ಉಡುಪಿಯ ವಿಟ್ಲಪಿಂಡಿ ಉತ್ಸವದ ವೇಳೆ ಕೃಷ್ಣನ ಮಣ್ಣಿನ ಮೂರ್ತಿಯು ವಿಸರ್ಜನೆಗೂ ಮುನ್ನ ಭಗ್ನಗೊಂಡಿದೆ. ಈ ಅನಿರೀಕ್ಷಿತ ಘಟನೆಯನ್ನು, ಮಠದಲ್ಲಿ ಈ ಹಿಂದೆ ಕಂಡುಬಂದಿದ್ದ ಕಾಳಸರ್ಪ ದೋಷಕ್ಕೆ ಹೋಲಿಸಲಾಗುತ್ತಿದ್ದು, ಇದು ಜಗತ್ತಿಗೆ ಎದುರಾಗಬಹುದಾದ ಕಂಟಕದ ಮುನ್ಸೂಚನೆ ಎಂಬ ಚರ್ಚೆಗಳು ನಡೆಯುತ್ತಿವೆ.

ಉಡುಪಿ: ಕೆಲದಿನಗಳ ಹಿಂದಷ್ಟೇ ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಉತ್ಸವವನ್ನು ಉದ್ದೂರಿಯಾಗಿ ಆಚರಣೆ ಮಾಡಲಾಗಿತ್ತು. ವಿಟ್ಲಪಿಂಡಿ ಉತ್ಸವವನ್ನು ಮುಗಿಸಿ ಕೃಷ್ಣ ಮಣ್ಣಿನ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜನೆ ಮಾಡುವುದು ಸಂಪ್ರದಾಯ. ಆದರೆ ವಿಗ್ರಹ ವಿಸರ್ಜನೆಗೂ ಮುನ್ನ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಬೇರೆ ಬೇರೆ ಕಾರಣಗಳಿಂದ ಚರ್ಚೆ ಆಗುತ್ತಿದೆ.

ಉಡುಪಿ ಕೃಷ್ಣ ಮಠದಲ್ಲಿ ವಿಗ್ರಹ ಭಗ್ನ: ಅಪಶಕುನದ ಸೂಚನೆಯೇ?

ಶಿರೂರು ಶ್ರೀಗಳು ಮಠದ ವಿಟ್ಲಪಿಂಡಿ ಉತ್ಸವದ ಬಳಿಕ ಮಣ್ಣಿನ ಮೂರ್ತಿಯ ವಿಸರ್ಜನೆಗೂ ಮುನ್ನ ಅದು ಭಗ್ನಗೊಳ್ಳುತ್ತದೆ. ಭಿನ್ನಗೊಂಡ ವಿಗ್ರಹವನ್ನೇ ಮಧ್ವ ಸರೋವರದಲ್ಲಿ ವಿಸರ್ಜನೆ ಮಾಡುವ ಅನಿವಾರ್ಯ ಸ್ಥಿತಿ ಎದುರಾಗಿತ್ತು. ಆದರೆ ಇದರ ಬಗ್ಗೆ ಭಾರೀ ಚರ್ಚೆ ಆಗುತ್ತಿದ್ದು, ಇದು ಮುಂದಿನ ಅಪಾಯದ ಮುನ್ಸೂಚನೆಯನ್ನು ಕೃಷ್ಣ ನೀಡಿದ್ದಾರೆ ಎಂದು ಚರ್ಚೆ ಆಗುತ್ತಿದೆ. ಈ ಘಟನೆ ಅಪಶಕುನದ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಇನ್ನೊಂದು ಘಟನೆಯನ್ನು ಜನರು ಲಿಂಕ್ ಮಾಡುತ್ತಿದ್ದು, ಕೆಲದಿನಗಳ ಹಿಂದೆ ಕಾಳಸರ್ಪ ಯೋಗಕ್ಕೂ ನಂಟು ಮಾಡುತ್ತಿದ್ದಾರೆ.

ಜಗತ್ತಿಗೆ ಕಂಟಕ ಇದೆ..

