ಕೋಲಾರ ಜಿಲ್ಲೆಯ ಹಲವು ವರ್ಷಗಳ ರೈಲ್ವೆ ಬೇಡಿಕೆಗಳು ಗುದ್ದಲಿ ಪೂಜೆಗೇ ಸೀಮಿತವಾಗಿವೆ. ಶ್ರೀನಿವಾಸಪುರ ಕೋಚ್ ಕಾರ್ಖಾನೆ, ಮೇಲ್ಸೇತುವೆಗಳ ನಿರ್ಮಾಣದಂತಹ ಯೋಜನೆಗಳಿಗೆ ಮರುಜೀವ ನೀಡುವಂತೆ ರೈತ ಸಂಘವು ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣನವರಿಗೆ ಮನವಿ ಸಲ್ಲಿಸಿದೆ.

ಕೋಲಾರ: ಜಿಲ್ಲೆಯ ಜನತೆಯ ಹಲವು ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ವರ್ಷಗಳ ಬೇಡಿಕೆಗಳು ಗುದ್ದಲಿ ಪೂಜೆಗೆ ಸೀಮತವಾಗಿದೆ. ಶ್ರೀನಿವಾಸಪುರದಲ್ಲಿ ರೈಲ್ವೆ ಕೋಚ್‌ ಕಾರ್ಖಾನೆಯನ್ನು ಪ್ರಾರಂಭ ಮಾಡಿ ಕಾಮಸಮುದ್ರ ಸೇರಿದಂತೆ ವಿವಿಧ ರೈಲ್ವೆ ಗೇಟ್‌ಗಳ ಬಳಿ ಮೇಲ್ಸೇತುವೆಗಳನ್ನು ಅಭಿವೃದ್ಧಿಪಡಿಸಿ ರೈಲ್ವೆ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ರೈತ ಸಂಘದಿಂದ ಕೇಂದ್ರ ರೈಲ್ವೆ ಸಚಿವರಾದ ವಿ ಸೋಮಣ್ಣನವರಿಗೆ (V Somanna) ಮನವಿ ನೀಡಿ ಒತ್ತಾಯಿಸಲಾಯಿತು.

ಶ್ರೀನಿವಾಸಪುರ ತಾಲೂಕಿಲ್ಲಿ ರೈಲ್ವೆ ಕೋಚ್‌ ಕಾರ್ಖಾನೆ

ಹಿಂದೆ ಕೇಂದ್ರ ಸಚಿವರಾಗಿದ್ದ ಕೆ.ಎಚ್‌. ಮುನಿಯಪ್ಪನವರ ಅವಧಿಯಲ್ಲಿ ಶ್ರೀನಿವಾಸಪುರ ತಾಲೂಕಿಲ್ಲಿ ರೈಲ್ವೆ ಕೋಚ್‌ ಕಾರ್ಖಾನೆಗೆ ಗುದ್ದಲಿ ಪೂಜೆ ಮಾಡಿ 2 ದಶಕ ಕಳೆಯುತ್ತಿದೆ. ಕಾರ್ಖಾನೆ ಸ್ಥಾಪಾನೆಯಾಗುತ್ತದೆ ಸಾವಿರಾರು ವಿದ್ಯಾವಂತರಿಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಠಿಯಾಗುತ್ತದೆಂದು ಕಾತುರದಿಂದ ಕಾಯುತ್ತಿದ್ದ ಸ್ಥಳೀಯರಿಗೆ ನಿರಾಶೆಯಾಗಿದೆ.

ಕಾರ್ಖಾನೆ ಸ್ಥಾಪನೆಯಾಗಲು ಇಲ್ಲ ಬಡ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿಲ್ಲ. ಗುದ್ದಲಿ ಪೂಜೆಗೆ ಸೀಮಿತವಾಗಿರುವ ಕಾರ್ಖಾನೆಗೆ ಮುಕ್ತಿ ನೀಡಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ ನಾರಾಯಣಗೌಡ ಅಗ್ರಹಿಸಿದರು.

ಇದನ್ನೂ ಓದಿ: Belagavi: 24 ಎಕ್ರೆ ಜಾಗದಲ್ಲಿ ಐಟಿ ಪಾರ್ಕ್ ನಿರ್ಮಾಣ; ಅಂದಾಜು ವೆಚ್ಚ ₹1223 ಕೋಟಿ

ನೂರಾರು ಕೋಟಿ ಅನುದಾನದಲ್ಲಿ ಜಿಲ್ಲಾಧ್ಯಾಂತಹ ನಡೆಯುತ್ತಿರುವ ವಿವಿಧ ಕಾಮಗಾರಿಗಳು ಕಳಪೆ ಗುಣ್ಣಮಟ್ಟದಿಂದ ಕೂಡಿದ್ದು ಮುಂದೆ ತೊಂದರೆಯಾಗದಂತೆ ಕ್ರಮ ವಹಿಸಲು ಗುಣಮಟ್ಟ ತನಿಖೆ ಮಾಡಲು ವಿಶೇಷತಂಡ ರಚನೆ ಮಾಡಬೇಕೆಂದು ಮನವಿ ಮಾಡಿದರು.

ಇದನ್ನೂ ಓದಿ: Minister Satish Jarkiholi: 'ಪಕ್ಷಕ್ಕೆ ಮುಜುಗರವಾಗಿದ್ದು ನಿಜ..' ಬಿ ನಾಗೇಂದ್ರ ರಾಜೀನಾಮೆ, ಡಿಸಿಎ ಸ್ಥಾನದ ಬಗ್ಗೆ ಸಚಿವ ಜಾರಕಿಹೊಳಿ ಮಹತ್ವದ ಹೇಳಿಕೆ