ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಪಿಡಿಒ ಕಚೇರಿಗೆ ಪಾದರಕ್ಷೆ ತೆಗೆದು ಪ್ರವೇಶಿಸಲು ಸೂಚನಾ ಫಲಕ ಅಳವಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಕಾರ್ಯಕರ್ತರು ಇದನ್ನು ಅಧಿಕಾರ ಮದ ಎಂದು ಖಂಡಿಸಿದ್ದಾರೆ.
ಮಂಗಳೂರು: ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಪಿಡಿಒ ಕಚೇರಿಗೆ ಪ್ರವೇಶಿಸಲು ಪಾದರಕ್ಷೆ ತೆಗೆದು ಪ್ರವೇಶಿಸಬೇಕೆಂದು ಸೂಚನಾ ಫಲಕ ಹಾಕಿರುವುದು ಅಧಿಕಾರ ಮದದ ಪರಕಾಷ್ಟೆ ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತ ಮಹೇಂದ್ರವರ್ಮ ಜೈನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ನೆಲೆಯಲ್ಲಿ ದೇವಾಲಯ, ಬಸದಿ, ಮಸೀದಿಯಂತಹ ಧಾರ್ಮಿಕ ಸ್ಥಳಗಳಲ್ಲಿ ಪಾದರಕ್ಷೆ ಹೊರಗಿಟ್ಟು ಪ್ರವೇಶಿಸುವ ನಿಯಮವಿದೆ. ಆದರೆ ಉಪ್ಪಿನಂಗಡಿ ಪಂಚಾಯಿತಿ ಕಚೇರಿಯಲ್ಲಿ ಪಿಡಿಒ ಕಚೇರಿಯನ್ನು ಪ್ರವೇಶಿಸಲು ನಾಗರಿಕರಿಗೆ ಪಾದರಕ್ಷೆಯನ್ನು ಕಳಚಿಟ್ಟು ಪ್ರವೇಶಿಸಲು ಸೂಚಿಸುವ ಫಲಕ ಅಳವಡಿಸಿದ್ದು, ಗ್ರಾಮದ ಗ್ರಾಮಸ್ಥರನ್ನು ಕೀಳಾಗಿ ಕಾಣುವ ನಡೆಯಾಗಿದೆ. ಪಂಚಾಯಿತಿ ಕಚೇರಿ ಗ್ರಾಮಸ್ಥರ ಆಸ್ತಿ. ಅಲ್ಲಿ ಗ್ರಾಮಸ್ಥರನ್ನೇ ಕೀಳಾಗಿ ನೋಡುವುದನ್ನು ಸಹಿಸಲಾಗದು. ಈ ತಾರತಮ್ಯವನ್ನು ಹೋಗಲಾಡಿಸದಿದ್ದರೆ ಹೋರಾಟ ಅನಿವಾರ್ಯವೆಂದು ಎಚ್ಚರಿಸಿದ್ದಾರೆ.
ವಿನಂತಿಪೂರ್ವಕ ಸೂಚನೆ
ಈ ಬಗ್ಗೆ ಪಂಚಾಯಿತಿ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಅವರನ್ನು ಸಂಪರ್ಕಿಸಿದಾಗ ಮಳೆಗಾಲದಲ್ಲಿ ಚಪ್ಪಲಿಯೊಂದಿಗೆ ಕೆಸರು ಕಚೇರಿಯೊಳಗೆ ಬರುವ ಕಾರಣಕ್ಕೆ ವಿನಂತಿ ಪೂರ್ವಕ ಸೂಚನೆ ಅಳವಡಿಸಲಾಗಿತ್ತು. ಇದು ಕಡ್ಡಾಯವೆಂದು ಅಲ್ಲ. ಮುಂದಕ್ಕೆ ಈ ಕಚೇರಿಯು ಅಧ್ಯಕ್ಷ, ಉಪಾಧ್ಯಕ್ಷರ ಕಚೇರಿಯಾಗಿ ಬಳಕೆಯಾಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರೈಲ್ವೆ ಕ್ರಾಂತಿ: ವಂದೇ ಭಾರತ್ ಸ್ಲೀಪರ್‌ನ ಹೊಸ ಪರ್ವ! ಬರೋಬ್ಬರಿ 260 ಹೊಸ ರೈಲಿಗೆ ಬೇಡಿಕೆ, ಯಾರಿಗೆಷ್ಟು ಗುತ್ತಿಗೆ?
ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು
ಉಪ್ಪಿನಂಗಡಿ ಪಂಚಾಯಿತಿ ಕಚೇರಿಯ ಪಿಡಿಒ ಕಚೇರಿಗೆ ಪ್ರವೇಶಿಸಲು ಚಪ್ಪಲಿ ತೆಗೆದು ಪ್ರವೇಶಿಸುವ ಸೂಚನಾ ಫಲಕ ಅಳವಡಿಸಿರುವ ಬಗ್ಗೆ ದ.ಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರನ್ನು ಸಂಪರ್ಕಿಸಿದಾಗ ಇದರ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬರೋಬ್ಬರಿ 70 ಕಡೆ ರಂಧ್ರ ಕೊರೆದು ಕಾಲುವೆ ನೀರು ಕಳ್ಳತನ; ಮುಳವಾಡ ಏತ ನೀರಾವರಿ ಯೋಜನೆ


