MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Raksha Bandhan Wishes
Toxic OTT Release Date
ICC Test Rankings
Mekedatu Project
Nepal-tibet Floods
New Financial Rules September
Bengaluru Airport Gold Smuggling
Bengaluru Development Authority
Mangaluru Railway station
CJ Roy Death Case
Hosapete to Arasikere Train
  • Home
  • Life
  • Kitchen
  • ಬೇಳೆ ಬೇಯಿಸುವಾಗ ನೊರೆ ಬರೋದ್ಯಾಕೆ? ಕುಕ್ಕರ್​ನಲ್ಲಿ ಮಿಕ್ಸ್​ ಆಗೋದನ್ನು ತಿಂದ್ರೆ ಏನಾಗತ್ತೆ- ವೈದ್ಯರ ಮಾತು ಕೇಳಿ

ಬೇಳೆ ಬೇಯಿಸುವಾಗ ನೊರೆ ಬರೋದ್ಯಾಕೆ? ಕುಕ್ಕರ್​ನಲ್ಲಿ ಮಿಕ್ಸ್​ ಆಗೋದನ್ನು ತಿಂದ್ರೆ ಏನಾಗತ್ತೆ- ವೈದ್ಯರ ಮಾತು ಕೇಳಿ

ಬೇಳೆ ಬೇಯಿಸುವಾಗ ಬರುವ ಬಿಳಿ ನೊರೆಯು ಸಪೋನಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಇದನ್ನು ಅತಿಯಾಗಿ ಸೇವಿಸಿದರೆ ಕರುಳಿನ ಒಳಪದರಕ್ಕೆ ಹಾನಿಯಾಗಬಹುದು. ಆದ್ದರಿಂದ, ತಜ್ಞರು ಬೇಳೆಯನ್ನು ಪಾತ್ರೆಯಲ್ಲಿ ಬೇಯಿಸಿ ನೊರೆ ತೆಗೆಯಲು ಅಥವಾ ಅಡುಗೆಗೂ ಮುನ್ನ ನೆನೆಸಿಡಲು ಸಲಹೆ ನೀಡುತ್ತಾರೆ.

2 Min read
Author : Suchethana D
Published : Aug 27 2026, 08:19 PM IST
Share this Photo Gallery
  • FB
  • TW
  • Linkdin
  • Whatsapp
16
ಅಡುಗೆ ಮನೆ ಎಂಬ ಸಂದೇಹ
Image Credit : Instagram

ಅಡುಗೆ ಮನೆ ಎಂಬ ಸಂದೇಹ

ಅಡುಗೆ ಮನೆಯಲ್ಲಿರುವ ಕೆಲವು ವಿಷಯಗಳ ಬಗ್ಗೆ ಮಹಿಳೆಯರಿಗೆ ಸದಾ ಡೌಟ್​ ಇದ್ದೇ ಇರುತ್ತದೆ. ಆದರೆ ಅದನ್ನು ಪರಿಹರಿಸಿಕೊಳ್ಳುವುದು ಅಷ್ಟೇ ಕಷ್ಟವಾಗಿದೆ. ಅದರಲ್ಲಿ ಒಂದು ಬೇಳೆ ಬೇಯಿಸುವಾಗ ಬರುವ ನೊರೆ. ಯಾವುದೇ ಬೇಳೆಯನ್ನು ಕುದಿಸುವಾಗ ರೂಪುಗೊಳ್ಳುವ ಬಿಳಿ ನೊರೆ ಅನೇಕ ಜನರಿಗೆ ಕಳವಳಕಾರಿಯಾಗಿದೆ. ಇದು ಸಾಮಾನ್ಯವಾಗಿ ಅಡುಗೆ ಪ್ರಕ್ರಿಯೆಯಲ್ಲಿ ಹೊರಹಾಕಲ್ಪಡುತ್ತದೆ, ಕೆಲವರು ಇದನ್ನು ಪೌಷ್ಟಿಕಾಂಶ ವಿರೋಧಿ ಎಂದು ಕರೆಯುತ್ತಾರೆ ಮತ್ತು ಕೆಲವರು ಇದನ್ನು ವಿಷ ಎಂದು ಸಹ ಕರೆಯುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕುಕ್ಕರ್​ನಲ್ಲಿ ಅಡುಗೆ
Image Credit : Gemini AI

