ಸೋಶಿಯಲ್ ಮೀಡಿಯಾದಲ್ಲಿ ಯಶಸ್ಸು, ಹಣ ಮತ್ತು ಜನಪ್ರಿಯತೆ ಗಳಿಸಿದರೂ ಕೆಲವೊಮ್ಮೆ ಕೆಲವು ಸನ್ನಿವೇಶಗಳು ಬೇಸರಕ್ಕೆ ಕಾರಣವಾಗುತ್ತದೆ. ಇದೀಗ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಟಿಯಾಶಾ ಗೋಸ್ವಾಮಿ ತಮ್ಮ ಜೀವನದ ಕಷ್ಟದ ಹಂತವೊಂದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಯಶಸ್ಸು, ಹಣ ಮತ್ತು ಜನಪ್ರಿಯತೆ ಗಳಿಸಿದರೂ ಕೆಲವೊಮ್ಮೆ ಕೆಲವು ಸನ್ನಿವೇಶಗಳು ಬೇಸರಕ್ಕೆ ಕಾರಣವಾಗುತ್ತದೆ. ಇದೀಗ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಟಿಯಾಶಾ ಗೋಸ್ವಾಮಿ ತಮ್ಮ ಜೀವನದ ಕಷ್ಟದ ಹಂತವೊಂದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. Instagramನಲ್ಲಿ ತನ್ನ ಫಾಲೋವರ್ಸ್ ನಿರಂತರವಾಗಿ ಕಡಿಮೆಯಾಗುತ್ತಿರುವುದನ್ನು ಗಮನಿಸಿದ ಬಳಿಕ ಟಿಯಾಶಾ ಭಾವುಕರಾಗಿದ್ದಾರೆ.
ದಯವಿಟ್ಟು ನನ್ನನ್ನು ಅನ್‌ಫಾಲೋ ಮಾಡಬೇಡಿ
ಶುಕ್ರವಾರ ಸಂಜೆ Instagramನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಟಿಯಾಶಾ ತಮ್ಮ ಫಾಲೋವರ್ಸ್ ಬಳಿ ಮನವಿ ಮಾಡಿಕೊಂಡಿದ್ದಾರೆ. ದಯವಿಟ್ಟು ನನ್ನನ್ನು ಅನ್‌ಫಾಲೋ ಮಾಡಬೇಡಿ. ನಾನು ಈಡೇರಿಸಬೇಕಾದ ಸಾಕಷ್ಟು ಕನಸುಗಳಿವೆ ಎಂದು ಹೇಳಿದ್ದಾಳೆ. ವೃತ್ತಿಜೀವನ, ತನ್ನ ಆಸೆ ಹಾಗೂ ಈ ವರ್ಷದ ಗುರಿಗಳ ಬಗ್ಗೆ ಮಾತನಾಡುವಾಗ ಟಿಯಾಶಾ ತಮ್ಮ ಮನಸ್ಸಿನಲ್ಲಿರುವ ಬೇಸರವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
16ನೇ ವಯಸ್ಸಿನಲ್ಲೇ ಉದ್ಯಮ ಆರಂಭ
ತಮ್ಮ ಸಾಧನೆಗಳ ಬಗ್ಗೆ ಮಾತನಾಡಿದ ಟಿಯಾಶಾ, ಚಿಕ್ಕ ವಯಸ್ಸಿನಲ್ಲೇ ಹಲವು ಸಾಧನೆ ಮಾಡಿರುವದನ್ನು ಹೇಳಿದ್ದಾರೆ. ಕಳೆದ ತಿಂಗಳು Instagramನಿಂದ ₹20 ಲಕ್ಷ ಗಳಿಸಿದ್ದೇನೆ. 16ನೇ ವಯಸ್ಸಿನಲ್ಲೇ ಹೊಸ ಉದ್ಯಮವನ್ನು ಆರಂಭಿಸಿದ್ದೇನೆ. ಈ ವರ್ಷ ನನ್ನ 11ನೇ ಅಂತಾರಾಷ್ಟ್ರೀಯ ಪ್ರವಾಸಕ್ಕೆ ತೆರಳುತ್ತಿದ್ದೇನೆ ಎಂದು ಹೇಳಿದ್ದಾಳೆ. ಇಷ್ಟೆಲ್ಲಾ ಸಾಧನೆಗಳಿದ್ದರೂ, ಜೀವನದ ಇತರ ಕೆಲವು ಗುರಿಗಳನ್ನು ತಲುಪಲು ಸಾಧ್ಯವಾಗದಿರುವುದು ತಮ್ಮನ್ನು ಕಾಡುತ್ತಿದೆ ಎಂದಿದ್ದಾಳೆ.