ಉಡುಪಿಯ ಕೃಷ್ಣಮಠದಲ್ಲಿ ಮಠದ ವ್ಯವಸ್ತೆಯ ಸುಧಾರಣೆಗೆ ಅಷ್ಟಮಂಗಲ ಪ್ರಶ್ನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಅದರಲ್ಲಿ ಕಾಳಸರ್ಪ ಯೋಗ ಇದೆ ಅನ್ನೋ ವಿಚಾರ ಕಂಡು ಬಂದಿತ್ತು. ಇದರಿಂದ ಜಗತ್ತಿಗೆ ಕಂಟಕ ಇದೆ, ಕೃಷ್ಣಮಠ ಸೇರಿದಂತೆ ದೇಗುಲಗಳಲ್ಲಿ ಪರಿಹಾರ ನಡೆಸಬೇಕು ಎಂಬ ಸಲಹೆ ನೀಡಲಾಗಿತ್ತು. ಇದರೊಂದಿಗೆ ಶೀಘ್ರವೇ ಪರಿಹಾರ ಧಾರ್ಮಿಕ ಕಾರ್ಯ ನಡೆಸುವ ಚಿಂತನೆಯನ್ನು ಮಾಡಲಾಗಿದ ಎಂಬ ಮಾಹಿತಿ ಲಭ್ಯವಾಗಿದೆ.

ರಥದಿಂದ ಮಣ್ಣಿನ ಮೂರ್ತಿಯನ್ನ ಕೆಳಕ್ಕೆ ಇಳಿಸಬೇಕಾದರೆ ಕೈಯಿಂದ ಜಾರಿ ಬಿದ್ದು ಮೂರ್ತಿ ಭಗ್ನಗೊಂಡಿತ್ತು. ಪರ್ಯಾಯ ಶಿರೂರು ಶ್ರೀಗಳು ಮೂರ್ತಿಯನ್ನು ರಥದಿಂದ ಕೆಳಕ್ಕೆ ಇಳಿಸುವಾಗ ಈ ಅವಘಡ ಸಂಭವಿಸಿತ್ತು. ಅನಿವಾರ್ಯ ಕಾರಣಗಳಿಂದ ಭಗ್ನಗೊಂಡ ಮೂರ್ತಿಯನ್ನೇ ಮಧ್ವ ಸರೋವರದಲ್ಲಿ ವಿಸರ್ಜನೆ ಮಾಡಲಾಗಿತ್ತು. ಮಠದ ಇತಿಹಾಸದಲ್ಲಿ ಇಲ್ಲಿಯವರೆಗೂ ಇಂತಹ ಘಟನೆ ನಡೆದಿರಲಿಲ್ಲ. ಅದು ಜನ್ಮಾಷ್ಟಮಿಯ ಸಂದರ್ಭದಲ್ಲಿ ಇಂತಹ ಘಟನೆ ನಡೆದಿರೋದು ಅಪಾಯದ ಮುನ್ಸೂಚನೆ ಎಂಬ ಬಗ್ಗೆ ಚರ್ಚೆ ಜೋರಾಗಿದೆ.