ಕುಕ್ಕರ್​ನಲ್ಲಿ ಅಡುಗೆ

ಅಷ್ಟಕ್ಕೂ ಈಗ ಕುಕ್ಕರ್‌ ಎನ್ನುವುದು ಸರ್ವೇ ಸಾಮಾನ್ಯವಾಗಿದೆ. ಕುಕ್ಕರ್‌ನಲ್ಲಿ ಅನ್ನ ಮಾಡುವುದು ಸೇರಿದಂತೆ ಬೇಳೆಕಾಳುಗಳನ್ನು ಬೇಯಿಸುವುದು ಕೂಡ ಅಪಾಯಕಾರಿಯೇ. ಆದರೆ, ಗೊತ್ತಿದ್ದರೂ ಧಾವಂತದ ಈ ಬದುಕಿನಲ್ಲಿ ಕುಕ್ಕರ್‌ ನಮ್ಮ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಅದರಲ್ಲಿಯೂ ಗಂಟೆಗಟ್ಟಲೆ ಗ್ಯಾಸ್‌ ಮೇಲೆ ಪಾತ್ರೆಯಲ್ಲಿ ಅನ್ನ, ಬೇಳೆ ಬೇಯಿಸಿದರೆ ಗ್ಯಾಸ್‌ ಕೂಡ ನಷ್ಟ, ಟೈಮೂ ವೇಸ್ಟು ಎನ್ನುವುದು ಎಲ್ಲರ ಅನಿಸಿಕೆ, ಇದು ನಿಜ ಕೂಡ.

Related Articles

Related image1
ಬೇಳೆ ಬೇಯಿಸುವಾಗ ಕುಕ್ಕರ್‌ ಸೀಟಿಯಿಂದ ಬೇಳೆ ಹೊರಕ್ಕೆ ಬರುತ್ತಾ? ಈ ಟಿಪ್ಸ್‌ ಫಾಲೋ ಮಾಡಿ
Related image2
ಎರಡೇ ಚಮಚ ಎಣ್ಣೆ ಬಳಸಿ ಬದನೇಕಾಯಿ, ಆಲೂಗಡ್ಡೆಯ ಕ್ರಿಸ್ಪಿ, ಟೇಸ್ಟಿ ಫ್ರೈ ಮಾಡೋದು ಹೇಗೆ ಗೊತ್ತಾ
36
ಪಾತ್ರೆಯಲ್ಲಿ ತಿಳಿಯತ್ತೆ
Image Credit : AI meta

ಪಾತ್ರೆಯಲ್ಲಿ ತಿಳಿಯತ್ತೆ

ಪಾತ್ರೆಯಲ್ಲಿ ಬೇಳೆ ಬೇಯಿಸಿದಾಗ ಈ ನೊರೆ ಸ್ಪಷ್ಟವಾಗಿ ಕಂಡರೆ, ಕುಕ್ಕರ್‌ನಲ್ಲಿ ಇದು ಬೆಂದ ಬೇಳೆಯ ಜೊತೆ ಮಿಕ್ಸ್‌ ಆಗಿ ನಮ್ಮ ಗಮನಕ್ಕೆ ಬರುವುದೇ ಇಲ್ಲ. ಆದರೆ ಆತಂಕಕಾರಿ ವಿಷಯವೊಂದು ಬೆಳಕಿಗೆ ಬಂದಿದೆ. ಅದೇನೆಂದರೆ, ಈ ನೊರೆಯು ಅತಿಯಾದರೆ ವಿಷಕ್ಕೆ ಸಮಾನ ಎನ್ನುವುದು.

