ತಮಿಳುನಾಡಿಗೆ 15 ದಿನಗಳ ಕಾಲ ದಿನಕ್ಕೆ 6 ಸಾವಿರ ಕ್ಯೂಸೆಕ್ ಕಾವೇರಿ ನೀರು ಬಿಡಲು CWRC ಕರ್ನಾಟಕಕ್ಕೆ ಆದೇಶಿಸಿದೆ. ಈ ಆದೇಶದ ವಿರುದ್ಧ ಮಂಡ್ಯದಲ್ಲಿ ರೈತರು ತೀವ್ರ ಪ್ರತಿಭಟನೆ ನಡೆಸಿದ್ದು, ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಚಿಂತನೆ ನಡೆಸಿದೆ.

ಬೆಂಗಳೂರು: ಕಾವೇರಿ ನೀರು ನಿಯಂತ್ರಣ ಸಮಿತಿ, ತಮಿಳುನಾಡಿಗೆ 15 ದಿನಗಳ ಕಾಲ ದಿನಕ್ಕೆ 6 ಸಾವಿರ ಕ್ಯೂಸೆಕ್ ಕಾವೇರಿ ನೀರು ಬಿಡುಗಡೆ ಮಾಡಬೇಕುಎಂದು ಕರ್ನಾಟಕಕ್ಕೆ ಆದೇಶ ನೀಡಿದೆ. ವಿನೀತ್ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಮಹತ್ವದ ಆದೇಶ ಹೊರಬಿದ್ದಿದ್ದು, ಸೆಪ್ಟೆಂಬರ್ 09ರ ಬೆಳಗ್ಗೆ 08 ಗಂಟೆಯಿಂದ ಬಿಳಿಗುಂಡಲುನಲ್ಲಿ 6 ಸಾವಿರ ಕ್ಯೂಸೆಕ್‌ಗಳ ಹರಿವನ್ನು ಸಾಧಿಸಲು ಕರ್ನಾಟಕ ತನ್ನ ಜಾಲಶಯಗಳಿಂದ ನೀರು ಮಾಡಲು ಮಾಡಲು ಸೂಚನೆ ನೀಡಿದೆ.

ಕಾವೇರಿ ತೀರ್ಪು: ರಾಜ್ಯಕ್ಕೆ ಮತ್ತೆ ಸಂಕಷ್ಟದ ಸುಳಿ

ಈ ಹಿಂದೆ ಆಗಸ್ಟ್ 25ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಸೆಪ್ಟೆಂಬರ್ 08ರ ವರೆಗೂ 9 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿತ್ತು. ಈ ಆದೇಶವನ್ನು ಕಾವೇರಿ ನೀರು ನಿಯಂತ್ರಣ ಸಮಿತಿ ಆಗಸ್ಟ್ 24 ರಂದು ಈ ಆದೇಶವನ್ನು ಅನುಮೋದಿಸಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ಸೆಪ್ಟೆಂಬರ್ 04ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಿ, ನೀರು ಬಿಡುಗಡೆಯನ್ನು 9,000 ದಿಂದ 2,000 ಸಾವಿರ ಕ್ಯೂಸೆಕ್‌ಗೆ ಇಳಿಸುವಂತೆ ಕೋರಿತ್ತು.

