Asianet Suvarna News Asianet Suvarna News

2023 ಹೇಗೋ ಮುಗ್ದೇ ಹೋಯ್ತಲ್ಲ..2024ರಲ್ಲಾದ್ರೂ ಈ ಒಳ್ಳೆ ಕೆಲ್ಸ ಮಾಡಿ

ಹೊಸ ವರ್ಷ ಬಂದಾಗ ಪ್ರತಿಯೊಬ್ಬರೂ ಹಲವು ಹೊಸ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಬಹುತೇಕರು ಇದನ್ನು ಪಾಲಿಸುವುದು ಕಡಿಮೆ. ಆದರೆ 2024ರಲ್ಲಿ ನೀವು ಮಾಡಲೇಬೇಕಾದ ಕೆಲವು ಕೆಲಸಗಳಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

Good Things that you can do in New year 2024, which will also make you happy Vin
Author
First Published Jan 1, 2024, 2:53 PM IST

1. ಎಲ್ಲರನ್ನೂ ಗೌರವಿಸಿ: ಬದುಕಿನಲ್ಲಿ ಸಿಗುವ ಪ್ರತಿಯೊಬ್ಬರಿಗೂ ಗೌರವ ನೀಡಿ. ಯಾವುದೇ ಕಾರಣಕ್ಕೂ ಯಾರಿಗೂ ಬೇದಭಾವ ಮಾಡದೇ, ಹಿರಿಯರು- ಕಿರಿಯರು ಎನ್ನದೇ ಗೌರವ ನೀಡಲು ಆರಂಭಿಸಿ.

2. ಪಾದಚಾರಿಗಳಿಗೆ ರಸ್ತೆ ಬಿಡಿ: ಪಾದಚಾರಿಗಳು ರಸ್ತೆ ದಾಟಲು ಅನುವು ಮಾಡಿಕೊಡಿ, ಝೀಬ್ರಾ ಕ್ರಾಸಿಂಗ್‌ ಬಳಿ ವೇಗವಾಗಿ ವಾಹನ ಚಲಾಯಿಸದೇ ಸಂಚಾರಿ ನಿಯಮ ಪಾಲಿಸುವ ಮೂಲಕ ಸಂತೋಷ ಹಂಚಿರಿ.

3. ಪ್ರಜ್ಞಾವಂತರಾಗಿ: ಆಧುನಿಕ ಪ್ರಪಂಚದಲ್ಲಿ ಬುದ್ಧಿವಂತರ ಸಂಖ್ಯೆ ಹೆಚ್ಚಳವಾಗುತ್ತಿದೆಯೇ ಹೊರತು, ಪ್ರಜ್ಞಾವಂತರ ಸಂಖ್ಯೆ ಕ್ಷೀಣಿಸುತ್ತಿದೆ. ಹೀಗಾಗಿ ಪ್ರಜ್ಞಾವಂತರಾಗುವತ್ತ ಗಮನ ಹರಿಸಿ.

4. ಮೊಬೈಲ್‌ ಗೀಳಿಗೆ ಬ್ರೇಕ್‌ ಹಾಕಿ: ರೀಲ್ಸ್‌ ಗೀಳಿನಿಂದಾಗಿ ಇತ್ತೀಚಿಗೆ ಮೊಬೈಲ್‌ಗೆ ಅಂಟಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ. ಈ ವರ್ಷವಾದರೂ ಮೊಬೈಲ್‌ ಗೀಳಿಗೆ ಬ್ರೇಕ್‌ ಹಾಕಿ ನೆರೆಹೊರೆಯವರೊಂದಿಗೆ ಬೆರೆಯಿರಿ.

New Year 2024: ಹೊಸ ವರ್ಷದ ಮೊದಲ ದಿನ ತಪ್ಪದೇ ಈ ಕೆಲಸ ಮಾಡಿ!

