MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
CM DK Shivakumar vs HD Devegowda
CM Visits APMC
Today's Horoscope in Kannada
Mekedatu Project Cost
CWRC Meeting Today
KPSC Scam
Ganesh Idol Theft
Mandya Children Wedding
Swachh Vayu Survekshan
108 Ambulance Services
LPG Booking Rules
National Film Awards Ceremony
  • Home
  • Karnataka Districts
  • Bengaluru Urban
  • ಬೆಂಗಳೂರಿನ ಭವಿಷ್ಯದ ಹೆಬ್ಬಾಗಿಲು KWIN ಸಿಟಿಗೆ ಬರಲಿದೆ ಫ್ರಾನ್ಸ್‌ನ ದೈತ್ಯ ಕಂಪನಿ

ಬೆಂಗಳೂರಿನ ಭವಿಷ್ಯದ ಹೆಬ್ಬಾಗಿಲು KWIN ಸಿಟಿಗೆ ಬರಲಿದೆ ಫ್ರಾನ್ಸ್‌ನ ದೈತ್ಯ ಕಂಪನಿ

ಬೆಂಗಳೂರಿನ ದೊಡ್ಡಬಳ್ಳಾಪುರ ಮತ್ತು ದಾಬಸ್‌ಪೇಟೆ ನಡುವೆ 5,000 ಎಕರೆ ವಿಸ್ತೀರ್ಣದಲ್ಲಿ ಕ್ವಿನ್ ಸಿಟಿ ಅಭಿವೃದ್ಧಿಯಾಗುತ್ತಿದೆ. ಫ್ರಾನ್ಸ್‌ನ bioMérieux ನಂತಹ ಜಾಗತಿಕ ಕಂಪನಿಗಳು ಇಲ್ಲಿ ಹೂಡಿಕೆ ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಆಸಕ್ತಿ ತೋರುತ್ತಿವೆ.

2 Min read
Author : Mahmad Rafik
Published : Sep 08 2026, 01:30 PM IST
Share this Photo Gallery
  • FB
  • TW
  • Linkdin
  • Whatsapp
15
ಕ್ವಿನ್ ಸಿಟಿಯಲ್ಲಿ ಹೂಡಿಕೆ
Image Credit : MB Patil X Account

ಕ್ವಿನ್ ಸಿಟಿಯಲ್ಲಿ ಹೂಡಿಕೆ

ಬೆಂಗಳೂರಿನ ದೊಡ್ಡಬಳ್ಳಾಪುರ ಮತ್ತು ದಾಬಸ್‌ಪೇಟೆ ನಡುವೆ ಅಭಿವೃದ್ಧಿಪಡಿಸುತ್ತಿರುವ ಕ್ವಿನ್ ಸಿಟಿಯಲ್ಲಿ ಹೂಡಿಕೆಗೆ ಮತ್ತು ಸಂಶೋಧನಾ ಕೇಂದ್ರ ಆರಂಭಿಸಲು ಜಾಗತೀಕ ಕಂಪನಿಗಳು ಮುಂದಾಗುತ್ತಿವೆ. ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿ ಅಭಿವೃದ್ಧಿಪಡಿಸಲಾಗುತ್ತಿರುವ 5,000 ಎಕರೆ ವಿಸ್ತೀರ್ಣದ ಕ್ವಿನ್ ಸಿಟಿ, ಜಾಗತಿಕ ಮಟ್ಟದ ಶಿಕ್ಷಣ, ಸಂಶೋಧನೆ, ನಾವೀನ್ಯತೆ ಹಾಗೂ ಕೈಗಾರಿಕೆಗಳ ಸಂಗಮದ ತಾಣವಾಗಿ ರೂಪುಗೊಳ್ಳುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ವೈದ್ಯಕೀಯ ಪರೀಕ್ಷಾ ತಂತ್ರಜ್ಞಾನ ಸಂಸ್ಥೆಯಾದ bioMérieux
Image Credit : MB Patil X Account