ರೈತರ ಆಕ್ರೋಶ, ವಾಹನ ತಡೆದು ಪ್ರತಿಭಟನೆ

ತಮಿಳುನಾಡಿಗೆ ಕಾವೇರಿ ನೀರು‌ ಬಿಡಲು ಮತ್ತೆ CWRC ಶಿಫಾರಸ್ಸು ಮಾಡಿರುವ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ವಿವಿಧ ಸಂಘಟನೆಗಳು ಬೆಂಗಳೂರು-ಮೈಸೂರು ಹಳೇ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿ, ಮತ್ತೆ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. CWRC, CWMA ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ನಮ್ಮಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಆದರೆ ತಮಿಳುನಾಡು ಕೃಷಿಗೆ ನೀರು ಕೊಡುತ್ತಿದೆ. ಹೀಗಿದ್ದರೂ ಮತ್ತೆ 15 ದಿನ 6 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶ ಮಾಡಿದೆ. ಇದು ಅವೈಜ್ಞಾನಿಕವಾಗಿ ಆದೇಶ ನೀಡಿದೆ. ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎಂದು ವಾಹನ ತಡೆದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು, CWRC ಆದೇಶದ ಬಗ್ಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಯಾವುದೇ ಉತ್ತರ ನೀಡಿದ ಸಿಎಂ ಡಿಕೆ ಶಿವಕುಮಾರ್ ಅವರು, ಹಣೆ ಚಚ್ಚಿಕೊಂಡು ಮುನ್ನಡೆದರು. ಇಂದು ಬೆಳಗ್ಗೆ ಯಶವಂತಪುರ ಎಪಿಎಂಸಿ ವಾರ್ಡ್‌ಗೆ ಭೇಟಿ ನೀಡಿದ ಸಂದರ್ಭದಲ್ಲೂ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸದ ಸಿಎಂ, ಮಳೆಗಾಗಿ ದೇವರಿಗಾಗಿ ಪ್ರಾರ್ಥನೆ ಮಾಡಿ ಎಂದಷ್ಟೇ ಹೇಳಿದರು.

ಕಳೆದ ಬಾರಿ ನೀರು ಬಿಟ್ಟು ಮ್ಯಾಜೇನ್ ಮಾಡಿದ್ದೇವು!

ಜಲಸಂಪನ್ಮೂಲ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, CWRC ಆದೇಶದಿಂದ ಬೇಸರ ಆಗಿದೆ, ಇದು ಬಹಳ ನೋವಿನ ಸಂಗತಿ. ನಮ್ಮ ಅಧಿಕಾರಿಗಳು ಸಾಕಷ್ಟು ಮಾಹಿತಿಯೊಂದಿಗೆ ಹೋಗಿ ವಾದ ಮಾಡಿದ್ದಾರೆ. ಅವರು 17000 ಕ್ಯೂಸೆಕ್ ಬಿಡಿ ಅಂತ ವಾದ ಮಾಡಿದ್ದಾರೆ. ಮಧ್ಯಾಹ್ನ CWMA ಸಭೆ ಇದೆ, ಇದಕ್ಕಿಂತ ದೊಡ್ಡ ಪ್ರಮಾಣದಲ್ಲಿ ನಾವು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ನಾವು ACS ಅವರಿಗೆ ವಿಸಿ ಮೂಲಕ ಸೂಚನೆ ಕೊಟ್ಟಿದ್ದೇನೆ. ಸಿಡಬ್ಲ್ಯೂಆರ್ ಸಿ ಮಾಡಿದ್ದನ್ನು ಸಿಡಬ್ಲ್ಯೂಎಂಎ ಫಾಲೋ ಮಾಡುತ್ತೆ. ಕೆಲವು ಅಪರೂಪದ ಸನ್ನಿವೇಶದಲ್ಲಿ ಕಡಿಮೆ ಮಾಡಿರುವ ಉದಾಹರಣೆಗಳು ಕೂಡ ಇದೆ. ಸಿಡಬ್ಲ್ಯೂಎಂಎ ನಲ್ಲಿ ಕಡಿಮೆ ಮಾಡ್ತಾರ ಅಥವಾ ಇದೆ ಆದೇಶ ಮುಂದುವರಿಸುವುದಕ್ಕೆ ಹೇಳುತ್ತಾರೆ ನೋಡುತ್ತೇವೆ. ಸಿಎಂ ಜೊತೆ ಚರ್ಚೆ ಮಾಡಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕುತ್ತೇವೆ. ನಮ್ಮ ಕಾನೂನು ವಿಭಾಗದ ಜೊತೆಗೆ ದೆಹಲಿಯ ಹಿರಿಯ ವಕೀಲರ ಜೊತೆಗೆ ಚರ್ಚೆ ಮಾಡಿ ನಾಳೆನೇ ಅರ್ಜಿ ಹಾಕ್ತೇವೆ. ವಸ್ತು ಸ್ಥಿತಿ ಬಹಳ ಕಷ್ಟ ಇದೆ, ಒಂದು ವಾರದಿಂದ ಒಳ ಹರಿವು ಕಡಿಮೆಯಾಗಿದೆ. ನಾವು ನೀರು ಬಿಡುಗಡೆ ಶೂನ್ಯ ಮಾಡಲು ಹೇಳಬೇಕು ಅಂತ ಇದ್ವೀ, ಒಂದೋ ಎರಡೋ ಸಾವಿರ ಕ್ಯೂಸೆಕ್ ಕೊಡಬಹುದು ಎಂದು ಕೊಂಡಿದ್ದೇವು. 6000 ಕ್ಯೂಸೆಕ್ ನೀರು ಬಿಡಬೇಕು ಅನ್ನೋದು ಬಹಳ ಕಠಿಣ. ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇವೆ ಮುಂದಿನ ತೀರ್ಮಾನ ಮಾಡ್ತೇವೆ ಎಂದರು.

