ಪ್ರೇಯಸಿ ತನ್ನ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದ ಯುವಕನೊಬ್ಬ ದೇವದುರ್ಗದಲ್ಲಿ ಏರ್‌ಟೆಲ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿದ್ದಾನೆ. ಸುಮಾರು ನಾಲ್ಕು ಗಂಟೆಗಳ ಕಾಲ ಅಧಿಕಾರಿಗಳನ್ನು ಕಾಡಿದ ಆತ, ಕೊನೆಗೆ ಪ್ರೇಯಸಿಯನ್ನು ಸ್ಥಳಕ್ಕೆ ಕರೆಸಿದ ನಂತರವೇ ಕೆಳಗಿಳಿದು ಬಂದಿದ್ದಾನೆ.
ರಾಯಚೂರು: ಪ್ರೇಯಿಸಿ ತನ್ನ ಮೊಬೈಲ್ ನಂಬರ್‌ರನ್ನು ಬ್ಲಾಕ್‌ಗೆ ಹಾಕಿದ್ದಾಳೆ ಎಂದು ನೊಂದ ಪ್ರೀಯಕರ ಏರ್‌ಟೆಲ್ ಮೊಬೈಲ್ ಟವರ್ ಕುಳಿತು ಬೆದರಿಕೆ ತಂತ್ರ ಹೂಡಿದ ಘಟನೆ ಪಟ್ಟಣದಲ್ಲಿ ಶನಿವಾರ ಸಂಜೆ ಜರುಗಿದೆ.
ಗಂಗಾವತಿ ಮೂಲದ ರಾಜು ಎಂಬ ಯುವಕ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಯೇ ಪ್ರೀತಿ ಮಾಡಿದ್ದ ಹುಡುಗಿ ದೇವದುರ್ಗ ತಾಲೂಕಿನ ಗ್ರಾಮವೊಂದರ ನಿವಾಸಿ. ಇವಳು ಕೂಡ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಳು. ನಾಗರಪಂಚಮಿ ಹಬ್ಬಕ್ಕೆ ಬಂದಿದ್ದ ಹುಡುಗಿ ಪ್ರೇಮಿ ಪದೇ ಪದೇ ಫೋನ್ ಮಾಡುತ್ತಿದ್ದರಿಂದ ಬೇಸತ್ತು ಮೊಬೈಲ್ ನಂಬರ್ ಬ್ಲಾಕ್‌ಗೆ ಹಾಕಿದ್ದಳು ಎಂದು ಹೇಳಲಾಗುತ್ತಿದೆ.
ಪ್ರೇಯಸಿ ಬರುತ್ತಿದ್ದಂತೆ ಕೆಳಗೆ ಇಳಿದು ಬಂದ ರಾಜು
ಟವರ್ ಏರಿ ಕುಳಿತಿದ್ದ ಯುವಕ, ಕೆಳಗೆ ತನ್ನ ಮತ್ತು ಪ್ರೇಮಿಯ ಫೋನ್ ನಂಬರ್ ಇಟ್ಟಿದ್ದ. ಪೊಲೀಸರು, ಅಗ್ನಿಶಾಮಕ ಠಾಣೆ ಸಿಬ್ಬಂದಿ ಆತನನ್ನು ಕೆಳಗಿಳಿಸಲು 4 ಗಂಟೆಗಳ ಕಾಲ ಪರದಾಡಿ ಹರಸಾಹಪಟ್ಟರು.
ಕೊನೆಗೆ ಪ್ರೇಮಿಯನ್ನು ಕರೆಸಿದ ಬಳಿಕ ಯುವಕ ಕೆಳಗೆ ಇಳಿದು ಬಂದಿದ್ದಾನೆ. ಯುವತಿಯನ್ನು ಸ್ವಗ್ರಾಮಕ್ಕೆ ಕಳುಹಿಸಲಾಗಿದೆ. ಕೂಡಲೇ ಯುವಕನನ್ನು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಮನೋರೋಗಿ ಇರಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ರಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ತಹಸೀಲ್ದಾರ್ ನಾಗಮ್ಮ ಎಂ. ಕಟ್ಟೀಮನಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ: ಜಾನಕಿಯಾಗಿ ವೆಂಕಟೇಶ್ ರೆಡ್ಡಿ ಕೈ ಹಿಡಿದ ಶಹೀನಾ: ಸಪ್ತಪದಿ ತುಳಿದ ಅಪರೂಪದ ಪ್ರೇಮಕಥೆ
ಪಿಐ ಮಂಜುನಾಥ ಎಸ್. ನೇತೃತ್ವದ ನಡೆದ ಕಾರ್ಯಾಚರಣೆ ಯಶಸ್ವಿಯಾಗಿ ನಡೆದಿದೆ. ಸುದ್ದಿ ತಿಳಿಯುತ್ತಲೇ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಜಮೆಯಾಗಿದ್ದರು.
ಇದನ್ನೂ ಓದಿ: ಮಳೆಗಾಗಿ ದೇವರನ್ನೇ ಬೈದು ಪೂಜೆ! ಕಾಟಮಯ್ಯ ದೇವಸ್ಥಾನದಲ್ಲಿ ವಿಶಿಷ್ಟ ಸಂಪ್ರದಾಯ, ಪೂಜೆ