ವೈದ್ಯಕೀಯ ಪರೀಕ್ಷಾ ತಂತ್ರಜ್ಞಾನ ಸಂಸ್ಥೆಯಾದ bioMérieux

ಫ್ರಾನ್ಸ್‌ ನ ಪ್ರಮುಖ ಜಾಗತಿಕ ಪ್ರಯೋಗಾಲಯ ಆಧಾರಿತ ವೈದ್ಯಕೀಯ ಪರೀಕ್ಷಾ ತಂತ್ರಜ್ಞಾನ ಸಂಸ್ಥೆಯಾದ bioMérieuxನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ Audrey Dauvet ಅವರೊಂದಿಗೆ ಸಚಿವ ಎಂಬಿ ಪಾಟೀಲ್ ಸಭೆ ನಡೆಸಿದ್ದಾರೆ. ಕರ್ನಾಟಕದಲ್ಲಿ bioMérieux ಸಂಸ್ಥೆಯ ಸಾಫ್ಟ್‌ವೇರ್ ಅಭಿವೃದ್ಧಿ ಹಾಗೂ ಸಂಶೋಧನೆ (R&D) ಚಟುವಟಿಕೆಗಳನ್ನು ವಿಸ್ತರಿಸುವ ಸಾಧ್ಯತೆಗಳ ಕುರಿತು ಚರ್ಚಿಸಲಾಯಿತು. ವಿಶೇಷವಾಗಿ ಮೈಕ್ರೋಬಯಾಲಜಿ ಉತ್ಪನ್ನಗಳ ಅಭಿವೃದ್ಧಿ ಕೇಂದ್ರ ಸ್ಥಾಪನೆಯ ಸಾಧ್ಯತೆಯನ್ನೂ ಪರಿಶೀಲಿಸಲಾಯಿತು ಎಂಬ ಮಾಹಿತಿಯನ್ನು ಸಚಿವರು X ಖಾತೆ ಮೂಲಕ ಹಂಚಿಕೊಂಡಿದ್ದಾರೆ.

Related Articles

Related image1
ದೊಡ್ಡಬಳ್ಳಾಪುರ-ದಾಬಸ್‌ಪೇಟೆ 5000 ಎಕ್ರೆ ಕ್ವಿನ್ ಸಿಟಿಯಲ್ಲಿ ಹೊಸ ಅಧ್ಯಾಯ: MB Patil
Related image2
ಕರ್ನಾಟಕದಲ್ಲಿ ಸಿಪ್ಲಾ 200 ಕೋಟಿ, ರಾಕೆಟ್ ಇಂಡಿಯಾದಿಂದ 100 ಕೋಟಿ ಹೂಡಿಕೆ
35
ನವೋದ್ಯಮ ಕೇಂದ್ರಕ್ಕೆ ಸೂಕ್ತ ತಾಣ
Image Credit : MB Patil X Account

ನವೋದ್ಯಮ ಕೇಂದ್ರಕ್ಕೆ ಸೂಕ್ತ ತಾಣ

ಕರ್ನಾಟಕದ ಬಲಿಷ್ಠ ನವೋದ್ಯಮ ಪರಿಸರ, ವೇಗವಾಗಿ ಬೆಳೆಯುತ್ತಿರುವ ಫಾರ್ಮಾ ಮತ್ತು ಲೈಫ್ ಸೈನ್ಸಸ್‌ ಕ್ಷೇತ್ರ ಹಾಗೂ ಅತ್ಯಾಧುನಿಕ ಮೂಲಸೌಕರ್ಯಗಳ KWIN City, bioMérieuxನ R&D ಮತ್ತು ನವೋದ್ಯಮ ಕೇಂದ್ರಕ್ಕೆ ಸೂಕ್ತ ತಾಣವಾಗಬಲ್ಲದು ಎಂಬುದನ್ನು ತಿಳಿಸಿದೆವು. ಜಾಗತಿಕ ಆರೋಗ್ಯ ತಂತ್ರಜ್ಞಾನ ಕ್ಷೇತ್ರದ ಮುಂಚೂಣಿ ಸಂಸ್ಥೆಗಳನ್ನು ಕರ್ನಾಟಕದತ್ತ ಆಕರ್ಷಿಸುವ ಮೂಲಕ, ರಾಜ್ಯವನ್ನು ಮುಂದಿನ ತಲೆಮಾರಿನ ಆರೋಗ್ಯ ಆವಿಷ್ಕಾರಗಳ ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ಮುಂದುವರಿಯಲಿವೆ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.

45
ಏನಿದು ಕ್ವಿನ್ ಸಿಟಿ?
Image Credit : Gemini

ಏನಿದು ಕ್ವಿನ್ ಸಿಟಿ?

