ಕೇರಳದ ಪಾಲಕ್ಕಾಡ್ ಬಳಿಯ ರಾಮಸೆರ್ರಿ ಊರಿನಲ್ಲಿ ಮಾಡುವ ವಿಶಿಷ್ಟ ಶೈಲಿಯ ಇಡ್ಲಿ ಇದು. ಇದನ್ನು ಸಾಂಪ್ರದಾಯಿಕ ಇಡ್ಲಿ ತಟ್ಟೆಗಳ ಬದಲು, ಮಣ್ಣಿನ ಮಡಿಕೆ ಮತ್ತು ಬಟ್ಟೆಯನ್ನು ಬಳಸಿ ವಿಶಿಷ್ಟವಾಗಿ ತಯಾರಿಸಲಾಗುತ್ತದೆ. ಈ ಲೇಖನದಲ್ಲಿ ಅದರ ಸಂಪೂರ್ಣ ಮಾಡುವ ವಿಧಾನವನ್ನು ವಿವರಿಸಲಾಗಿದೆ.

ನಿಮಗೆ ಒಂದಿಷ್ಟು ಬಗೆಯ ಇಡ್ಲಿಗಳು ಗೊತ್ತಿರಬಹುದು. ಆದರೆ ಕೇರಳದ ರಾಮಸೆರ್ರಿ (Ramaserri Idli) ಎನ್ನುವ ಊರಿನಲ್ಲಿ ಮಾಡುವ ಇಡ್ಲಿ ಸಕತ್​ ಟೇಸ್ಟಿಯೂ ಆಗಿದ್ದು, ಡಿಫರೆಂಟ್​ ಆಗಿದೆ. ರಾಮಸೆರ್ರಿ ಪಾಲಕ್ಕಾಡ್ ಬಳಿಯ ಒಂದು ಸ್ಥಳವಾಗಿದ್ದು, ಅಲ್ಲಿ ಈ ಶೈಲಿಯ ಇಡ್ಲಿಗಳು ಪ್ರಸಿದ್ಧವಾಗಿವೆ. ಇಡ್ಲಿಗಳನ್ನು ಮಣ್ಣಿನ ಮಡಿಕೆಗಳಲ್ಲಿ ತಯಾರಿಸಲಾಗುತ್ತದೆ. ಈ ಶೈಲಿಯ ಇಡ್ಲಿಗಳನ್ನು ಇಡ್ಲಿ ತಟ್ಟೆಗಳ ಬದಲಿಗೆ ಬಟ್ಟೆಯ ಮೇಲೆ ನೇರವಾಗಿ ಆವಿಯಲ್ಲಿ ಬೇಯಿಸಲಾಗುತ್ತದೆ.

ಇದನ್ನು ಮಾಡುವ ವಿಧಾನದ ಬಗ್ಗೆ ತಿಳಿಸಲಾಗಿದೆ. ಮೊದಲಿಗೆ ಯಾವ ಯಾವ ಸಾಮಗ್ರಿ ಬೇಕು ನೋಡಿ

ಬೇಕಾಗುವ ಸಾಮಗ್ರಿಗಳು

2 ಕಪ್ ಇಡ್ಲಿ ಅಕ್ಕಿ (ಬೇಯಿಸಿದ ಅಕ್ಕಿ)

2 ಕಪ್ ಅನ್ನದ ಅಕ್ಕಿ (Raw Rice)

1 ಕಪ್ ಉದ್ದಿನ ಬೇಳೆ (ಕಪ್ಪು)

1 ಟೀ ಸ್ಪೂನ್ ಮೆಂತ್ಯ ಬೀಜಗಳು

ರುಚಿಗೆ ತಕ್ಕಷ್ಟು ಉಪ್ಪು

ನೆನೆಸಿ ರುಬ್ಬಲು ನೀರು

ಮಾಡುವ ವಿಧಾನ

* ಎರಡೂ ಅಕ್ಕಿಗಳನ್ನು ತೊಳೆದು 4 ರಿಂದ 5 ಗಂಟೆಗಳ ನೆನೆಸಿ,

* ಉದ್ದಿನ ಬೇಳೆ ಮತ್ತು ಮೆಂತ್ಯ ಬೀಜಗಳನ್ನು ಪ್ರತ್ಯೇಕವಾಗಿ 4 ರಿಂದ 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.

* ಉದ್ದಿನ ಬೇಳೆಯನ್ನು ನಯವಾದ ನುಣ್ಣಗೆ ರುಬ್ಬಿಕೊಲ್ಳಿ.

* ನೆನೆಸಿದ ಅಕ್ಕಿಯನ್ನು ಸ್ವಲ್ಪ ಒರಟಾಗಿ ರುಬ್ಬಿ, ಇದು ತೀರಾ ನುಣ್ಣಗಾಗಬಾರದು.

* ಎಲ್ಲವನ್ನೂ ಚೆನ್ನಾಗಿ ಮಿಕ್ಸ್​ ಮಾಡಿ ರುಚಿಗೆ ತಕ್ಕ ಉಪ್ಪು ಹಾಕಿ ಕಲಕಿ.

* ಇದನ್ನು 6 ರಿಂದ 8 ಗಂಟೆಗಳ ಕಾಲ ಬೆಚ್ಚಗಿನ ಸ್ಥಳದಲ್ಲಿ ಹುದುಗಲು ಬಿಡಿ.

* ಆಳವಾದ ಪಾತ್ರೆಯಲ್ಲಿ ಅಥವಾ ಸಾಂಪ್ರದಾಯಿಕ ಮಣ್ಣಿನ ಪಾತ್ರೆಯಲ್ಲಿ ನೀರನ್ನು ಕುದಿಸಿ.

ಬೇಯಿಸುವ ವಿಧಾನ

* ಒದ್ದೆಯಾದ ಹತ್ತಿ ಅಥವಾ ಮಸ್ಲಿನ್ ಬಟ್ಟೆಯಿಂದ ಮುಚ್ಚಿದ ಸ್ಟೀಮರ್ ಇನ್ಸರ್ಟ್ ಅಥವಾ ಜರಡಿಯನ್ನು ಮಡಕೆಯ ಮೇಲೆ ಇರಿಸಿ.

* ಬಟ್ಟೆಯ ಮೇಲೆ ಒಂದು ಕಪ್​ನಷ್ಟು ಹಿಟ್ಟನ್ನು ಸುರಿಯಿರಿ, ಅದನ್ನು ಸ್ವಲ್ಪ ಅಗಲವಾಗಿ ಮತ್ತು ಚಪ್ಪಟೆಯಾಗಿ ಹರಡಿ.

* ಮುಚ್ಚಳದಿಂದ ಮುಚ್ಚಿ ಮತ್ತು ಬೇಯಿಸುವವರೆಗೆ 6 ರಿಂದ 7 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿ.

* ಬಟ್ಟೆಯನ್ನು ಎಚ್ಚರಿಕೆಯಿಂದ ತಟ್ಟೆ ಅಥವಾ ಬಾಳೆ ಎಲೆಯ ಮೇಲೆ ತಿರುಗಿಸಿ ಮತ್ತು ಬಟ್ಟೆಯಿಂದ ತೆಗೆಯಿರಿ.