46
ತಿಂದರೆ ಏನಾಗುತ್ತದೆ?
Image Credit : AI meta

ತಿಂದರೆ ಏನಾಗುತ್ತದೆ?

ಇದನ್ನು ಫೋಮ್​ ಎಂದು ಇಂಗ್ಲಿಷ್​ನಲ್ಲಿ ಕರೆಯಲಾಗುತ್ತದೆ. ಫೋಮ್ ಮೂಲತಃ ಪ್ರೋಟೀನ್ , ಸ್ವಲ್ಪ ಪಿಷ್ಟ ಮತ್ತು ಸಸ್ಯಗಳ ರಕ್ಷಣಾ ಕಾರ್ಯವಿಧಾನದ ಭಾಗವಾಗಿರುವ ಸಪೋನಿನ್ ಎಂಬ ಸಂಯುಕ್ತದಿಂದ ಮಾಡಲ್ಪಟ್ಟಿದೆ. ಸೀಮಿತ ಪ್ರಮಾಣದಲ್ಲಿ ಸೇವಿಸಿದಾಗ, ಸಪೋನಿನ್ ಉರಿಯೂತ ನಿವಾರಕ ಮತ್ತು ಕೊಲೆಸ್ಟ್ರಾಲ್ ವಿರೋಧಿ ಗುಣಗಳನ್ನು ತೋರಿಸುತ್ತದೆ. ಆದಾಗ್ಯೂ, ಹೆಚ್ಚಿನ ಪ್ರಮಾಣದಲ್ಲಿ, ಸಪೋನಿನ್ ಬೇಳೆಯನ್ನು ಕಹಿಯಾಗಿ ರುಚಿ ನೋಡುವಂತೆ ಮಾಡುತ್ತದೆ ಮತ್ತು ಕರುಳಿನ ಒಳಪದರವನ್ನು ಹಾನಿಗೊಳಿಸುತ್ತದೆ. ಒಬ್ಬ ವ್ಯಕ್ತಿಯು ಕೆರಳಿಸುವ ಕರುಳಿನ ಸಹಲಕ್ಷಣದಿಂದ ಬಳಲುತ್ತಿದ್ದರೆ, ಸಾಮಾನ್ಯ ಪ್ರಮಾಣದ ಸಪೋನಿನ್ ನಿಂದ ಕೂಡ ಅವರ ಕರುಳಿನ ಒಳಪದರವು ತೊಂದರೆಗೊಳಗಾಗಬಹುದು.

56
ಏನು ಮಾಡಬೇಕು?
Image Credit : AI meta

ಏನು ಮಾಡಬೇಕು?

ಅದಕ್ಕಾಗಿ ತೆರೆಯ ಪಾತ್ರೆಯಲ್ಲಿ ಬೇಳೆ ಬೇಯಿಸುವ ಸಂದರ್ಭದಲ್ಲಿ ನೊರೆ ಬಂದರೆ ಅದನ್ನು ಸೌಟ್‌ನಿಂದ ತೆಗೆದು ಹಾಕಬೇಕು. ಹಾಗಿದ್ದರೆ ಕುಕ್ಕರ್‌ನಲ್ಲಿ ಬೇಳೆ ಬೇಯಿಸಿದಾಗ ಏನು ಮಾಡಬೇಕು ಎನ್ನುವ ಪ್ರಶ್ನೆ ಕಾಡುತ್ತದೆ. ಇದಕ್ಕೆ ಉತ್ತರವಿಲ್ಲ. ಏಕೆಂದರೆ, ಈ ನೊರೆ ಬೇಳೆಯ ಜೊತೆ ಮಿಕ್ಸ್‌ ಆಗುವ ಕಾರಣ ಅದನ್ನು ಸೇವಿಸದೇ ಬೇರೆ ವಿಧಿಯಿಲ್ಲ.

