ಅಪೂರ್ವ ಕೃತಿ 'ಕರ್ನಾಟ ಭಾರತ ಕಥಾಮಂಜರಿ'ಯ ಇಂಗ್ಲಿಷ್ ಕುಮಾರವ್ಯಾಸ
ಹೆಸರಾಂತ ಕ್ಷತ್ರಿಯ ಕುಲಗಳ ಬಗ್ಗೆಯೇ ಬರೆದರೂ ಕ್ಷಾತ್ರವನ್ನು ತಿರಸ್ಕರಿಸಿದ, ಎಂದೂ ಯುದ್ಧವನ್ನೇ ಮಾಡದ ಕೃಷ್ಣನನ್ನು ತನ್ನ ಮಹಾಭಾರತದ ಕೇಂದ್ರಪಾತ್ರವನ್ನಾಗಿಸಿದ, ಕನ್ನಡ ಭಾಷೆಯ ಹಾಗೂ ಕನ್ನಡ ಸಂಸ್ಕೃತಿಯ ಎಲ್ಲಾ ಆಯಾಮಗಳಿಗೂ ಹಾಗೂ ಸಾಧ್ಯತೆಗಳಿಗೂ ಕನ್ನಡಿ ಹಿಡಿದ ಕುಮಾರವ್ಯಾಸನ “ಕರ್ನಾಟ ಭಾರತ ಕಥಾಮಂಜರಿ” ಒಂದು ಅಪೂರ್ವ ಕೃತಿ.
ಹೆಸರಾಂತ ಕ್ಷತ್ರಿಯ ಕುಲಗಳ ಬಗ್ಗೆಯೇ ಬರೆದರೂ ಕ್ಷಾತ್ರವನ್ನು ತಿರಸ್ಕರಿಸಿದ, ಎಂದೂ ಯುದ್ಧವನ್ನೇ ಮಾಡದ ಕೃಷ್ಣನನ್ನು ತನ್ನ ಮಹಾಭಾರತದ ಕೇಂದ್ರಪಾತ್ರವನ್ನಾಗಿಸಿದ, ಕನ್ನಡ ಭಾಷೆಯ ಹಾಗೂ ಕನ್ನಡ ಸಂಸ್ಕೃತಿಯ ಎಲ್ಲಾ ಆಯಾಮಗಳಿಗೂ ಹಾಗೂ ಸಾಧ್ಯತೆಗಳಿಗೂ ಕನ್ನಡಿ ಹಿಡಿದ ಕುಮಾರವ್ಯಾಸನ “ಕರ್ನಾಟ ಭಾರತ ಕಥಾಮಂಜರಿ” ಒಂದು ಅಪೂರ್ವ ಕೃತಿ.
ಈ ಕೃತಿಯನ್ನು ಇಂಗ್ಲೀಷ್‍ಗೆ ಅನುವಾದಿಸಿ, ಇದನ್ನು ಕನ್ನಡೇತರರಿಗೂ ಪರಿಚಯಮಾಡಿಕೊಡಬೇಕೆಂಬ ಮಹದಾಸೆ ಅನೇಕ ಕನ್ನಡ/ ಇಂಗ್ಲೀಷ್ ವಿದ್ವಾಂಸರಿಗೆ ಬಹುಕಾಲದಿಂದ ಮನಸ್ಸಿನಲ್ಲಿತ್ತು. ಇನ್‌ಫೋಸಿಸ್ ನಾರಾಯಣ ಮೂರ್ತಿಗಳ ಮಗ ರೋಹನ್ ಮೂರ್ತಿ ಅವರು ಹಾರ್ವರ್ಡ್ ವಿವಿಯಲ್ಲಿ ಒಂದು ಟ್ರಸ್ಟ್ ಸ್ಥಾಪಿಸಿ, ಅದರ ಮೂಲಕ ಪ್ರಾಚೀನ ಭಾರತೀಯ ಸಾಹಿತ್ಯಕೃತಿಗಳ ಇಂಗ್ಲೀಷ್ ಅನುವಾದಗಳ ಪ್ರಕಟಣೆಗೆ ಅನುವು ಮಾಡಿಕೊಟ್ಟರು ಅದರ ಹೆಸರು’ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ಼್ ಇಂಡಿಯಾ’.