ದಾಬಸ್‌ಪೇಟೆ ಮತ್ತು ದೊಡ್ಡಬಳ್ಳಾಪುರ ಮಧ್ಯೆ ನಿರ್ಮಾಣವಾಗುತ್ತಿರುವ KWIN City (Knowledge, Wellbeing, and Innovation City) ಸುಸ್ಥಿರತೆ, ಅತ್ಯಾಧುನಿಕ ತಂತ್ರಜ್ಞಾನ ಹಾಗೂ 'ಸ್ಮಾರ್ಟ್ ಲಿವಿಂಗ್' ಪರಿಕಲ್ಪನೆಯ ಭವಿಷ್ಯದ ಯೋಜಿತ ನಗರವಾಗಿದೆ. ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನೆಗಳ ಸಮನ್ವಯದೊಂದಿಗೆ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಈ ನಗರವು, ಸ್ವಾವಲಂಬಿ ನೀರು, ವಿದ್ಯುತ್ ಹಾಗೂ ಪರಿಸರ ಸ್ನೇಹಿ ಮೂಲಸೌಕರ್ಯಗಳ ಮೂಲಕ ಭವಿಷ್ಯದ ಸ್ಮಾರ್ಟ್ ನಗರಗಳಿಗೆ ಆದರ್ಶ ಮಾದರಿಯಾಗಲಿದೆ.

55
ಹೆಚ್ಚಿನ ಮಾಹಿತಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
Image Credit : MB Patil X Account

ಹೆಚ್ಚಿನ ಮಾಹಿತಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ಕ್ವಿನ್‌ ಸಿಟಿ-ಯು ಇದು ಭವಿಷ್ಯದ ಕಡೆಗಿನ ಒಂದು ದಿಟ್ಟ ಹೆಜ್ಜೆಯಾಗಿದೆ. ಶಿಕ್ಷಣ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನೆಗಾಗಿ ವಿಶ್ವ ದರ್ಜೆಯ ಕೇಂದ್ರವನ್ನು ನಿರ್ಮಿಸಲಿದೆ. ಮಾಹಿತಿಗೆ https://kwin-city.com/ ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದಾಗಿದೆ. ಇಲ್ಲಿ ನಿಮಗೆ ಕ್ವಿನ್ ಸಿಟಿಯ ಬ್ಲ್ಯೂ ಪ್ರಿಂಟ್ ಸೇರಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ಬೆಂಗಳೂರು ನಗರ
ಎಂ. ಬಿ. ಪಾಟೀಲ್
ಕ್ವಿನ್ ಸಿಟಿ

Latest Videos
Recommended Stories
Recommended image1
ಬೆಂಗಳೂರಿನಿಂದ ಕೇವಲ 1 ಗಂಟೆ ದೂರದಲ್ಲಿದೆ 'ಡೇಂಜರಸ್ ಯು-ಟರ್ನ್'; ಶಿವನ ಪಾದ ಸೇರಿದ 30ಕ್ಕೂ ಹೆಚ್ಚು ಜನ
Recommended image2
ಎಪಿಎಂಸಿಗೆ ಭೇಟಿ ಮಾಡಿ ತಳ್ಳೋ ಗಾಡಿಯಲ್ಲಿ ಇಡ್ಲಿ ತಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
Recommended image3
ಅಪರಾಧಿ ಪ್ರಜ್ವಲ್ ರೇವಣ್ಣಗೆ ಹೆಚ್ಚಿದ ಸಂಕಷ್ಟ, ಜೈಲಿನಿಂದಲೇ ವಶಕ್ಕೆ ಪಡೆಯಲು ಪೊಲೀಸರ ಸಿದ್ಧತೆ!
Related Stories
Recommended image1
ದೊಡ್ಡಬಳ್ಳಾಪುರ-ದಾಬಸ್‌ಪೇಟೆ 5000 ಎಕ್ರೆ ಕ್ವಿನ್ ಸಿಟಿಯಲ್ಲಿ ಹೊಸ ಅಧ್ಯಾಯ: MB Patil
Recommended image2
ಕರ್ನಾಟಕದಲ್ಲಿ ಸಿಪ್ಲಾ 200 ಕೋಟಿ, ರಾಕೆಟ್ ಇಂಡಿಯಾದಿಂದ 100 ಕೋಟಿ ಹೂಡಿಕೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved