MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ವೈದ್ಯೆ ಕೃತಿಕಾ ರೆಡ್ಡಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್, ಕೊಲೆಗಾರ ವೈದ್ಯ ಗಂಡನ ರಹಸ್ಯ ಬಯಲು ಮಾಡಿದ 6 ಸಾಕ್ಷಿಗಳಿವು!

ವೈದ್ಯೆ ಕೃತಿಕಾ ರೆಡ್ಡಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್, ಕೊಲೆಗಾರ ವೈದ್ಯ ಗಂಡನ ರಹಸ್ಯ ಬಯಲು ಮಾಡಿದ 6 ಸಾಕ್ಷಿಗಳಿವು!

ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ, ಡಾ. ಮಹೇಂದ್ರ ರೆಡ್ಡಿ ತನ್ನ ಪತ್ನಿ ಡಾ. ಕೃತಿಕಾ ರೆಡ್ಡಿ ಅವರಿಗೆ ಅರಿವಳಿಕೆ ಔಷಧಿಯ ಅಧಿಕ ಡೋಸ್ ನೀಡಿ ಕೊಲೆ ಮಾಡಿದ್ದಾನೆ. ಪರಸ್ತ್ರೀ ಸಂಬಂಧದ ಹಿನ್ನೆಲೆಯಲ್ಲಿ, ಗೂಗಲ್‌ನಲ್ಲಿ ಕೊಲೆಗೆ ಸಂಚು ರೂಪಿಸಿದ್ದು, ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

2 Min read
Author : Gowthami K
Published : May 26 2026, 01:49 PM IST
Share this Photo Gallery
  • FB
  • TW
  • Linkdin
  • Whatsapp
17
ಕೊಲೆಗೆ ಡಾ ಮಹೇಂದ್ರ ನಿಂದ ಖತರ್ನಾಕ್ ಪ್ಲಾನ್
Image Credit : x

ಕೊಲೆಗೆ ಡಾ ಮಹೇಂದ್ರ ನಿಂದ ಖತರ್ನಾಕ್ ಪ್ಲಾನ್

ಬೆಂಗಳೂರು: ಸಿಲಿಕಾನ್ ಸಿಟಿಯ ಮಾರತ್ತಹಳ್ಳಿಯಲ್ಲಿ ಭಾರೀ ಸಂಚಲನ ಮೂಡಿಸಿದ್ದ ಡಾಕ್ಟರ್ ಕೃತಿಕಾ ರೆಡ್ಡಿ ಅವರ ಸಾವು ಸಾಮಾನ್ಯ ಸಾವಲ್ಲ, ಬದಲಿಗೆ ಆಕೆಯ ಪತಿ, ಜನರಲ್ ಸರ್ಜನ್ ಡಾ. ಮಹೇಂದ್ರ ರೆಡ್ಡಿ ನಡೆಸಿದ ವ್ಯವಸ್ಥಿತ ಕೊಲೆ ಎಂಬುದು ತನಿಖೆಯಲ್ಲಿ ಸಾಬೀತಾಗಿದೆ. ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್ (FSL) ವರದಿ ಬಳಿಕ ಈ ಪ್ರಕರಣದ ದಿಕ್ಕು ಬದಲಾಯಿತು. ಕೃತಿಕಾ ಮೃತಪಟ್ಟ ನಂತರವೂ ಮಹೇಂದ್ರ ರೆಡ್ಡಿ ಮೊಬೈಲ್‌ನಲ್ಲಿ ಚಾಟ್ ಮಾಡುತ್ತಿದ್ದುದು ಮತ್ತು ಪೇ-ಟಿಎಂ ಬಳಸುತ್ತಿದ್ದುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಯಿತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಮತ್ತಷ್ಟು ಪುರಾವೆಗಳು ಲಭ್ಯವಾಗಿದೆ.

Add Asianetnews Kannada as a Preferred SourcegooglePreferred
27
ಮಹೇಂದ್ರ ಕೊಲೆ ಮಾಡಿದ್ದಕ್ಕೆ ಪ್ರಮುಖ ಸಾಕ್ಷಿಗಳು ಪತ್ತೆ
Image Credit : X

ಮಹೇಂದ್ರ ಕೊಲೆ ಮಾಡಿದ್ದಕ್ಕೆ ಪ್ರಮುಖ ಸಾಕ್ಷಿಗಳು ಪತ್ತೆ

ಮನೆಯಲ್ಲೇ ಪತ್ನಿಗೆ ಚಿಕಿತ್ಸೆ ನೀಡುವ ನೆಪವೊಡ್ಡಿ, ಇಂಟ್ರಾವೀನಸ್ (IV) ಮೂಲಕ ಅತಿಯಾದ ಡೋಸ್ ಅರವಳಿಕೆ (ಅನಸ್ತೇಶಿಯಾ) ನೀಡಿ ಈತ ಪತ್ನಿಯನ್ನೇ ಕೊಲೆ ಮಾಡಿದ್ದಾನೆ. ಸದ್ಯ ಮರತ್‌ಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ನ್ಯಾಯಾಲಯಕ್ಕೆ 1200 ಪುಟಗಳ ಬೃಹತ್ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಸೆಷನ್ಸ್ ನ್ಯಾಯಾಲಯವು ಈಗಾಗಲೇ ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಇದೀಗ ಡಾ. ಕೃತಿಕಾ ರೆಡ್ಡಿ ಹತ್ಯೆ ಪ್ರಕರಣ ಕೊಲೆಗೆ ಡಾ ಮಹೇಂದ್ರ ನಿಂದ ಖತರ್ನಾಕ್ ಪ್ಲಾನ್ ಬಹಿರಂಗವಾಗಿದೆ.

Related Articles

Related image1
ಮಡದಿ ಡಾ.ಕೃತಿಕಾ ರೆಡ್ಡಿ ಕೊಂದ ಕಿಲ್ಲರ್‌ ಡಾಕ್ಟರ್‌ಗೆ 10 ವೈದ್ಯೆಯರ ಜತೆ ಸಲುಗೆ
Related image2
ವೈದ್ಯೆ ಕೃತಿಕಾ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್, ಮಾರಾಟಕ್ಕಲ್ಲದ ಔಷಧಿ ತಂದು ಇಂಜೆಕ್ಟ್ ಮಾಡಿದ್ದ ಡಾ.ಮಹೇಂದ್ರ ರೆಡ್ಡಿ!
37
ಗೂಗಲ್‌ನಲ್ಲಿ 'ಡೆಡ್ಲಿ ಪ್ಲಾನ್' ಹುಡುಕಿದ್ದ ಹಂತಕ ವೈದ್ಯ!
Image Credit : Asianet News

ಗೂಗಲ್‌ನಲ್ಲಿ 'ಡೆಡ್ಲಿ ಪ್ಲಾನ್' ಹುಡುಕಿದ್ದ ಹಂತಕ ವೈದ್ಯ!

ಡಾ. ಮಹೇಂದ್ರ ರೆಡ್ಡಿ ತನ್ನ ಪತ್ನಿಯನ್ನು ಕೊಲ್ಲಲು ಇಂಟರ್ನೆಟ್ ಅನ್ನು ಹೇಗೆ ಬಳಸಿಕೊಂಡಿದ್ದ ಎಂಬ ಆಘಾತಕಾರಿ ಮಾಹಿತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಔಷಧಿ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿದ್ದ ಮಹೇಂದ್ರ ರೆಡ್ಡಿ ಕೇವಲ ಆಪರೇಷನ್ ಥಿಯೇಟರ್‌ನಲ್ಲಿ ಮಾತ್ರ ಕಟ್ಟುನಿಟ್ಟಾಗಿ ಬಳಸಬೇಕಾಗಿದ್ದ 'ಪ್ರೊಪೋಫಾಲ್' (Propofol) ಎಂಬ ಅರವಳಿಕೆ ಔಷಧಿಯನ್ನು ತಾನು ವೈದ್ಯನೆಂಬ ಕಾರಣಕ್ಕೆ ಸುಲಭವಾಗಿ ಖರೀದಿಸಿದ್ದ.