ನ್ಯೂಯಾರ್ಕ್‍ನಲ್ಲಿ ಸ್ಟೋನಿಬ್ರೂಕ್ ವಿವಿಯಲ್ಲಿ ’ಭಾರತೀಯ ಅಧ್ಯಯನ ಕೇಂದ್ರ’ದ ಮುಖ್ಯಸ್ಥರಾಗಿರುವ ಡಾ. ಎಸ್.ಎನ್. ಶ್ರೀಧರ್ ಆ ಸಂಸ್ಥೆಯ ನಿರ್ದೇಶಕರಾದ ಡಾ.ಶೆಲ್ಡನ್ ಪೋಲಕ್ ಅವರನ್ನು ಸಂಪರ್ಕಿಸಿ, ಕುಮಾರವ್ಯಾಸ ಭಾರತದ ಅನುವಾದಕ್ಕೆ ಅವರ ಒಪ್ಪಿಗೆ ಪಡೆದರು. ನಂತರ ಡಾ. ಎಚ್. ಎಸ್. ಶಿವಪ್ರಕಾಶ್, ಡಾ. ನಾರಾಯಣ ಹೆಗ್ಡೆ, ಡಾ.ಎಚ್.ಎಸ್. ರಾಘವೇಂದ್ರ ರಾವ್, ಡಾ.ಸಿ. ಎನ್. ರಾಮಚಂದ್ರನ್ ಮತ್ತು ಡಾ. ಶ್ರೀಧರ್ ಇವರುಗಳು ಈ ಅನುವಾದ ಯೋಜನೆಯ ಸಾಧಕ-ಬಾಧಕಗಳನ್ನು ಚರ್ಚಿಸಿ ಈ ಕೆಳಗಿನ ತೀರ್ಮಾನಕ್ಕೆ ಬಂದರು.
ಪ್ರತಿಯೊಬ್ಬರೂ ’ಆದಿಪಂಚಕ’ ದಿಂದ ಒಂದು ಪರ್ವ ಮತ್ತು ’ಯುದ್ಧಪಂಚಕದಿಂದ ಒಂದು ಪರ್ವ, ಹೀಗೆ ಅನುವಾದ ಮಾಡಬೇಕೆಂದು, ಶ್ರೀಧರ್ ಮುಖ್ಯ ಸಂಪಾದಕರಾಗಬೇಕೆಂದು ತೀರ್ಮಾನಿಸಲಾಯಿತು. ಕುಮಾರವ್ಯಾಸ ಭಾರತ ತುಂಬಾ ದೀರ್ಘವಾದ ಮಹಾಕಾವ್ಯ; ಅದರಲ್ಲಿ 8000ಕ್ಕೂ ಮಿಕ್ಕು ಷಟ್ಪದಿಗಳಿವೆ. ಇಷ್ಟನ್ನೂ ಅನುವಾದಿಸುವುದು ಅಸಾಧ್ಯವೆಂದು, ಕೃತಿಯ ಮೂರನೆಯ ಒಂದು ಭಾಗದಷ್ಟು, ಎಂದರೆ ಸುಮಾರು 3000 ಸಾವಿರ ಷಟ್ಪದಿಗಳನ್ನು ಅನುವಾದಿಸಬೇಕೆಂದು, ಪ್ರತಿಯೊಬ್ಬರೂ 500-600 ಷಟ್ಪದಿಗಳನ್ನು ಅನುವಾದಿಸಬೇಕೆಂದು ನಿರ್ಣಯಿಸಿದರು. ಅನುವಾದಕ್ಕೆ ಶ್ರೀಧರ್ ಒಂದು ವಿದ್ವತ್ಪೂರ್ಣ ಮುನ್ನುಡಿಯನ್ನು ಬರೆಯಲು ಒಪ್ಪಿಕೊಂಡರು.
ಕೃತಕ ಬರಹಗಾರ; ಕಂಪ್ಯೂಟರ್ ಕೈ ಬರೆಯುತ್ತದೆ
ಈ ಯೋಜನೆಯ ಮೊದಲ ಸಂಪುಟದಲ್ಲಿ ’ಆದಿಪರ್ವ’ (ಅನು. ಸಿ. ಎನ್. ರಾಮಚಂದ್ರನ್) ಮತ್ತು ’ಸಭಾಪರ್ವ’ (ಅನು. ನಾರಾಯಣ ಹೆಗ್ಡೆ) ಈ ಎರಡು ಪರ್ವಗಳ ಅನುವಾದವಿದ್ದು, ಈ ಸಂಪುಟವು ಬರುವ ಡಿಸೆಂಬರ್ 3 ರಂದು, ಬೆಂಗಳೂರು ಲಿಟರರಿ ಫ಼ೆಸ್ಟಿವಲ್‍ನಲ್ಲಿ ಬಿಡುಗಡೆಯಾಗುತ್ತಿದೆ. ನಂತರ, ಮೂಲ ಕೃತಿಯ ಕೆಲವು ಭಾಗಗಳ ಗಮಕ-ವ್ಯಾಖ್ಯಾನಗಳಿವೆ. ಗಮಕಿ: ಎಂ. ಆರ್. ಸತ್ಯನಾರಾಯಣ; ಇಂಗ್ಲೀಷ್‍ನಲ್ಲಿ ವ್ಯಾಖ್ಯಾನ: ಎಸ್.ಎನ್. ಶ್ರೀಧರ್. ಈ ಸಂಪುಟವು ಅಂದೇ ಮಾರಾಟಕ್ಕೂ ಇದೆ. ಮತ್ತು ಇದು ಅಮೆಜ಼ಾನ್ ಮೂಲಕವೂ ದೊರೆಯುತ್ತದೆ.