2 ಲಕ್ಷ ಫಾಲೋವರ್ಸ್ ಗುರಿ... ಆದರೆ ಆಗಿದ್ದೇನು?
Vision Board ತೋರಿಸಿದ ಟಿಯಾಶಾ, ಅದರಲ್ಲಿ 2 ಲಕ್ಷ ಅಂದರೆ 200K Instagram ಫಾಲೋವರ್ಸ್ ಗುರಿಯನ್ನು ಹಾಕಿಕೊಂಡಿರುವುದನ್ನು ಹೇಳಿದ್ದಾಳೆ. ಕಳೆದ ವರ್ಷ ನವೆಂಬರ್ ವೇಳೆಗೆ ತಮ್ಮ Instagram ಖಾತೆಯಲ್ಲಿ ಸುಮಾರು 1 ಲಕ್ಷ ಫಾಲೋವರ್ಸ್ ಇದ್ದರು. ಆದರೆ ಸೆಪ್ಟೆಂಬರ್ ವೇಳೆಗೆ ಆ ಸಂಖ್ಯೆ ಸುಮಾರು 1.09 ಲಕ್ಷಕ್ಕೆ ಮಾತ್ರ ತಲುಪಿದೆ ಎಂದು ಅವರು ಹೇಳಿದ್ದಾರೆ. ಇದರಲ್ಲಿ 200K ಎಂದು ಬರೆದಿದೆ. ಈಗ ನೋಡಿದರೆ ಇದು ಸ್ವಲ್ಪ ತಮಾಷೆಯಂತೆ ಕಾಣುತ್ತಿದೆ. ಕಳೆದ ವರ್ಷ ನವೆಂಬರ್‌ನಲ್ಲಿ Instagramನಲ್ಲಿ 1 ಲಕ್ಷ ಫಾಲೋವರ್ಸ್ ಇದ್ದರು. ಈಗ ಸೆಪ್ಟೆಂಬರ್ ಆಗಿದೆ. ಅಷ್ಟೇ ಅಲ್ಲದೆ, “200K ಫಾಲೋವರ್ಸ್ ಎನ್ನುವುದು ದೊಡ್ಡ ಸಂಖ್ಯೆ. ಅದರಲ್ಲೂ ನನ್ನ ಫಾಲೋವರ್ಸ್ ನಿರಂತರವಾಗಿ ಕಡಿಮೆಯಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾಳೆ.
ಮುಂಬೈಗೆ ಶಿಫ್ಟ್ ಆಗುವ ಕನಸು ಕೂಡ ನನಸಾಗಿಲ್ಲ
ಈ ವರ್ಷ ಹಲವು ಗುರಿಗಳನ್ನು ಸಾಧಿಸುವ ನಿರೀಕ್ಷೆಯಲ್ಲಿದ್ದ ಟಿಯಾಶಾ, ಅವುಗಳಲ್ಲಿ ಪ್ರಮುಖವಾದದ್ದು ಕೋಲ್ಕತ್ತಾದಿಂದ ಮುಂಬೈಗೆ ಸ್ಥಳಾಂತರವಾಗುವುದು ಎಂದು. ಈ ವರ್ಷ ನಾನು ಬಹಳಷ್ಟು ಕೆಲಸಗಳನ್ನು ಮಾಡಬೇಕೆಂದುಕೊಂಡಿದ್ದೆ. ಮುಖ್ಯವಾಗಿ ಮುಂಬೈಗೆ ಶಿಫ್ಟ್ ಆಗಬೇಕು ಎಂದು ತುಂಬಾ ಬಯಸಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಈಗಲೂ ನಾನು ಕೋಲ್ಕತ್ತಾದಲ್ಲಿರುವ ನನ್ನ ರೂಮ್‌ನಲ್ಲೇ ಇದ್ದೇನೆ ಎಂದು ಹೇಳಿದ್ದಾಳೆ.
ಕೊನೆಯಲ್ಲಿ ಫಾಲೋವರ್ಸ್‌ಗೆ ಭರವಸೆಯ ಮಾತು
ತಮ್ಮ ನೋವನ್ನು ಹಂಚಿಕೊಂಡ ಬಳಿಕವೂ ಟಿಯಾಶಾ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾಳೆ. “ನೀವು ನಿಮ್ಮ ಕನಸುಗಳನ್ನು ಸಾಧಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ಇನ್ನೂ ಸಾಧಿಸಿಲ್ಲ ಎಂದರೂ ಭರವಸೆ ಕಳೆದುಕೊಳ್ಳಬೇಡಿ. ಆಶೆಯನ್ನು ಜೀವಂತವಾಗಿರಿಸಿಕೊಳ್ಳಿ”.