47
ಮನೆಯಲ್ಲೇ ಪತ್ನಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಕೊಲೆ
Image Credit : Asianet News

ಮನೆಯಲ್ಲೇ ಪತ್ನಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಕೊಲೆ

ಈ ಔಷಧಿ ಹೇಗೆ ಕೆಲಸ ಮಾಡುತ್ತದೆ? ದಿನಕ್ಕೆ ಎಷ್ಟು ಪ್ರಮಾಣದಲ್ಲಿ ನೀಡಬೇಕು? ಮತ್ತು ಎಷ್ಟು ದಿನಗಳ ಕಾಲ ನಿರಂತರವಾಗಿ ನೀಡಿದರೆ ವ್ಯಕ್ತಿ ಸಾವನ್ನಪ್ಪುತ್ತಾನೆ? ಎಂಬುದರ ಬಗ್ಗೆ ಈತ ಗೂಗಲ್‌ನಲ್ಲಿ ತೀವ್ರವಾಗಿ ಸರ್ಚ್ ಮಾಡಿದ್ದ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದ. ಕೇವಲ ಆಪರೇಷನ್ ಥಿಯೇಟರ್‌ನಲ್ಲಿ ಮಾತ್ರ ಬಳಸಬೇಕಾಗಿದ್ದ ಆ ಅನಸ್ತೇಶಿಯಾವನ್ನು ಓವರ್ ಡೋಸೇಜ್ ನಲ್ಲಿ ಮನೆಯಲ್ಲೇ ಪತ್ನಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಕೊಟ್ಟಿದ್ದ

57
ಡಬಲ್ ಡೋಸ್ ಇಂಜೆಕ್ಷನ್
Image Credit : Asianet News

ಡಬಲ್ ಡೋಸ್ ಇಂಜೆಕ್ಷನ್

ಕೃತಿಕಾ ಅವರ ದೇಹದ ತೂಕಕ್ಕೆ ಕೇವಲ 7 ರಿಂದ 8 ಎಂಎಲ್ (ML) ಅನಸ್ತೇಶಿಯಾ ನೀಡಬೇಕಿತ್ತು. ಆದರೆ ಮಹೇಂದ್ರ ರೆಡ್ಡಿ ಗೂಗಲ್ ನಲ್ಲಿ ಆತ ಪಡೆದ ಮಾಹಿತಿಯ ಆಧಾರದ ಮೇಲೆ ಆಕೆಗೆ ಬರೋಬ್ಬರಿ 15 ಎಂಎಲ್‌ನಷ್ಟು ಅತಿಯಾದ ಡೋಸ್ ನೀಡಿ ಉಸಿರುಗಟ್ಟುವಂತೆ ಮಾಡಿ ಕೊಂದಿದ್ದಾನೆ. ಬಳಿಕ ಆತ ತನ್ನ ಪ್ರಿಯತಮೆಗೆ "ನಾನೇ ಆಕೆಯನ್ನು ಕೊಂದಿದ್ದೇನೆ" ಎಂದು ಒಪ್ಪಿಕೊಂಡಿರುವ ವಾಟ್ಸಾಪ್ ಸಂದೇಶ ಪತ್ತೆಯಾಗಿದೆ.

67
ಕೊಲೆ ರಹಸ್ಯ ಬಯಲು ಮಾಡಿದ 6 ಪ್ರಮುಖ ಸಾಕ್ಷಿಗಳು:
Image Credit : Asianet News

ಕೊಲೆ ರಹಸ್ಯ ಬಯಲು ಮಾಡಿದ 6 ಪ್ರಮುಖ ಸಾಕ್ಷಿಗಳು:

ಆರಂಭದಲ್ಲಿ ಇದನ್ನು ಕಾಯಿಲೆಯಿಂದ ಸಂಭವಿಸಿದ ಸಾವು ಎಂದು ಬಿಂಬಿಸಲು ಮಹೇಂದ್ರ ರೆಡ್ಡಿ ಪ್ರಯತ್ನಿಸಿದ್ದ. ಆದರೆ ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಗಳು ಪ್ರಕರಣದ ದಿಕ್ಕನ್ನೇ ಬದಲಿಸಿದವು. ಪೊಲೀಸರು ಕಲೆಹಾಕಿದ ಪ್ರಮುಖ ಸಾಕ್ಷಿಗಳು ಹೀಗಿವೆ:

