್ಲಿ ಎಸ್‌ ಪಿಬಿ ಅವರು ಆಡಿದ ಮಾತು ಇವತ್ತೂ ಕಿವಿಯಲ್ಲಿ ಅನುರಣಿಸಿದ ಹಾಗಿದೆ - 'ನನ್ನ ಮಗ ಶಿವಮಣಿ (ಎಸ್‌ಪಿಬಿ ಶಿವಮಣಿ ಅವರನ್ನು ಮಗ ಅಂತಲೇ ಕರೆಯುತ್ತಿದ್ದರು) ಮೊದಲ ಬಾರಿ ನನ್ನ ಕಾನ್ಸರ್ಟ್‌ ನಲ್ಲಿ ಡ್ರಮ್ಸ್ ನುಡಿಸಿದಾಗ ಆತನಿಗೆ 22 ವರ್ಷ, ಅವನಿಗೆ ಆಗ ಇದ್ದ ಕುತೂಹಲ, ಆಎನರ್ಜಿ ಈಗಈ ಹುಡುಗನಲ್ಲಿ ನೋಡುತ್ತಿದ್ದೇನೆ" ಅಂದಿದ್ದರು. ಸ್ವತಂತ್ರ ಡ್ರಮ್ಮರ್‌ಆಗಿ ಮೊದಲ ಸಲ ಡ್ರಮ್ಸ್ ನುಡಿಸಿದ್ದು ಎಸ್‌ಪಿಬಿ ಅವರಿಗೆ. 2020ರ ಜ.19ರಂದು ಕೊನೆಯ ಬಾರಿ ಅವರ ಕನ್ಸರ್ಟ್‌ಗೆ ಡ್ರಮರ್ ಆಗಿದ್ದೆ.

* ಇದಾಗಿ ನನಗೆ ಅವಕಾಶಗಳು ಬರುತ್ತಲೇ ಹೋದವು. ಸ್ವತಂತ್ರ ಡ್ರಮ್ಸ್ ವಾದಕನಾಗಿ ದೇಶ ವಿದೇಶಗಳಲ್ಲಿ ನೂರಾರು ಕಾರ್ಯಕ್ರಮ ನೀಡಿದೆ. ಪ್ರಸಿದ್ಧ ಪಾಕಿಸ್ತಾನಿ ಸೂಫಿ ಬ್ಯಾಂಡ್ 'ಜುನೂನ್'ಗೆ ರಿಹರ್ಸಲ್ ಕೂಡ ಇಲ್ಲದೇ ಡ್ರಮ್ ನುಡಿಸಿದ್ದು ವಿಭಿನ್ನ ಅನುಭವ ಅನೇಕ ಸಿನಿಮಾಗಳಿಗೆ ಕೆಲಸ ಮಾಡಿದೆ. ಅರ್ಜುನ್ ಜನ್ಯಾ, ಗುರುಕಿರಣ್ ಅವರಂಥಾ ಸಂಗೀತ ನಿರ್ದೇಶಕರ ಚಿತ್ರಗಳಿಗೆ ಬ್ಯಾಗೌಂಡ್ ಸ್ಕೋರ್ ಮಾಡಿದೆ. 'ಎಕ್ಸ್‌ಪೋ 2020 - ದುಬೈ' ವಿಶ್ವಾದ್ಯಂತದ ಸಂಗೀತ ಜಗತ್ತಿನ 52 ಮಂದಿ ಪ್ರತಿಭೆಗಳನ್ನು ಆಯ್ಕೆಮಾಡಲಾಗಿತ್ತು. ಭಾರತವನ್ನು ನಾನು ಪ್ರತಿನಿಧಿಸಿದ್ದೆ.

ಇಷ್ಟೆಲ್ಲ ಮಾಡಿದರೂ ನನಗೆ ಸ್ವತಂತ್ರವಾಗಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವ ಹಂಬಲ, ಡ್ರಮ್‌ ನಲ್ಲೇ ಅಲ್ಲಂ ತರಬೇಕು ಅನ್ನುವ ಬಯಕೆ. ಉಳಿದಂತೆ ಬಹಿರ್ಮುಖವಾಗಿ ಒಂದಿಷ್ಟು ಕಲಿತಿದ್ದೇನೆ. ಅಂತರ್ಮುಖಿಯಾಗಿ ಸಾಕಷ್ಟು ಕಲಿಕೆ ಆಗಬೇಕಿದೆ. ತಾಲ್‌ಯೋಗಿ ಎಂದೇ ಖ್ಯಾತರಾದ ಗುರು ಪಂ.ಸುರೇಶ್ ಅವರಲ್ಲಿ ಗುರುಕುಲ ಮಾದರಿಯ ಸಂಗೀತ ಶಿಕ್ಷಣ ಪಡೆದಿದ್ದೇನೆ. ಈ ರೀತಿಯ ಕಲಿಕೆ, ಬಳಿಕ ಸಾಧನೆ* ಮುಂದುವರಿಯಬೇಕಿದೆ.

Follow Us:
Download App:
  • android
  • ios