MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Duleep Trophy Final
Sirsi-Haveri Highway
ED Raids Satish Jarkiholi
Bengaluru Flyovers
Valmiki Corporation Scam
Cauvery Water Issue
Bhadra Irrigation Project
Shivaraj Tangadagi vs Janardhan Reddy
Leelamma Ninna Ganda Yaramma
Karnataka Government Schools
Karnataka Gramanubhava Programme
  • Home
  • Karnataka Districts
  • 73ನೇ ವಯಸ್ಸಿನಲ್ಲಿಯೂ ಕೆಲಸ; ದಿನಕ್ಕೆ 25 ಸಾವಿರ ಸಂಪಾದನೆ; ಇದು ಅಜ್ಜಿ ಖಾನಾವಳಿ!

73ನೇ ವಯಸ್ಸಿನಲ್ಲಿಯೂ ಕೆಲಸ; ದಿನಕ್ಕೆ 25 ಸಾವಿರ ಸಂಪಾದನೆ; ಇದು ಅಜ್ಜಿ ಖಾನಾವಳಿ!

73 ವರ್ಷದ ಶಿವಗಂಗಮ್ಮ ಅಜ್ಜಿ, ಖಾನಾವಳಿಯನ್ನು ಕಳೆದ 25 ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ವಯಸ್ಸನ್ನು ಮೀರಿ ದುಡಿಯುವ ಇವರ ಹೋಟೆಲ್, ರುಚಿಕರವಾದ ಜೋಳದ ರೊಟ್ಟಿಗೆ ಪ್ರಸಿದ್ಧವಾಗಿದ್ದು, ಕಾಯಕವೇ ಕೈಲಾಸವೆಂದು ನಂಬಿ ತಮ್ಮ ಕೊನೆಯುಸಿರಿನವರೆಗೂ ದುಡಿಯಬೇಕೆಂಬ ಹಂಬಲ ಹೊಂದಿದ್ದಾರೆ.

2 Min read
Author : Mahmad Rafik
Published : Sep 08 2026, 12:45 PM IST
Share this Photo Gallery
  • FB
  • TW
  • Linkdin
  • Whatsapp
16
ಅಜ್ಜಿ ಖಾನಾವಳಿ
Image Credit : Gemini

ಅಜ್ಜಿ ಖಾನಾವಳಿ

ದುಡಿಬೇಕು ಅನ್ನೋ ಛಲ ಇದ್ರೆ ವಯಸ್ಸು ಅಡ್ಡಿ ಬರಲ್ಲ ಎಂಬುದಕ್ಕೆ ಈ ಅಜ್ಜಿ ಸಾಕ್ಷಿಯಾಗಿದ್ದಾರೆ. ವಯಸ್ಸು 73 ಆದರೂ 23ರ ಹರೆಯದವರಂತೆ ಕೆಲಸ ಮಾಡುತ್ತಾರೆ. ಬೆಳಗ್ಗೆ 9ಕ್ಕೆ ಶುರುವಾದ್ರೆ ಕೆಲಸ ರಾತ್ರಿ 11 ಗಂಟೆಗೆ ಮುಗಿಯುತ್ತದೆ. ಕೊಪ್ಪಳಕ್ಕೆ ಬರೋ ಜನರು ಈ ಅಜ್ಜಿಯ ಹೋಟೆಲ್ ಹುಡುಕಿಕೊಂಡು ಬರುತ್ತಾರೆ. ಬಂಗಾರ ಗಳಿಕೆ ಮಾಡಬಾರದು, ಬಂಗಾರದಂತಹ ಗುಣ ಸಂಪಾದನೆ ಮಾಡಬೇಕು ಅನ್ನೋದು ಅಜ್ಜಿಯವರ ಮಾತು. ಬೇಕು ಅನ್ನೋನು ಬೇಕೂಫ್, ಸಾಕು ಅನ್ನೋನೇ ಸಿದ್ದಪ್ಪ ಅನ್ನೋ ಅಜ್ಜಿ, ಪ್ರತಿಕ್ಷಣವೂ ಸಿದ್ದಾರೂಢ (ದೇವರು) ಅವರನ್ನು ನೆನಪಿಸಿಕೊಳ್ಳುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
25 ವರ್ಷದಿಂದ ಖಾನಾವಳಿ
Image Credit : Gemini