1. ಫ್ರೋಫಾಪಾಲ್ ಖರೀದಿ ಮಾಡಿದ್ದಕ್ಕೆ ಸಾಕ್ಷಿ ಪತ್ತೆ

2. ಇಂಜೆಕ್ಷನ್ ಕೊಟ್ಟಿದ್ದಕ್ಕೆ ಕ್ಯಾನ್ ಮತ್ತು ಮೃತ ದೇಹದಲ್ಲಿ ಅರವಳಿಕೆ ಅಂಶ ಪತ್ತೆ

3. ಮೊಬೈಲ್ ನಲ್ಲಿ ಕೊಲೆ ಮಾಡಿದ ಬಳಿಕ ಓರ್ವರಿಗೆ ಚಾಟ್ ಮಾಡಿದ್ದ

4. ಚಾಟ್ ಮಾಡಿದ್ದು ಡೇಟಾರ ರೀಟ್ರೀವ್ ವೇಳೆ ಪತ್ತೆ

5. ತಾನೇ ಕೊಂದಿರೋದಾಗಿ ಪ್ರಿಯತಮೆಗೆ ಮೆಸೇಜ್

6.ಅನಸ್ತೇಶಿಯ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿರೋದು ಪತ್ತೆ 

77
ಪರಸ್ತ್ರೀ ಸಂಬಂಧ
Image Credit : Asianet News

ಪರಸ್ತ್ರೀ ಸಂಬಂಧ

ಈ ಕೊಲೆಯ ಹಿಂದೆ ಆರೋಪಿ ವೈದ್ಯನ ಪರಸ್ತ್ರೀ ಸಂಬಂಧವೇ ಮುಖ್ಯ ಕಾರಣ ಎಂಬುದು ಸಾಬೀತಾಗಿದೆ. ವೈದ್ಯಕೀಯ ವೃತ್ತಿ ಧರ್ಮಕ್ಕೆ ದ್ರೋಹ ಬಗೆದು, ಪ್ರಾಣ ರಕ್ಷಿಸಬೇಕಾದ ಇಂಜೆಕ್ಷನ್ ಅನ್ನೇ ಪ್ರಾಣ ತೆಗೆಯಲು ಬಳಸಿದ ಈ ಕಾಮುಕ ಹಾಗೂ ಕ್ರೂರಿ ವೈದ್ಯನಿಗೆ ಕಠಿಣ ಶಿಕ್ಷೆ ಕೊಡಿಸಲು ಪೊಲೀಸರು ಭದ್ರವಾದ ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಂಗ ಹೋರಾಟಕ್ಕೆ ಸಜ್ಜಾಗಿದ್ದಾರೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ವೈದ್ಯರು
ಕೊಲೆ
ಬೆಂಗಳೂರು
ಸುದ್ದಿ

Latest Videos
Recommended Stories
Recommended image1
ಸಿದ್ದರಾಮಯ್ಯ, ಡಿಕೆಶಿ ಅಲ್ಲ, 'ನಾನೇ ಮುಂದಿನ ಸಿಎಂ' ವಾಟಾಳ್ ನಾಗರಾಜ್ ಸ್ಫೋಟಕ ಹೇಳಿಕೆ!
Recommended image2
ದೈವಕ್ಕೆ ಅವಮಾನ, ಚಿತ್ರರಂಗದಿಂದ ಬ್ಯಾನ್ ಚಾಮುಂಡಿ ಬೆಟ್ಟಕ್ಕೆ ಓಡೋಡಿ ಬಂದು ತಾಯಿ ಮುಂದೆ ಮಂಡಿಯೂರಿದ ರಣವೀರ್ ಸಿಂಗ್!
Recommended image3
ಮನೆಬಿಟ್ಟು ಹೋಗಿದ್ದ ಯುವಕ 20 ವರ್ಷ ಬಳಿಕ ಗುಜರಾತ್‌ನ ಕಾಳಿಕದೇವಿ ಮಠದ ಸ್ವಾಮೀಜಿಯಾಗಿ ಪತ್ತೆ!
Related Stories
Recommended image1
ಮಡದಿ ಡಾ.ಕೃತಿಕಾ ರೆಡ್ಡಿ ಕೊಂದ ಕಿಲ್ಲರ್‌ ಡಾಕ್ಟರ್‌ಗೆ 10 ವೈದ್ಯೆಯರ ಜತೆ ಸಲುಗೆ
Recommended image2
ವೈದ್ಯೆ ಕೃತಿಕಾ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್, ಮಾರಾಟಕ್ಕಲ್ಲದ ಔಷಧಿ ತಂದು ಇಂಜೆಕ್ಟ್ ಮಾಡಿದ್ದ ಡಾ.ಮಹೇಂದ್ರ ರೆಡ್ಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved