
ಪಿಎಲ್‌ಡಿ ಕ್ಯಾತೆ, ಲಕ್ಷ್ಮೀ ಹೆಬ್ಬಾಳ್ಕರ್ ಪರ ತೀರ್ಪು: ಏನಂದ್ರು ಸತೀಶ್!
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ! ಅಡಳಿತ ಮಂಡಳಿಗೆ ಹೈ ಕೋರ್ಟ್ ಆದೇಶ! ಜಾರಕಿಹೊಳಿ ಬ್ರದರ್ಸ್ ವಿರುದ್ಧ ಹೆಬ್ಬಾಳ್ಕರ್ಗೆ ಜಯ! ಸೆ.7 ರ ನಂತರವೇ ನಿರ್ಧಾರ ಎಂದ ಸತೀಶ್ ಜಾರಕಿಹೋಳಿ
ಬೆಳಗಾವಿ(ಸೆ.5): ಬೆಳಗಾವಿ ಕಾಂಗ್ರೆಸ್ ಪಾಳಯದಲ್ಲಿ ನಾಯಕರ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿರುವ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಸಬೇಕೆಂದು ಧಾರವಾಡ ಹೈಕೋರ್ಟ್ ಪೀಠ ಆದೇಶ ನೀಡಿದ್ದು ಜಾರಕಿಹೊಳಿ ಬ್ರದರ್ಸ್ಗೆ ತೀವ್ರ ಹಿನ್ನಡೆಯಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸತೀಶ್ ಜಾರಕಿಹೋಳಿ, ಸೆ. ೭ ರಂದು ಚುನಾವಣೆ ನಡೆಯಲಿದ್ದು, ಅದರ ಬಳಿಕವಷ್ಟೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದ್ದಾರೆ.
ಸತೀಶ್ ಅವರ ಈ ಹೇಳಿಕೆ ತೀವ್ರ ಕುತೂಹಲ ಮೂಡಿಸಿದ್ದು, ಸೆ.೭ ರ ನಂತರ ರಾಜ್ಯ ರಾಜಕೀಯದಲ್ಲಿ ಏನು ಬದಲಾವಣೆಗಳು ಆಗಲಿವೆ ಎಂಬ ಕುತೂಹಲ ಮೂಡಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..