5. ಪ್ರೀತಿಸುವುದನ್ನು ಕಲಿಯಿರಿ: ಇತ್ತೀಚಿನ ದಿನಗಳಲ್ಲಿ ಜಾಲತಾಣಗಳಿಂದಾಗಿ ಸಮಾಜದಲ್ಲಿ ದ್ವೇಷದ ಪ್ರಮಾಣ ಹೆಚ್ಚಾಗುತ್ತಿದೆ. ಹೀಗಾಗಿ ವದಂತಿಗಳಿಗೆ ಕಿವಿಗೊಡದೇ ಎಲ್ಲರನ್ನೂ ಪ್ರೀತಿಸುವುದನ್ನು ಕಲಿಯಿರಿ.

6. ಹೊಸದೇನಾದರೂ ಕಲಿಯಿರಿ: ವೇಗವಾಗಿ ಓಡುತ್ತಿರುವ ಈ ಪ್ರಪಂಚದಲ್ಲಿ ಎಷ್ಟು ಕೌಶಲ್ಯಗಳಿದ್ದರೂ ಅದು ಕಡಿಮೆಯೇ ಹೀಗಾಗಿ ಹೊಸದೇನಾದರೂ ಕಲಿಯಿರಿ. ಇದು ಬದುಕಲ್ಲಿ ಒಮ್ಮೆ ನಿಮ್ಮ ಕೈ ಹಿಡಿಯಬಹುದು.

7. ಹವ್ಯಾಸಗಳಿಗೆ ಹೆಚ್ಚು ಸಮಯ ಕೊಡಿ: ನಿಮ್ಮನ್ನು ಜೀವನದಲ್ಲಿ ಸದಾ ಸಂತೋಷವಾಗಿಡುವುದು ನಿಮ್ಮ ಹವ್ಯಾಸಗಳೇ ಆಗಿವೆ. ಹೀಗಾಗಿ ಬಿಡುವಿಲ್ಲದ ಪ್ರಪಂಚದಲ್ಲಿ ನಿಮ್ಮ ಹವ್ಯಾಸಗಳಿಗೆ ಹೆಚ್ಚಿನ ಸಮಯ ಕೊಡಿ.

8. ರೆಸೆಲ್ಯೂಶನ್‌ಗಳನ್ನು ಪಾಲಿಸಿ: ಪ್ರತಿಬಾರಿಯೂ ಹೊಸ ವರ್ಷಕ್ಕೆ ರೆಸೆಲ್ಯೂಶನ್‌ಗಳನ್ನು ಮಾಡಿಕೊಳ್ಳುತ್ತೇವೆ. ಈ ಬಾರಿಯಾದರೂ ತಪ್ಪದೇ ರೆಸೆಲ್ಯೂಶನ್‌ಗಳನ್ನು ಪಾಲಿಸಿ. ಇದು ನಿಮ್ಮಲ್ಲಿ ಧೈರ್ಯವನ್ನು ಹೆಚ್ಚಿಸುತ್ತದೆ.

9. ನಿಮ್ಮ ಕೆಲಸವನ್ನು ಪ್ರೀತಿಸಿ: ಅನಿವಾರ್ಯತೆಗೆ ಸಿಲುಕಿ ಯಾವುದೋ ಕೆಲಸವನ್ನು ಮಾಡುತ್ತಿರುತ್ತೇವೆ. ಆದರೆ ಮಾಡುತ್ತಿರುವ ಕೆಲಸವನ್ನು ಪ್ರೀತಿಸಲು ಆರಂಭಿಸಿ, ಅದರಲ್ಲಿ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಿ.

10. ಮೋಸ ಮಾಡಬೇಡಿ: ಈ ವರ್ಷ ಯಾರಿಗೂ ಮೋಸ ಸಣ್ಣಪುಟ್ಟ ಮೋಸವನ್ನು ಮಾಡುವುದಿಲ್ಲ ಎಂದು ಶಪಥ ಮಾಡಿ. ಇದರಿಂದಾಗಿ ನೀವು ಮೋಸ ಹೋಗುವ ಸಾಧ್ಯತೆಗಳು ಸಹ ಕ್ಷೀಣಿಸುತ್ತವೆ.

New Year 2024: ಜನವರಿ ಒಂದನ್ನೇ ಹೊಸ ವರ್ಷವನ್ನಾಗಿ ಆಚರಿಸೋದು ಏಕೆ?