66
ತಜ್ಞರು ಹೇಳೋದೇನು
Image Credit : AI meta

ತಜ್ಞರು ಹೇಳೋದೇನು

ಇದೇ ಕಾರಣಕ್ಕೆ ತಜ್ಞರು ಹೇಳುವಂತೆ ಬೇಳೆಯನ್ನು ಕುಕ್ಕರ್‌ನಲ್ಲಿ ಬೇಯಿಸಲೇಬಾರದು. ಮೊದಲೇ ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ಬೇಳೆ ನೆನೆಸಿಟ್ಟು ಬಳಿಕ ಪಾತ್ರೆಯಲ್ಲಿಯೇ ಅದನ್ನು ಬೇಯಿಸಬೇಕು. ಹೀಗೆ ಮಾಡಿದಾಗ ನೊರೆ ಬಂದರೆ ಸುಲಭದಲ್ಲಿ ತೆಗೆಯಬಹುದು. ಒಂದು ವೇಳೆ ಅರ್ಧ ಗಂಟೆ ಮೊದಲು ಬೇಳೆ ನೆನೆಸಿ ಇಟ್ಟರೆ ಈ ರೀತಿಯ ನೊರೆ ಬರುವುದಿಲ್ಲ. ಎನ್ನುವುದು ಅವರ ಮಾತು. ಇಲ್ಲದಿದ್ದರೆ ಆರೋಗ್ಯಕ್ಕೆ ಈ ನೊರೆ ಮಾರಕ. ಪ್ರತಿನಿತ್ಯವೂ ಇದನ್ನು ಸೇವಿಸುತ್ತಾ ಬಂದರೆ ದೇಹ ಏನು ಆಗಬಹುದು ಎನ್ನುವುದನ್ನು ನೀವೇ ಊಹಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಜೀವನಶೈಲಿ
ಅಡುಗೆಮನೆ ಸಲಹೆಗಳು
ಮಹಿಳೆಯರು

Latest Videos
Recommended Stories
Recommended image1
ಬೇಳೆ ಬೇಯಿಸುವಾಗ ಕುಕ್ಕರ್‌ ಸೀಟಿಯಿಂದ ಬೇಳೆ ಹೊರಕ್ಕೆ ಬರುತ್ತಾ? ಈ ಟಿಪ್ಸ್‌ ಫಾಲೋ ಮಾಡಿ
Recommended image2
Vastu Tips: ಬಿಸಿ ಪ್ಯಾನ್ ಮೇಲೆ ಹಾಲು ಚಿಮುಕಿಸುವುದೇಕೆ? ಇಲ್ಲಿದೆ ಈ ಪದ್ಧತಿಯ ಮಹತ್ವ
Recommended image3
ಅನ್ನ ಮಾಡುವ ಮುಂಚೆ ಎಷ್ಟು ಬಾರಿ ಅಕ್ಕಿಯನ್ನು ಹೇಗೆ & ಎಷ್ಟು ಬಾರಿ ತೊಳೆಯಬೇಕು? Kitchen Hacks
Related Stories
Recommended image1
ಬೇಳೆ ಬೇಯಿಸುವಾಗ ಕುಕ್ಕರ್‌ ಸೀಟಿಯಿಂದ ಬೇಳೆ ಹೊರಕ್ಕೆ ಬರುತ್ತಾ? ಈ ಟಿಪ್ಸ್‌ ಫಾಲೋ ಮಾಡಿ
Recommended image2
ಎರಡೇ ಚಮಚ ಎಣ್ಣೆ ಬಳಸಿ ಬದನೇಕಾಯಿ, ಆಲೂಗಡ್ಡೆಯ ಕ್ರಿಸ್ಪಿ, ಟೇಸ್ಟಿ ಫ್ರೈ ಮಾಡೋದು ಹೇಗೆ ಗೊತ್ತಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved