10:49 PM (IST) Mar 21

Karnataka News Live 21 March 2026 ಕರಾವಳಿಯಿಂದ ಬೆಂಗಳೂರಿಗೆ ಮಾ. 22 ರಂದು ವಿಶೇಷ ರೈಲು ಘೋಷಣೆ, ಮಡ್ಗಾಂವ್‌ನಿಂದ ಮಂಗಳೂರು ಆಗಿ ರಾಜಧಾನಿಗೆ ಪಯಣ

ಯುಗಾದಿ ಮತ್ತು ರಂಜಾನ್ ಹಬ್ಬದ ನಂತರ ತಮ್ಮ ಊರುಗಳಿಂದ ಬೆಂಗಳೂರಿಗೆ ಮರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ವಿಶೇಷ ರೈಲು ಸೇವೆಯನ್ನು ಘೋಷಿಸಿದೆ. ಈ ರೈಲು ಮಡ್ಗಾಂವ್‌ನಿಂದ ಹೊರಟು ಕಾರವಾರ, ಉಡುಪಿ ಮತ್ತು ಮಂಗಳೂರು ಮಾರ್ಗವಾಗಿ ಬೆಂಗಳೂರು ತಲುಪಲಿದ್ದು, ಹಬ್ಬದ ಸೀಟುಗಳ ಕೊರತೆಯನ್ನು ನೀಗಿಸುವ ಗುರಿ ಹೊಂದಿದೆ.
Read Full Story
10:25 PM (IST) Mar 21

Karnataka News Live 21 March 2026 ಮಾರ್ಚ್‌ 22 ರಂದು ಬೆಂಗಳೂರಿಗೆ ವಿಶೇಷ ಮೆಮು ರೈಲು, ತುಮಕೂರಿನಿಂದ ಯಶವಂತಪುರ ಮಾರ್ಗವಾಗಿ ಬಾಣಸವಾಡಿಗೆ ಪ್ರಯಾಣ

ಯುಗಾದಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ, ಸ್ವಗ್ರಾಮಗಳಿಂದ ಬೆಂಗಳೂರಿಗೆ ಮರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೇ ವಿಶೇಷ ಮೆಮು ರೈಲು ಸಂಚಾರವನ್ನು ಘೋಷಿಸಿದೆ. ಈ ರೈಲು ಭಾನುವಾರ ಸಂಜೆ ತುಮಕೂರು-ಯಶವಂತಪುರ-ಬಾಣಸವಾಡಿ ಮಾರ್ಗದಲ್ಲಿ ಸಂಚರಿಸಲಿದ್ದು, ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ.
Read Full Story
10:17 PM (IST) Mar 21

Karnataka News Live 21 March 2026 ಮೇ ಅಂತ್ಯಕ್ಕೆ ಎಲ್ಲ 33 ಕ್ರಸ್ಟ್‌ ಗೇಟ್‌ ಅಳವಡಿಕೆ ಪೂರ್ಣ - ಸಚಿವ ಎನ್.ಎಸ್.ಬೋಸರಾಜು

33 ನೂತನ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ಇದೆ‌. ಕಾಮಗಾರಿಯು ನಿರೀಕ್ಷಿತ ಸಮಯಕ್ಕಿಂತ ವೇಗವಾಗಿ ಸಾಗುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

Read Full Story
10:04 PM (IST) Mar 21

Karnataka News Live 21 March 2026 ಮುಸ್ಲಿಮರ ಮನವೊಲಿಸಿದ ಕಾಂಗ್ರೆಸ್‌ ನಾಯಕರು, ದಾವಣಗೆರೆಗೆ ಸಮರ್ಥ್‌ ಶಾಮನೂರು, ಉಮೇಶ್‌ ಮೇಟಿಗೆ ಬಾಗಲಕೋಟೆ ಟಿಕೆಟ್‌ ಫಿಕ್ಸ್‌!

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ  ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಗೊಂದಲಕ್ಕೆ ತೆರೆಬಿದ್ದಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ ಅತೃಪ್ತ ಮುಖಂಡರ ಮನವೊಲಿಸಲಾಗಿದ್ದು, ಶಾಮನೂರು ಕುಟುಂಬದ ಮೊಮ್ಮಗ ಹಾಗೂ ಉಮೇಶ್ ಮೇಟಿಗೆ ಟಿಕೆಟ್ ಅಂತಿಮಗೊಂಡಿದೆ.