11. ಹೊಸ ಭಾಷೆ ಕಲಿಯಿರಿ: ಈ ವರ್ಷವಾದರೂ ಹೊಸದೊಂದು ಭಾಷೆ ಕಲಿಯುವ ಪ್ರಯತ್ನ ಮಾಡಿ. ಇದು ನಿಮಗೆ ಜೀವನದಲ್ಲಿ ಹೊಸ ಹುರುಪು ನೀಡುವುದಲ್ಲದೇ, ಪ್ರತಿದಿನ ಚಟುವಟಿಕೆಯಿಂದ ಇಡುತ್ತದೆ.

12. ಕೆಲಸಗಳನ್ನು ಆರಂಭಿಸಿ: ಜೀವನದಲ್ಲಿ ಸಾಕಷ್ಟು ಯೋಜನೆಗಳನ್ನು ರೂಪಿಸಿ, ಅದನ್ನು ಆರಂಭ ಮಾಡದೇ ಕಾಯುತ್ತಿರುತ್ತೀರಿ. ಈ ವರ್ಷವಾದರೂ ಅವುಗಳನ್ನು ಆರಂಭಿಸುವತ್ತ ಮುಂದಡಿ ಇಡಿ.

13. ಕುಟುಂಬಕ್ಕೆ ಸಮಯ ಕೊಡಿ: ಪ್ರತಿದಿನ ನಿಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವುದುನ್ನು ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ಆತ್ಮಸ್ಥೈರ್ಯವನ್ನು ವೃದ್ಧಿ ಗೊಳಿಸುತ್ತದೆ.

14. ಸಾಧ್ಯವಾದಷ್ಟು ಸಹಾಯ ಮಾಡಿ: ಕಷ್ಟದಲ್ಲಿರುವವರಿಗೆ ನಿಮ್ಮ ಕೈಲಾದರೆ ತಪ್ಪದೇ ಸಹಾಯ ಮಾಡಿ. ಆ ಸಮಯದಲ್ಲಿ ಅವರ ಮುಖದಲ್ಲಿ ಮೂಡುವ ಮುಗುಳ್ನಗು ನಿಮ್ಮಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.

15. ಪರಿಸರ ಕಾಳಜಿ ಬೆಳೆಸಿಕೊಳ್ಳಿ: ಮುಂದಿನ ಪೀಳಿಗೆಗೆ ನಾವು ಉಳಿಸಲೇ ಬೇಕಾದ ಆಸ್ತಿ ಎಂದರೆ ಅದು ಪರಿಸರ. ಹಾಗಾಗಿ ಮಾಲಿನ್ಯದ ಪ್ರಮಾಣ ಕಡಿಮೆ ಮಾಡಿ ಪರಿಸರವನ್ನು ಉಳಿಸುವ ಕಾಳಜಿ ಬೆಳೆಸಿಕೊಳ್ಳಿ.

16. ಕೆಲಸಗಳನ್ನು ಪೂರ್ಣಗೊಳಿಸಿ: ಹಿಂದಿನ ವರ್ಷಗಳಲ್ಲಿ ಆರಂಭಿಸಿರುವ ಎಷ್ಟೋ ಕೆಲಸಗಳನ್ನು ಅರ್ಧಕ್ಕೆ ಕೈಬಿಟ್ಟಿರುತ್ತೀರಿ. ಈ ವರ್ಷಗಳನ್ನು ಅವುಗಳನ್ನು ಮತ್ತೆ ಕೈಗೆತ್ತುಕೊಂಡು ಪೂರ್ಣಗೊಳಿಸಿ.

17. ತಪ್ಪುಗಳಿಗೆ ಕ್ಷಮೆ ಕೇಳಿ: 2023ರಲ್ಲಿ ನಿಮ್ಮಿಂದ ಹಲವು ತಪ್ಪುಗಳು ಘಟಿಸಿರಬಹುದು. ಅವು ನಿಮ್ಮ ಸಂಬಂಧವನ್ನು ಹಾಳು ಮಾಡುವುದನ್ನು ತಪ್ಪಿಸಲು ಕ್ಷಮೆ ಕೇಳಿ. ಏಕೆಂದರೆ ಸಂಬಂಧಗಳು ಅಮೂಲ್ಯ.