25 ವರ್ಷದಿಂದ ಖಾನಾವಳಿ

ಈ ಅಜ್ಜಿಯ ಹೆಸರು ಶಿವಗಂಗಮ್ಮ, ಶ್ರೀ ಸಿದ್ದಾರೂಢ ಹೆಸರಿನಲ್ಲಿ ಕಳೆದ 25 ವರ್ಷದಿಂದ ಖಾನಾವಳಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಅಜ್ಜಿಗೆ ನಾಲ್ಕು ಮಕ್ಕಳು. ಇಲ್ಲಿ ನೀಡಲಾಗುವ ಜೋಳದ ರೊಟ್ಟಿ ಕೊಪ್ಪಳದಲ್ಲಿ ಫೇಮಸ್. ನನಗೆ ಅಕ್ಷರಜ್ಞಾನ ಇಲ್ಲ ಸರ್. ಲೋಕಜ್ಞಾನ ಇದೆ. ಲೆಕ್ಕ ಮಾಡಲು ಯಾವುದೇ ಕ್ಯಾಲ್ಕುಲೇಟರ್ ಬಳಸಲ್ಲ.

ಲಾಕ್‌ಡೌನ್ ಸಂದರ್ಭದಲ್ಲಿಯೂ ಹೋಟೆಲ್ ಮುಚ್ಚದೇ ಕೆಲಸ ಮಾಡಿದ್ದೇನೆ. ಆ ವೇಳೆ ಪೊಲೀಸರು, ಪುರಸಭೆ ಸಿಬ್ಬಂದಿಯೂ ಇಲ್ಲಿಗೆ ಬಂದು ಊಟ ಮಾಡುತ್ತಿದ್ದರು. ಎಲ್ಲವೂ ಸಿದ್ದಾರೂಢ ಸ್ವಾಮೀಜಿಗಳ ಆಶೀರ್ವಾದದಿಂದ ಕೆಲಸ ನಡೆಯುತ್ತಿದೆ ಎಂದು ಅಜ್ಜಿ ಹೇಳುತ್ತಾರೆ.

Related Articles

Related image1
Gadag ನಿಲ್ದಾಣದಲ್ಲಿ ಶೇಂಗಾ ಮಾರೋ ತಿಪ್ಪಮ್ಮ ಅಜ್ಜಿಯ ಆದಾಯ, ಮಾಡಿದ ಆಸ್ತಿ ಎಷ್ಟು?
Related image2
ಸವದತ್ತಿ ರೈತನ ಖೋವಾ ಸಾಮ್ರಾಜ್ಯ; 600 ltr ಹಾಲು, ₹240ಯಂತೆ 150 kg ಖೋವಾ ಮಾರಾಟ
36
ಕೊಪ್ಪಳದ ಶಿವಗಂಗಮ್ಮ ಅಜ್ಜಿ
Image Credit : Gemini

ಕೊಪ್ಪಳದ ಶಿವಗಂಗಮ್ಮ ಅಜ್ಜಿ

ಶಿವಗಂಗಮ್ಮ ಅವರ ಮೂಲತಃ ಹುನ್ನಾಳದ ನಿವಾಸಿ. ಕುಷ್ಟಗಿ ತಾಲೂಕಿನ ಮುನ್ನಾಳ ಗ್ರಾಮದ ಚಂದಲಿಂಗಪ್ಪ ಎಂಬವರ ಜೊತೆ ಮದುವೆಯಾಗುತ್ತದೆ. ಬಾಲ್ಯವಿವಾಹ ಆಗಿದ್ದರಿಂದ ಶಿವಲಿಂಗಮ್ಮಾ ಅವರಿಗೆ ಮದುವೆಯಾಗಿದ್ದು ಸಹ ಅಷ್ಟು ನೆನಪಿಲ್ಲ. ಗಂಡನೂ ಹೆಚ್ಚು ಕೆಲಸ ಮಾಡದ ಹಿನ್ನೆಲೆ ಉದ್ಯೋಗ ಅರಿಸಿಕೊಂಡು ಕೊಪ್ಪಳ ಪಟ್ಟಣಕ್ಕೆ ಬರುತ್ತಾರೆ.

46
ಹೋಟೆಲ್ ವ್ಯಾಪಾರ ಆರಂಭ ಆಗಿದ್ದು ಹೇಗೆ ?
Image Credit : Gemini

ಹೋಟೆಲ್ ವ್ಯಾಪಾರ ಆರಂಭ ಆಗಿದ್ದು ಹೇಗೆ ?