ಕುಮಾರವ್ಯಾಸನನ್ನು ಅನುವಾದಿಸುವುದು ಎಷ್ಟು ಕಷ್ಟ ಅನ್ನುವುದನ್ನು ಮತ್ತೆ ವಿವರಿಸಬೇಕಾಗಿಲ್ಲ. ಅಪ್ಪಟ ಕನ್ನಡದ ನುಡಿಗಟ್ಟು, ರೂಪಕ, ಒಂದು ಭಾಷೆಗೆ ವಿಶಿಷ್ಟವಾದ ಅರ್ಥಛಾಯೆ, ಇನ್ನೊಂದು ಭಾಷೆಗಾಗಲೀ ಸಂಸ್ಕೃತಿಗಾಗಲೀ ದಾಟಿಸಲಿಕ್ಕಾಗದ ರಮಣೀಯ ಪದವೈಭವಗಳಿರುವ ಕೃತಿಯ ಮೂರು ಪದ್ಯಗಳು ಇಂಗ್ಲಿಷಿನಲ್ಲಿ ಹೇಗೆ ಬಂದಿವೆ ಎಂದು ನೋಡಿದರೆ ಈ ಕೃತಿಯ ಮಹತ್ವ ತಿಳಿಯುತ್ತದೆ. ಹಾಗೆಯೇ, ಅನುವಾದಕ್ಕೆ ಈ ತಂಡ ಪಟ್ಟ ಶ್ರಮದ ಅರಿವಾಗುತ್ತದೆ.
1) ಸರಸ್ವತಿ ಸ್ತುತಿ:
ವಾರಿಜಾಸನೆ ಸಕಲಶಾಸ್ತ್ರ ವಿ
ಚಾರದುದ್ಭವೆ ವಚನರಚನೋ
ದ್ಧಾರೆ ಶ್ರುತಿ ಪೌರಾಣದಾಗಮ ಸಿದ್ದಿದಾಯಕಿಯೆ
ಶೌರಿ ಸುರಪತಿ ಸಕಲ ಮುನಿಜನ
ಸೂರಿಗಳಿಗನುಪಮದ ಯುಕುತಿಯೆ
ಶಾರದೆಯೆ ನರ್ತಿಸುಗೆ ನಲಿದೊಲಿದೆನ್ನ ಜಿಹ್ವೆಯಲಿ
Goddess of Autumnal freshness, seated on a lotus,
born of all precepts and principles, inspirer of speech
and writing, bestower of success in scriptures, ancient lore and doctrines;
grantor of unequalled expertise to Vishnu,
to Indra, king of gods, to all sages and scholars:
Sharada, dance on my tongue with rapture and love.
2) ತನ್ನ ಕಾವ್ಯದ ಸ್ತುತಿ:
ಅರಸುಗಳಿಗಿದು ವೀರ ದ್ವಿಜರಿಗೆ
ಪರಮ ವೇದದ ಸಾರ ಯೋಗೀ
ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ
ವಿರಹಿಗಳ ಶೃಂಗಾರ ವಿದ್ಯಾ
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ
This Bharata , the crown of poetry,
composed by Kumaravyasa, teaches
valor to kings, the essence of the great Vedas to the twice-born,
philosophical truths to eminent yogis,
wisdom to king''s advisers, amorous sentiments
to the lovelorn, and figures and tropes to the learned.
3) ಕ್ಷತ್ರಿಯರ ರಕ್ತಪಿಪಾಸೆಯನ್ನು ಕುರಿತು:
ಏನನೆಂಬೆನು ನಿಮ್ಮನು ಪಿಶಾ
ಚೋನ್ನೃಪಾಲಕರೆಂಬವೋಲ್ ವ್ಯಸ
ನಾನುಬಂಧದ ಬೇಗೆ ಕೊಂಡೊಯ್ದುದು ಮಹೀಪತಿಯ
ಕಾನನದೊಳಾಯತದ ಶರ ಸಂ
ಧಾನ ಕಲಿತ ಶರಾಸನನು ಮೃಗ
ಹಾನಿಗಳ ಹೆಕ್ಕಳದೊಳೋಲಾಡಿದನು ಬೇಂಟೆಯಲಿ
What shall I say of you kings,
who act as if possessed by blood-thirsty ghosts?
The heat of passionate obsession carried the king away.
In the forest, with an arrow fixed to his bow,
the expert bowman exulted
as he piled up the animals he had shot.