Read Full Story
09:45 PM (IST) Mar 21

Karnataka News Live 21 March 2026 ಕುದುರೆಮುಖ ಕಾಡಲ್ಲಿ 25 ಕಡೆ ಕಾಡ್ಗಿಚ್ಚು - ತನಿಖೆಗೆ ಸಚಿವ ಈಶ್ವರ್‌ ಖಂಡ್ರೆ ಆದೇಶ

ಕುದುರೆಮುಖ ರಾಷ್ಟ್ರೀಯ ಉದ್ಯಾನದ 25ಕ್ಕೂ ಹೆಚ್ಚಿನ ಕಡೆಗಳಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿರುವ ಕುರಿತು ತನಿಖೆ ಆರಂಭಿಸಲು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Read Full Story
09:18 PM (IST) Mar 21

Karnataka News Live 21 March 2026 ಹಾವೇರಿಯ ಬೆಟ್ಟದ ಮಲ್ಲೇಶ್ವರ ಗುಡ್ಡಕ್ಕೆ ಬೆಂಕಿ; ಸುಟ್ಟು ಭಸ್ಮವಾದ ನೂರಾರು ಎಕರೆ ಅರಣ್ಯ!

ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಪ್ರಸಿದ್ಧ ಬೆಟ್ಟದ ಮಲ್ಲೇಶ್ವರ ಗುಡ್ಡಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಭಸ್ಮವಾಗಿದೆ. ಈ ದುರ್ಘಟನೆಯಿಂದ ಅಪರೂಪದ ಸಸ್ಯ ಸಂಪತ್ತು ನಾಶವಾಗಿದ್ದು, ಕೃಷ್ಣಮೃಗ ಸೇರಿದಂತೆ ಅನೇಕ ವನ್ಯಜೀವಿಗಳು ಪ್ರಾಣಭಯದಲ್ಲಿವೆ. 

Read Full Story
08:35 PM (IST) Mar 21

Karnataka News Live 21 March 2026 20 ಕಡೆಗಳಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ - ಸಚಿವ ರಾಮಲಿಂಗಾರೆಡ್ಡಿ

ತಮ್ಮ 50 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಜನಸೇವೆಯೇ ಮುಖ್ಯ ಗುರಿಯಾಗಿಟ್ಟುಕೊಂಡು ದಾಂಡೇಲಿ, ಹಳಿಯಾಳ ಮತ್ತು ಜೋಯಿಡಾ ಭಾಗಗಳಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

Read Full Story
06:27 PM (IST) Mar 21

Karnataka News Live 21 March 2026 ಬಿಜೆಪಿ ಆನೆ ದಾಳಿಯಿಂದಾದ ಸಾವಿನಲ್ಲೂ ರಾಜಕೀಯ ಮಾಡುತ್ತಿದೆ - ಎ.ಎಸ್.ಪೊನ್ನಣ್ಣ ಅಸಮಾಧಾನ

ಆನೆ ದಾಳಿ ಮುಂದಿಟ್ಟುಕೊಂಡು ಆನೆ ದಾಳಿಯ ಸಾವಿನಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ವಿರಾಜಪೇಟೆ ಶಾಸಕ, ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಕೊಡಗು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read Full Story
06:15 PM (IST) Mar 21

Karnataka News Live 21 March 2026 ಪ್ರಧಾನಿ ಮೋದಿಯವರು ಇಸ್ರೇಲ್‌ಗೆ ಹೋಗಿದ್ದೇಕೆ? - ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಕಿಡಿ

ನಮಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ಅವತ್ತಿನ ಸೋವಿಯತ್ ಒಕ್ಕೂಟ ಇಂದಿನ ರಷ್ಯಾ ನಮ್ಮ ಸ್ನೇಹ ರಾಷ್ಟ್ರ. ನೆಹರು ಕಾಲದಿಂದಲೂ ಐತಿಹಾಸಿಕ ಸ್ನೇಹ ರಾಷ್ಟ್ರ. ಆದರೆ ಪ್ರಧಾನಿಯವರು ಇಂದು ಅದನ್ನು ಕೆಡಿಸಿದ್ದಾರೆ.