ತವರುಮನೆಯಲ್ಲಿ ಹೋಟೆಲ್ ವ್ಯಾಪಾರ ಮಾಡಿದ್ದರಿಂದ ಕೆಲಸದ ಅನುಭವ ಇತ್ತು. ಗಂಡನ ಮನೆಯಲ್ಲಿ ಸಣ್ಣದಾಗಿ ಹೋಟೆಲ್ ವ್ಯಾಪಾರ ಮಾಡಿದೆ. ಅಲ್ಲಿ ಹೆಚ್ಚು ವ್ಯಾಪಾರ ಇಲ್ಲದ ಕಾರಣ ಕೊಪ್ಪಳಕ್ಕೆ ಬಂದೆ. ಆರಂಭದಲ್ಲಿ ರಸ್ತೆಬದಿ ಹೋಟೆಲ್ ಇತ್ತು. ಈಗ ಇಲ್ಲಿಯವರಗೆ ಬಂದಿದ್ದೇನೆ.

ಕೊಪ್ಪಳದಲ್ಲಿ ಮಗ ಪ್ರತ್ಯೇಕ ಹೋಟೆಲ್ ಮಾಡ್ಕೊಂಡಿದ್ದಾನೆ. ಅಳಿಯನೂ ಸರ್ಕಲ್‌ನಲ್ಲಿ ಹೋಟೆಲ್ ಹಾಕಿಕೊಂಡಿದ್ದಾನೆ. ಇಲ್ಲಿ ನಾನೊಬ್ಬಳೇ ಹೋಟೆಲ್ ನಡೆಸುತ್ತಿದ್ದೇನೆ. ಅಡುಗೆ ಮಾತ್ರ ನಾನೇ ಮಾಡುವೆ. ಅಡುಗೆ ಮಾಡಿಯೇ ಗಲ್ಲಾಪೆಟ್ಟಿಗೆಗೆ ಬಂದು ಕುಳಿತುಕೊಳ್ಳುತ್ತೇನೆ ಎಂದು ಶಿವಗಂಗಮ್ಮಾ ಅಜ್ಜಿ ಹೇಳುತ್ತಾರೆ.

56
ಕೊನೆಯವರೆಗೂ ದುಡಿಬೇಕು, ಚೆನ್ನಾಗಿರುವಾಗಲೇ ಶಿವನ ಪಾದ ಸೇರಬೇಕು
Image Credit : Gemini

ಕೊನೆಯವರೆಗೂ ದುಡಿಬೇಕು, ಚೆನ್ನಾಗಿರುವಾಗಲೇ ಶಿವನ ಪಾದ ಸೇರಬೇಕು

ಕೊಪ್ಪಳಕ್ಕೆ ಬಂದು 25 ವರ್ಷ ಆಯ್ತು. ಕೈ-ಕಾಲು ಗಟ್ಟಿಯಾಗಿರುವಾಗಲೇ ಜೀವ ಹೋಗಬೇಕೆಂದು ಆ ಸಿದ್ದಾರೂಢನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ಯಾರ ಹಂಗಿನಲ್ಲಿಯೂ ಇರಬಾರದು. ನಮ್ಮ ಖಾನಾವಳಿಗೆ ಬರುವ ಗ್ರಾಹಕರಲ್ಲಿ ಸಿದ್ದಾರೂಢರನ್ನು ಕಾಣುತ್ತೇನೆ. ಗ್ರಾಹಕರು ಸಹ ನನ್ನನ್ನು ತಾಯಿ ಸ್ವರೂಪದಲ್ಲಿ ನೋಡುತ್ತಾರೆ. ನನ್ನ ಜೀವನಕ್ಕಿಷ್ಟು ಸಾಕು. ಕೊನೆಯವರೆಗೂ ದುಡಿಯಬೇಕು, ಚೆನ್ನಾಗಿಯೇ ಇರೋವಾಗಲೇ ಶಿವನ ಪಾದ ಸೇರಿಕೊಳ್ಳಬೇಕು ಎಂದು ಅಜ್ಜಿ ಹೇಳುತ್ತಾರೆ.