18 ಕೋಟಿ ರಾಮ ಮಂತ್ರ ಜಪ

ದೇಶಕ್ಕೆ ಕಾಳಸರ್ಪ ಯೋಗದ ಉಂಟು, ಅದಕ್ಕಾಗಿ ಇಲ್ಲಿ ನಾವು ಪರಿಹಾರ ಮಾಡಿದರೆ ಕೃಷ್ಣಮಠದ ಸಮಸ್ಯೆ ಮಾತ್ರ ಅಲ್ಲ, ಆ ಕಾಳಸರ್ಪಕ್ಕೆ ಬೇಕಾಗುವಂತಹದ್ದನ್ನು ಕೂಡ ಕೃಷ್ಣಮಠದಲ್ಲಿ ಮಾಡಬೇಕು ಅಂತ ಇದೆ. ಇದನ್ನು ಮಾಡಿದರೆ ಪರಹಾರ ಆಗುತ್ತೆ ಅಂತ ಬಂತು. ಅದು ಇಡೀ ದೇಶಕ್ಕೆ ಯಾವಾಗ ಮಾಡಬೇಕು ಅಂತ ಪ್ರಶ್ನೆ ಹೇಳಿದಾಗ ಅದು ಹಾಗೆ ಬಂತು. ಅದನ್ನು ಆದಷ್ಟು ಬೇಗ ಮಾಡಿದರೆ ಈ ಕಾಳಸರ್ಪಯೋಗ ದೇಶಕ್ಕೆ ಇರೋದು ಹೋಗುತ್ತದೆ. ಹಾಗಾದರೆ ನಮ್ಮ ಸಮಸ್ಯೆಯಿಂದ ಹೋಗುವುದರ ಇರುವುದರಿಂದ ಬರುವುದ ಅಂತ ಕೇಳಿದರೆ, ಹಾಗಲ್ಲ.. ಇಲ್ಲಿ ಇನ್ನಷ್ಟು ವ್ಯವಸ್ತೆ ಒಳ್ಳೆ ಮಾಡಿದಾಗ ದೇವರು ಖುಷಿಯಾಗಿ ಎಲ್ಲವನ್ನು ಸರಿ ಮಾಡುತ್ತಾರೆ ಅಂತ. ಅದಕ್ಕೆ ಸುಮಾರು ಎಲ್ಲಾ ಉಂಟು, 18 ಕೋಟಿ ರಾಮ ಮಂತ್ರ ಜಪ, ಒಂದು ಕೋಟಿ ಕೃಷ್ಣ ಮಂತ್ರ ಜಪ, ಒಂದು ಲಕ್ಷ ವಿಷ್ಣು ಸಹಸ್ರನಾಮ ಹೀಗೆ ಅನೇಕ ಜಪಗಳನ್ನು ಹೇಳಿದ್ದಾರೆ. ಇದನ್ನು ಕೃಷ್ಣ ಮಠ ಮಾತ್ರವಲ್ಲದೇ ಲೋಕದ ಜನರು ಎಲ್ಲರೂ ಸೇರಿ ಮಾಡಬೇಕು. ಎಲ್ಲಾ ಭಕ್ತರು ಸೇರಿ ಮಾಡೇಕು ಎಂದು ಶಿರೂರು ಶ್ರೀ ವೇದವರ್ಧನ ತೀರ್ಥ ಸ್ವಾಮಿಜಿಗಳು ಹೇಳಿದ್ದರು.

ಲೋಕರಾಷ್ಟ್ರಕ್ಕೆ ಒಳ್ಳೆಯದಾಗಬೇಕು..

ಇನ್ನು, ಶ್ರೀಮಠದ ದಿವಾನರಾದ ಡಾ ಉದಯ ಸರಳತ್ತಾಯ ಅವರು ಮಾತನಾಡಿ, ಲೋಕರಾಷ್ಟ್ರಕ್ಕೆ ಒಳ್ಳೆಯದಾಗಬೇಕು ಎಂದು ಹೇಳಿದ್ದರಿಂದ, ಅಲ್ಲಿ ಕಾಳಸರ್ಪ ಯೋಗ ಅನ್ನೋದು ಕೂಡಿ ಬಂದ ಲಕ್ಷಣ ತೋರಿಬಂತು. ಕಾಳಸರ್ಪ ಎಂದರೆ ರಾಹು ಕೇತುಗಳ ಮಧ್ಯದಲ್ಲಿ ಏಳು ಗ್ರಹಗಳು ಬರುತ್ತದೆ. ಇದು ಖಗೋಳದಲ್ಲಿ ನಡೆಯುವಂತಹ ಒಂದು ವೈವಿಧ್ಯವಾಗಿದೆ. ಇಡೀ ಲೋಕಕ್ಕೆ ಇದು ಕ್ಷೋಭೆಯನ್ನು ತಂದುಕೊಡುವಂತದ್ದು, ಈ ಕ್ಷೇತ್ರದಲ್ಲಿ ಈ ಚಲನೆಗಳನ್ನು ಗುರುತಿಸಿದ್ದರಿಂದ ಇದಕ್ಕೆ ಪರಿಹಾರಕ್ಕೂ ಇಲ್ಲಿ ಆಗುತ್ತದೆ. ಆದ್ದರಿಂದ ಎಲ್ಲಿಯೇ ಇದ್ದರೂ ಪರಿಹಾರ ನಡೆಸಬಹುದು, ಭಕ್ತಿರಂದ ಲೋಕ್ಕೆ ಒಳ್ಳೆದಾಗುತ್ತದೆ ಎಂದು ತಿಳಿಸಿದ್ದರು.

YouTube video player