18. ಸಮಾನವಾಗಿ ಸ್ವೀಕರಿಸಿ: ಜೀವನದ ಜಂಜಾಟದಲ್ಲಿ ಸುಖದುಃಖಗಳು ಸರ್ವೇ ಸಾಮಾನ್ಯವಾದವುಗಳಾಗಿವೆ. ಹೀಗಾಗಿ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಸ್ಥೈರ್ಯವನ್ನು ಬೆಳೆಸಿಕೊಳ್ಳಿ.

19. ಈ ವರ್ಷವೂ ರಕ್ತದಾನ ಮಾಡಿ: ಅತ್ಯಂತ ಶ್ರೇಷ್ಠದಾನ ಎಂದು ಕರೆಸಿಕೊಳ್ಳುವ ರಕ್ತದಾನ, ಸಾವಿನ ಅಂಚಿನಲ್ಲಿರುವ ಒಂದು ಜೀವವನ್ನು ಉಳಿಸಿ ಅವರ ಕುಟುಂನದಲ್ಲಿ ಸಂತೋಷ ಮೂಡಿಸಬಲ್ಲದು. ತಪ್ಪದೇ ರಕ್ತದಾನ ಮಾಡಿ.

20. ಮಕ್ಕಳ ಕುತೂಹಲ ಉಳಿಸಿಕೊಳ್ಳಿ: ಹೊಸತನ್ನು ಕಲಿಯಬೇಕಿದ್ದರೆ ಆ ಕುತೂಹಲ ನಿಮ್ಮಲ್ಲಿರಬೇಕು. ಹೀಗಾಗಿ ಮಕ್ಕಳಲ್ಲಿರುವ ಕುತೂಹಲವನ್ನು ಸದಾ ಕಾಲ ಕಾಪಿಟ್ಟುಕೊಂಡು ಹೊಸತನ್ನು ಕಲಿಯುವ ಆನಂದವನ್ನು ಪಡೆಯಿರಿ.

21. ಪುಸ್ತಕಗಳನ್ನು ಓದಿ: ಹೊಸ ವರ್ಷದಲ್ಲಿ ಹೊಸ ಆಲೋಚನೆಗಳನ್ನು ಬೆಳೆಸಿಕೊಳ್ಳುವುದಕ್ಕಾಗಿ, ಸದುದ್ದೇಶದಿಂದ ಕೆಲಸ ಮಾಡುವುದಕ್ಕಾಗಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ.

22. ಚಟಗಳನ್ನು ದೂರವಿಡಿ: ನಿಮ್ಮ ಚಟಗಳು ಒಂದು ದಿನ ನಿಮ್ಮನ್ನು ವಿನಾಶದ ಅಂಚಿಗೆ ಒಯ್ಯಬಹುದು. ಹೀಗಾಗಿ ದುಶ್ಚಟಗಳಿಂದ ದೂರ ಇರಲು ಅಭ್ಯಾಸ ಮಾಡಿಕೊಳ್ಳಿ, ಆರೋಗ್ಯವಂತ ಬದುಕು ನಿಮ್ಮದಾಗಿಸಿಕೊಳ್ಳಿ

23. ತಪ್ಪದೇ ವ್ಯಾಯಾಮ ಮಾಡಿ: ಜಂಕ್‌ಫುಡ್‌ನ ಈ ಪ್ರಪಂಚದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಹೀಗಾಗಿ ಪ್ರತಿನಿತ್ಯ ನಿಗದಿತ ಸಮಯ ತಪ್ಪದೇ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ.

24. ಶಿಕ್ಷಣಕ್ಕೆ ನೆರವಾಗಿ: ಬಡವರು ಶಿಕ್ಷಣಕ್ಕೆ ನೆರವಾಗುವ ಮೂಲಕ ಅವರ ಬಾಳಿಗೆ ಬೆಳಕಾಗಿ. ಅವರು ಸಹ ಎಲ್ಲರಂತೆ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಅವರಿಗೆ ಸಹಕರಿಸಿ.

Follow Us:
Download App:
  • android
  • ios