ಸಿಎಂ ಹೇಳಿದ್ದಂತೆ ಮಾಡುತ್ತೇವೆ..

ದೆಹಲಿಯಲ್ಲಿ ಕೂತು ಆಡಳಿತ ಮಾಡೋರಿಗೆ, ಸಾಂವಿಧಾನಿಕ ಪೀಠ ಇರಬಹುದು ಆಡಳಿತ ಮಾಡೋರು ಇರಬಹುದು. ಮೊದಲಿನಿಂದಲೂ ಯಾವ್ಯಾವ ತರ ಆದೇಶ ಕೊಡುತ್ತಾರೆ ಅಂತ ನೋಡಿದ್ದೇವೆ. ಇದು ಯಾರು ಒಪ್ಪುವಂತ ಆದೇಶ ಅಲ್ಲ, ಕಳೆದ ಬಾರಿ ನೀಡಿದ ಆದೇಶ ನೀಡಿದಾಗ ಮಳೆ ಆಗ್ತಿತ್ತು, ಒಳಹರಿವು ಇತ್ತು. ಹೇಗೋ ಮ್ಯಾನೇಜ್ ಮಾಡ್ತಿದ್ವಿ, ಆದರೆ ಅಂತ ಪರಿಸ್ಥಿತಿ ಇಲ್ಲ. ಎರಡು ಬಾರಿ ನೀಡಿದ ಆದೇಶ ಒಳಹರಿವು ಇದ್ದ ಕಾರಣಕ್ಕಾಗಿ ಮ್ಯಾನೇಜ್ ಮಾಡಿದ್ದೇವು. ಅವರಿಗೆ ಕುಡಿಯೋಕೆ ಸಾಕಷ್ಟು ನೀರಿದೆ ನಾವು ಕುಡಿಯುವ ನೀರಿಗೆ ಇಟ್ಕೊಂಡಿದ್ದೇವೆ. ಇದೆಲ್ಲ ಮಾಹಿತಿ ಕೊಟ್ಟಿದ್ದರೂ ಕೂಡ 6000 ಕ್ಯೂಸೆಕ್ ನೀರು ಬಿಡಿ ಅಂತ ಹೇಳಿರೋದು ಬಹಳ ಕಠಿಣವಾಗಿದೆ. ಸಿಎಂ ಜೊತೆ ಚರ್ಚೆ ಮಾಡಿ ಒಂದು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

ಕರ್ನಾಟಕಕ್ಕೆ ಭೇಟಿ ನೀಡಲಿರುವ CWMA ಅಧಿಕಾರಿಗಳು

ಇತ್ತ, ಕಾವೇರಿ ಜಲಾನಯನ ಪ್ತದೇಶಕ್ಕೆ CWMA ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. CWMA ಮುಖ್ಯಸ್ಥ ಎಸ್ ಕೆ ಹಲ್ದಾರ್ ನೇತೃತ್ವದಲ್ಲಿ ಕರ್ನಾಟಕ, ತಮಿಳುನಾಡು ಎರಡೂ ರಾಜ್ಯಗಳಿಗೂ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ಸೆಪ್ಟೆಂಬರ್ 10ರಿಂದ ಐದು ದಿನಗಳ ಕಾಲ ಕಾವೇರಿಯ ಜಲಾನಯನ ಪ್ರದೇಶದಲ್ಲಿ ಬರುವ ಡ್ಯಾಂ ಗಳಿಗೆ ಭೇಟಿ ನೀಡಲಿರುವ CWMA ತಂಡ, ಹಾರಂಗಿ, ಹೇಮಾವತಿ, ಯಗಚಿ, ಸುರ್ವಣಾವತಿ ಯೋಜನಾ ಪ್ರದೇಶಗಳು, CWC ನಿರ್ವಹಣಾ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.

YouTube video player