ಕಲಬುರಗಿಯಲ್ಲಿ ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದ ಮೇಲೆ ನಿವೃತ್ತ ಇಂಜಿನಿಯರ್ ಮಾಣಿಕ್ ಕನಕಟ್ಟೆ ಅವರ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಅವರ ಬ್ಯಾಂಕ್ ಲಾಕರ್ ಪರಿಶೀಲಿಸಿದಾಗ, ನಿಷೇಧಿತ ₹1000 ಮುಖಬೆಲೆಯ ಹಳೆಯ ನೋಟುಗಳು ಮತ್ತು 20 ತೊಲೆಗೂ ಅಧಿಕ ಚಿನ್ನಾಭರಣಗಳು ಪತ್ತೆಯಾಗಿವೆ.
ಕಲಬುರಗಿ (ಜೂ.18): ನಿವೃತ್ತ ಅಧಿಕಾರಿಯ ಬ್ಯಾಂಕ್ ಲಾಕರ್‌ನಲ್ಲಿ ಹಳೆಯ ನೋಟುಗಳು, ಚಿನ್ನಾಭರಣಗಳು ಲೋಕಾಯುಕ್ತ ದಾಳಿಯ ವೇಳೆ ಪತ್ತೆ ಆಗಿವೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
₹1 ಸಾವಿರ ಮುಖಬೆಲೆಯ ₹9 ಲಕ್ಷ ಹಳೆಯ ನೋಟು ಪತ್ತೆ!
ಆದಾಯ ಮೀರಿದ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಇಲ್ಲಿನ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಕಲಬುರಗಿ ವೃತ್ತದ ನಿವೃತ್ತ ಅಧೀಕ್ಷಕ ಅಭಿಯಂತರ ಮಾಣಿಕ್ ಕನಕಟ್ಟೆ ಅವರ ಮನೆ ಮೇಲೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಬುಧವಾರ ನಗರದ ಸಂಗಮೇಶ್ವರ ಕಾಲೋನಿಯ ಎಸ್‌ಬಿಐ ಬ್ಯಾಂಕ್‌ನಲ್ಲಿರುವ ಅವರ ಲಾಕರ್ ಪರಿಶೀಲಿಸಿದಾಗ ₹1 ಸಾವಿರ ಮುಖಬೆಲೆಯ ₹9 ಲಕ್ಷ ಹಳೆಯ ನೋಟುಗಳು, ಉಂಗುರ ಸೇರಿ 20ಕ್ಕೂ ಹೆಚ್ಚು ತೊಲೆ ಚಿನ್ನಾಭರಣ ಪತ್ತೆಯಾಗಿದೆ.
ಇದನ್ನೂ ಓದಿ: Karnataka Lokayukta Raid: 8 ಅಧಿಕಾರಿಗಳ ಬಳಿ ಪತ್ತೆಯಾಯ್ತಯ ₹31.11 ಕೋಟಿ ಆಸ್ತಿ
ಎಲ್ಲೆಲ್ಲಿ ಲೋಕಾಯುಕ್ತ ದಾಳಿ?
ಕಲಬುರಗಿಯ ಗೋದುತಾಯಿ ನಗರದ ಎರಡು ಮನೆಗಳು, ಬೀದರ್ ಜಿಲ್ಲೆಯ ಹಳ್ಳಿಖೇಡ (ಬಿ) ಗ್ರಾಮದ ಮನೆ, ತೋಟಗಳು ಹಾಗೂ ಹುಮನಾಬಾದ್‍ನಲ್ಲಿರುವ ಎರಡು ಕಾಂಪ್ಲೆಕ್ಸ್‌ಗಳ ಮೇಲೆ ಮಂಗಳವಾರ ದಾಳಿ ನಡೆದಿತ್ತು.