Read Full Story
05:43 PM (IST) Mar 21

Karnataka News Live 21 March 2026 ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ ಕೇಸ್‌ಗೆ ಬಿಗ್ ಟ್ವಿಸ್ಟ್ - ಪೊಲೀಸ್‌ ವರದಿ ಕೇಳಿ ಬೆಚ್ಚಿಬಿದ್ದ ಸಂತ್ರಸ್ಥೆಯರು!

ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಮೇಲಿನ ಲೈಂಗಿಕ ಕಿರುಕುಳ ಆರೋಪವು ಸುಳ್ಳು ಮತ್ತು ಪ್ರಚೋದಿತ ಎಂದು ಪೊಲೀಸ್ ಪ್ರಾಥಮಿಕ ತನಿಖೆ ಹೇಳಿದೆ. ಆದರೆ, ಈ ವರದಿಯನ್ನು ತಿರಸ್ಕರಿಸಿರುವ ದೂರುದಾರ ಮಹಿಳೆ, ಇದು ಹಿರಿಯ ಅಧಿಕಾರಿಗಳ ಶಾಮೀಲಿನಿಂದ ಕೂಡಿದ ವರದಿ ಎಂದು ಆರೋಪಿಸಿದ್ದಾರೆ.

Read Full Story
05:12 PM (IST) Mar 21

Karnataka News Live 21 March 2026 ಪಾಕಿಸ್ತಾನದಲ್ಲಿ ಬ್ಯಾನ್ ಆದ್ರೂ 'ಧುರಂಧರ್ 2' ನೋಡಿದ ರಿಪೋರ್ಟರ್ - ವಿಡಿಯೋ ವೈರಲ್, ಸಿಕ್ಕಾಪಟ್ಟೆ ಟ್ರೋಲ್

ಪಾಕಿಸ್ತಾನದಲ್ಲಿ 'ಧುರಂಧರ್: ದಿ ರಿವೆಂಜ್' ಚಿತ್ರವನ್ನು ಬ್ಯಾನ್ ಮಾಡಲಾಗಿದೆ. ಆದರೆ ಅಲ್ಲಿ ನಡೆದ ಒಂದು ಘಟನೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಪಾಕಿಸ್ತಾನಿ ಪತ್ರಕರ್ತರೊಬ್ಬರು ನೋಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

Read Full Story
05:07 PM (IST) Mar 21

Karnataka News Live 21 March 2026 ಯಾದಗಿರಿ - ಚಾಲಕನಿಂದಲೇ ಸರ್ಕಾರಿ ಬಸ್ ಕಳ್ಳತನ! ಕುಡಿದ ಮತ್ತಿನಲ್ಲಿ KKRTC ಬಸ್ ಎಸ್ಕೇಪ್‌ ಮಾಡಿದ ಕಿಲಾಡಿ

ಯಾದಗಿರಿಯ ಸೈದಾಪುರದಲ್ಲಿ, ಕೆಕೆಆರ್‌ಟಿಸಿಯಿಂದ ವಜಾಗೊಂಡಿದ್ದ ಮಾಜಿ ಚಾಲಕ ಮಹಿಪಾಲರೆಡ್ಡಿ ಎಂಬಾತ ಕುಡಿದ ಮತ್ತಿನಲ್ಲಿ ಸರ್ಕಾರಿ ಬಸ್ಸನ್ನೇ ಕದ್ದೊಯ್ದಿದ್ದಾನೆ. ಬಸ್ಸನ್ನು ತನ್ನ ಸ್ವಗ್ರಾಮದ ದೇವಸ್ಥಾನದ ಮುಂದೆ ನಿಲ್ಲಿಸಿದ್ದಾನೆ.

Read Full Story
05:00 PM (IST) Mar 21

Karnataka News Live 21 March 2026 ಹುಳ ಬಿಟ್ಟ ಡಿವೈನ್ ಸ್ಟಾರ್ ಪೋಸ್ಟ್; ಹೊಂಬಾಳೆ ಫಿಲಂಸ್, ರಿಷಬ್ ಶೆಟ್ಟಿ ನಡುವೆ ಏನಾಯ್ತು..?

