ಐದು ದಶಕಗಳ ಕನಸಾಗಿದ್ದ ಭದ್ರಾ ಮೇಲ್ದಂಡೆ ಯೋಜನೆ ಕೊನೆಗೂ ಫಲಿಸಿದ್ದು, ಚಿತ್ರದುರ್ಗ ಜಿಲ್ಲೆಗೆ ನೀರು ಹರಿದಿದೆ. ಈ ಸಂಭ್ರಮದ ವೇಳೆ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶ್ರೀಗಳು ಬಾಗಿನ ಅರ್ಪಿಸುವಾಗ 'ಬೇಗ ಸಾಯಲಿ' ಎಂದು ಹೇಳಿದ್ದು, ಈ ವಿಡಿಯೋ ವೈರಲ್ ಆಗಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

ಚಿತ್ರದುರ್ಗ (ಸೆ.9): ಭದ್ರಾ ಜಲಾಶಯದಿಂದ ಚಿತ್ರದುರ್ಗದ ಶಾಖಾ ಕಾಲುವೆಗೆ ಪ್ರಯೋಗಿಕವಾಗಿ ನೀರು ಹರಿಸಲಾಗಿದೆ. ಚಿತ್ರದುರ್ಗ ಜಿಲ್ಲೆ ಪ್ರವೇಶಿಸಿದ ಸಂದರ್ಭದಲ್ಲಿ ಸಾಣೇಹಳ್ಳಿ ಬಳಿ ಕಾಲುವೆಗೆ ಬಾಗಿನ ಅರ್ಪಣೆ ಮಾಡಲಾಯಿತು.

ಬಾಗಿನ ಅರ್ಪಣೆ ವೇಳೆ ಪಂಡಿತಾರಾಧ್ಯ ಶ್ರೀ ಯಡವಟ್ಟು

ಐದು ದಶಕಗಳ ಕನಸಾಗಿದ್ದ ಭದ್ರಾ ಮೇಲ್ದಂಡೆ ಯೋಜನೆ ಈಗ ಫಲಿಸಿದೆ. ಭದ್ರಾ ಜಲಾಶಯದ ನೀರು ಕೊನೆಗೂ ಚಿತ್ರದುರ್ಗ ಪ್ರವೇಶಿಸಿದೆ ಎಂಥ ಸುಸಂದರ್ಭದಲ್ಲಿ ಬಾಗಿನ ಅರ್ಪಿಸುವ ವೇಳೆ ಪಂಡಿತಾರಾಧ್ಯ ಶ್ರೀಗಳು ಯಡವಟ್ಟು ಮಾಡಿರುವ ಘಟನೆ ನಡೆದಿದೆ.

ಬಾಗಿನ ಅರ್ಪಣೆ ವೇಳೆ ಪಂಡಿತಾರಾಧ್ಯ ಶ್ರೀ ಯಡವಟ್ಟು

ಭದ್ರಾ ಜಲಾಶಯದಿಂದ ಚಿತ್ರದುರ್ಗದ ಶಾಖಾ ಕಾಲುವೆಗಳಿಗೆ ಪ್ರವೇಶಿಸಿದಾಗ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಬಳಿ ಇರುವ ಕಾಲುವೆಗೆ ಮಹಿಳೆಯರಿಂದ ಬಾಗಿನ ಅರ್ಪಣೆ ಮಾಡಲಾಯಿತು. ಈ ವೇಳೆ ಸಾಣೇಹಳ್ಳಿ ತರಳಬಾಳು ಮಠದ ಪಂಡಿತಾರಾಧ್ಯ ಶ್ರೀಗಳು ಮುತ್ತೈದೆ ಭಾಗ್ಯ ಕರುಣಿಸು ಎಂದು ಮಹಿಳೆಯರು ಬಾಗಿನ ಅರ್ಪಣೆ ವೇಳೆ, 'ಬೇಗ ಸಾಯಲಿ' ಎಂದ ಶ್ರೀಗಳು! ಸಾಣೇಹಳ್ಳಿ ಶ್ರೀಗಳು 'ಬೇಗ ಸಾಯಲಿ' ಎಂದಾಗ ಸ್ಥಳದಲ್ಲಿ ಮಹಿಳೆಯರು ನಕ್ಕಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾಣೆಹಳ್ಳಿ ಶ್ರೀಗಳ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇಂಥ ಶುಭ ಸಂದರ್ಭದಲ್ಲಿ ಒಬ್ಬ ಸ್ವಾಮೀಜಿ ಮಾತಾಡೋ ರೀತಿಯ ಇದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಐದಾರು ದಶಕಗಳ ಕನಸು ಭದ್ರಾ ಜಲಾಶಯ:

ಭದ್ರಾ ಜಲಾಶಯ ನಿನ್ನೆ ಮೊನ್ನೆಯದಲ್ಲ. ಇದಕ್ಕಾಗಿ ಐದಾರು ದಶಕಗಳ ಹೋರಾಟವೇ ನಡೆದಿದೆ. ಇದೀಗ ಭದ್ರಾ ಮೇಲ್ದಂಡೆಯ ಕನಸು ನನಸಾಗಿದೆ. ಇದು ಬಯಲು ಸೀಮೆಯ ಜನರ ಭಗಿರಥ ಪ್ರಯತ್ನ ಸಫಲವಾದಂತಾಗಿದೆ. ಬರಗಾಲದಿಂದ ತತ್ತರಿಸಿದ್ದ ಚಿತ್ರದುರ್ಗ ಜಿಲ್ಲೆಗೆ ಭದ್ರಾ ನೀರು ಪ್ರವೇಶಿಸುವತಿದ್ದಂತೆ ಪಾಪ ವಿಮೋಚನೆಯಾದಂತಾಗಿದೆ.