ಯುಗಾದಿ ಹಬ್ಬದಂದು ರಿಷಬ್ ಶೆಟ್ಟಿ 'ಕಾಂತಾರ ಅಧ್ಯಾಯ 2' ಇಲ್ಲಿಂದ ಶುರು ಎಂದು ಘೋಷಿಸಿದ್ದಾರೆ. ಹೊಂಬಾಳೆ ಫಿಲಂಸ್ ಬದಲು ತಮ್ಮದೇ ಬ್ಯಾನರ್ ಲೋಗೋ ಬಳಸಿರುವುದು, ಅವರು ಸ್ವಂತ ಬ್ಯಾನರ್‌ನಲ್ಲಿ ಸಿನಿಮಾ ಮಾಡುತ್ತಿದ್ದಾರೆಯೇ? ಹೊಂಬಾಳೆ ಜೊತೆಗಿನ ಸಂಬಂಧದಲ್ಲಿ ಬಿರುಕು ಮೂಡಿದೆಯೇ ಎಂಬ ಚರ್ಚೆಗೆ ಕಾರಣವಾಗಿದೆ.
ಯುಗಾದಿ ದಿವಸ ವಿಶ್ ಮಾಡೋದ್ರ ಜೊತೆಗೆ ರಿಷಬ್ ಅಧ್ಯಾಯ 2 ಇಲ್ಲಿಂದ ಶುರು ಅಂದಿದ್ದಾರೆ. ಅಲ್ಲಿಗೆ ಕಾಂತಾರ ಚಾಪ್ಟರ್ -2 ಬರುತ್ತೆ ಅನ್ನೋದು ಖಚಿತವಾಗಿದೆ. ಆದ್ರೆ ಹೊಂಬಾಳೆ ಫಿಲಂಸ್ನ ಹೊರಗಿಟ್ಟು ತಮ್ಮ ಬ್ಯಾನರ್ನಲ್ಲೇ ರಿಷಬ್ ಕಾಂತಾರ ಚಾಪ್ಟರ್-2 ಆರಂಭಿಸಿದ್ರಾ? ಆ ಕುರಿತ ಹಿಂದಿನ ಊಹಾಪೋಹಗಳ ಅಸಲಿಯತ್ತು ಏನು? ನೋಡೋಣ ಬನ್ನಿ.
ಹೊಂಬಾಳೆ ಹೊರಗೆ, ರಿಷಬ್ ಸ್ವಂತ ಚಾಪ್ಟರ್..?
ಯೆಸ್ ಕಾಂತಾರ ಮತ್ತು ಕಾಂತಾರ ಚಾಪ್ಟರ್-1 ಸ್ಯಾಂಡಲ್ವುಡ್ನಲ್ಲಿ ಹೊಸ ಅಧ್ಯಾಯ ಬರೆದ ಚಿತ್ರಗಳು. 2022ರಲ್ಲಿ ಯಾವುದೇ ನಿರೀಕ್ಷೆಯಿಲ್ಲದೇ ಬಂದ ಕಾಂತಾರ ರಿಲೀಸ್ ಬಳಿಕ ಸುನಾಮಿ ಸೃಷ್ಟಿಮಾಡಿತ್ತು. ಇನ್ನೂ ಕಳೆದ ವರ್ಷ ಕಾಂತಾರ ಚಾಪ್ಟರ್-1 ರಿಲೀಸ್ ಆಗಿ, 850 ಕೋಟಿ ಬಾಕ್ಸಾಫೀಸ್ ಗಳಿಕೆ ಮಾಡಿತ್ತು. ಚಾಪ್ಟರ್-1 ಅಂತ್ಯದಲ್ಲೇ ಚಾಪ್ಟರ್ 2 ಕೂಡ ಬರುತ್ತೆ ಅನ್ನೋ ಸೂಚನೆ ಕೊಟ್ಟಿದ್ರು ರಿಷಬ್ ಶೆಟ್ಟಿ.
ಹೋಂ ಬ್ಯಾನರ್ ಮೂಲಕ ಕಾಂತಾರ 2ನೇ ಅಧ್ಯಾಯ?
ಯೆಸ್ ರಿಷಬ್ ಶೆಟ್ಟಿ ಹೊಂಬಾಳೆ ಫಿಲಂಸ್ನಿಂದ ಹೊರಬಂದ್ರಾ? ಅವರ ಮತ್ತು ಹೊಂಬಾಳೆ ನಡುವಿನ ಸಂಬಂಧ ಖತಂ ಆಯಿತಾ? ಸದ್ಯ ರಿಷಬ್ ಪೋಸ್ಟ್ ನೋಡಿ ಅಂಥಾ ಅನುಮಾನ ಹುಟ್ಟಿಕೊಂಡಿದೆ. ಅಧ್ಯಾಯ 2 ಇಲ್ಲಿಂದ ಶುರು ಅಂತ ನೋಟೀಸ್ ಬೋರ್ಡ್ನಲ್ಲಿ ಬರೆದ ಪೋಸ್ಟ್ ಹಂಚಿಕೊಳ್ಳೋದ್ರ ಜೊತೆಗೆ ತಮ್ಮ ಬ್ಯಾನರ್‌ನ ಹಾಕಿಕೊಂಡಿದ್ದಾರೆ ರಿಷಬ್. ಅದನ್ನ ನೋಡಿದ್ರೆ, ಹೊಂಬಾಳೆಯಿಂದ ಹೊರಬಂದು ತಮ್ಮದೇ ಬ್ಯಾನರ್ ಮೂಲಕ ಸಿನಿಮಾ ಮಾಡೋ ರೀತಿ ಕಾಣ್ತಾ ಇದೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ನಿರ್ಮಾಣ ಸಂಸ್ಥೆ ಶುರುಮಾಡಿದ ರಿಷಬ್, ಆ ಬಳಿಕ ಹಲವು ಚಿತ್ರಗಳನ್ನ ತಮ್ಮ ಬ್ಯಾನರ್ ಮೂಲಕ ನಿರ್ಮಾಣ ಮಾಡಿದ್ದಾರೆ. ರಿಷಬ್ ತಮ್ಮ ಬ್ಯಾನರ್ ಮೂಲಕ ಕಾಂತಾರ ಚಾಪ್ಟರ್-2 ಮಾಡೋದಕ್ಕೆ ಹೊಂಬಾಳೆ ಫಿಲಂಸ್ ಬಿಡುತ್ತಾ? ಇದು ಹೊಂಬಾಳೆ-ರಿಷಬ್ ನಡುವೆ ತಿಕ್ಕಾಟಕ್ಕೆ ಕಾರಣ ಆಗುತ್ತಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಸದ್ಯಕ್ಕಂತೂ ಒಂದೇ ಒಂದು ಪೋಸ್ಟ್ ಮೂಲಕ ಹುಳ ಬಿಟ್ಟಿರೋ ಶೆಟ್ರು, ಮುಂದೇನು ಅಪ್ಡೇಟ್ ಕೊಡ್ತಾರೆ ಅನ್ನೋ ಕಡೆ ಎಲ್ಲರ ಗಮನ ತಿರುಗಿದೆ.
ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.