ಯುಗಾದಿ ಹಬ್ಬದಂದು ರಿಷಬ್ ಶೆಟ್ಟಿ 'ಕಾಂತಾರ ಅಧ್ಯಾಯ 2' ಇಲ್ಲಿಂದ ಶುರು ಎಂದು ಘೋಷಿಸಿದ್ದಾರೆ. ಹೊಂಬಾಳೆ ಫಿಲಂಸ್ ಬದಲು ತಮ್ಮದೇ ಬ್ಯಾನರ್ ಲೋಗೋ ಬಳಸಿರುವುದು, ಅವರು ಸ್ವಂತ ಬ್ಯಾನರ್‌ನಲ್ಲಿ ಸಿನಿಮಾ ಮಾಡುತ್ತಿದ್ದಾರೆಯೇ? ಹೊಂಬಾಳೆ ಜೊತೆಗಿನ ಸಂಬಂಧದಲ್ಲಿ ಬಿರುಕು ಮೂಡಿದೆಯೇ ಎಂಬ ಚರ್ಚೆಗೆ ಕಾರಣವಾಗಿದೆ.

Read Full Story
04:53 PM (IST) Mar 21

Karnataka News Live 21 March 2026 Chikkamagaluru - ಮಕ್ಕಳ ಮೇಲೆ ಪ್ರಿನ್ಸಿಪಾಲ್ ಹಲ್ಲೆ - ಸ್ಥಳಕ್ಕೆ ‌ಪೊಲೀಸರ ಭೇಟಿ, ಪರಿಶೀಲನೆ

ಮಕ್ಕಳು ಆಟವಾಡುತ್ತಿದ್ದರು ಎಂಬ ಕಾರಣಕ್ಕೆ ವಸತಿ ಶಾಲೆಯ ಪ್ರಿನ್ಸಿಪಾಲ್ ಹಾಗೂ ವಾರ್ಡನ್ ಮಕ್ಕಳನ್ನ ಅಂಡರ್ ಗ್ರೌಂಡ್ ರೂಮಿನಲ್ಲಿ ಉಪವಾಸವಿಟ್ಟು ಮನಸ್ಸು ಇಚ್ಛೆ ಹಲ್ಲೇ ವಸತಿ ಶಾಲೆಯಲ್ಲಿ ನಡೆದಿದೆ.

Read Full Story
04:49 PM (IST) Mar 21

Karnataka News Live 21 March 2026 20ರ ಹರೆಯದಲ್ಲಿ ಸೋಷಿಯಲ್ ಆಗಿದ್ದ ಈ ನಟಿ 30ರಲ್ಲಿ ಇಷ್ಟೊಂದು ಬದಲಾಗಿದ್ದು ಹೇಗೆ? ಸೀಕ್ರೆಟ್ ರಿವೀಲ್..!

'ಬಾರ್ಬಿ', 'ದಿ ವುಲ್ಫ್ ಆಫ್ ವಾಲ್ ಸ್ಟ್ರೀಟ್' ಅಂತಹ ಸೂಪರ್ ಹಿಟ್ ಸಿನಿಮಾಗಳ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ಈ ಸುಂದರಿ, ಈಗ ಗ್ಲಾಮರ್ ಲೋಕದ ಬೆಳಕಿಗಿಂತ ಹೆಚ್ಚಾಗಿ ತಮ್ಮ 'ಖಾಸಗಿ ಜೀವನ'ಕ್ಕೆ (Privacy) ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಹೌದು, ಆದ್ರೆ ಯಾಕೆ ಹೀಗೆ? ಈ ಸ್ಟೋರಿ ನೀಡಿ..

Read Full Story
04:42 PM (IST) Mar 21

Karnataka News Live 21 March 2026 300 ಕೋಟಿಯತ್ತ ದಾಪುಗಾಲು ಹಾಕುತ್ತಿರುವ ಧುರಂಧರ್‌ 2 - 173 ಕೋಟಿ ಭಾರತದಲ್ಲೇ ಕಲೆಕ್ಷನ್

ಗಳಿಕೆಯ ರೇಸ್‌ನಲ್ಲಿ ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಸಿನಿಮಾವನ್ನು ಹಿಂದಿಕ್ಕಿದೆ. ಮೊದಲ ದಿನ ರೂ.275 ಕೋಟಿ ಕಲೆಕ್ಷನ್‌ ಮಾಡಿದ ಅಲ್ಲು ಅರ್ಜುನ್‌ ನಟನೆಯ ‘ಪುಷ್ಪ 2’ ಮೊದಲ ಸ್ಥಾನದಲ್ಲಿದೆ.

Read Full Story
04:30 PM (IST) Mar 21

Karnataka News Live 21 March 2026 ಲವ್ ಮಾಕ್‌ಟೇಲ್ 3 ಸಿನಿಮಾ ವಿಮರ್ಶೆ - ತಂದೆ-ಮಗಳ ಬಂಧದ ಹೊಸ ಅರ್ಥ

ಭ್ರಮೆಯಲ್ಲಿ ಬದುಕುವ ಆದಿ, ಅಚಾನಕ್‌ ಆಗಿ ಆತನ ಬದುಕಿಗೆ ಬರುವ ಹೆಣ್ಣುಮಗುವಿನ ಕಥೆ ಈ ಸೀರೀಸ್‌ನ ಎರಡನೇ ಭಾಗದಲ್ಲಿತ್ತು. ಮೂರನೆಯ ಹಾಗೂ ಕೊನೆಯ ಭಾಗದಲ್ಲಿ ಹಾಗೆ ಬಂದ ಮಗು ಆದಿಯ ಜಗತ್ತಾಗುವ ಕಥೆ ಇದೆ.

Read Full Story
04:08 PM (IST) Mar 21

Karnataka News Live 21 March 2026 ಬಿಇಎಲ್‌ನಲ್ಲಿ ಎಂಜಿನಿಯರ್‌ಗಳಿಗೆ ಸುವರ್ಣಾವಕಾಶ! ಸಿವಿಲ್, ಆರ್ಕಿಟೆಕ್ಚರ್, ತೋಟಗಾರಿಕೆ ವಿಭಾಗದಲ್ಲಿ ಕೆಲಸ ಖಾಲಿ ಇದೆ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) 2026ನೇ ಸಾಲಿನ ನೇಮಕಾತಿ ಅಡಿಯಲ್ಲಿ ಡೆಪ್ಯೂಟಿ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸಿವಿಲ್, ಆರ್ಕಿಟೆಕ್ಚರ್, ಮತ್ತು ತೋಟಗಾರಿಕೆ ವಿಭಾಗಗಳಲ್ಲಿ ಒಟ್ಟು 35 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಏಪ್ರಿಲ್ 1, 2026ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
Read Full Story
03:21 PM (IST) Mar 21

Karnataka News Live 21 March 2026 ಬೆಂಗಳೂರಿನಲ್ಲಿ ಲ್ಯಾಂಬೋರ್ಗಿನಿ 'ಡ್ರಿಫ್ಟಿಂಗ್' ದರ್ಬಾರ್ - ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಪುಂಡಾಟ; RC ಕ್ಯಾನ್ಸಲ್‌ಗೆ ಪೊಲೀಸರ ನಿರ್ಧಾರ!

ಬೆಂಗಳೂರಿನ ಎಂ.ಜಿ. ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಲ್ಯಾಂಬೋರ್ಗಿನಿ ಕಾರು ಚಾಲಕನೊಬ್ಬ ಅಪಾಯಕಾರಿ ಡ್ರಿಫ್ಟಿಂಗ್ ಸ್ಟಂಟ್ ನಡೆಸಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

Read Full Story
03:17 PM (IST) Mar 21

Karnataka News Live 21 March 2026 ಚಿಕ್ಕಮಗಳೂರಿನಲ್ಲಿ ಆಟವಾಡ್ತಿದ್ದ ಮಕ್ಕಳನ್ನು ಕೂಡಿಹಾಕಿ ಉತ್ತರ ಭಾರತ ಪ್ರಿನ್ಸಿಪಾಲ್‌ನಿಂದ ಹಲ್ಲೆ!

ಶಾಲಾ ಮಕ್ಕಳನ್ನು ಅಂಡರ್ ಗ್ರೌಂಡ್ ರೂಮಿನಲ್ಲಿ ಕೂಡಿಹಾಕಿ ಪ್ರಾಚಾರ್ಯರು ಕ್ರೂರವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಘಟನೆ ಬೆಳಕಿಗೆ ಬಂದಿದ್ದು ಹೇಗೆ?

Read Full Story