66
ತಿಂಗಳಿಗೊಮ್ಮೆ 2 ಲಕ್ಷ ರೂಪಾಯಿಯಷ್ಟು ದಿನಸಿ ಖರೀದಿ
Image Credit : Gemini

ತಿಂಗಳಿಗೊಮ್ಮೆ 2 ಲಕ್ಷ ರೂಪಾಯಿಯಷ್ಟು ದಿನಸಿ ಖರೀದಿ

ತಿಂಗಳಿಗೆ ಒಂದು ಬಾರಿ ದಿನಸಿ ಖರೀದಿ ಮಾಡುತ್ತೇವೆ. ಪಾಟೀಲರ ಅಂಗಡಿಯಲ್ಲಿ ತಿಂಗಳಿಗೊಮ್ಮೆ 2 ಲಕ್ಷ ರೂಪಾಯಿಯಷ್ಟು ದಿನಸಿ ಖರೀದಿ ಮಾಡುತ್ತೇನೆ. ಇಲ್ಲಿ 10 ಜನರು ಕೆಲಸ ಮಾಡುತ್ತಾರೆ. ದಿನಕ್ಕೆ 25 ಸಾವಿರ ರೂಪಾಯಿಗಷ್ಟು ಕಲೆಕ್ಷನ್ ಆಗುತ್ತದೆ. ಉಳಿತಾಯ ಕಡಿಮೆಯಾಗುತ್ತದೆ. ಒಂದು ಊಟಕ್ಕೆ 2 ರೊಟ್ಟಿ ಕೊಡುತ್ತೇನೆ. ಅನ್ನಕ್ಕೆ ಯಾವುದೇ ಲಿಮಿಟ್ ಇಲ್ಲ. ಇದುವರೆಗೂ ಇಷ್ಟೇ ಅಂತ ಸೀಮಿತ ಮಾಡಿಲ್ಲ. ಈ ಹಿಂದೆ ಸಗಣಿಯನ್ನು ಸಂಗ್ರಹಿಸಿದ್ರೆ ತಿಂಗಳಿಗೆ 5 ರೂಪಾಯಿ ಸಿಗುತ್ತಿತ್ತು ಎಂದು ಹಳೆ ದಿನಗಳನ್ನು ನೆನಪು ಮಾಡಿಕೊಂಡರು.

ಇದನ್ನೂ ಓದಿ: Shivamogga ಉಪ್ಪಿನಕಾಯಿ ಬ್ಯುಸಿನೆಸ್; ದಿನಕ್ಕೆ 500-600 kg ಸೇಲ್, 3-4 ಕೋಟಿ ಆದಾಯ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕೊಪ್ಪಳ
ವ್ಯವಹಾರ
ವ್ಯಾಪಾರ ಸುದ್ದಿ
ವ್ಯಾಪಾರ ಕಲ್ಪನೆ

Latest Videos
Recommended Stories
Recommended image1
ಸೆಪ್ಟೆಂಬರ್ ಅಂತ್ಯದಿಂದ ಓಲಾ, ಉಬರ್‌ಗಳಲ್ಲೂ BMTC ಟಿಕೆಟ್ ಬುಕಿಂಗ್ ಹಾಗೂ ಲೈವ್ ಟ್ರ್ಯಾಕಿಂಗ್ ಲಭ್ಯ
Recommended image2
ನೈಸ್ ರಸ್ತೆಗೆ ಪರ್ಯಾಯವಾಗಿ ಬಿಡಿಎಯಿಂದ 'PRR-2' ಯೋಜನೆಗೆ ಮರುಜೀವ: 1,126 ಭೂಮಾಲೀಕರಿಗೆ ಆಸ್ತಿ ಕಳೆದುಕೊಳ್ಳುವ ಭೀತಿ!
Recommended image3
Belagavi: ಸಾಹುಕಾರ್ ಕುಟುಂಬಕ್ಕೆ ಆಫ್ರಿಕಾ ಲಿಂಕ್: ಕೊನೆಗೂ ಇಡಿ ದಾಖಲಿಸಿದ ಆ ಬಿಗ್ ಕೇಸ್ ಯಾವುದು? ಬಯಲಾಗುತ್ತಾ ಅಸಲಿ ಸತ್ಯ?
Related Stories
Recommended image1
Gadag ನಿಲ್ದಾಣದಲ್ಲಿ ಶೇಂಗಾ ಮಾರೋ ತಿಪ್ಪಮ್ಮ ಅಜ್ಜಿಯ ಆದಾಯ, ಮಾಡಿದ ಆಸ್ತಿ ಎಷ್ಟು?
Recommended image2
ಸವದತ್ತಿ ರೈತನ ಖೋವಾ ಸಾಮ್ರಾಜ್ಯ; 600 ltr ಹಾಲು, ₹240ಯಂತೆ 150 kg ಖೋವಾ ಮಾರಾಟ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved